<?= $pageTitle ?>
Logo
ಮುಖಪುಟ ಓದುವುದು ಕೇಳು
Politics

“ನಾನು ಅಸಹಾಯಕ ಸಿಎಂ ಅಲ್ಲ: ಸರ್ಕಾರದ ಹಾದಿ ತಪ್ಪಿಲ್ಲ” - ಸಿದ್ದರಾಮಯ್ಯ

“ನಾನು ಅಸಹಾಯಕ ಸಿಎಂ ಅಲ್ಲ: ಸರ್ಕಾರದ ಹಾದಿ ತಪ್ಪಿಲ್ಲ” - ಸಿದ್ದರಾಮಯ್ಯ
Summary: ಅಂದಿನ ಸಿದ್ದರಾಮಯ್ಯ ಮತ್ತು ಇಂದಿನ ಸಿದ್ದರಾಮಯ್ಯ ಒಂದೇ ,ಸರ್ಕಾರದ ಹಾದಿ ತಪ್ಪಿಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು
belagavi news:
‘ಸರ್ಕಾರ ಹಾದಿ ತಪ್ಪಿಲ್ಲ, ನಾನೂ ಅಸಹಾಯಕ ಸಿಎಂ ಅಲ್ಲ’ : 'ಸರ್ಕಾರ ತನ್ನ ದಾರಿಯಿಂದ ಯಾವುದೇ ರೀತಿಯಲ್ಲೂ ತಪ್ಪಿಲ್ಲ. ನಾನು ಅಸಹಾಯಕ ಮುಖ್ಯಮಂತ್ರಿಯು ಅಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಎರಡುವರೆ ವರ್ಷಗಳಲ್ಲಿ ಜನತೆಗೆ ನೀಡಿದ ಭರವಸೆಗಳಲ್ಲಿ ಹೇಳಿದಂತೆ ಕಾರ್ಯನಿರ್ವಹಿಸಿದ್ದೇವೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ, ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡುವೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದರು. ಪೂರ್ಣ ಭಾಷಣವನ್ನು ಓದದೆ,

ಮೊದಲ ಮೂರು ವಾಕ್ಯಗಳು ಹಾಗೂ ಕೊನೆಯ ವಾಕ್ಯ ಮಾತ್ರ ಓದಿ ಸಭೆಯಿಂದ ಹೊರ ನಡೆದಿದ್ದಾರೆ ಎಂದು ಅವರು ಹೇಳಿದರು. ವಿಪಕ್ಷಗಳು ತಮ್ಮನ್ನು ಅಸಹಾಯಕ ಮುಖ್ಯಮಂತ್ರಿ ಎಂದು ಟೀಕಿಸಿರುವ ಕುರಿತು ಪ್ರತಿಕ್ರಿಸಿದ ಸಿದ್ದರಾಮಯ್ಯ, ಒಂದೊಂದು ಸಂದರ್ಭಗಳಲ್ಲಿ ಅಸಹಾಯಕತೆಯನ್ನು ವ್ಯಕ್ತಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಆದರೆ ಅಸತ್ಯದ ಎದುರು ಸತ್ಯವೇ ಸಹಾಯವಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದರು. ಭಾಷಣದ ಕೊನೆಯಲ್ಲಿ‘ಜೈ ಸಂವಿಧಾನ’ಎಂಬ ಉಲ್ಲೇಖವು ಇದ್ದರು ಅದನ್ನು ಉಚ್ಚರಿಸದೆ ಆತುರಾತುರವಾಗಿ ರಾಜ್ಯಪಾಲರು ಹೊರಟು ಹೋದರು.

