'ಅಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ' ಎಂಬ ಶಕ್ತಿಯುತ ಟ್ಯಾಗ್ ಲೈನ್ ಹೊಂದಿರುವ ಲ್ಯಾಂಡ್ ಲಾರ್ಡ್ ಸಿನಿಮಾ ಜನವರಿ 23ರಂದು ಕರ್ನಾಟಕದಾದ್ಯಂತ 259ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಮಾ ಪ್ರೇಮಿಗಳಲ್ಲಿ ಭರ್ಜರಿ ಮೆಚ್ಚಿಗೆ ಪಡೆದುಕೊಂಡಿದೆ.
ಸಾಮಾಜಿಕ ಅಸಮಾನತೆ ಮತ್ತು ಜಾತಿಯ ಆರಾಧಿತ ಶೋಷಣೆ ಎಂಬ ಗಂಭೀರ ವಿಷಯವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಈ ನಿರ್ಧಾರವು ಸಿನಿಮಾ ತಂಡಕ್ಕೆ ಮಾತ್ರವಲ್ಲದೆ, ಸಮಾಜಮುಖಿ ಸಿನಿಮಾಗಳಿಗೆ ದೊಡ್ಡ ಬೆಂಬಲವೆಂದು ಪರಿಗಣಿಸಲಾಗುತ್ತಿದೆ.
ದುನಿಯಾ ವಿಜಯ್ ನಾಯಕತ್ವದ ಲ್ಯಾಂಡ್ ಲಾರ್ಡ್ ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಾಮಾಜಿಕ ನ್ಯಾಯ, ಶೋಷಣೆ ವಿರುದ್ಧ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುತ್ತಿದೆ. ಈ ಕಾರಣದಿಂದಲೇ ಚಿತ್ರಕ್ಕೆ ಸರ್ಕಾರದ ಮಟ್ಟದಲ್ಲೂ ಮಾನ್ಯತೆ ದೊರೆತಿದೆ. ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿರುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು,
"ಸಾಮಾಜಿಕ ಅಸಮಾನತೆ ಮತ್ತು ಜಾತಿ ಆಧಾರಿತ ಶೋಷಣೆ ವಿಷಯಧಾರಿತ ದುನಿಯಾ ವಿಜಯ್ ನಾಯಕತ್ವದ ಲ್ಯಾಂಡ್ ಲಾರ್ಡ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಪಾಳೇಗಾರಿಕೆ ಸಾಮಾಜಿಕ ಅಸಮಾನತೆ ಮತ್ತು ಸಮಾನತೆಯ ಹಕ್ಕುಗಳ ಕುರಿತು ಧ್ವನಿ ಎತ್ತುವ ಲ್ಯಾಂಡ್ ಲಾರ್ಡ್ ಸಿನಿಮಾ ಇಂದಿನ ಸಮಾಜದ ಕಟು ಸತ್ಯವನ್ನು ತೆರೆಯ ಮೇಲೆ ಕಟ್ಟಿಕೊಳ್ಳುತ್ತದೆ. ಊರಿನ ದನಿ ಎನಿಸಿಕೊಂಡವರ ದಬ್ಬಾಳಿಕೆ ಅವರ ಪರ ನಿಲ್ಲುವ ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಬಡವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದೇ ಈ ಚಿತ್ರದ ಪ್ರಮುಖ ತಿರುಳು.
ರೈತನ ಪಾತ್ರದಲ್ಲಿ ದುನಿಯಾ ವಿಜಯ್ ಎರಡು ಶೇಡ್ ಅದ್ಭುತ ಅಭಿನಯ : ರೈತನ ಪಾತ್ರದಲ್ಲಿ ದುನಿಯಾ ವಿಜಯ್ ಎರಡು ವಿಭಿನ್ನ ಶೇಡ್ ಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಭಾವನಾತ್ಮಕತೆ ಮತ್ತು ಆಕ್ರೋಶ ಎರಡನ್ನು ಸಮಾನವಾಗಿ ಹೊತ್ತು ಸಾಗುವ ಈ ಪಾತ್ರವು ವಿಜಯ್ ಅವರ ಸಿನಿಮಾ ಕೆರಿಯರಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.
