<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕಣ್ಣೆದುರೇ ನಡೆದ ಅವಘಡ: ಮುಂಬೈ ಮೇಯರ್ ಎದುರೇ ಮ್ಯಾನ್ ಹೋಲ್ ಗೆ ಬಿದ್ದ ಸಿಬ್ಬಂದಿ

ಕಣ್ಣೆದುರೇ ನಡೆದ ಅವಘಡ: ಮುಂಬೈ ಮೇಯರ್ ಎದುರೇ ಮ್ಯಾನ್ ಹೋಲ್ ಗೆ ಬಿದ್ದ ಸಿಬ್ಬಂದಿ
Summary: A shocking incident took place in Mumbai when a civil servant fell into an open manhole in front of the mayor while he was inspecting the area. The people present at the spot immediately launched a rescue operation and the worker was pulled out safely.

Belagavi News:

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲವೃತಗೊಂಡಿವೆ. ಈ ನಡುವೆ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಯ ನಿರ್ಲಕ್ಷ್ಯವನ್ನು ಎತ್ತಿಹಿಡಿಯುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಜಲಾವೃತಗೊಂಡ ಪ್ರವೇಶದಲ್ಲಿ ಪರಿಶೀಲನೆಗಾಗಿ ತೆರಳಿದ್ದ ಮುಂಬೈ ಮೇಯರ್ Ritu Tawde ಅವರ ಸಮ್ಮುಖದಲ್ಲೇ ಪೌರ ಕಾರ್ಮಿಕ ನೊಬ್ಬ ನೀರಿನಲ್ಲಿ ಮುಳುಗಿದ್ದ ತೆರೆದ ಮ್ಯಾನ್ ಹೋಲ್ ಗೆ ಬಿದ್ದಿರುವ ಘಟನೆ ನಡೆದಿದೆ. ಮಳೆ ನೀರಿ ನಿಂದ ಮ್ಯಾನ್ ಹೋಲ್ ಸಂಪೂರ್ಣ ಮುಚ್ಚಿ ಹೋಗಿದ್ದರಿಂದ ಅದರ ಅಸ್ತಿತ್ವ ಗಮನಿಸದೇ ಕಾರ್ಮಿಕರು ಕಾಲಿಟ್ಟ ವೇಳೆ ಈ ಅವಘಟ ಸಂಭವಿಸಿದೆ.

ಘಟನೆಯ ದೃಶ್ಯಗಳು ಸ್ಥಳದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಈ ಘಟನೆ ನಗರದಲ್ಲಿ ಮಳೆಗಾಲದ ಸುರಕ್ಷತಾ ಕ್ರಮಗಳು, ಮ್ಯಾನ್ ಹೋಲ್ ಗಳ ನಿರ್ವಹಣೆ ಹಾಗೂ BMC ಯ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅದೃಷ್ಟವಶಾತ, ಸ್ಥಳದಲ್ಲಿದ್ದ ಸಿಬ್ಬಂದಿ ಮತ್ತು ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬಳಿಕ ಸಾರ್ವಜನಿಕರು ನಗರ ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಇಡೀ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿವೆ. ಇದರ ಬಳಿಕ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಆಡಳಿತದ ವಿರುದ್ಧ ಸಾರ್ವಜನಿಕ ಆಕ್ರೋಶವು ವ್ಯಕ್ತವಾಗಿದೆ.

ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ರಸ್ತೆಗಳ ಮೇಲೆ 3 ರಿಂದ 4 ಅಡಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಪರಿಸ್ಥಿತಿಯನ್ನು ಪರಿಶೀಲಿಸಲು ಮೇಯರ್ Ritu Tawde ಅವರು ಅಧಿಕಾರಿಗಳ ತಂಡ ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ಪರಿಶೀಲನೆಯ ವೇಳೆ, ಮೇಯರ್ ಮಳೆ ನೀರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳದ ಕೆಲವೇ ಅಡಿಗಳ ದೂರದಲ್ಲಿ ರಸ್ತೆಯಲ್ಲಿದ್ದ ಮ್ಯಾನ್ ಹೋಲ್ ಮುಚ್ಚಳ ತೆರೆಯಲ್ಪಟ್ಟಿರುವುದು ಗಮನಕ್ಕೆ ಬಂದಿದೆ. ಭಾರಿ ಮಳೆಯ ಕಾರಣದಿಂದ ರಸ್ತೆ ಸಂಪೂರ್ಣ ನೀರಿನಿಂದ ತುಂಬಿದ್ದರಿಂದ ಆ ಮ್ಯಾನ್ ಹೋಲ್ ಪಾದಚಾರಿಗಳಿಗೆ ಸ್ಪಷ್ಟವಾಗಿ ಕಾಣಿಸದೆ ಅಪಾಯದ ಪರಿಸ್ಥಿತಿ ಉಂಟಾಗುವ ಸಾದ್ಯತೆ ವ್ಯಕ್ತವಾಗಿದೆ.

ಅದೇ ವೇಳೆ ರಸ್ತೆಯಲ್ಲಿ ನಡೆದು ಬಂದಿದ ಒಬ್ಬ ಪೌರಕಾರ್ಮಿಕರು ಭಾರಿ ಮಳೆಯಿಂದ ನೀರಿನಿಂದ ತುಂಬಿದ ರಸ್ತೆಯಲ್ಲಿ ಮ್ಯಾನ್ ಹೋಲ್ ಇರುವುದನ್ನು ಗಮನಿಸದೇ ನೇರವಾಗಿ ಅದರಲ್ಲಿ ಬಿದ್ದಿದ್ದಾರೆ.

ಘಟನೆಯ ತಕ್ಷಣವೇ ಸ್ಥಳದಲ್ಲಿದ್ದ ಮೇಯರ್ ಭದ್ರತಾ ಸಿಬ್ಬಂದಿ, ಮಾಧ್ಯಮ ಕ್ಯಾಮೆರಾಮೆನ್ ಗಳು ಹಾಗೂ ಸ್ಥಳೀಯರು ತಕ್ಷಣ ಪ್ರತಿಕ್ರಿಯಿಸಿ ಅವರ ಕೈಗಳನ್ನು ಹಿಡಿದು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕರ ಈ ತ್ವರಿತ ಕ್ರಮದಿಂದ ಒಂದು ದೊಡ್ಡ ದುರಂತ ತಪ್ಪಿದಂತಾಗಿದೆ ಮತ್ತು ಈ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಆ ಮ್ಯಾಡ್ ಹೋಲ್ಡ್ ಸುತ್ತ ಬ್ಯಾರಿಕೇಡ್ ಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಭಾರಿ ಮಳೆಯ ನಡುವೆ ನಗರ ಮೂಲ ಸೌಕರ್ಯದ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿದ್ದು, ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕೆಂಬ ಒತ್ತಾಯವು ಹೆಚ್ಚಾಗಿದೆ.

Also Read:

ಕಿಡ್ನಿ ಸಮಸ್ಯೆಗಳನ್ನು ತಪ್ಪಿಸಲು 5 ಜೀವನಶೈಲಿ ಬದಲಾವಣೆಗಳು - ತಜ್ಞರ ಸಲಹೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online