<?= $pageTitle ?>
Logo
ಮುಖಪುಟ ಓದುವುದು ಕೇಳು
Business

Bengaluru Special: ಮಾವು- ಹಲಸು ಪ್ರಿಯರಿಗೆ ಡಬಲ್ ಧಮಾಕಾ!🥭🍐

Bengaluru Special: ಮಾವು- ಹಲಸು ಪ್ರಿಯರಿಗೆ ಡಬಲ್ ಧಮಾಕಾ!🥭🍐
Summary: This time, there is good news for mango and jackfruit lovers. A 'Mango and Jackfruit Fair' is being organized at two locations in Bengaluru, where fresh mango and jackfruit of various varieties will be available at one place. Consumers will get the opportunity to buy different flavors and quality fruits directly from the farmers. Along with the fruits, value-added products will be available for sale at the fair.

belagavi news:

ಬೆಂಗಳೂರಿನ ಮಾವು ಪ್ರಿಯಕರಿಗೆ ಸಿಹಿ ಸುದ್ದಿ! ಇದೇ ಮೊದಲ ಬಾರಿಗೆ ಕಬ್ಬಿಣ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಸರಣಿ 'ಮಾವು ಮತ್ತು ಹಲಸಿನ ಮೇಳ' ಆಯೋಜಿಸಲಾಗಿದೆ.

ಮೇ 8 ರಿಂದ ಆರಂಭವಾಗುವ ಈ ಮೇಳದಲ್ಲಿ ರೈತರಿಂದ ನೇರವಾಗಿ ಕೆಮಿಕಲ್ ರಹಿತ ಹಾಗೂ ತಾಜಾ ಮಾವು ಮತ್ತು ಹಲಸಿನ ಹಣ್ಣುಗಳನ್ನು ಖರೀದಿಸಲು ಅವಕಾಶ ಲಭ್ಯವಿದೆ. ಹೊರ ರಾಜ್ಯದಿಂದ ಆಮದು ಮಾಡಿದ ಹಣ್ಣುಗಳ ಬದಲು ನಮ್ಮ ರಾಜ್ಯದ ರೈತರ ಉತ್ಪನ್ನಗಳನ್ನು ಬೆಂಬಲಿಸುವ ಉತ್ತಮ ಅವಕಾಶ ಇದಾಗಿದೆ.

ಬೆಂಗಳೂರು ಮೇ 7: ಬೆಂಗಳೂರಿಂದ ಮಾವು (Mango 🥭) ಮತ್ತು ಹಲಸಿನ ಹಣ್ಣಿನ ಪ್ರಿಯರಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ನಗರದ ಎರಡು ಪ್ರಮುಖ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ 'ಮಾವು ಮತ್ತು ಹಲಸಿನ ಮೇಳ' ಆಯೋಜಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಮೊದಲಿಗೆ ಕಬ್ಬಿನ್ ಪಾರ್ಕ್ ನಲ್ಲಿ ಮೇಳ ಆರಂಭವಾಗಲಿದ್ದು, ಮೇ 26 ನಂತರ ಲಾಲ್ ಬಾಗ್ ನಲ್ಲೂ ಮೇಳ ನಡೆಯಲಿದೆ. ಹೊರ ರಾಜದಿಂದ ಬರುವ ಗುಣಮಟ್ಟ ಕಡಿಮೆ ಇರುವ ಮಾವುಗಳನ್ನು ಖರೀದಿಸುವ ಬದಲು ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ.

ಮುಖ್ಯಾಂಶಗಳು:

ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಮಾವು ಮತ್ತು ಹಲಸಿನ ಮೇಳ

ಮೇ 8 ರಿಂದ ಮೇಳ ಆರಂಭ

ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ

ಕಬ್ಬನ್ ಪಾರ್ಕ್ ನಲ್ಲಿ ಮೊದಲ ಮೇಳ:

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ .ಆರ್. ವೇದಮೂರ್ತಿ ಅವರ ಮಾಹಿತಿ ಪ್ರಕಾರ, ಮೇ 8 ರಿಂದ ಮೇ 18ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮೊದಲ ಹಂತದ 'ಮಾವು ಮತ್ತು ಹಲಸಿನ ಮೇಳ' ನಡೆಯಲಿದೆ.

