<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಮತ್ತೆ ಬರ್ತಿದೆ ಐಮ್ಯಾಕ್ಸ : ಹೈದರಾಬಾದ್ ಸಿನಿ ಪ್ರಿಯರಿಗೆ ಗುಡ್ ನ್ಯೂಸ್

ಮತ್ತೆ ಬರ್ತಿದೆ ಐಮ್ಯಾಕ್ಸ : ಹೈದರಾಬಾದ್ ಸಿನಿ ಪ್ರಿಯರಿಗೆ ಗುಡ್ ನ್ಯೂಸ್
Summary: Hyderabad movie lovers are in for a treat. The possibility of the IMAX experience returning to the city after many years is increasing, and the name of the 'Varanasi' theater is being heard as a major reason for that.

BELAGAVI NEWS :

ಸಿನಿಮಾ ಪ್ರಿಯರ ಬಹುಕಾಲದ ನಿರೀಕ್ಷೆಗೆ ಇದೀಗ ತೆರೆ ಬೀಳುವ ಸಮಯ ಬಂದಿದೆ.ವಿಶ್ವದ ಅತಿ ಉತ್ತಮ ಸಿನಿಮಾ ವೀಕ್ಷಣಾ ಅನುಭವ ನೀಡುವ IMAX ಸ್ಕ್ರೀನ್ ಮೊದಲ ಬಾರಿಗೆ ಹೈದರಾಬಾದ್ ಗೆ ಆಗಮಿಸುತ್ತಿದೆ ಎಂಬ ಸುದ್ದಿ ವಲಯದಲ್ಲಿ ಬಾರಿ ಸಂಚಲನ ಮೂಡಿಸಿದೆ.

IMAX ತಂತ್ರಜ್ಞಾನವು ತನ್ನ ದೈತ್ಯ ಪರದೆ,ಅತ್ಯುನ್ನತ ಚಿತ್ರ ಗುಣಮಟ್ಟ ಹಾಗೂ ಅತ್ಯಧುನಿಕ ಸೌಂಡ್ ವ್ಯವಸ್ಥೆಯಿಂದ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ.ಹಾಲಿವುಡ್ ಅನೇಕ ಖ್ಯಾತ ನಿರ್ದೇಶಕರು ತಮ್ಮ ಸಿನಿಮಾಗಳನ್ನು ವಿಶೇಷವಾಗಿ IMAX ಫಾರ್ಮ್ಯಾಟ್ ಗೆ ಹೊಂದುವಂತೆ ನಿರ್ಮಿಸುತ್ತಾರೆ.ಇದೇ ಹಾದಿಯಲ್ಲಿ ನಿರ್ದೇಶಕ S.S ರಾಜ ಮೌಳಿ ಕೂಡ ತಮ್ಮ ಮಹತ್ವಕಾಂಕ್ಷೆಯ ವಾರಣಾಸಿ ಸಿನಿಮಾವನ್ನು IMAX ಅನುಪಾತದಲ್ಲಿ ರೂಪಿಸಿದ್ದಾರೆ ಎನ್ನಲಾಗಿದೆ.

ಆದರೆ ಇದುವರೆಗೆ ತೆಲುಗು ರಾಜ್ಯಗಳಲ್ಲಿ ಅಧಿಕೃತ IMAX ಸ್ಕ್ರೀನ್ಗಳ ಕೊರತೆಯಿಂದ ಆ ಅನುಭವವನ್ನು ಸಂಪೂರ್ಣವಾಗಿ ನೀಡಲು ಸಾಧ್ಯವಾಗಿರಲಿಲ್ಲ.ಇದೀಗ ಹೈದರಾಬಾದ್ ನಲ್ಲಿ ಹೊಸ IMAX ಸ್ಕ್ರೀನ್ ಸ್ಥಾಪನೆಯಾಗುತ್ತಿರುವುದು ಸಿನಿ ಪ್ರಿಯರಿಗೆ ದೊಡ್ಡ ಉಡುಗೊರೆಯಾಗಿದೆ.

