ಬಜೆಟ್ 2026 ದಿನದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಸ್ಥಿರವಾಗಿವೆ. ಹೂಡಿಕೆದಾರರು ಹಣಕಾಸು ಸಚಿವೆ ಘೋಷಿಸುವ ಬಜೆಟ್ ಅಂಶಗಳು ಸರ್ಕಾರಿ ವೆಚ್ಚ ಹಾಗೂ ಆರ್ಥಿಕ ನೀತಿಗಳ ಪರಿಣಾಮಗಳಂತ ಚಿತ್ತ ಹರಿಸಿದ್ದಾರೆ.
ಈ ಬಾರಿ ಕೇಂದ್ರ ಬಜೆಟ್ ಕುರಿತ ನಿರೀಕ್ಷೆಗಳು ಹೆಚ್ಚಾಗಿದ್ದು, ಮುಖ್ಯವಾಗಿ ರಕ್ಷಣಾ ಮತ್ತು ರೈಲ್ವೆ ವಲಯಗಳಲ್ಲಿ ಹೆಚ್ಚಿನ ಬಂಡವಾಳ ವೆಚ್ಚ ಘೋಷಣೆಯತ್ತ ಗಮನಹರಿಸಲಾಗಿದೆ. ದೇಶದ ಮೂಲ ಸೌಕರ್ಯ ಮತ್ತು ಭದ್ರತೆಯನ್ನು ಬಳಪಡಿಸುವ ಉದ್ದೇಶದಿಂದ ಈ ವಲಯಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೆ ಜೊತೆಗೆ ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವುದು, ಈ ಬಜೆಟ್ ಮತ್ತೊಂದು ಪ್ರಮುಖ ಗುರಿಯಾಗಿದ್ದು, ಸರ್ಕಾರ ಆರ್ಥಿಕ ಶಿಸ್ತು ಪಾಲನೆಗೆ ಹೆಚ್ಚಿನ ಒತ್ತು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ವೆಚ್ಚ ಮತ್ತು ಆದಾಯದ ನಡುವಿನ ಸಮತೋಲನ ಸಾಧಿಸುವತ್ತ ಬಜೆಟ್ ಕೇಂದ್ರೀಕರಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ 2031ರ ವೇಳೆಗೆ ಸಾಲ - ಜೆಡಿಪಿ (Debt -to- GDP) ಅನುಪಾತವನ್ನು ಕಡಿಮೆ ಮಾಡುವ ದೀರ್ಘಕಾಲಿನ ಗುರಿ ಕೂಡ ಈ ಬಜೆಟ್ ಪ್ರಮುಖ ಅಜೆಂಡಾಗಿರಲಿದೆ. ಆರ್ಥಿಕ ಸ್ಥಿರತೆ ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಈ ಕ್ರಮಗಳು ಸಹಕಾರಿಯಾಗಲಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗುತ್ತಿದ್ದು, ಈ ಬಾರಿ ಬಜೆಟ್ ಹಲವು ವಿಶೇಷ ಕಾರಣಗಳಿಂದ ಗಮನ ಸೆಳೆಯುತ್ತಿದೆ. ಭಾನುವಾರದಂದು ಬಜೆಟ್ ಮಂಡನೆ ಆಗುತ್ತಿರುವ ಹಿನ್ನಲೆಯಲ್ಲಿ ಇಂದು ದೇಶಿಯ ಷೇರು ಮಾರುಕಟ್ಟೆಗಳು ಸಾಮಾನ್ಯ ದಿನದಂತೆ ವಹಿವಾಟು ನಡೆಸುತ್ತಿವೆ. ಈ ಅಪರೂಪದ ಬೆಳವಣಿಗೆ ಹುಡುಕಿದಾರರು ಮತ್ತು ಸಾರ್ವಜನಿಕರ ಗಮನವನ್ನು ಷೇರುಪೇಟೆಯತ್ತ ಹೆಚ್ಚಾಗಿ ಸೆಳೆದಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ದೇಶಿಯ ಶೇರು ಮಾರುಕಟ್ಟೆಗಳು ಸ್ಥಿರ ಪ್ರದರ್ಶನವನ್ನು ನೀಡಿವೆ. ನಿಫ್ಟಿ 50 ಸೂಚ್ಯಂಕವು 13.10 ಪಾಯಿಂಟ್ ಗಳು ಅಥವಾ ಶೇ. 0.05 ರಷ್ಟು ಅಲ್ಪ ಏರಿಕೆ ಕಂಡು 25, 333.75ಕ್ಕೆ ವಹಿವಾಟು ಆರಂಭಿಸಿದರೆ ಬಿಎಸ್ ಇ ಸೆನ್ಸೆಕ್ಸ್ 176.19 ಪಾಯಿಂಟ್ ಗಳು ಅಥವಾ ಶೇ. 0.21 ರಷ್ಟು ಏರಿಕೆಯಾಗಿ 82,445.97 ಮಟ್ಟದಲ್ಲಿ ಆರಂಭವಾಗಿತ್ತು.
