<?= $pageTitle ?>
Logo
ಮುಖಪುಟ ಓದುವುದು ಕೇಳು
Food

ಬಿರಿಯಾನಿ ಎಲೆಯಲ್ಲಿ ಅಡಗಿದೆ ಅಪಾಯ ? ನೇರವಾಗಿ ನುಂಗಿದರೆ ಆರೋಗ್ಯಕ್ಕೆ ಏನಾಗಬಹುದು?

ಬಿರಿಯಾನಿ ಎಲೆಯಲ್ಲಿ ಅಡಗಿದೆ ಅಪಾಯ ? ನೇರವಾಗಿ ನುಂಗಿದರೆ ಆರೋಗ್ಯಕ್ಕೆ ಏನಾಗಬಹುದು?
Summary: It is not safe to eat biryani leaves directly. Caution is required as its hard texture can cause problems to the throat and digestive tract.

Belagavi News:

ಬಿರಿಯಾನಿ, ಪಲಾವ್, ಸಾಂಬಾರ್ ಹಾಗೂ ವಿವಿಧ ಮಸಾಲೆ ಅಡುಗೆಗಳನ್ನು ಪರಿಮಳಕ್ಕಾಗಿ ಬಳಸುವ ಬಿರಿಯಾನಿಯಲ್ಲಿ ಆರೋಗ್ಯಕ್ಕೆ ಹಾನಿಕರವಲ್ಲ. ಆದರೆ ಅದನ್ನು ನೇರವಾಗಿ ಜಗಿದು ತಿನ್ನುವುದು ಅಥವಾ ನುಂಗುವುದು ಸುರಕ್ಷಿತವಲ್ಲ ಎಂದು ಪೌಷ್ಟಿಕ ತಜ್ಞರು ಮತ್ತು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಅಡುಗೆಯಲ್ಲಿ ಬಿರಿಯಾನಿ ಎಲೆ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವ ಪ್ರಮುಖ ಮಸಾಲೆಯಾಗಿದ್ದರು, ಅಡುಗೆ ಮುಗಿದ ಬಳಿಕ ಅದನ್ನು ಆಹಾರದಿಂದ ತೆಗೆದುಹಾಕುವುದು ಉತ್ತಮ ಅಭ್ಯಾಸ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬಿರಿಯಾನಿಯಲ್ಲಿ ನೇರವಾಗಿ ತಿನ್ನಬಾರದು ಏಕೆ ?

ತಜ್ಞರ ಪ್ರಕಾರ, ಬಿರಿಯಾನಿ ಎಲೆ, ಗಟ್ಟಿಯಾದ ಹಾಗೂ ನಾರಿನಂತಹ ರಚನೆಯನ್ನು ಹೊಂದಿರುವುದರಿಂದ ಅದನ್ನು ಸುಲಭವಾಗಿ ಜಗೆಯಲು ಅಥವಾ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನೇರವಾಗಿ ನುಂಗಿದರೆ ಗಂಟಲಿನಲ್ಲಿ ಸಿಲುಕುವ ಅಥವಾ ಜೀರ್ಣಾಂಗದಲ್ಲಿ ತೊಂದರೆ ಉಂಟುಮಾಡುವ ಅಪಾಯವಿದೆ.

ಅಡುಗೆಯಲ್ಲಿ ಬಳಸಿದರೆ ಸಿಗುವ ಲಾಭಗಳು :

ಬಿರಿಯಾನಿ ಎಲೆ ಆಹಾರಕ್ಕೆ ವಿಶಿಷ್ಟ ಪರಿಮಳ ಮತ್ತು ರುಚಿಯನ್ನು ನೀಡುವುದರ ಜೊತೆಗೆ ಕೆಲವು ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್ ಗಳು ಹಾಗೂ ಸಸ್ಯ ಸಂಯುಕ್ತಗಳನ್ನು ಒಳಗೊಂಡಿದೆ. ಇದರ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಎಲೆಯನ್ನು ನೇರವಾಗಿ ತಿನ್ನುವ ಬದಲು ಅಡುಗೆಯಲ್ಲಿ ಬಳಸುವುದು ಅಥವಾ ಅಗತ್ಯವಿದ್ದರೆ ಮಿತ ಪ್ರಮಾಣದಲ್ಲಿ ಪುಡಿ ರೂಪದಲ್ಲಿ ಬಳಸುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.

