<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕಾವೇರಿ ನೀರಿನ ಮಟ್ಟ ಇಳಿಕೆ: KRS ನಲ್ಲಿ ಕಾಣಿಸಿಕೊಂಡ ಪುರಾತನದ ದೇವಾಲಯ

ಕಾವೇರಿ ನೀರಿನ ಮಟ್ಟ ಇಳಿಕೆ: KRS ನಲ್ಲಿ ಕಾಣಿಸಿಕೊಂಡ ಪುರಾತನದ ದೇವಾಲಯ
Summary: An ancient temple in the backwater area is now fully visible as the water level in the KRS reservoir drops. This rare sight has now gone viral on social media.

Belagavi News:

KRS ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಬ್ಯಾಕ್ ವಾಟರ್ ಪ್ರದೇಶದಲ್ಲಿ ಮುಳುಗಿದ್ದ ಪುರಾತನ ದೇಗುಲ ಇದೀಗ ಸಂಪೂರ್ಣವಾಗಿ ಗೋಚರಿಸುತ್ತಿದೆ. ಈ ಅಪರೂಪದ ದೃಶ್ಯ ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೃಷ್ಣಸಾಗರ ಡ್ಯಾಮ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಲವು ವರ್ಷಗಳಿಂದ ನೀರಿನಲ್ಲಿ ಮುಳುಗಿದ್ದ ಹಳೆಯ ದೇವಾಲಯದ ಅವಶೇಷಗಳು ಹೊರಬಂದಿವೆ. ನೀರಿನ ಮಟ್ಟ ಇಳಿಕೆಯಿಂದಾಗಿ ಐತಿಹಾಸಿಕ ರಚನೆ ಮತ್ತು ಕಾಣಿಸಿಕೊಂಡಿದ್ದು, ಭಕ್ತರು ಮತ್ತು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಪ್ರತಿ ವರ್ಷವೂ ನೀರಿನ ಮಟ್ಟ ಕುಸಿತವಾಗುವ ಸಂದರ್ಭದಲ್ಲಿ ಈ ರೀತಿಯ ಹಳೆಯ ದೇವಾಲಯದ ಅವಶೇಷಗಳು ಕೆಲಕಾಲ ಗೋಚರಿಸುವುದ್ದರೂ, ಈ ಬಾರಿ ಸಂಪೂರ್ಣವಾಗಿ ಸ್ಪಷ್ಟವಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆ ಆರ್ ಎಸ್ ಜಲಾಶಯದ ನೀರಿನ ಸ್ಥಿತಿ ಗತಿ ಕಾವೇರಿ ನೀರಾವರಿ ಪ್ರದೇಶಕ್ಕೂ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀರಿನ ಮಟ್ಟವನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಈ ಅಪರೂಪದ ದೃಶ್ಯ ಇದೀಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಹಲವರು ತಳಕ್ಕೆ ಭೇಟಿ ನೀಡಿ ಚಿತ್ರ ಮತ್ತು ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದಾರೆ.

ಕೆಆರ್ ಎಸ್ ಬ್ಯಾಕ್ ವಾಟರ್ : 81 ಅಡಿಗೆ ಕುಸಿದ ನೀರಿನ ಮಟ್ಟ;ಸಂಪೂರ್ಣವಾಗಿ ಗೋಚರಿಸಿದ ಪುರಾತನ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ:

ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು , ಪ್ರಸ್ತುತ 81 ಅಡಿಗೆ ತಲುಪಿದೆ. ಇದರ ಪರಿಣಾಮವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ ಇದೀಗ ಸಂಪೂರ್ಣವಾಗಿ ಗೋಚರಿಸುತ್ತಿದೆ.

ಸಾಮಾನ್ಯವಾಗಿ ಜಲಾಶಯದ ನೀರಿನ ಮಟ್ಟ 90 ಅಡಿಗೆಗಳಿದಾಗ ದೇವಾಲಯದ ಕೆಳಭಾಗಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈ ಬಾರಿ ನೀರಿನ ಮಟ್ಟ ಮತ್ತಷ್ಟು ಕುಸಿದಿರುವುದರಿಂದ ದೇವಾಲಯದ ಸಂಪೂರ್ಣ ರಚನೆ ಹೊರಬಂದಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಐತಿಹಾಸಿಕ ಮಹತ್ವ ಹೊಂದಿರುವ ಈ ದೇವಾಲಯ ವರ್ಷಗಳ ಕಾಲ KRS ನೀರಿನಲ್ಲಿ ಮುಳುಗಡೆಯಾಗಿತ್ತು. ಇದೀಗ ನೀರಿನ ಮಟ್ಟ ಕುಸಿತದಿಂದ ದೇವಾಲಯದ ಗೋಪುರ, ಗೋಡೆಗಳು ಹಾಗೂ ಪುರಾತನ ಸ್ವಾಸ್ಥ ಶಿಲ್ಪ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಅಪರೂಪದ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಪ್ರದೇಶಗಳಿಂದ ಜನರು ಆಗಮಿಸುತ್ತಿದ್ದಾರೆ.