ಅದಲ್ಲದೆ ರಾಷ್ಟ್ರಗೀತೆ ಪೂರ್ಣಗೊಳಿಸುವ ಮೊದಲೇ ಸಭಾಂಗಣ ತೊರೆದಿರುವುದು ಸತ್ಯವಲ್ಲ ಎಂದ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದರು. ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ವೇದಿಕೆ ಸೃಷ್ಟಿಸಿದ್ದು, ಸರ್ಕಾರ ರಾಜ್ಯಪಾಲರ ನಡುವಿನ ಸಂಬಂಧ ಹಾಗೂ ಪಕ್ಷಗಳ ಟೀಕೆಗಳಿಗೆ ಸಿಎಂ ಹೇಳಿದ ಸ್ಪಷ್ಟ ಉತ್ತರ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

‘ಸಿದ್ದರಾಮಯ್ಯ ಬದಲಾಗಲು ಸಾಧ್ಯವೇ ಇಲ್ಲ’ : "ನಿಮ್ಮ ಐಡಿಯಾಲಜಿಯೇ ಬೇರೆ, ವಿಪಕ್ಷಗಳ ಐಡಿಯಾಲಜಿಯ ಬೇರೆ. ಆದರೆ ಸಂವಿಧಾನವನ್ನು ವಿರೋಧಿಸುವ ಹಾಗೆ ನಾವು ನಡೆದುಕೊಳ್ಳುವುದಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು ಎಲ್ಲರೂ ಸಂವಿಧಾನದಂತೆ ಸರ್ಕಾರ ನಡೆಸಬೇಕು ಎಂಬ ಮಹತ್ವವನ್ನು ಮುಂದಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ, ರಾಜ್ಯಪಾಲರು ಮೂಲತಃ ಒಳ್ಳೆಯವರು, ನಾವು ರಾಜ್ಯಪಾಲರ ವಿರುದ್ಧ ಇಲ್ಲ,

ಅದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಸ್ ಗಾರ್ ಅಜೀವಿಕ ಮಿಷನ್ ಗ್ರಾಮೀಣ ಅಂತ ಅದರ ಹೆಸರು. ಭಾರಿ ಕಸರತ್ತು ಮಾಡಿ ಆ ಹೆಸರಿಡಲಾಗಿದೆ. ಹೆಸರಿಟ್ಟವರಿಗೆ ಬಹುಮಾನ ಕೊಡಬೇಕು ಎಂದು ಅವರು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರು, ಗ್ರಾಮೀಣಾಭಿವೃದ್ಧಿಗೆ ಮನರೇಗಾ ಸಂಜೀವಿನಿ ಎಂಬ ಯೋಜನೆಯ ಮಹತ್ವವನ್ನು ನೆನಪಿಸಿಕೊಂಡು, "ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಈ ಯೋಜನೆ ಪ್ರಾರಂಭಿಸಿದರು. ಆಗ ಅದನ್ನು ವಿರೋಧಿಸುತ್ತಿರುವುದು ಅಸಮಂಜಸ" ಎಂದು ಟೀಕಿಸಿದರು. ಸಿಎಂ ಹೇಳಿಕೆಗಳು ವಿಪಕ್ಷಗಳ ಟೀಕೆ,

ಗ್ರಾಮೀಣಾಭಿವೃದ್ಧಿ ಯೋಜನೆಗಳು ಮತ್ತು ರಾಜ್ಯಪಾಲರ ಭಾಷಣದ ಸ್ವಾತಂತ್ರ್ಯತೆಯ ಮೇಲೆ ತೀವ್ರ ಬೆಳಕು ಚೆಲ್ಲಿವೆ ಹಾಗೂ ಸಂವಿಧಾನದ ಪಾಲನೆ ಮಹತ್ವವನ್ನು ಪುನರ್ಪ್ರತಿಪಾದಿಸುತ್ತವೆ. ಬಜೆಟ್ ಭಾಷಣದಲ್ಲಿ ಮನರೇಗಾ ರದ್ದು ಮಾಡಲಾಗಿದೆ, ಜಿ ರಾಮ್ ಜಿ ಕಾಯ್ದೆ ತರಲಾಗಿದೆ ಎಂಬ ಉಲ್ಲೇಖ ಮಾಡಲಾಗಿದ್ದು, ಅದರಲ್ಲಿ "ರಾಮ, ದಶರಥ ರಾಮಾಯಣದ ರಾಮ ಅಥವಾ ಸಿದ್ದರಾಮ” ಎಂದು ಸಿಎಂ ಟೀಕಿಸಿದ್ದಾರೆ.“ಆರ್ಟಿಕಲ್ 176 ಪ್ರಕಾರ ರಾಜ್ಯಪಾಲರು ಭಾಷಣ ಓದಬೇಕು, ಓದದೆ ಇದ್ದರೆ ಅದು ಸಂವಿಧಾನ ಎಂದು ಅವರು ಕಟುವಾಗಿ ಹೇಳಿದರು.