ಆದ್ದರಿಂದ, ಬಿರಿಯಾನಿ ಎಲೆ ಆರೋಗ್ಯಕ್ಕೆ ಹಾನಿಕರವಲ್ಲವಾದರೂ, ಅಡುಗೆ ಮುಗಿದ ಬಳಿಕ ಅದನ್ನು ತೆಗೆದುಹಾಕಿ ಆಹಾರ ಸೇವಿಸುವುದು ಸುರಕ್ಷಿತ ಕ್ರಮವಾಗಿದೆ.

Health Tips - ಬಿರಿಯಾನಿ ಎಲೆ ನೇರವಾಗಿ ತಿನ್ನಬೇಡಿ ! ಗಂಟಲು, ಜೀರ್ಣಾಂಗಕ್ಕೆ ತೊಂದರೆ ಉಂಟಾಗುವ ಅಪಾಯ; ತಜ್ಞರ ಸಲಹೆ :

ಬಿರಿಯಾನಿ, ಪಲಾವ್, ಸಾಂಬಾರ್ ಹಾಗೂ ಮಸಾಲೆ ಅಡುಗೆಗಳನ್ನು ಪರಿಮಳಕ್ಕಾಗಿ ಬಳಸುವ ಬಿರಿಯಾನಿ ಎಲೆ ಆರೋಗ್ಯಕ್ಕೆ ಹಾನಿಕರವಲ್ಲ. ಆದರೆ ಅದನ್ನು ನೇರವಾಗಿ ಜಗಿದು ತಿನ್ನುವುದು ಅಥವಾ ನುಂಗುವುದು ಸುರಕ್ಷಿತವಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ.

ಬಿರಿಯಾನಿ ಎಲೆ ನೇರವಾಗಿ ತಿನ್ನಬಾರದು ಏಕೆ ? :

ಬಿರಿಯಾನಿ ಎಲೆ ಗಟ್ಟಿಯಾದ ನಾರಿನ ರಚನೆಯನ್ನು ಹೊಂದಿದ್ದು, ಅದರಲ್ಲಿರುವ ಫೈಬರ್ ಅನ್ನು ಜೀರ್ಣಾಂಗದ ಎನ್ಟೈಮ್ ಗಳು ಸಂಪೂರ್ಣವಾಗಿ ಒಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಎಲೆ ಸುಲಭವಾಗಿ ಜೀರ್ಣವಾಗದೆ ಜೀರ್ಣಾಂಗದಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ.

ವಿಶೇಷವಾಗಿ ಒಣಗಿದ ಬಿರಿಯಾನಿ ಎಲೆಯ ತೀಕ್ಷ್ಣ ಅಂಚುಗಳು ಗಂಟಲಿನಲ್ಲಿ ಸಿಲುಕುವುದು, ಅನ್ನನಾಳಕ್ಕೆ ಗಾಯ ವಾಗುವುದು, ಅಪರೂಪದ ಸಂದರ್ಭಗಳಲ್ಲಿ ಜೀರ್ಣಾಂಗದ ಒಳಭಾಗಕ್ಕೆ ಹಾನಿಯಾಗುವುದು ಹಾಗೂ ಸರಿಯಾಗಿ ಜಗಿಯದೆ ನುಗಿದರೆ ಉಸಿರಾಟದ ತೊಂದರೆ ಹೆಚ್ಚಾಗುವ ಅಪಾಯವಿದೆ.

ಬಿರಿಯಾನಿ ಎಲೆ ವಿಷಕಾರಿಯೇ? :

ಇದು ಅನೇಕರು ಹೊಂದಿರುವ ತಪ್ಪು ಕಲ್ಪನೆ. ಪಡೆದುಕೊಂಡಿದೆ ಬಿರಿಯಾನಿ ಎಲೆ ವಿಷಕಾರಿ ಅಲ್ಲ. ಸಮಸ್ಯೆ ಅದರ ರಾಸಾಯನಿಕ ಗುಣದಲ್ಲಲ್ಲ , ಅದರ ಗಟ್ಟಿತನ ಮತ್ತು ನಾರಿನ ರಚನೆಯಲ್ಲಿದೆ. ಅದರಿಂದ ಆಹಾರಕ್ಕೆ ಪರಿಮಳ ನೀಡಲು ಬಳಸುವುದು ಸುರಕ್ಷಿತವಾದರೂ, ಎಲೆಯನ್ನು ನೇರವಾಗಿ ತಿನ್ನುವುದು ಸೂಕ್ತವಲ್ಲ.

