<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಎಕ್ಸಿಟ್ ಪೋಲ್ ಫಲಿತಾಂಶ : ಬಂಗಾಳ ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ

ಎಕ್ಸಿಟ್ ಪೋಲ್ ಫಲಿತಾಂಶ : ಬಂಗಾಳ ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ
Summary: According to exit polls, the political picture in many states of the country is becoming clear. Surveys suggest that BJP is likely to come to power in the states of West Bengal and Assam.

Belagavi news:

ಎಕ್ಸಿಟ್ ಪೋಲ್ ಫಲಿತಾಂಶ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದಿದೆ. ಈಗಾಗಲೇ ಚುನಾವಣಾ ಹಂತಗಳು ಪೂರ್ಣಗೊಂಡಿದ್ದು, ಮೇ ನಾಲ್ಕರಂದು ಅಧಿಕೃತ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇಂದು ವೆಸ್ಟ್ ಬೆಂಗಾಲ್ ನಲ್ಲಿ ಎರಡನೇ ಹಂತದ ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ನಡೆದ ಚುನಾವಣೆಯ ಕುರಿತು ಎಕ್ಸಿಟ್ ಸಮೀಕ್ಷೆಗಳು ಹೊರಬಂದಿವೆ.

ಸಮೀಕ್ಷೆಗಳ ಪ್ರಕಾರ ವಿವಿಧ ರಾಜ್ಯಗಳ ರಾಜಕೀಯ ಚಿತ್ರಣ ಹೇಗಿರಬಹುದು ಎಂಬ ಕುರಿತು ಕುತೂಹಲ ಹೆಚ್ಚಾಗಿದೆ. ಮತದಾರರ ಅಭಿಪ್ರಾಯದ ಆಧಾರದ ಮೇಲೆ ತಯಾರಾದ ಈ ಅಂದಾಜುಗಳು ರಾಜಕೀಯ ಪಕ್ಷಗಳ ನಡುವೆ ಚರ್ಚೆಗೆ ಕಾರಣವಾಗಿವೆ.

ಆದರೆ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ನಿಜವಾದ ಫಲಿತಾಂಶ ಕಾಂಗ್ರೆಸ್ ನಾಲ್ಕರಂದು ನಡೆಯುವ ಮತ ಎಣಿಕೆಯ ನಂತರವೇ ಅಧಿಕೃತವಾಗಿ ಸ್ಪಷ್ಟವಾಗಲಿದೆ. ಈ ಹಿನ್ನಲೆಯಲ್ಲಿ ದೇಶದ ರಾಜಕೀಯ ವಾತಾವರಣ ಇನ್ನಷ್ಟು ಕುತೂಹಲಕಾರಿ ಹಂತಕ್ಕೆ ತಲುಪಿದೆ.

ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ದೇಶದ ಹಲವು ಪ್ರಮುಖ ರಾಜ್ಯಗಳ ರಾಜಕೀಯ ಚಿತ್ರಣ ಈ ಬಾರಿ ಗಮನಾರ್ಹ ಬದಲಾವಣೆ ನೀಡುತ್ತಿದೆ. ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಗೆ ಸೋಲು ಸಂಭವಿಸಬಹುದು ಎಂದು ಅಂದಾಜಿಸಲಾಗಿದ್ದು, ಯೂಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.

ಇನ್ನೊಂದೆಡೆ ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ತೋರಿಸಲಾಗಿದ್ದು, ತಮಿಳುನಾಡಿನಲ್ಲಿ ಮತ್ತು ಆಡಳಿತರೂಢ ಟಿಎಂಸಿ ನಡುವೆ ಕಠಿಣ ಸ್ಪರ್ಧೆ ಇದೆ. ಹಲವು ಎಕ್ಸಿಟ್ ಪ್ರಕಾರ ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿ ಅಧಿಕಾರಕ್ಕೆ ಬರಬಹುದೆಂದು ಅಂದಾಜು ವ್ಯಕ್ತವಾಗಿದೆ. ಟಿಎಂಸಿ ನಾಲ್ಕನೇ ಬಾರಿ ಅಧಿಕಾರಕ್ಕೆ ಮರಳುವ ಕನಸು ಈ ಬಾರಿ ಕಠಿಣ ಸವಾಲಿನ ಎದುರಾಗಿದೆ ಎಂದು ವಿಶ್ಲೇಷಣೆಗಳು ಸೂಚಿಸುತ್ತಿವೆ.

