<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಭಾರತ - ಚೀನಾ ದ್ವಿಪಕ್ಷೀಯ ವ್ಯಾಪಾರ : $155 ಬಿಲಿಯನ್ ಗೆ ಹೆಚ್ಚಳ

ಭಾರತ - ಚೀನಾ ದ್ವಿಪಕ್ಷೀಯ ವ್ಯಾಪಾರ : $155 ಬಿಲಿಯನ್ ಗೆ ಹೆಚ್ಚಳ
Summary: ಚೀನಾ - ಭಾರತ ವ್ಯಾಪಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಏರಿಕೆಯಾಗಿದೆ ಎಂದು ಚೀನಾ ರಾಜತಾಂತ್ರಿಕರು ತಿಳಿಸಿದ್ದಾರೆ.

belagavi news :

2025ರಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವಿನ ವ್ಯಾಪಾರವು $155.6 ಬಿಲಿಯನ್ ಗೆ ತಲುಪಿರೋದು ದಾಖಲೆಯಾಗಿದೆ ಎಂದು ಭಾರತದಲ್ಲಿನ ಚೀನಾ ರಾಜ ತಾಂತ್ರಿಕ ಕ್ಸು ಫೆಂಗ್ಗುವೊ ತಿಳಿಸಿದ್ದಾರೆ. ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷಿಯ ವ್ಯಾಪಾರವು ಅತ್ಯಂತ ದಾಖಲೆಯ ಎತ್ತರಕ್ಕೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಟಿಯಾಂಜಿನ್ನಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಸಭೆಯ ನಂತರ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಬಾರಿ ಸುಧಾರಾಣೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.12ರಷ್ಟು ಹೆಚ್ಚಾಗಿದೆ ಎಂದು ಮಂಗಳವಾರದಂದು ದೆಹಲಿಯಲ್ಲಿ ನಡೆದ ಚೀನಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ. 2025ರಲ್ಲಿ ಭಾರತ ಚೀನಾ ವ್ಯಾಪಾರವು $155.6 ಬಿಲಿಯನ್ ತಲುಪಿದೆ. ಇದು ದಿನೇ ದಿನೇ ವರ್ಷದಿಂದ ವರ್ಷಕ್ಕೆ 12% ಗಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿ, ಆರ್ಥಿಕ ಸರ್ಕಾರ ಮತ್ತು ರಾಜಕೀಯ ನಂಬಿಕೆ ಎರಡು ಮತ್ತು ಗಟ್ಟಿಯಾಗುತ್ತಿರುವುದರಿಂದ ಈ ದಾಖಲೆಯು ಸೃಷ್ಟಿಯಾಗುತ್ತಿದೆ. ಚೀನಾ ಭಾರತದ 9.7 ರಷ್ಟು ಹೆಚ್ಚಾಗಿದೆ. ಯಾತ್ರೆಗಳ ಪುನರ್ ಆರಂಭಿಸಲು ಟಿಬೆಟ್ನಲ್ಲಿರುವ -ಕ್ಸಿಜಾಂಗ್ ಪವಿತ್ರ ಪರ್ವತ ಸರೋವರ ತೀರ್ಥಯಾತ್ರೆ ಭಾರತೀಯ ಯಾತ್ರಿಕರಿಗೆ ಅವಕಾಶ ನೀಡುವುದಾಗಿ ಶು ಫೆಂಗ್ ಸ್ಪಷ್ಟಪಡಿಸಿದ್ದಾರೆ.

ಎರಡು ದೇಶಗಳ ನಡುವಿನ ಬೃಹತ್ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಅವಕಾಶಗಳನ್ನು ಸೂಚಿಸುತ್ತದೆ ಎಂದು ಶು ಫೆಂಗ್ ಹೇಳಿದ್ದಾರೆ. ಚೀನಾ ಮತ್ತು ಭಾರತದ ದೇಶಗಳ ನಡುವೆ ಹಲವಾರು ನೇರು ವಿಮಾನಗಳನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು ಮತ್ತು ಭವಿಷ್ಯದಲ್ಲಿ ಹೆಚ್ಚಿನ ವಿಮಾನಗಳನ್ನು ಪ್ರಾರಂಭಿಸಲಾಗುವುದು ಎಂದು ಎಂದು ತಿಳಿಸಿದರು. ವಿವಿಧ ಹಂತಗಳಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ವಸುದೈವ ಕುಟುಂಬಕಂ ಭಾರತೀಯ ತತ್ವಶಾಸ್ತ್ರಕ್ಕೆ ವಿಶ್ವದ ಮಹಾನ್ ಸಾಮರಸ್ಯದ ಚೀನಾದ ದೃಷ್ಟಿಕೋನವು ಹೋಲುತ್ತದೆ ಎಂದು ರಾಯಭಾರಿ ಕ್ಸು ಫೆಂಗ್ಗುವೊ ತಿಳಿಸಿದ್ದಾರೆ. ಅಜಂತಾ, ಎಲ್ಲೋರ ಗುಹೆಗಳು ಮತ್ತು ಶಾಂತಿನಿಕೇತನಕ್ಕೆ ಭೇಟಿ ನೀಡಿದಾಗ ಎರಡು ನಾಗರಿಕತೆಗಳ ನಡುವಿನ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಮತ್ತು ಭಾರತ ದೇಶದ ವಿವಿಧ ಸಾಂಸ್ಕೃತಿಕ ಆಧ್ಯಾತ್ಮಿಕ ಪ್ರದೇಶಗಳನ್ನು ಭೇಟಿಯಾದ ನಂತರ ಅವರಿಗೆ ಆದ ಅನುಭವವನ್ನು ಚೀನಾದ ರಾಯಭಾರಿ ನೆನಪಿಸಿಕೊಂಡರು.