ಅಡುಗೆಯಲ್ಲಿ ಬಳಸಿದರೆ ಸಿಗುವ ಆರೋಗ್ಯ ಲಾಭಗಳು :

ಅಡುಗೆ ವೇಳೆ ಬಿರಿಯಾನಿ ಎಲೆಯಲ್ಲಿರುವ ನೈಸರ್ಗಿಕ ತೈಲಗಳು ಆಹಾರಕ್ಕೆ ಸೇರಿ ವಿಶಿಷ್ಟ ಪರಿಮಳ ನೀಡುತ್ತವೆ. ಜೊತೆಗೆ ಕೆಲವು ಆರೋಗ್ಯ ಪ್ರಯೋಜನಗಳನ್ನು ನೀಡಬಹುದು.

1. ಜೀರ್ಣಕ್ರಿಯೆಗೆ ನೆರವು - ಜೀರ್ಣರಸಗಳ ಉತ್ಪಾದನೆಯನ್ನು ಉತ್ತೇಜಿಸಿ ಹೊಟ್ಟೆ ಒಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಲು ಸಹಾಯಮಾಡುತ್ತದೆ.

2. ಆ್ಯಂಟಿ ಆಕ್ಸಿಡೆಂಟ್ ಗಳ ಮೂಲ : ಪ್ಲೇವನಾಯ್ಡ್ ಗಳು ಮತ್ತು ಪಾಲಿಫಿನಾಲ್ ಗಳಂತಹ ಸಯುಕ್ತಗಳು ದೇಹವನ್ನು ಆಕ್ಸಿಡೆಂಟ್ ಒತ್ತಡದಿಂದ ರಕ್ಷಿಸಲು ನೆರವಾಗಬಹುದು.

3. ರಕ್ತದಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ - ಕೆಲವು ಪ್ರಾಥಮಿಕ ಅಧ್ಯಯನಗಳ ಪ್ರಕಾರ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನೆರವಾಗಬಹುದು. ಆದರೆ ಇದನ್ನು ಮಧುಮೇಹದ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.

4. ಉರಿಯೂತ ಕಡಿಮೆ ಮಾಡಲು ನೆರವು : ಕೆಲವು ಸಸ್ಯ ರಾಸಾಯನಿಕಗಳು ದೇಹದಲ್ಲಿನ ಉರಿಯುತವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.

ಸುರಕ್ಷಿತವಾಗಿ ಬಳಸುವ ವಿಧಾನ :

ತಜ್ಞರ ಸಲಹೆಯಂತೆ -

1. ಅಡುಗೆಯಲ್ಲಿ ಸಂಪೂರ್ಣ ಎಲೆಯನ್ನು ಬಳಸಬಾರದು.

2. ಅಡುಗೆ ಸಿದ್ಧವಾದ ನಂತರ ಎಲೆಯನ್ನು ತೆಗೆದು ಹಾಕಬೇಕು.

3. ಬೇಕಾದರೆ ಒಣಗಿಸಿ ಸೂಕ್ಷ್ಮ ಪುಡಿ ಮಾಡಿ ಗರಂ ಮಸಾಲೆ, ಸೂಪ್, ಗ್ರೇವಿ ಅಥವಾ ಸಾರುಗಳಲ್ಲಿ ಬಳಸಬಾರದು.

4. ಟೀ ಅಥವಾ ಹರ್ಬಲ್ ಕಷಾಯದಲ್ಲೂ ಬಳಸಬಹುದು.

5. ಎಲೆಯನ್ನು ನೇರವಾಗಿ ಜಗಿದು ಅಥವಾ ನುಂಗಬಾರದು.

ಈ ಮಾಹಿತಿಯು ಆರೋಗ್ಯ ಜಾಗೃತಿ ಗಾಗಿ ಮಾತ್ರ. ಯಾವುದೇ ಆಹಾರ ಪದಾರ್ಥವನ್ನು ಔಷಧಿಯ ಪರ್ಯಾಯವಾಗಿ ಬಳಸಬಾರದು. ಗಂಟಲು ಜೀರ್ಣಾಂಗ ಅಥವಾ ಆಹಾರ ನುಂಗುವ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online