<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಆಲ್ಕೋಹಾಲ್ ದರದಲ್ಲಿ ಭಾರಿ ಕಡಿತ

ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಆಲ್ಕೋಹಾಲ್ ದರದಲ್ಲಿ ಭಾರಿ ಕಡಿತ
Summary: Good news for alcohol lovers! Huge reduction in beer and whiskey prices has been announced. Consumers have got relief from the new prices, here is the complete information about the details and reasons behind the price cut.

Belagavi news:

ಬೆಂಗಳೂರು,ಮೇ 15: ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯಿಂದ ಸಿಹಿ ಸುದ್ದಿ ಲಭ್ಯವಾಗಿದೆ. ರಾಜ್ಯ ಸರ್ಕಾರವು ಮೇ 11ರಿಂದ ನೂತನ ' ಆಲ್ಕೋಹಾಲ್ ಇನ್ ಬೆವರೇಜ್ ' (AiB) ನೀತಿಯನ್ನು ಜಾರಿಗೆ ತಂದಿದ್ದು, ಇದರ ಪರಿಣಾಮವಾಗಿ ಪ್ರೀಮಿಯಂ ಬಿಯರ್ ಹಾಗೂ ಸ್ಕಾಚ್ ವಿಸ್ಕಿ ಗಳ ಬೆಲೆಯಲ್ಲಿ ಗಮನೀಯ ಕಂಡು ಬಂದಿದೆ.

ಆದರೆ ಇದರೊಂದಿಗೆ ಸಾಮಾನ್ಯ ಜನರು ಹೆಚ್ಚು ಬಳಸುವ ಕಡಿಮೆ ದರದ ಮದ್ಯದ ಬೆಲೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ನೀತಿಯು ವಿಭಿನ್ನ ವರ್ಗದ ಮದ್ಯಗಳ ಮೇಲೆ ವಿಭಿನ್ನ ಪರಿಣಾಮ ಬೀರಿದೆ.

ಅಬಕಾರಿ ಇಲಾಖೆ ನಿಯಮಗಳು ಪ್ರಕಾರ, ಈ ಹೊಸ ನೀತಿಯು ಉದ್ದೇಶ ಪ್ರೀಮಿಯಂ ಮದ್ಯದ ಮಾರುಕಟ್ಟೆಯನ್ನು ಸಮತೋಲನಗೊಳಿಸುವುದು ಹಾಗೂ ರಾಜ್ಯದ ಆದಾಯವನ್ನು ಹೆಚ್ಚಿಸುವುದು ಎಂದು ತಿಳಿದು ಬಂದಿದೆ.

ಕರ್ನಾಟಕದ ನೂತನ ಅಬಕಾರಿ ನೀತಿಯಿಂದ ಬಿಯರ್ ಹಾಗೂ ಪ್ರೀಮಿಯಂ ಸ್ಕಾಚ್ ದರಗಳಲ್ಲಿ ಶೇ. 20 ರಿಂದ 25 ರಷ್ಟು ಇಳಿಕೆ ಕಂಡು ಬಂದಿದೆ. ಮೇ 11 ರಿಂದ ಜಾರಿಗೆ ಬಂದಿರುವ ಈ ಹೊಸ ನಿಯಮದಡಿ ಮದ್ಯದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಇದರಂತೆ ಈವರೆಗೆ ಇದ್ದ 16 ಸ್ಲ್ಯಾಬ್ ಗಳನ್ನು 8ಕ್ಕೆ ಇಳಿಸಲಾಗಿದ್ದು, ಇನ್ನು ಮುಂದೆ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಹೊಸ ವ್ಯವಸ್ಥೆಯಿಂದ ಪ್ರೀಮಿಯಂ ಮದ್ಯದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಮಾರುಕಟ್ಟೆಯಲ್ಲಿ ದರ ಸಮತೋಲನ ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಮುಖ್ಯಾಂಶಗಳು:

ನೂತನ ಅಬಕಾರಿ ನೀತಿಯಿಂದ ಬಿಯರ್ ದರದಲ್ಲಿ ಶೇ. 25 ರಷ್ಟು ಇಳಿಕೆ

ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆ ಬಾಟಲಿಗೆ ಸಾವಿರ ರೂಪಾಯಿಗಳಷ್ಟು ಕಡಿತವಾಗಿದೆ.