'ವಾರಣಾಸಿ' ಸೇರಿದಂತೆ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಬಾರಿ ಬಜೆಟ್ ಚಿತ್ರಗಳನ್ನು IMAX ಫಾರ್ಮ್ಯಾಟ್ ನಲ್ಲಿ ವೀಕ್ಷಿಸುವ ಅವಕಾಶ ಸಿಗಲಿದ್ದು,ಸಿನಿಮಾ ಅನುಭವ ಮತ್ತೊಂದು ಹಂತಕ್ಕೆ ತಲುಪಲಿದೆ.ಈ ಬೆಳವಣಿಗೆ ಹೈದರಾಬಾದ್ ಅನ್ನು ದೇಶದ ಪ್ರಮುಖ ಸಿಹಿ ತಾಣಗಳ ಸಾಲಿಗೆ ಮತ್ತಷ್ಟು ಬಲವಾಗಿ ಸೇರಿಸಲಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ.

ಹೈದರಾಬಾದ್ ನ ಸಿನಿ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ.ಜಾಗತಿಕ ಸಿನಿಮಾ ಪ್ರದರ್ಶನ ತಂತ್ರಜ್ಞಾನ ಸಂಸ್ಥೆಯಾದ IMAX ಕಾರ್ಪೊರೇಷನ್ ಭಾರತದಲ್ಲಿ ಮೂರು ಹೊಸ IMAX with laser ಚಿತ್ರಮಂದಿರಗಳನ್ನು ಆರಂಭಿಸುವ ಯೋಜನೆಯ ಘೋಷಿಸಿದ್ದು,ಅವುಗಳಲ್ಲಿ ಎರಡು ಹೈದರಾಬಾದ್ ನಲ್ಲಿ ಸ್ಥಾಪನೆಯಾಗಲಿವೆ.

ಈ ಪೈಕಿ ಹೈದರಾಬಾದ್ ನ ಮೊದಲ ಅಧಿಕೃತ IMAX ಸ್ತ್ರೀನ್ ಅನ್ನು AMB cinemas ಹೊಂದಲಿದ್ದು,ನಟ ಮಹೇಶ್ ಬಾಬು ಹಾಗೂ ಉದ್ಯಮಿ Sunil Nadang ಅವರ ಜಂಟಿ ಹೊಡೆದನದ ಮಲ್ಟಿಫ್ಲೆಕ್ಸ್ ಇದಕ್ಕೆ ವೇದಿಕೆಯಾಗಲಿದೆ.ವಿಶೇಷವಾಗಿ AMB classic Sudarshan ನಲ್ಲಿ ನಗರದ ಮೊದಲ IMAX ಅಳವಡಿಕೆಯಾಗಲಿರುವುದು ಸಿನಿಪ್ರಿಯರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಕೆಲ ತಿಂಗಳ ಹಿಂದೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಭಾರತದಲ್ಲಿ IMAX ಸ್ಕ್ರೀನ್ಗಳ ಸಂಖ್ಯೆ ಹೆಚ್ಚಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಇದೀಗ ಆ ಮಾತಿನ ಬೆನ್ನಲ್ಲೇ ಹೈದರಾಬಾದ್ ಗೆ IMAX ಆಗಮನವಾಗುತ್ತಿರುವುದು ವಿಶೇಷ ರಾಜ ಮೌಳಿ ಅವರ ಮಹತ್ವಕಾಂಕ್ಷೆಯ ಚಿತ್ರದ ಅನುಭವವನ್ನು ಅತ್ಯುತ್ತಮವಾಗಿ ಪ್ರೇಕ್ಷಕರಿಗೆ ತಲುಪಿಸಲು ಈ ಬೆಳವಣಿಗೆ ನೆರವಾಗಿದೆ ಎಂದು ಚರ್ಚೆಯು ಸಿನಿ ವಲಯದಲ್ಲಿ ಕೇಳಿ ಬರುತ್ತಿದೆ.