ಆದರೆ ಈ ಎಲ್ಲಾ ಅಂದಾಜುಗಳ ಎಕ್ಸಿಟ್ ಪೋಲ್ ಆಧಾರಿತವಾಗಿದ್ದು, ನಿಜವಾದ ಫಲಿತಾಂಶಗಳು ಮತ ಎಣಿಕೆಯ ನಂತರವೇ ಸ್ಪಷ್ಟವಾಗಲಿದೆ. ಮೇ ನಾಲ್ಕರಂದು ನಡೆಯುವ ಅಧಿಕೃತ ಎಣಿಕೆಯ ಮೇಲೆ ದೇಶದ ರಾಜಕೀಯ ಭವಿಷ್ಯ ಅವಲಂಬಿತವಾಗಿದೆ.

ಪೋಲ್ ಆಪ್ ಎಕ್ಸಿಟ್ ಸಮೀಕ್ಷೆ

ಬಿಜೆಪಿ 143

ಟಿಎಂಸಿ 114

ಕಾಂಗ್ರೆಸ್ 5

ಪಿ ಮಾರ್ಕ್ ಸಮೀಕ್ಷೆ

ಬಿಜೆಪಿ 150 - 175

ಟಿಎಂಸಿ 118 - 138

ಕಾಂಗ್ರೆಸ್- ಸಿಪಿಐ-0

ಮ್ಯಾಟ್ರೀಜ್ ಸಮೀಕ್ಷೆ

ಬಿಜೆಪಿ 146 - 161

ಟಿಎಂಸಿ 125 -

ಕಾಂಗ್ರೆಸ್ - ಸಿಪಿಐ-0

ಪೀಪಲ್ಸ್ ಪಲ್ಸ್

ಬಿಜೆಪಿ 95- 110

ಟಿಎಂಸಿ 178 -189

ಕಾಂಗ್ರೆಸ್ 1-3

ಸಿಪಿಐ 0-1

ಚಾಣಕ್ಯ ಸ್ಟ್ರಾಟರ್ಜಿ

ಬಿಜೆಪಿ 150 -160

ಟಿ ಎಂ ಸಿ130 -140

ಕಾಂಗ್ರೆಸ್ ಸಿಪಿಐ -0

ಫೋಲ್ ಡೈರಿ

ಬಿಜೆಪಿ 142- 171

ಟಿ ಎಂ ಸಿ 99-127

ಕಾಂಗ್ರೆಸ್ 3-5

ಸಿಪಿಐ 2-3

2) ಕೇರಳ ವಿಧಾನಸಭೆ: ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸಿ ಪಿ ಐ ಎಂ ನೇತೃತ್ವದ ಎಲ್ ಡಿಎಫ್ ಅನ್ನು ಸೋಲಿಸಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವನೋತ್ತರ ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸಿಗೆ ಇಂದು ಆಶಾಭಾವನೆ ಮೂಡಿಸಿದರೆ ಎಡ ಪಕ್ಷಗಳಿಗೆ ನಿರಾಸೆ ಮೂಡುವ ಸಾಧ್ಯತೆ ಇದೆ.

ಆಕ್ಸಿಸ್ ಮೈ ಇಂಡಿಯಾ

ಎಲ್ ಡಿ ಎಫ್ 49- 62

ಯುಡಿಎಫ್ 78 -90

ಬಿಜೆಪಿ ಮೈತ್ರಿ 0-3

ಪೋಲ್ ಆಫ್ ಎಕ್ಸಿಟ್

ಎಲ್ ಡಿ ಎಫ್ 90

ಯುಡಿಎಫ್ 77

ಬಿಜೆಪಿ ಮೈತ್ರಿ 2

ಪಿ ಮಾರ್ಕ್

ಎಲ್ ಡಿಎಫ್ 62 -69

ಯುಡಿಎಫ್ 71 -79

ಬಿಜೆಪಿ ಮೈತ್ರಿ 1 - 4

ಮ್ಯಾಟ್ರಿಜ್

ಎಲ್ ಡಿ ಎಫ್ 60 -65

ಯುಡಿಎಫ್ 70 75

ಬಿಜೆಪಿ ಮೈತ್ರಿ 3 5

ಪೀಪಲ್ಸ್ ಪಲ್ಸ್

ಎಲ್ ಡಿ ಎಫ್ 55- 65

ಯುಡಿಎಫ್ 75 -85

ಬಿಜೆಪಿ ಮೈತ್ರಿ 0 -3

೩)ಅಸ್ಸಾಂ ವಿಧಾನಸಭೆಯಲ್ಲಿ ನೋಡುವುದಾದರೆ, ಸಿಎಂ ಹಿಮಂತ ಬಿಶ್ವಾ ಶರ್ಮ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಭರ್ಜರಿಯಾಗಿ ಕೇಸರಿ ಪಡೆ ಅಧಿಕಾರಕ್ಕೆ ಬರಲಿದೆ ಎಂದಿವೆ. ಜೊತೆಗೆ ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಬಾವುಟ ಹಾರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಆಕ್ಸಿಸ್ ಮೈ ಇಂಡಿಯಾ

