<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

Heat wave horror : ತಾಪಮಾನ ಏರಿಕೆಗೆ 21 ಮಂದಿ ದುರ್ಮರಣ

Heat wave horror : ತಾಪಮಾನ ಏರಿಕೆಗೆ 21 ಮಂದಿ ದುರ್ಮರಣ
Summary: The heat wave is the worst in Andhra Pradesh and Telangana: A total of 43 people have died in the last three days due to the sharp rise in temperature. Many people, including common people and roadside beggars, have succumbed to severe heatstroke. The government has warned people not to go out unnecessarily during the afternoon and has advised them to take special care of their health.

belagavi news :

ಬೆಂಕಿ ಉಂಡೆಯಂತಾಗಿರುವ ಸೂರ್ಯನ ಪ್ರಕರತೆಗೆ ಜನಜೀವನ ತತ್ತರಿಸಿದೆ. ರಣಬಿಸಿಲಿನ ತೀವ್ರತೆಗೆ ಸಿಲುಕಿ ಆಂಧ್ರಪ್ರದೇಶದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 21 ಮಂದಿ ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಮೇ 21ರಂದು ತೆಲಂಗಾಣ ರಾಜ್ಯದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಉರಿಯುವ ಬಿಸಿ ಗಾಳಿಗೆ 22 ಮಂದಿ ಅಸುನಿಗಿದರು. ಅದರ ಬೆನ್ನಲ್ಲೇ ಮೇ 22ರಂದು ಆಂಧ್ರ ಪ್ರದೇಶದಲ್ಲೂ ಬಿಸಿಲಿನ ಆರ್ಭಟ ಮುಂದುವರೆದಿದ್ದು 21 ಮಂದಿ ಜೀವ ಕಳೆದುಕೊಂಡಿರುವುದು ತೆಲುಗು ರಾಜ್ಯಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯೊಂದರೆಲ್ಲೇ 10 ಮಂದಿ ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ .

ಮೇ 21ರಂದು ತೆಲಂಗಾಣ ರಾಜ್ಯದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು,ಉರಿಯುವ ಬಿಸಿ ಗಾಳಿಗೆ 22 ಮಂದಿ ಅಸುನಿಗಿದರು. ಅದರ ಬೆನ್ನಲ್ಲೇ ಮೇ 22ರಂದು ಆಂಧ್ರಪ್ರದೇಶದಲ್ಲೂ ಬಿಸಿಲಿನ ಆರ್ಭಟ ಮುಂದುವರೆದಿದ್ದು 21 ಮಂದಿ ಜೀವ ಕಳೆದುಕೊಂಡಿರುವುದು ತೆಲಂಗಾಣ ರಾಜ್ಯಗಳಲ್ಲಿ ಆತಂಕ ವಾತಾವರಣ ಸೂಚಿಸಿದೆ.

ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯೊಂದರಲ್ಲಿ 10 ಮಂದಿ ಸಾವಣಪ್ಪಿರುವುದು ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತದೆ. ಮೃತರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದು, ಅವರು ಸಾಮಾನ್ಯ ನಾಗರಿಕರು ಎಂದು ತಿಳಿದುಬಂದಿದೆ. ಉಳಿದ ಎಂಟು ಮಂದಿ ರಸ್ತೆ ಬದಿಯ ಅಪರಿಚಿತ ಭಿಕ್ಷುಕರಾಗಿದ್ದು, ಅವರ ಗುರುತು ಇನ್ನು ಪತ್ತೆಯಾಗಿಲ್ಲ. ಅತಿಯಾದ ಬಿಸಿಲಿನ ನಡುವೆ ಜನರು ಅಗತ್ಯವಿದ್ದರೆ ಮಾತ್ರ ಹೊರಗೆ ತೆರಳುವಂತೆ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆಂಧ್ರಪ್ರದೇಶದಲ್ಲಿ ರಣಬಿಸಿಲಿನ ಅಬ್ಬರ ಮುಂದುವರೆದಿದ್ದು, ವಿವಿಧ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕಾಕಿನಾಡ ಜಿಲ್ಲೆಯಲ್ಲಿ ಮೂವರು ಬಿಸಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಸರಪವರಂ ಪಂಚಾಯತನ ಗುತ್ತಿಗೆ ಕಾರ್ಮಿಕ ಗುರ್ರಂ ಅಪ್ಪಣ್ಣ (37), ಗೊಲ್ಲಪ್ರೊಲು ತಾಲೂಕಿನ ಚಂದುರ್ತಿಯ ಪಿಲ್ಲಿ ರಮಣ ಹಾಗೂ ಪಿಠಾಪುರದ ವೆಂಕಟಾಪುರದ ಕೆ ಅಪ್ಪಾರಾವ್ ಉಷ್ಣತೆಯ ತೀವ್ರತೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದೆಡೆ, ಪಲ್ನಾಡು ಜಿಲ್ಲೆಯ ನರಸರಾಯ ಪೇಟೆ ಪಟ್ಟಣದಲ್ಲಿ ಬಿಸಿಲಿನ ತಾಪಕೆ ಇಬ್ಬರು ಅಪರಿಚಿತರು ಸಾವನ್ನಪ್ಪಿದ್ದಾರೆ. ಪಟ್ಟಣದ ಚಿತ್ರಾಲಯ ಕೇಂದ್ರದ ವಿಜೇತ ಸಿನಿಮಾ ಮಂದಿರದ ಸಮೀಪದ ಮಾರುಕಟ್ಟೆ, ಪ್ರದೇಶದಲ್ಲಿ ಸುಮಾರು 60 ವರ್ಷದ ವಿರುದ್ಧ ಹಾಗೂ 25 ರಿಂದ 30 ವರ್ಷದೊಳಗಿನ ಯುವಕ ರಣಬಿಸಿಲಿಗೆ ಬಲಿಯಾಗಿದ್ದಾರೆ. ವಿನುಕೊಂಡ ಕ್ಷೇತ್ರದಲ್ಲಿ ವಿರುದ್ಧ ವೆಲಿನೇನಿ ನರಸಿಂಹರಾವ್ ಬಿಸಿಲಿನ ಹೊಡೆತದಿಂದ ಅಸುನಿಗಿದ್ದು,

ಅನಕಪಲ್ಲಿ ಜಿಲ್ಲೆಯ ಚೋಡವರಂ ತಾಲೂಕಿನ ಗೋವಾಡ ಗ್ರಾಮದಲ್ಲಿ ಅಟ್ಟ ಲಕ್ಷ್ಮಿ ಎಂಬ ಮಹಿಳೆಯು ತೀವ್ರ ಬಿಸಿ ಗಾಳಿಗೆ ಬಲಿಯಾಗಿದ್ದಾರೆ. ಮುಂದುವರೆದ ಉಷ್ಣತೆಯಿಂದ ಜನಜೀವನ ಅರ್ಥವ್ಯಸ್ತಗೊಂಡಿದ್ದು, ಸರ್ಕಾರ ಹಾಗೂ ಆರೋಗ್ಯ ಇಲಾಖೆ, ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಿವೆ.