ಮೂಲಗಳ ಪ್ರಕಾರ,'ವಾರಣಾಸಿ' ಚಿತ್ರದ ನಾಯಕ ಮಹೇಶ್ ಬಾಬು ಅವರ ಆಸಕ್ತಿ ಮತ್ತು ಬೆಂಬಲವು ಈ ಯೋಜನೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.2026ರ ಅಂತ್ಯದೊಳಗೆ AMB classic ನಲ್ಲಿ ಮೊದಲ IMAX with laser ಸ್ಕ್ರೀನ್ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು,10 ರಿಂದ 12 ಉಳಿದ ಎರಡು ಸ್ಕ್ರೀನ್ಗಳನ್ನು 2028ರ ವರೆಗೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಹೈದರಾಬಾದ್ ನ ಸಿನಿಪ್ರಿಯರ ಬಹುಕಾಲದ ನಿರೀಕ್ಷೆ ಕೊನೆಗೂ ಈಡೇರಿಸುವ ಹಂತಕ್ಕೆ ಬಂದಿದೆ.ಸುಮಾರು 10 ವರ್ಷಗಳ ಬಳಿಕ ನಗರಕ್ಕೆ ಮತ್ತೆ IMAX ಸ್ಕ್ರೀನ್ ಗಳು ಆಗಮಿಸುತ್ತಿದ್ದು,ಸಿನಿಮಾ ಅಭಿಮಾನಿಗಳಲ್ಲಿ ಬಾರಿ ಸಂಭ್ರಮ ಮನೆ ಮಾಡಿದೆ.

IMAX ಕಾರ್ಪೊರೇಷನ್ ಸಿಇಓ Rich gelfond ಭಾರತದಲ್ಲಿ ಪ್ರೀಮಿಯಂ ಲಾರ್ಜ್ ಫಾರ್ಮ್ಯಾಟ್ ಸಿನಿಮಾ ಅನುಭವಿಗಳಿಗಾಗಿ ಹಚ್ಚುತ್ತಿರುವ ಬೇಡಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ."2025 ವರ್ಷವೂ ಭಾರತದ ಬಾಕ್ಸ್ ಆಫೀಸ್ ನಲ್ಲಿ IMAX ಗೆ ಒಂದುವರೆಗಿನ ಅತ್ಯುತ್ತಮ ವರ್ಷವಾಗಿತ್ತು".ಹಾಲಿವುಡ್ ಹಾಗೂ ಭಾರತೀಯ ಸಿನಿಮಾಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು,ಹೊಸ ಹಾಗೂ ಈಗಾಗಲೇ ಇರುವ ಪ್ರದರ್ಶನ ಪಾಲುದಾರರಲ್ಲಿ IMAX ಗೆ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ"ಎಂದು ಅವರು ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಈ ಹಿಂದೆ ಸಿನಿಪ್ರಿಯರ ಹೆಚ್ಚಿನ ತಾಣವಾಗಿದ್ದ prasads IMAX 2015ರಲ್ಲಿ IMAX ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.ಅದರ ಬಳಿಕ ನಗರದಲ್ಲಿ ಅಧಿಕೃತ I MAX ಗ್ರೀನ್ಗಳ ಕೊರತೆ ಕಂಡುಬಂದಿತ್ತು.ಈಗ ಸುಮಾರು ಒಂದು ದಶಕದ ಬಳಿಕ ಅತ್ಯಾಧುನಿಕ IMAX with laser ತಂತ್ರಜ್ಞಾನದೊಂದಿಗೆ ಹೊಸ ಸ್ಕ್ರೀನ್ ಗಳು ನಗರಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ಹೊಸ ತಲೆಮಾರಿನ ಈ IMAX ಸ್ಕ್ರೀನ್ ಗಳು ದೈತ್ಯ ಪರದೇ, ಅತ್ಯುನ್ನತ ಚಿತ್ರ ಗುಣಮಟ್ಟ ಮತ್ತು ಅತ್ಯಾಧುನಿಕ ಸೌಂಡ್ ಅನುಭವದ ಮೂಲಕ ಪ್ರೇಕ್ಷಕರಿಗೆ ವಿಶ್ವಮಟ್ಟದ ಸಿನಿಮಾ ಅನುಭವ ನೀಡಲಿವೆ.ಹೀಗಾಗಿ ಹೈದರಾಬಾದ್ ಮತ್ತೆ ದೇಶದ ಪ್ರಮುಖ IMAX ಕೇಂದ್ರಗಳ ಸಾಲಿಗೆ ಸೇರುವ ನಿರೀಕ್ಷೆ ಮೂಡಿದೆ.

Also Read:

ಕರ್ನಾಟಕ ಸಂಪುಟ ವಿಸ್ತರಣೆ ಚರ್ಚೆ: ಹೈಕಮಾಂಡ್ ಮುಂದೆ ಸಿದ್ದರಾಮಯ್ಯ, ಡಿಕೆಶಿ ವಿಭಿನ್ನ ಪಟ್ಟಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online