ಈ ಮೇಳವು ಮುಖ್ಯವಾಗಿ ಧಾರವಾಡ, ಮಂಡ್ಯ, ಮೈಸೂರು ,ದಕ್ಷಿಣ ಮಂಗಳೂರು ಹಾಗೂ ದಕ್ಷಿಣ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ ಸುಮಾರು 70 ಸ್ಟಾಲ್ ಗಳನ್ನು ಇಲ್ಲಿ ಸ್ಥಾಪಿಸಲಾಗಿದೆ ಗ್ರಾಹಕರು ನೇರವಾಗಿ ರೈತರಿಂದಲೇ ರಾಸಾಯನಿಕ ಮುಕ್ತ ಹಣ್ಣುಗಳನ್ನು ಖರೀದಿಸಲು ಅವಕಾಶವಿದೆ.

ಮತ್ತೊಂದು ಹಂತದ ಮೇಳವನ್ನು ಇದೇ ಕಬ್ಬನ್ ಪಾರ್ಕ್ ನಲ್ಲಿ ಮೇ ತಿಂಗಳ ಅಂತ್ಯದಲ್ಲಿ ಆಯೋಜಿಸಲು ಯೋಜನೆ ಮಾಡಲಾಗಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸುವ ನಿರೀಕ್ಷೆ ಇದೆ. ಇದರ ದಿನಾಂಕಗಳನ್ನು ಶೀಘ್ರದಲ್ಲಿ ಅಂತಿಮಗೊಳಿಸಲಾಗುತ್ತದೆ ಎಂದು ಇಲ್ಲಾಕೆ ತಿಳಿಸಿದೆ.

ಇಳುವರಿ ಕುಸಿತದ ಆತಂಕ :

ಈ ಬಾರಿ ರಾಜ್ಯದಲ್ಲಿ ಮಾವಿನ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಸುಮಾರು 15 ಲಕ್ಷ ಟನ್ ಇಳುವರಿ ಬಂದಿದ್ದರೆ. ಈ ಬಾರಿ ಕೇವಲ 10 ಲಕ್ಷ ಟನ್ ಮಟ್ಟದ ಇಳುವರಿ ನೀರಿಕ್ಷಿಸಲಾಗಿದೆ . ಅತಿಯಾದ ಶಾಖ ಮತ್ತು ವಾತಾವರಣದಲ್ಲಿನ ಕಡಿಮೆ ತೇವಾಂಶದಿಂದ ಹಣ್ಣುಗಳು ಗಿಡದಿಂದ ಉದುರುವುದು ಇಳುವರಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ.

ಇದರಿಂದ ರಫ್ತು ಪ್ರಮಾಣದಲ್ಲಿಯೂ ದೊಡ್ಡ ಇಳಿಕೆ ಕಂಡು ಬಂದಿದೆ. ಕಳೆದ ವರ್ಷ 1,000 ಟನ್ ಮಾವು ರಫ್ತು ಮಾಡಲಾಗಿದ್ದರೆ, ಈ ವರ್ಷ ಇದುವರೆಗೆ ಕೇವಲ 50 ರಿಂದ 100 ಟನ್ ಮಾತ್ರ ರಫ್ತು ಸಾಧ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ತಿಳಿಸಿದ್ದಾರೆ.

ರೈತರಿಗೆ ಮಾರುಕಟ್ಟೆ ವ್ಯವಸ್ಥೆ:

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾವಿನ ಹಣ್ಣುಗಳು ಹೆಚ್ಚಾಗಿ ಹೊರ ರಾಜ್ಯಗಳಿಂದ ಬರುತ್ತಿರುವುದರಿಂದ ಅವುಗಳು ಗುಣಮಟ್ಟ ಕಡಿಮೆ ಹಾಗೂ ಬೆಲೆ ಹೆಚ್ಚು ಎಂಬ ಪರಿಸ್ಥಿತಿ ಇದೆ.

ಕೋಲಾರ್ ಮತ್ತು ರಾಮನಗರ ಮಾವುಗಳು ಕ್ರಮವಾಗಿ ಮೇ 8 ಮತ್ತು ಮೇ 27ರ ವೇಳೆಗೆ ಮಾರುಕಟ್ಟೆಗೆ ಪ್ರವೇಶಿಸಲಿವೆ . ರೈತರು ಮತ್ತು ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ 'ಮಾವು ಮತ್ತು ಹಲಸಿನ ಮೇಳ'ದ ಮೂಲಕ ಅವರಿಗೆ ನೇರಮಾರುಕಟ್ಟೆ ಸಂಪರ್ಕ ಕಲ್ಪಿಸಲಾಗುತ್ತಿದೆ.

Also Read:

SRH ಮಾಸ್ಟರ್ ಸ್ಟ್ರೋಕ್: ಪಂಜಾಬ್ ಸೋಲು, ಆರ್ಸಿಬಿ ಟೆನ್ಶನ್ ಡಬಲ್!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online