<?= $pageTitle ?>
Logo
ಮುಖಪುಟ ಓದುವುದು ಕೇಳು
Food

ಹಾಲು ಉಕ್ಕಿ ಒಲೆ ಕೊಳಕಾಗುವುದನ್ನು ತಪ್ಪಿಸಲು ಇಲ್ಲಿದೆ ಸುಲಭ ಪರಿಹಾರ

ಹಾಲು ಉಕ್ಕಿ ಒಲೆ ಕೊಳಕಾಗುವುದನ್ನು ತಪ್ಪಿಸಲು ಇಲ್ಲಿದೆ ಸುಲಭ ಪರಿಹಾರ
Summary: Kitchen Tips - Here's a simple solution to the problem of milk spilling while boiling. By following these easy tips, you can prevent milk from spilling on the stove and make cooking easier.

Belagavi News :

ಅಡುಗೆ ಮಾಡುವಾಗ ಹಲವರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಒಲೆಯ ಮೇಲೆ ಹಾಲು ಉಕ್ಕಿ ಚೆಲ್ಲುವುದು. ಕೆಲವೇ ಕ್ಷಣಗಳ ಅಜಾಗರೂಕತೆಯಿಂದ ಹಾಲು ವ್ಯರ್ಥವಾಗುವುದರ ಜೊತೆಗೆ ಗ್ಯಾಸ್ ಸ್ಟೌವ್ ಹೊಳೆಯುವುದು ಮತ್ತು ಸ್ವಚ್ಛಗೊಳಿಸುವ ಕೆಲಸ ಹೆಚ್ಚಾಗುತ್ತಿದೆ.

ಹಾಲು ಕುದಿಯುವುದು ಕೆಲವರಿಗೆ ಅಡುಗೆಯಲ್ಲಿನ ದೊಡ್ಡ ಸವಾಲ್ ಆಗಿರುತ್ತದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಹಾಲು ಉಕ್ಕಿ ಹೊರಗೆ ಚೆಲ್ಲುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಗಮನ ಅಗತ್ಯ. ಚೆಲ್ಲಿದ ಹಾಲನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಸ್ಟೌವ್ ಹಾಳಾಗುವ ಸಾಧ್ಯತೆಯೂ ಇರುತ್ತದೆ.

ಆದರೆ ಕೆಲವು ಸರಳ ಕಿಚನ್ ಟಿಪ್ಸ್ ಗಳನ್ನು ಪಾಲಿಸುವ ಮೂಲಕ ಹಾಲು ಉಕ್ಕಿ ಚೆಲ್ಲುವುದನ್ನು ಸುಲಭವಾಗಿ ತಡೆಯಬಹುದು. ಹಾಲು ಕುದಿಸುವಾಗ ಸರಿಯಾದ ಪಾತ್ರೆ ಬಳಸುವುದು, ಬೆಂಕಿಯ ಉರಿಯನ್ನು ನಿಯಂತ್ರಿಸುವುದು ಹಾಗೂ ಕೆಲವು ಸರಳ ವಿಧಾನಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು.

ಪ್ರತಿದಿನದ ಅಡುಗೆ ಕೆಲಸವನ್ನು ಸುಲಭಗೊಳಿಸುವ ಈ ಸರಳ ಹಾಲು ಕುಡಿಸುವ ಟ್ರಿಕ್ಸ್ ಗಳು ಮನೆ ಮಂದಿಗೆ ಉಪಯುಕ್ತವಾಗಿದೆ.

ಹಾಲು ಉಕ್ಕಿ ಚಲ್ಲದಂತೆ ತಡೆಯಲು 5 ಸರಳ ಟ್ರಿಕ್ಸ್ ಗಳು, ಅಡುಗೆ ಮನೆಯಲ್ಲಿ ಈ ವಿಧಾನಗಳನ್ನು ಅನುಸರಿಸಿ :

ವಲಯ ಮೆಲಿಟ್ಟ ಹಾಲು ಉಕ್ಕಿ ಚೆಲ್ಲುವುದು ಅಡುಗೆ ಮಾಡುವಾಗ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ. ಇದರಿಂದ ಹಾಲು ವ್ಯರ್ಥವಾಗುವುದರ ಜೊತೆಗೆ ಗ್ಯಾಸ್ ಸ್ಟವ್ ಕೊಳೆಯುವುದು ಮತ್ತು ಸ್ವಚ್ಛಗೊಳಿಸುವ ಕೆಲಸ ಹೆಚ್ಚಾಗುತ್ತದೆ. ಆದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಹಾಲು ಉಕ್ಕಿ ಚೆಲ್ಲುವುದನ್ನು ಸುಲಭವಾಗಿ ತಡೆಯಬಹುದು.