ಚೀನಾದ ಸ್ವಾವಲಂಬನೆ ಮತ್ತು ಸ್ವಾವಲಂಬಿ ಭಾರತ ಎರಡು ಒಂದೇ ತಾತ್ವಿಕ ಬೇರುಗಳನ್ನು ಹೊಂದಿರುವ ಮಾರ್ಗಗಳಾಗಿವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಭಾರತ ಮತ್ತು ಚೀನಾ ನಡುವಿನ ಪರಸ್ಪರ ನಂಬಿಕೆ ಮತ್ತು ಸಹಕಾರ ಮತ್ತು ಒಬ್ಬರಿಗೊಬ್ಬರು ನಡೆದುಕೊಳ್ಳುವ ರೀತಿ ಇವೆಲ್ಲವುಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ.

ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಫೆಂಗ್ಗುವೊ ತಿಳಿಸಿದರು. ಶೂ ಪೆಂಗ್ ಅವರು ಚೀನಾ ಮತ್ತು ಭಾರತದ ಸಂಬಂಧವನ್ನು ಬಹಳ ಸಂತೋಷದಿಂದ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸಾಂಪ್ರದಾಯಿಕ ಸಂಸ್ಕೃತಿಗಳ ಬುದ್ಧಿವಂತಿಕೆ ಬಳಸಿಕೊಂಡು ಎರಡು ದೇಶಗಳ ಪರಸ್ಪರ ಸಹಕಾರವು ತುಂಬಾ ಮುಖ್ಯವಾಗಿದೆ. ಎರಡು ದೇಶಗಳ ಅಭಿವೃದ್ಧಿಯಾಗುವ ಸಲುವಾಗಿ ಒಮ್ಮತದಿಂದ ಭಾರತದೊಂದಿಗೆ ಕೆಲಸ ಮಾಡಲು ನಾವು ತಯಾರಾಗಿದ್ದೇವೆ ಎಂದು ಹೇಳಿದರು.

ಬ್ರಿಕ್ಸ್ ನ ಆವರ್ತನ ಅಧ್ಯಕ್ಷರಾಗಿ ಭಾರತದ ಪಾತ್ರಕ್ಕೆ ರಾಯಭಾರಿ ಕ್ಸು ಫೆಂಗ್ಗುವೊ ಭಾರತಕ್ಕೆ ಸಂಪೂರ್ಣವಾದ ಬೆಂಬಲವನ್ನು ನೀಡಿದ್ದಾರೆ. ಭಾರತದೊಂದಿಗೆ ಹೆಚ್ಚಿನ ಸಮನ್ವಯದಿಂದ ಕೆಲಸ ಮಾಡಿದರೆ ಜಾಗತಿಕ ದಕ್ಷಿಣದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಅರ್ಥೈಸಿಕೊಂಡಿದ್ದಾರೆ. ಆದ್ದರಿಂದ ನಾವು ಭಾರತದೊಂದಿಗೆ ಕೆಲಸ ಮಾಡಲು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ. ಚೀನಾದ ಜನರು ಇಲ್ಲಿ ಹಬ್ಬವನ್ನು ಆಚರಿಸುತ್ತಾರೆ ಅವರ ಹೊಸ ವರ್ಷವನ್ನು ಆಚರಿಸುತ್ತಾರೆ. ವಸಂತ ಕಾಲದ ಆರಂಭವನ್ನು ಸೂಚಿಸುವ ಲಿಚುನ್ ಹಬ್ಬವು ಮುನ್ನಾದಿದಿನದಂದು ಅವರು ಆಚರಿಸುತ್ತಾರೆ.

ನಮ್ಮ ಭಾರತದಲ್ಲಿ ಈ ಲಿಚುನ್ ಹಬ್ಬ ಆಚರಿಸಲಾಯಿತು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಜ ತಾಂತ್ರಿಕರು, ವ್ಯಾಪಾರ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಮತ್ತು ಚೀನಾದ ವಲಸೆಗಾರರ ಪ್ರತಿನಿಧಿಗಳು ಈ ಹಬ್ಬದ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಭಾರತ - ಚೀನಾ ವ್ಯಾಪಾರ ಸಂಬಂಧವು ಬಿಲಿಯನ್ ಗೆ ಏರಿಕೆ ಆಗಿರುವುದರಿಂದ ಚೀನಾ ಮತ್ತು ಭಾರತ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತಿದೆ ಮತ್ತು ಇಬ್ಬರ ನಡುವಿನ ಸಹಕಾರವು ಮತ್ತಷ್ಟು ಹೆಚ್ಚುತ್ತಿದೆ.

ಇನ್ನಷ್ಟು ಓದಿರಿ:

Sponsored

10ನೇ ಪಾಸಾದವರಿಗೊಂದು ಗುಡ್ ನ್ಯೂಸ್ : ಲಿಖಿತ ಪರೀಕ್ಷೆ ಇಲ್ಲದ ಸರ್ಕಾರಿ ನೇಮಕಾತಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online