ಬಿಜೆಪಿ ಮೈತ್ರಿ 88-100

ಕಾಂಗ್ರೆಸ್ ಮೈತ್ರಿ 24-36

ಇತರೆ 0-3

ಪೋಲ್ ಆಫ್ ಎಕ್ಸಿಟ್

ಕಾಂಗ್ರೆಸ್ ಮೈತ್ರಿ 88

ಕಾಂಗ್ರೆಸ್ ಮೈತ್ರಿ 27

ಇತರೆ 6

ಜೆಪಿಸಿ ಸಮೀಕ್ಷೆ

ಬಿಜೆಪಿ ಮೈತ್ರಿ 88-101

ಕಾಂಗ್ರೆಸ್ ಮೈತ್ರಿ-23-33

ಇತರೆ-2-5

ಪಿ-ಮಾರ್ಕ್

ಬಿಜೆಪಿ ಮೈತ್ರಿ 82-94

ಕಾಂಗ್ರೆಸ್ ಮೈತ್ರಿ-30-40

ಇತರೆ-1-5

ಪಿಪಲ್ಸ್ ಪಲ್ಸ್

ಬಿಜೆಪಿ ಮೈತ್ರಿ 68-72

ಕಾಂಗ್ರೆಸ್ ಮೈತ್ರಿ -22-26

ಇತರೆ 7-15

ಪೋಲ ಡೈರಿ

ಕಾಂಗ್ರೆಸ್ ಮೈತ್ರಿ-15-26

ಬಿಜೆಪಿ ಮೈತ್ರಿ-86-101

ಇತರೆ-3-7

4) ತಮಿಳುನಾಡು ವಿಧಾನಸಭೆ: ತಮಿಳುನಾಡಿನಲ್ಲಿ ಸಿಎಂ ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರಕ್ಕೆ ಜನರು ಜೈ ಎಂದಿದ್ದಾರೆ. ಎನ್ ಡಿ ಎ ಮೈತ್ರಿಕೂಟಕ್ಕೆ ಈ ಬಾರಿಯೂ ನಿರಾಸೆ ದೊಡ್ಡ ಮಟ್ಟದಲ್ಲಿ ಹವಾ ಎಬಿಸಿದ ನಟ ವಿಜಯ್ ಅವರ ಟಿವಿಗೆ ಪಕ್ಷವು ಸಾಧಾರಣ ಸಾಧನೆ ಮಾಡಲಿದೆ ಸರಕಾರ ರಚನೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂಬುದು ಹಲವು ಸಮೀಕ್ಷೆಗಳ ಭವಿಷ್ಯ.

ಪೋಲ್ ಆಫ್ ಎಕ್ಸಿಟ್

ಡಿ ಎಂ ಕೆ ಮೈತ್ರಿ 137

ಎ ಐ ಡಿ ಎಂ ಕೆ ಮೈತ್ರಿ 75

ಟಿ ವಿ ಕೆ 17

ಪಿ ಮಾರ್ಕ್

ಡಿಎಂಕೆ ಮೈತ್ರಿ 125 -145

ಎ ಐ ಡಿ ಎಂ ಕೆ ಮೈತ್ರಿ 65 -85

ಟಿ ವಿ ಕೆ 16 -26

ಮ್ಯಾಟ್ರಿಜ್

ಡಿಎಂಕೆ ಮೈತ್ರಿ 122 -132

ಎ ಐ ಡಿ ಎಂ ಕೆ ಮೈತ್ರಿ 87 -110

ಟಿವಿ ಕೆ 10-12

ಪಿಂಪಲ್ಸ್ ಪಲ್ಸ್

ಡಿಎಂಕೆ ಮೈತ್ರಿ 125- 145

ಎಐಡಿ ಎಂ ಕೆ ಮೈತ್ರಿ 65 -80

ಟಿವಿಕೆ 18 -24

ಚಾಣಕ್ಯ ಸ್ಟ್ರಾತರ್ಜಿ

ಡಿ ಎಂ ಕೆ ಮೈತ್ರಿ 145 -140

ಎ ಐ ಡಿ ಎಂ ಕೆ ಮೈತ್ರಿ 50 -65

ಟಿವಿಕೆ 0

12 ರಾಶಿಗಳ ಗುರುವಾರದ ಭವಿಷ್ಯ & ಪಂಚಾಂಗ: ಅನಾರೋಗ್ಯ ನಿರ್ಲಕ್ಷ್ಯ ಬೇಡ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online