ಕಡಿಮೆ ದರದ ಮದ್ಯದ ಬೆಲೆ ಏರಿಕೆ, 16 ತೆರಿಗೆ ಸ್ಲ್ಯಾಬ್ ಗಳು ಎಂಟಕ್ಕೆ ಇಳಿಕೆ.

ಬಿಯರ್ ದರದಲ್ಲಿ 20 - 25% ಇಳಿಕೆ

ಕರ್ನಾಟಕದ ನೂತನ ಅಬಕಾರಿ ನೀತಿಯ ಪರಿಣಾಮವಾಗಿ ಶೇ.5 ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್ ಗಳ ಬೆಲೆಯಲ್ಲಿ ಶೇ.20 ರಿಂದ 25 ರಷ್ಟು ಇಳಿಕೆ ಕಂಡು ಬಂದಿದೆ.

ಈ ಬದಲಾವಣೆಯಿಂದ ಕಿಂಗ್ ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ, 650 ಎಂಎಲ್ ಬಾಟಲಿಗಳ ಮೇಲೆ ಸುಮಾರು 75 ರೂ. ವರೆಗೆ ಇಳಿಕೆ ಆಗಲಿದೆ ಎಂದು ತಿಳಿದು ಬಂದಿದೆ. ಹೈನೆಕೆನ್ ಮೇಲೆ ಸುಮಾರು 70 ರೂ. ಯುಬಿ ಎಕ್ಸ್ ಪೋರ್ಟ್ ಮೇಲೆ 25 ರೂ. ಹಾಗೂ ಬಡ್ ವೈಸರ್ ಪ್ರೀಮಿಯಂ ಮೇಲೆ 20 ರೂ. ವರೆಗೆ ದರ ಕಡಿತವಾಗಲಿದೆ.

ಪ್ರೀಮಿಯಂ ಸ್ಕಾಚ್ ಮತ್ತು ವಿಸ್ಕಿ ಅಗ್ಗ:

ಬಿಯರ್ ಮಾತ್ರವಲ್ಲದೆ, ವಿದೇಶಿ ಬ್ರಾಂಡ್ ನ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲೂ ಶೇ. 20ರಷ್ಟು ಇಳಿಕೆ ಕಂಡು ಬಂದಿದೆ. ಉದಾಹರಣೆಗೆ, ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್ ನ 750 ಎಂಎಲ್ ನಗರ ಬಾಟಲಿಯ ಬೆಲೆ 5,190 ರೂ. ಗಳಿಂದ 4,100 ರೂ.ಗೆ ಇಳಿದಿದೆ.

ಈ ದರ ಇಳಿಕೆ ಪ್ರೀಮಿಯಂ ಮದ್ಯಪ್ರಿಯರಿಗೆ ದೊಡ್ಡ ಸಮಾಧಾನ ತಂದಿದ್ದು, ಮಾರುಕಟ್ಟೆಯಲ್ಲಿ ಹೊಸ ಅಬಕಾರಿ ನೀತಿಯ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ.

ಹೊಸ ನೀತಿಯ ವಿಶೇಷತೆ:

ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಈ AiB ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ 16 ತೆರಿಗೆ ಸ್ಲ್ಯಾಬ್ ಗಳನ್ನು ಈಗ ಎಂಟಕ್ಕೆ ಇಳಿಸಲಾಗಿದೆ. ಅರವತ್ತು ವರ್ಷಗಳ ಹಳೆಯ ತೆರಿಗೆ ಪದ್ಧತಿಯನ್ನು ಕೈ ಬಿಟ್ಟು, ಮದ್ಯ ದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

Also Read:

ಸಮರ್ಥ್ ಶಾಮನೂರ್ ಮೊದಲ ಸಭೆಯಲ್ಲಿ ಗಮನ ಸೆಳೆದರು : ಲ್ಯಾಪ್ಟಾಪ್ ನೊಂದಿಗೆ ಬಂದ ಸಮರ್ಥ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online