ಭಾರತೀಯ ಶೇರು ಮಾರುಕಟ್ಟೆ ಇತಿಹಾಸದಲ್ಲಿ ವಿಶೇಷ ಬಜೆಟ್ ಅಧಿವೇಶನದ ಕಾರಣದಿಂದ ವಾರಂತ್ಯದಲ್ಲಿ ವೈವಾಟು ನಡೆಯುತ್ತಿರುವುದು ಇದು ಎರಡನೇ ಬಾರಿ ಇದಕ್ಕೂ ಮುನ್ನ 1999ರಲ್ಲಿ ಕೇಂದ್ರ ಬಜೆಟ್ ಫೆಬ್ರವರಿ 27ರಂದು ಶನಿವಾರ ಮಂಡಿಸಲ್ಪಟ್ಟ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳು ವಾರಾಂತ್ಯದಲ್ಲೇ ತೆರೆದಿದ್ದವು.
ಈ ಕುರಿತು ಪ್ರತಿಕ್ರಿಯಿಸಿರುವ ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ, ವೈಯಕ್ತಿಕ ಆದಾಯ ತೆರಿಗೆ ಕಡಿತ ಾರ್ಪೊರೇಟ್ ತೆರಿಗೆ ಕಡಿತ ಹಾಗೂ ಜಿಎಸ್ಟಿ ಕಡಿತದ ಮೂಲಕ ಈಗಾಗಲೇ ತೆರಿಗೆ ಸಂಬಂಧಿತ ಘೋಷಣೆಗಳು ನಡೆದಿದ್ದರೂ ಬಜೆಟ್ ಮೇಲಿನ ಹೂಡಿಕೆದಾರರ ನಿರೀಕ್ಷೆಗಳು ಇನ್ನೂ ಕಡಿಮೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಬಾರಿ ಬಜೆಟ್ ನ ಪ್ರಮುಖ ನಿರೀಕ್ಷೆಗಳು ರಕ್ಷಣಾ ಮತ್ತು ರೈಲ್ವೆ ವಲಯಗಳಲ್ಲಿ ಹೆಚ್ಚಿನ ಬಂಡವಾಳ ವೆಚ್ಚ ಹಣಕಾಸಿನ ಕೊರತೆಯನ್ನು ನಿಯಂತ್ರಿಸುವ ಕ್ರಮಗಳು ಹಾಗೂ 2031ರ ವೇಳೆಗೆ ಸಾಲ ಜಿಡಿಪಿ ಅನುಪಾತವನ್ನು ಕಡಿಮೆ ಮಾಡುವ ದೀರ್ಘಕಾಲಿನ ಗುರಿಗಳಂತೆ ಕೇಂದ್ರೀಕರಿಸಿಕೊಂಡಿವೆ ಬಜೆಟ್ ಘೋಷಣೆಗಳ ನಂತರ ಮಾರುಕಟ್ಟೆಯಲ್ಲಿ ಸ್ಪಷ್ಟ ಚಲನೆ ಕಂಡುಬರುವ ನಿರೀಕ್ಷೆ ಇದೆ.