ಜಲಾಶಯದಲ್ಲಿ ನೀರಿನ ಮಟ್ಟ ನಿರಂತರವಾಗಿ ಇಳಿಮುಖವಾಗುತ್ತಿರುವುದರಿಂದ ರೈತರು ಮತ್ತು ನೀರಾವರಿ ವಲಯದಲ್ಲಿ ಆತಂಕಕ್ಕೂ ಕಾರಣವಾಗಿದೆ. ಮತ್ತೊಂದೆಡೆ, ಸಂಪೂರ್ಣವಾಗಿ ಗೋಚರಿಸುತ್ತಿರುವ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

KRS ಬ್ಯಾಕ್ ವಾಟರ್ ಪ್ರದೇಶದ ಅಪರೂಪದ ನೋಟ ಇದೀಗ ಪ್ರವಾಸಿಗರು ಹಾಗೂ ಛಾಯಾಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

KRS Back water : ನೀರಿನ ಮಟ್ಟ ಕುಸಿತದಿಂದ ಹೊರಬಂದ ಪುರಾತನ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯ- ಪ್ರವಾಸಿಗರ ದಂಡೆ ಹರಿದು ಬರುತ್ತಿದೆ:

KRS ಜಲಾಶಯದ ನೀರಿನ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಆನಂದೂರು ಕಣ್ಣೀರಿನ ಪ್ರದೇಶದಲ್ಲಿರುವ ಪುರಾತನ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಇದೀಗ ಸಂಪೂರ್ಣವಾಗಿ ಗೋಚರಿಸುತ್ತಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

ಹಿನ್ನಿರಿನಲ್ಲಿ ವರ್ಷಗಳ ಕಾಲ ಮುಳುಗಿದ್ದ ಈ ಐತಿಹಾಸಿಕ ದೇವಾಲಯ ಈಗ ಸ್ಪಷ್ಟವಾಗಿ ಕಾಣಿಸುತ್ತಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಜನರು ಭೇಟಿ ನೀಡುತ್ತಿದ್ದಾರೆ. ದೇವಾಲಯದ ಸುತ್ತಮುತ್ತಲು ಫೋಟೋ ಹಾಗೂ ವಿಡಿಯೋಗ್ರಫಿ ಮಾಡಿಕೊಳ್ಳಲು ಯುವಕರು, ಪ್ರಸಿಗರು ಹಾಗೂ ಛಾಯಾಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

KRS ಜಲಾಶಯ ನಿರ್ಮಾಣದ ವೇಳೆ ಹಿನ್ನಿರಿನ ವ್ಯಾಪ್ತಿಗೆ ಒಳಪಟ್ಟ ಸುಮಾರು 10 ರಿಂದ 15 ಗ್ರಾಮಗಳು ಮತ್ತು ಹಲವು ದೇವಾಲಯಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ ಐತಿಹಾಸಿಕ ಮಹತ್ವ ಕಾರಣದಿಂದ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯವನ್ನು ಮಾತ್ರ ಅದೇ ಸ್ಥಳದಲ್ಲಿ ಉಳಿಸಿಕೊಳ್ಳಲಾಗಿತ್ತು.

ಪ್ರಸ್ತುತ ನೀರಿನ ಮಟ್ಟ ಹೇಳಿಕೆಯಿಂದ ದೇವಾಲಯದ ಸಂಪೂರ್ಣ ರಚನೆ ಹೊರಬಂದಿದ್ದು ಅದರ ಪುರಾತನ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಮಹತ್ವ ಮತ್ತೆ ಜನರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ದೇವಾಲಯದ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

KRS ಬ್ಯಾಕ್ ವಾಟರ್ ಪ್ರದೇಶದ ಅಪರೂಪದ ದೃಶ್ಯ ಈಗ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ರೂಪಗೊಂಡಿದ್ದು, ನಿರೀಕ್ಷೆ ಇದೆ.

Also Read:

'ಯತ್ನಾಳ್ ಗೆ ಪ್ರದೀಪ್ ಈಶ್ವರ್ ಟಾಂಗ್: 'ಅವರು ಯಾವುದೋ ಒಂದು ಕೋತಿಯ ಬ್ರೀಡ್'!"

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online