<?= $pageTitle ?>
Logo
ಮುಖಪುಟ ಓದುವುದು ಕೇಳು
Education

KCET Result 2026: ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ, 12 ಗಂಟೆಗೆ ಘೋಷಣೆ

KCET Result 2026: ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ, 12 ಗಂಟೆಗೆ ಘೋಷಣೆ
Summary: The results of the Karnataka Common Entrance Test 2026 conducted by the Karnataka Examination Authority (KEA) will be declared today. The results will be officially announced at a press conference to be held at 12 noon, and there is huge anticipation and curiosity among students.

belagavi news :

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026 ರ ಕರ್ನಾಟಕ UGCET ಫಲಿತಾಂಶ ಇಂದು (ಜೂನ್ 6) ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnatak Examinations Authority) ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ.

ವೈದ್ಯಕೀಯ ಶಿಕ್ಷಣ ಸಚಿವರು ಟಾಪರ್ ಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಬಳಸಿ ಅಂಕಪಟ್ಟಿ ಹಾಗೂ ರ್ಯಾಂಕ್ ವಿವರಗಳನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದು.

UGCET 2026 ಪಲಿತಾಂಶದೊಂದಿಗೆ ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ ಹಾಗೂ ಇತರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಮುಂದಿನ ಹಂತಕ್ಕೆ ಸಾಗಲಿದೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಫಲಿತಾಂಶದ ನಿರೀಕ್ಷೆ ಹೆಚ್ಚಾಗಿದೆ.

ಮಧ್ಯಾಹ್ನದ 12 ಗಂಟೆಗೆ ಸುದ್ದಿಗೋಷ್ಠಿ:

ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ಕರ್ನಾಟಕ UGCET ಫಲಿತಾಂಶ ಇಂದು (ಜೂನ್ ಆರು) ಪ್ರಕಟವಾಗಲಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnatak Examinations Authority) ನೀಡಿರುವ ಮಾಹಿತಿಯಂತೆ ರಾಜವ ಇದಕ್ಕೆಯ ಶಿಕ್ಷಣ ಸಚಿವರು ಹಾಗೂ ಕೆಇಎ ಸಹ ಅಧ್ಯಕ್ಷರಾದ ಡಾಕ್ಟರ್ ಶರಣ್ ಪ್ರಕಾಶ್ ಪಾಟೀಲ್ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳು ಹಾಗೂ ಟಾಪರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ . ಪ್ರಸನ್ನ ತಿಳಿಸಿದ್ದಾರೆ.

UGCET 2026 ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಬಳಸಿ ಅಧಿಕೃತ ವೆಬ್ಸೈಟ್ನಲ್ಲಿ ಅಂಕಪಟ್ಟಿ ಹಾಗೂ ರ್ಯಾಂಕ್ ವಿವರಗಳನ್ನು ಪರಿಶೀಲಿಸಬಹುದು. ಫಲಿತಾಂಶದೊಂದಿಗೆ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಮುಂದಿನ ಹಂತಕ್ಕೆ ಸಾಗಲಿದೆ.

ಮಧ್ಯಾಹ್ನ 12 ಗಂಟೆಯ ನಂತರ ರಿಸಲ್ಟ್ ಲಭ್ಯ:

ಸುದ್ದಿಗೋಷ್ಠಿ ಮುಗಿದ ಬಳಿಕ ಮಧ್ಯಾಹ್ನ 2 ಗಂಟೆಯ ನಂತರ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnatak Examinations Authority) ಅಧಿಕೃತ ವೆಬ್ ಸೈಟ್ ಗಳಲ್ಲಿ ತಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ಫಲಿತಾಂಶ ಹಾಗೂ ರ್ಯಾಂಕ್ ಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಡೌನ್ ಲೋಡ್ ಮಾಡಿಕೊಳ್ಳ ಬಹುದು.

UGCET 2026 ಪಲಿತಾಂಶವನ್ನು ನೋಡಲು ಲಕ್ಷಾಂತರ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಲಾಗಿನ್ ಆಗುವ ಸಾಧ್ಯತೆ ಇರುವುದರಿಂದ ವೆಬ್ಸೈಟ್ನಲ್ಲಿ ಸರ್ವರ್ ನಿಧಾನವಾಗುವ ಅಥವಾ ತಾತ್ಕಾಲಿಕ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಕೆಲವು ಸಮಯ ಕಾಯ್ದು ನಂತರ ಮತ್ತೆ ಪ್ರಯತ್ನಿಸುವುದು ಅಥವಾ ಪ್ರಾಧಿಕಾರ ನೀಡುವ ಪರ್ಯಾಯ ಲಿಂಕ್ ಗಳನ್ನು ಬಳಸುವುದು ಉತ್ತಮ ಎಂದು ಸೂಚಿಸಲಾಗಿದೆ.

Also Read:

ಸರ್ಕಾರಿ ಆಸ್ಪತ್ರೆ ವೈದ್ಯರ ಸಾಧನೆ:ಗರ್ಭಕೋಶದಲ್ಲಿದ್ದ ಎಂಟು ಕೆಜಿ ಗದ್ದೆ ತೆರವಿನಿಂದ ಮಹಿಳೆಗೆ ಮರುಜನ್ಮ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online