ರಣಬಿಸಿಲಿನ ಆರ್ಭಟಕ್ಕೆ ಆಂಧ್ರಪ್ರದೇಶ ತತ್ತರಿಸಿದ್ದು, ವಿವಿಧ ಪ್ರದೇಶಗಳಲ್ಲಿ ಸಾವಿನ ಸರಣಿ ಮುಂದುವರೆದಿದೆ. ಸೀತಾರಾಮ್ ಪುರಂ ನ ಸುಮಾರು 40 ವರ್ಷಗಳ ಅಪರಿಚಿತ ವ್ಯಕ್ತಿ ಒಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ತಕ್ಷಣ ಸರ್ಕಾರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಜಿತ್ ಸಿಂಗ್ ನಗರದಲ್ಲಿನ ನ್ಯೂ ರಾಜರಾಜೇಶ್ವರಿ ಪೇಟೆ ಆಸ್ಪತ್ರೆ ಗೇಟ್ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹನುಮಾನ ಪೇಟೆಯ ಐವತ್ತು ವರ್ಷದ ರಾಘವಯ್ಯ ಪಾರ್ಕ್ ಸಮೀಪ ಕುಸಿದು ಬಿದ್ದು ಮೃತಪಟ್ಟಿದ್ದು, ಮತ್ತೊಂದೆಡೆ ಸುಮಾರು 65 ವರ್ಷದ ವೃದ್ಧರು ಬೆಸೆಂಟ್ ರಸ್ತೆಯ ಎಲ್ಐಸಿ ಕಚೇರಿ ಬಳಿ ಅಸ್ತವ್ಯಸ್ತಗೊಂಡು ಅಸುನೀಗಿದ್ದಾರೆ. ಇವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕಾಳೇಶ್ವರರಾವ್ ಮಾರುಕಟ್ಟೆ ಸಮೀಪದ ರಥಮ್ ಕೇಂದ್ರದಲ್ಲಿ ಮೂವರು ಭಿಕ್ಷಕರು ಮೃತಪಟ್ಟಿರುವ ಘಟನೆ ಕೂಡ ಬೆಳಕಿಗೆ ಬಂದಿದೆ.

ಇವರಲ್ಲಿ ಕಸ್ತೂರಿಬಾಯಿ ಪೇಟೆಯ ದಾವುಲೂರಿ ರಾಮರಾವ್ ಮತ್ತು ಗುಣದಾಲಾ ಗಾಂಧಿ ಬೊಮ್ಮ ಕೇಂದ್ರದ ನಿಮ್ಮ ಗಡ್ಡಾ ಶರತ್ ಬಾಬು ಅವರನ್ನು ರಸ್ತೆ ಬದಿಯಲ್ಲಿ ಪ್ರಜ್ಞಾವೀನ ಸ್ಥಿತಿಯಲ್ಲಿ ಕಂಡು ಸ್ಥಳೀಯರು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಇನ್ನೋರ್ವ ಅಮೃತನ ಗುರುತು ಇನ್ನು ಪತ್ತೆಯಾಗಿಲ್ಲ.

ಶುಕ್ರವಾರ ಎಲ್ಲೂರು ಜಿಲ್ಲೆಯಲ್ಲಿ ಮೂವರು ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಒಬ್ಬರು ಬಿಸಿಲಿನ ತಾಪಕೆ ಬಲಿಯಾಗಿದ್ದಾರೆ. ಪಶ್ಚಿಮ ಘೋದಾವರಿ ಜಿಲ್ಲೆಯ ಪಾಲಕೊಳ್ಳು ತಾಲೂಕಿನ ಪೂಲಪಲ್ಲಿ ಪ್ರದೇಶದಲ್ಲಿ ಮೂಲತಃ ಓಡಿಸಾದ ರಾಯಗಡ ಜಿಲ್ಲೆಯ 28 ವರ್ಷದ ಯುವಕ ಬಿಸಿ ಗಾಳಿಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಮುಂದುವರಿದ ಉಷ್ಣತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮಧ್ಯಾಹ್ನ ವೇಳೆಯಲ್ಲಿ ಹೊರಗಡೆ ಓಡಾಟ ತಪ್ಪಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

Also Read:

ಮಹಿಳೆಯರ ಆರತಿಗೆ ಸಿದ್ದರಾಮಯ್ಯ ವಿಭಿನ್ನ ಪ್ರತಿಕ್ರಿಯೆ : ಫುಲ್ ವೈರಲ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online