<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಬರಕ್ಕೆ ಬೆಚ್ಚಿಬಿದ್ದ ರಾಯಚೂರು : ಲಿಂಗಸೂರಿನಿಂದ ಸಾವಿರಾರು ಕುಟುಂಬಗಳ ಗುಳೆ

ಬರಕ್ಕೆ ಬೆಚ್ಚಿಬಿದ್ದ ರಾಯಚೂರು : ಲಿಂಗಸೂರಿನಿಂದ ಸಾವಿರಾರು ಕುಟುಂಬಗಳ ಗುಳೆ
Summary: More than 40,000 people have fled Lingasur in Raichur district due to severe drought. The situation is serious as people are migrating due to lack of rain, loss of agriculture and lack of employment. Get complete information and latest updates on Raichur drought here.

Belagavi News:

ರಾಯಚೂರು ಜಿಲ್ಲೆಯಲ್ಲಿ ಭೀಕರ ಬರಗಾಲದ ಕರಿಛಾಯೆ ಆವರಿಸಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ತೊಗರಿ, ಹತ್ತಿ ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ.

ಮಳೆಯ ಕೊರತೆಯ ಜೊತೆಗೆ ಕಾಲುವೆಗಳಲ್ಲಿ ನೀರಿನ ಲಭ್ಯತೆಯು ಇಲ್ಲದಿರುವುದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಬೆಳೆ ನಷ್ಟದಿಂದ ರೈತರ ಸಾಲದ ಹೊರೆಯನ್ನು ಹೊರುವ ಪರಿಸ್ಥಿತಿಗೆ ತಲುಪಿದ್ದು, ಜೀವನೋಪಾಯದ ಸಂಕಷ್ಟ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಬರದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಸರ್ಕಾರದಿಂದ ತುರ್ತು ಬರ ಪರಿಹಾರ, ಬೆಳೆ ಪರಿಹಾರ ಧನ ಹಾಗೂ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ. ರಾಯಚೂರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬರದ ಬಿಕ್ಕಟ್ಟು ತೀವ್ರಗೊಂಡಿದ್ದು, ರೈತರ ಭವಿಷ್ಯದ ಬಗ್ಗೆ ಆತಂಕ ಮನೆ ಮಾಡಿದೆ.

ರಾಯಚೂರಿನಲ್ಲಿ ಬರದ ಬಿಕ್ಕಟ್ಟು ತೀವ್ರ - ಲಿಂಗಸೂರಿನ ಹೊಲಗಳು ಬರಡು, ರೈತರ ಪ್ರತಿಭಟನೆ ಜೋರಾಗುತ್ತಿದೆ :

ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಚಟ್ಟರ ಗ್ರಾಮ ಸೇರಿದಂತೆ ಹಲವಡೆ ಹೊಲಗಳು ಸಂಪೂರ್ಣವಾಗಿ ಬರಡಾಗಿದೆ. ಉತ್ತಮ ಇಳುವರಿಯ ನಿರೀಕ್ಷೆಯೊಂದಿಗೆ ಭಿತ್ತನೆ ಮಾಡಿದ್ದ ರೈತರಿಗೆ ಬೆಳೆ ಕೈಕೊಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಮಳೆ ಕೊರತೆ ಮತ್ತು ನೀರಾವರಿ ಸೌಲಭ್ಯಗಳ ಅಭಾವದಿಂದ ಕೃಷಿ ಸಂಪೂರ್ಣ ಹಿನ್ನಡೆ ಅನುಭವಿಸಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದಿಂದ ಕುಟುಂಬಗಳ ಜೀವನೋಪಾಯ ಸಂಕಷ್ಟ ಎದುರಾಗಿದ್ದು, ಗ್ರಾಮಗಳಲ್ಲಿ ಅತಂತ್ರ ವಾತಾವರಣ ನಿರ್ಮಾಣವಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಯಚೂರು ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಜೊತೆಗೆ ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ, ರೈತರ ಸಾಲ ಮನ್ನಾ ತುರ್ತು ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದ್ದಾರೆ.

ರಾಯಚೂರಿನಲ್ಲಿ ಬರೆದ ಆಘಾತ - ಲಿಂಗಸೂರಿನಿಂದ 40,000ಕ್ಕೂ ಹೆಚ್ಚು ಜನ ಗುಳೆ, ಬರಗಾಲ ಘೋಷಣೆಗೆ ಶಾಸಕ ಮಾನಪ್ಪ ವಜ್ಜಲ್ ಆಗ್ರಹ :

ರಾಯಚೂರು ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಣಾಮ ವಲಸೆ ಪ್ರಮಾಣ ಆತಂಕ ಕಾರಿ ಮಟ್ಟಕ್ಕೆ ಏರಿದೆ. ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಪ್ರಕಾರ, ಪ್ರತಿ ವರ್ಷ ಜಿಲ್ಲೆಯಿಂದ ಸುಮಾರು 60 ರಿಂದ 65,000 ಜನರು ಉದ್ಯೋಗ ಅರಸಿ ಗುಳೇ ಹೋಗುತ್ತಾರೆ. ಆದರೆ ಈ ವರ್ಷ ಲಿಂಗಸೂರು ತಾಲೂಕಿನಿಂದಲೇ 40,000ಕ್ಕೂ ಹೆಚ್ಚು ಜನ ವಲಸೆ ಹೋಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ಕಳೆದ 10 ರಿಂದ 15 ವರ್ಷಗಳಲ್ಲಿ ಕಂಡುಬರದಷ್ಟು ಭೀಕರ ಬರಗಾಲ ಈ ಬಾರಿ ಎದುರಾಗಿದ್ದು, ಮಳೆ ಕೊರತೆ ಮತ್ತು ಬೆಳೆ ನಷ್ಟದಿಂದ ರೈತರು ಹಾಗೂ ಕೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ಊರು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಗುಳೆ ಹೋಗುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಾಸಕ ಮಾನಪ್ಪ ವಜ್ಜಲ್ ಎಚ್ಚರಿಸಿದ್ದಾರೆ.

ಸರ್ಕಾರ ಕೂಡಲೇ ರಾಯಚೂರು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸವನ್ನು ಹೆಚ್ಚಿಸಬೇಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Also Read :

ನಿಮ್ಮ ಮಿಕ್ಸಿ ಬೇಗ ಕೆಡುತ್ತಿದೆಯಾ? ಈ ಏಳು ವಸ್ತುಗಳನ್ನು ಎಂದಿಗೂ ರುಬ್ಬಬೇಡಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online