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ : "2022 ರಿಂದ ಪ್ರತಿ ವರ್ಷ ರಾಜ್ಯಕ್ಕೆ 18,000–20,000 ಕೋಟಿ ಗಳಷ್ಟು ಜೆಎಸ್ ಜಿಎಸ್ಟಿ ಪರಿಹಾರ ನಷ್ಟವಾಗಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಾಲ್ಕು ವರ್ಷಗಳಲ್ಲಿ ಇದರಿಂದ 75,000–80,000 ಕೋಟಿ ರೂಪಾಯಿ ನಷ್ಟ ಅನುಭವಿಸಿತು. 2020ರಿಂದ 2025ರ ಅವಧಿಯಲ್ಲಿ ಒಟ್ಟು ಎರಡು ಲಕ್ಷ ಕೋಟಿ ರೂಪಾಯಿ ನಷ್ಟ ರಾಜ್ಯಕ್ಕೆ ಆಗಿದೆ ಇದು ಸಿಎಂ ಹೇಳಿದರು. ಜಿಎಸ್ಟಿ ಪರಿಹಾರದ ಸೆನ್ಸನ್ನು ಕೇಂದ್ರವು ಸಂಗ್ರಹಿಸುವುದನ್ನು ನಿಲ್ಲಿಸಿದರೆ ರಾಜ್ಯ ಒಪ್ಪಿಕೊಂಡಿದ್ದಾಗಿ ಅವರು ತೋರಿಸಿದರು. ಆದರೆ 2025-26ರಲ್ಲಿ 1,67,000 ರೂಪಾಯಿ ಸೆಸ್ಸನ್ನು ಸಂಗ್ರಹಿಸಲಾಗಿದೆ ಮತ್ತು ಈ ವರ್ಷ ಎಲ್ಲಾ ಸೆಸ್, ಸರ್ ಚಾರ್ಜ್ ಮುಂತಾದವು ಸೇರಿ ಆರು ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದ್ದರು.

ಸಿಎಂ ತಿಳಿಸಿದಂತೆ, "ತುಂಬಾ ಹೆಚ್ಚಿಸಿದಂತೆ ತೆರಿಗೆ ಪಾಲನ್ನು 50ಕ್ಕೆ ಏರಿಸಲು ಕೇಳಿದ್ದೇವೆ ಆದರೆ ಶೇ. ಆದರೆ ಶೇ.41 ಮಾತ್ರ ಕೊಟ್ಟಿದ್ದಾರೆ. ಇದರಿಂದ 14ನೇ ಹಣಕಾಸು ಆಯೋಗದ ಹಂಚಿಕೆಯ ಹೋಲಿಕೆಯಂತೆ 14.1 ಕಡಿಮೆಯಾಗುತ್ತದೆ". ಅಲ್ಲದೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಐದು ವರ್ಷಗಳಲ್ಲಿ 37,372 ಕೋಟಿ ರೂಪಾಯಿ ಸಿಗುವುದರೊಂದಿಗೆ ಹೋಲಿಸಿದರೆ ಉತ್ತಮ. ಉತ್ತರ ಪ್ರದೇಶಕ್ಕೆ 1.17 ಲಕ್ಷ ಕೋಟಿ, ಮಹಾರಾಷ್ಟ್ರಕ್ಕೆ 79,600 ಕೋಟಿ, ಮಧ್ಯಪ್ರದೇಶಕ್ಕೆ 48,000 ಕೋಟಿ ರೂಪಾಯಿ ಹಂಚಿಕೆಯಾಗಲಿದೆ. ಸಿಎಂ ಅವರು ಹಣಕಾಸು ಆಯೋಗಗಳ ಹಂಚಿಕೆ ಕುರಿತಾದ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ.

