<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಯುರೋಪ್ ನಲ್ಲಿ ಅಕ್ರಮ ವಲಸೆ ಬಿಕ್ಕಟ್ಟು: ಸ್ಪೇನ್ ವಿರುದ್ಧ ಇಟಲಿ ಅಸಮಾಧಾನ, ಷೆಂಗೆನ್ ಗೆ ಸವಾಲು

ಯುರೋಪ್ ನಲ್ಲಿ ಅಕ್ರಮ ವಲಸೆ ಬಿಕ್ಕಟ್ಟು: ಸ್ಪೇನ್ ವಿರುದ್ಧ ಇಟಲಿ ಅಸಮಾಧಾನ, ಷೆಂಗೆನ್ ಗೆ ಸವಾಲು
Summary: The issue of illegal migration in Europe has come up for discussion again. Italy, which has expressed its dissatisfaction over the increasing problem of illegal migrants in Spain, has warned of reviewing the Schengen agreement if the situation is not brought under control. This development has led to a new debate on the future of the Schengen agreement, the free movement system between European countries.

belagavi news :

ಸ್ಪೇನ್ ನ ಸೆಯುಟಾದಲ್ಲಿ ಅಕ್ರಮ ವಲಸೆ ಬಿಕ್ಕಟ್ಟು: ಷೆಂಗೆನ್ ಒಪ್ಪಂದ ಅಮಾನತಿಗೆ ಇಟಲಿ ಪ್ರಧಾನ ಮೆಲೋನಿ ಎಚ್ಚರಿಕೆ

ಸೆಯುಟಾ (ಸ್ಪೇನ್) : ಸ್ಪೇನ್ ನ ಸೆಯುಟಾ ಪ್ರದೇಶದಲ್ಲಿ ಅಕ್ರಮ ವಲಸಿಗರ ಸಂಖ್ಯೆಯನ್ನು ಏಕಾಏಕಿ ಏರಿಕೆ ಕಂಡುಬಂದಿದ್ದು, ಗಡಿ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ. ಮೊರಾಕೊದಿಂದ ಸಮುದ್ರ ಮಾರ್ಗದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಸೆಯುಟಾಗೆ ಆಗಮಿಸುತ್ತಿದ್ದು, ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದರೂ ಮಹಿಳೆಯರು ಮತ್ತು ಮಕ್ಕಳಿರುವ ಕುಟುಂಬಗಳು ಸೇರಿವೆ.

ವಲಸಿಗರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಸ್ಪೇನ್ ಮತ್ತು ಮೊರಾಕೊ ನಡುವಿನ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸೆಯುಟಾ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥ ಜುವಾನ್ ಜೀಸಸ್ ವಿವಾಸ್ ಅವರು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮ್ಯಾಡ್ರಿಡ್ ನ ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಸೇವಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಅವರು ಮನವಿ ಮಾಡಿದ್ದಾರೆ. ವಲಸಿಗರೆ ಸ್ವೀಕಾರ ಕೇಂದ್ರಗಳು ಈಗಾಗಲೇ ತುಂಬಿರುವುದರಿಂದ ನೂರಾರು ಮಂದಿ ಬೀದಿಗಳಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಷೆಂಗೆನ್ ಒಪ್ಪಂದದ ಬಗ್ಗೆ ಇಟಲಿ ಎಚ್ಚರಿಕೆ

ಯುರೋಪ್ ನಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸೆ ಸಮಸ್ಯೆ ಕುರಿತು ಇಟಲಿ ಪ್ರಧಾನಿ ಚಾರ್ಜಿಯಾ ಮೆಲೋನಿ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಸ್ಪೇನ್ ನೊಂದಿಗಿನ ಮುಕ್ತ ಗಡಿ ವ್ಯವಸ್ಥೆಯಾದ ಷೆಂಗೆನ್ ಒಪ್ಪಂದವನ್ನು ಅಮಾನತುಗೊಳಿಸುವ ಸಾಧ್ಯತೆ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಮೆಲೋನಿ, ನಿಯಂತ್ರಣವಿಲ್ಲದ ಅಕ್ರಮ ವಲಸೆ ಯುರೋಪ್ ನ ಗಡಿ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಇಟಲಿ ಗೃಹ ಸಚಿವ ಮ್ಯಾಟಿಯೋ ಪಿಯಾಂಟೆಡೋಸಿ ಅವರೊಂದಿಗೆ ಈ ಕುರಿತು ಚರ್ಚಿಸಿದ್ದು, ಮುಂದಿನ ಕ್ರಮಗಳಿಗಾಗಿ ಭದ್ರತಾ ವ್ಯವಸ್ಥೆಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಗಡಿ ಭದ್ರತೆ, ಮಾನವ ಕಳ್ಳಸಾಗಣೆ ಜಾಲಗಳ ವಿರುದ್ಧ ಕ್ರಮ ಹಾಗೂ ಅಕ್ರಮ ವಲಸಿಗರ ತ್ವರಿತ ವಾಸಸಾತಿಗೆ ಇಟಲಿ ಆದ್ಯತೆ ನೀಡಲಿದೆ ಎಂದು ಮೆಲೋನಿ ಹೇಳಿದ್ದಾರೆ. ದೇಶದ ಗಡಿ ಮತ್ತು ನಾಗರಿಕ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2021ರ ಬಳಿಕ ಸೆಯುಟಾದಲ್ಲಿ ಮತ್ತೊಂದು ದೊಡ್ಡ ಬಿಕ್ಕಟ್ಟು

2021 ರಲ್ಲಿ ಮೊರಾಕೊದಿಂದ 8,000ಕ್ಕೂ ಹೆಚ್ಚು ಮಂದಿ ಸೆಯುಟಾ ಗಡ್ಡಿ ಪ್ರವೇಶಿಸಿದ ಬಳಿಕ ಇದೀಗ ಈ ಪ್ರದೇಶದಲ್ಲಿ ಮತ್ತೊಮ್ಮೆ ದೊಡ್ಡ ವಲಸೆ ಬಿಕ್ಕಟ್ಟು ಎದುರಾಗಿದೆ. ಸಿಯುಟಾ ಯುರೋಪಿಯನ್ ಒಕ್ಕೂಟವನ್ನು ಆಫ್ರಿಕಾ ಖಂಡದೊಂದಿಗೆ ನೇರವಾಗಿ ಸಂಪರ್ಕಿಸುವ ಎರಡು ಭೂ ಗಡಿ ಪ್ರದೇಶಗಳಲ್ಲಿ ಒಂದಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online