1. ಪಾತ್ರೆಯ ಅಂಚಿಗೆ ತುಪ್ಪ ಅಥವಾ ಎಣ್ಣೆ ಹಚ್ಚಿ - ಹಾಲು ಕುದಿಸುವ ಪಾತ್ರೆಯ ಅಂಚುಗಳಿಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಹಚ್ಚುವುದರಿಂದ ಹಾಲಿನ ನೊರೆ ಮೇಲಕ್ಕೆ ಏರಿದಾಗ ಅದು ಅಂಚಿಗೆ ಅಂಟಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದ ಹಾಲು ಉಕ್ಕಿ ಹೊರಗೆ ಚೆಲುವ ಅಪಾಯ ಕಡಿಮೆಯಾಗುತ್ತದೆ.

2. ಪಾತ್ರೆಯ ಮೇಲೆ ಚಮಚವನ್ನು ಅಡ್ಡಲಾಗಿ ಇಡಿ :

ಹಾಲು ಕುಡಿಸುವಾಗ ಪಾತ್ರೆಯ ಮೇಲೆ ಅಡ್ಡಲಾಗಿ ಚಮಚೆ ಇಡುವುದು ಸಹ ಒಂದು ಸರಳ ಟ್ರಿಕ್ . ಹಾಲಿನಿಂದ ಉಂಟಾಗುವ ನೊರೆ ಚಮಚಕ್ಕೆ ತಾಗುವುದರಿಂದ ಹಾಲು ತಕ್ಷಣವೇ ಹೊರಗೆ ಹರಿಯುವುದನ್ನು ತಡೆಯಲು ಸಹಾಯಕವಾಗುತ್ತದೆ.

3. ಹೆಚ್ಚಿನ ಉರಿಯಲ್ಲಿ ಹಾಲು ಕುದಿಸಬೇಡಿ :

ಹೆಚ್ಚಿನ ಉರಿಯಲ್ಲಿ ಹಾಲು ಬೇಗ ಕುದಿಯುವುದರಿಂದ ನೋರೆ ವೇಗವಾಗಿ ರೂಪಗೊಂಡು ಹಾಲು ಹಾಕುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಅಥವಾ ಮಾಧ್ಯಮ ಉರಿಯಲ್ಲಿ ಹಾಲು ಕುದಿಸುವುದು ಅಥವಾ ಕಾಯಿಸುವುದು ಉತ್ತಮ.

4. ಅಗಲ ಬಾಯಿಯ ಪಾತ್ರ ಬಳಸಿ :

ಹಾಲು ಕುದಿಸಲು ಅಗಲ ಬಾಯಿಯ ಹಾಗೂ ದೊಡ್ಡ ಪಾತ್ರೆಯನ್ನು ಬಳಸುವುದರಿಂದ ನೋರೆ ವಿಸ್ತರಿಸಲು ಹೆಚ್ಚಿನ ಜಾಗ ಸಿಗುತ್ತದೆ. ಇದರಿಂದ ಹಾಲು ಪಾತ್ರೆಯಿಂದ ಹೊರಗೆ ಚೆಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ.

5. ಹಾಲು ಕುದಿಸುವಾಗ ಪಾತ್ರೆ ಸಂಪೂರ್ಣ ಮುಚ್ಚಬೇಡಿ -

ಪಾತ್ರೆಯನ್ನು ಮುಚ್ಚಿದಾಗ ಶಾಖ ಒಳಗೆ ಉಳಿದು ನೊರೆಬೇಗ ರೂಪಗೊಳ್ಳಬಹುದು. ಇದರಿಂದ ಹಾಲು ಉಕ್ಕಿ ಚೆಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಪಾತ್ರೆಯನ್ನು ಸಂಪೂರ್ಣ ಮುಚ್ಚುವ ಬದಲು ಎಚ್ಚರಿಕೆಯಿಂದ ಹಾಲು ಕಾಯಿಸುವುದು ಉತ್ತಮ.

ಈ ಸರಳ ಕಿಚನ್ ಟಿಪ್ಸ್ ಗಳನ್ನು ಪಾಲಿಸುವ ಮೂಲಕ ಹಾಳು ವ್ಯರ್ಥವಾಗುವುದನ್ನು ತಪ್ಪಿಸಿ, ಅಡುಗೆ ಕೆಲಸವನ್ನು ಸುಲಭಗೊಳಿಸಬಹುದು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online