16ನೇ ಹಣಕಾಸು ಆಯೋಗ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಸಿಕೊಂಡರು,"ಆಯೋಗದ ಶಿಫಾರಸುಗಳಿಂದಲೂ ನಮಗೆ ನಮಿಗೆ ನ್ಯಾಯ ಸಿಕ್ಕಿಲ್ಲ" ಎಂದು ಹೇಳಿದರು. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇಕಡ 4.71 ರಷ್ಟು ತೆರಿಗೆ ಹಂಚಿಕೆ ದೊರಕಿತು. ಆದರೆ 16ನೇ ಆಯೋಗದಲ್ಲಿ ಶಿಫಾರಸ್ಸು ಶೇಕಡ 4.13 ಮಾತ್ರ ನೀಡಿದೆ. ಪ್ರಕೃತಿ ವಿಕೋಪ ನಿಧಿಯನ್ನು ರಾಜ್ಯಕ್ಕೆ ಭಾರಿ ಅನ್ಯಾಯ ಸಂಭವಿಸಿದೆಬಿ. ಸಿದ್ದರಾಮಯ್ಯ ವಿವರಿಸಿದಂತೆ. “ನಮಗೆ 5,135 ಕೋಟಿ ರೂಪಾಯಿ, ಮಹಾರಾಷ್ಟ್ರಕ್ಕೆ 31,597 ಕೋಟಿ, ಗುಜರಾತಿಗೆ 6,766 ಕೋಟಿ ರೂಪಾಯಿ ನಿರ್ಧರಿಸಲಾಗಿದೆ ಸಿಎಂ ಹೇಳಿಕೆಗಳು ಕರ್ನಾಟಕದ ಹಣಕಾಸು ಹಕ್ಕು ಜಿ ಎಸ್ ಟಿ ಪರಿಹಾರ ನಷ್ಟ ಮತ್ತು ಕೇಂದ್ರ ಸರ್ಕಾರ ಹಣಕಾಸು ಸಮತೋಲನದ ಮೇಲಿನ ಮಹತ್ವದ ಬೆಳಕು ಚೆಲ್ಲಿವೆ.

ಕರ್ನಾಟಕಕ್ಕೆ ಜಿಎಸ್ಟಿ ಪರಿಹಾರ ಮತ್ತು ಹಣಕಾಸು ಆಯೋಗದಲ್ಲಿ ಅನ್ಯಾಯ : ಕೋಂಗಿಲುನಲ್ಲಿ ನಡೆಯುತ್ತಿರುವ ಭೂ ಸರ್ವೇ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಅಲ್ಲಿ ಬಾಂಗ್ಲಾದವರು ಯಾರು ಇಲ್ಲ, ಇದ್ದರೆ ಅವರನ್ನು ಹೊರಗೆ ಹಾಕುತ್ತೇವೆ.ಯಾವುದೇ ಕಾರಣಕ್ಕೂ ಬಾಂಗ್ಲಾದವರಿಗೆ ಮನೆ ನೀಡುವುದಿಲ್ಲ" ಎಂದು ಸಿಎಂ ಹೇಳಿದ್ದಾರೆ. ಅದರೊಂದಿಗೆ, ಪದ್ಮಶ್ರೀ ವಿಜೇತ, ಮಾಜಿ ರಾಜ್ಯಸಭಾ ಸದಸ್ಯ ಜಯಶ್ರೀ ಅವರ ಭೂಮಿಯ ಸರ್ವೇ ಸಂಬಂಧಿತ ಪ್ರಕರಣಕ್ಕೂ ಸ್ಪಷ್ಟನೆ ನೀಡಿದರು.

ಸಂಬಂಧಪಟ್ಟ ಅಧಿಕಾರಿಯು ಕರ್ತವ್ಯಚ್ಯುತಿ ಆಗಿದ್ದರೆ, ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿದರು ತಪ್ಪು ಎಸಗಿದ ಅಧಿಕಾರಿಯ ಮೇಲೆ ನಿಸ್ಸಂದೇಹವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಬೆಳವಣಿಗೆ ಮದ್ಯೆ ವಿಪಕ್ಷಗಳು ಸಿಎಂ ಉತ್ತರಕ್ಕೆ ಸಮಾಧಾನ ಪಡದೆ ಸಭಾತ್ಯಾಗ ಮಾಡಿದರು. ಇದು ಸಭಾಂಗಣದಲ್ಲಿ ವಿವಾದ ಸೃಷ್ಟಿಸಿದೆ.

ಇನ್ನಷ್ಟು ಓದಿರಿ:
ಟ್ರಂಪ್ ಘೋಷಣೆ : ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online