ಕೇಂದ್ರ ಬಜೆಟ್ ಕುರಿತ ಪ್ರಮುಖ ನಿರೀಕ್ಷೆಗಳು ವ್ಯಾಪಕವಾಗಿದ್ದು, ಪ್ರಮುಖವಾಗಿ ಒಟ್ಟಾರೆ ಬಂಡವಾಳ ಹೂಡಿಕೆ ಹೆಚ್ಚಳ ಕೃತಕ ಬುದ್ಧಿಮತ್ತೆ AI ಮತ್ತು ಅರೆವಾಹಕ ನಾಟಕ ವಲಯಗಳಲ್ಲಿ ಉತ್ಪಾದನೆ ವೃದ್ಧಿಸಲು ಉದ್ದೇಶಿತ ಯೋಜನೆಗಳು ಜವಳಿ ಹಾಗೂ ಮಧ್ಯಂತರ ಸರಕುಗಳ ರಫ್ತುಧಾರರಿಗೆ ಸುಂಕ ಪರಿಹಾರ ಹಣಕಾಸಿನ ಕೊರತೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾಲದ ಮಟ್ಟವನ್ನು ವಿಶ್ವಾಸಾರ್ಹ ವಾಗಿ ತಗ್ಗಿಸುವ ಕ್ರಮಗಳು ಪ್ರಮುಖ ಅಂಶಗಳಾಗಿ ಗುರುತಿಸಲಾಗಿದೆ. ಈ ನಿರೀಕ್ಷೆಗಳು 'ವಿಕಸಿತ್ ಭಾರತ ಮತ್ತು ದೇಶದ ಆರ್ಥಿಕ ಬೆಳವಣಿಗೆ' ಕಡೆಗೆ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೇ .
ಇದೇ ಸಂದರ್ಭದಲ್ಲಿ ಹೂಡಿಕೆದಾರರು ಮತ್ತು ವ್ಯಾಪಾರ ವಲಯ ಚಿನ್ನ ಬೆಳ್ಳಿ ಮಾರುಕಟ್ಟೆಯ ಪ್ರಸ್ತುತ ಸ್ಥಿತಿ ಮೇಳ ಗಮನಹರಿಸಿದ್ದಾರೆ, ಶನಿವಾರ ಚಿನ್ನ - ಬೆಳ್ಳಿ ಶೇ.5.4 ರಷ್ಟು ಕುಸಿದು 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 1,69,470 ರೂ. ಕ್ಕೆ ತಲುಪಿದು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಶೇ.9 ಕ್ಕೂ ಹೆಚ್ಚು ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿದೆ. ಬೆಳ್ಳಿ ಮೌಲ್ಯದಲ್ಲಿಯೂ ಸಹ ಏರಿಳಿತ ಹಾಗೂ ಕುಸಿತಗಳ ಮಿಶ್ರ ಪರಿಣಾಮ ಕಂಡುಬಂದಿದೆ.
ಈ ಅಂಶಗಳು ಬಜೆಟ್ ಘೋಷಣೆಗಳ ಮೇಲಿನ ಹೂಡಿಕೆದಾರರ ನೀರಿಕ್ಷೆ ಮತ್ತು ಮಾರುಕಟ್ಟೆ ಚಲನೆಯ ಮೇಲೆ ನೇರ ಪರಿಣಾಮ ಬೀರುವ ಸಾದ್ಯತೆ. ಇರುವುದರಿಂದ ಮಾರುಕಟ್ಟೆ ವೀಕ್ಷಕರು ಹಾಗೂ ಸಾಮಾನ್ಯ ನಾಗರಿಕರಿಗೂ ಇದರ ಮೇಲೆ ವಿಶೇಷ ಗಮನವಿದೆ.
ಇನ್ನಷ್ಟು ಓದಿರಿ:
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