ರಾಜ್ ಬಿ ಶೆಟ್ಟಿ ರೂರಲ್ ಪಾತ್ರದಲ್ಲಿ ಅಬ್ಬರ: ಪಾಳೇಗಾರ ಮನೆತನದ ಇತಿಹಾಸ ಗೊತ್ತಿದೆ ಎನ್ನುವಂತೆ ರಾಜ್ ಬಿ ಶೆಟ್ಟಿ ರೂಲರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ.ಅವರ ಸಂಭಾಷಣೆ, ನಡವಳಿಕೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಚಿತ್ರದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ನಿಂಗವ್ವನ ಪಾತ್ರದಲ್ಲಿ ರಚಿತಾ ರಾಮ್ : ನಿಂಗವ್ವನ ಪಾತ್ರದಲ್ಲಿ ಗಟ್ಟಿಗಿತ್ತಿ ತಾಯಿಯಾಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರ ಪಾತ್ರ ಕಥೆಗೆ ಭಾವನಾತ್ಮಕ ತೂಕ ನೀಡುವುದರ ಜೊತೆ ಗೆ ಮಹಿಳಾ ಶಕ್ತಿಯ ಪ್ರತಿಕವಾಗಿ ಕಾಣಿಸುತ್ತಿದೆ.
ಸಹಕಲಾವಿದರ ಅಭಿನಯ : ದುನಿಯಾ ವಿಜಯ್ ಅವರ ಮಗಳು ರಿತನ್ಯ ತಮ್ಮ ಮೊದಲ ಚಿತ್ರದಲ್ಲಿ ಮಿಂಚಿದ್ದು, ಭವಿಷ್ಯಕ್ಕೆ ಬರವಸೆ ಮೂಡಿಸಿದ್ದಾರೆ. ಇನ್ನು ಉಮಾಶ್ರೀ, ಅವಿನಾಶ್, ಮಿತ್ರ, ರಾಕೇಶ್ ಅಡಿಗ, ಶಿಶಿರ್ ಬೈಕಾಡಿ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಉಳಿದ ಕಲಾವಿದರು ತಮ್ಮ ತಮ್ಮ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ.ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾ ಪಾಳಿಗಾರಿಕೆ ವಿರುದ್ಧದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಗಟ್ಟಿಯಾಗಿ ಹೇಳುವ ಸಮಾಜಮುಖಿ ಚಿತ್ರವಾಗಿ ಹೊರಹೊಮ್ಮಿದ್ದು, ಕನ್ನಡ ಸಿನಿಮಾರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಅಸಮಾನತೆ ಪಾಳೆಗಾರಿಕೆ ಮತ್ತು ನೆಲದ ಹೋರಾಟ ಕುರಿತಾದ ಕಥೆಯನ್ನು ತೋರಿಸುತ್ತಿರುವ ಲ್ಯಾಂಡ್ ಲಾರ್ಡ್ ಸಿನಿಮಾ ರಾಮದುರ್ಗ ಎಂಬ ಹಳ್ಳಿಯನ್ನು ಕೇಂದ್ರವಾಗಿ 1980-90ರ ದಶಕದ ಸನ್ನಿವೇಶದಲ್ಲಿ ತೋರಿಸುತ್ತದೆ. ಚಿತ್ರ ಹಲವು ಸಂಘಟನೆಗಳು ಮತ್ತು ಮಠಾಧೀಶರು ವೀಕ್ಷಿಸಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಲ್ಯಾಂಡ್ ಲಾರ್ಡ್ ಸಿನಿಮಾ ಸಾಮಾಜಿಕ ವಿಷಯದ ಚಿತ್ರಗಳಿಗೆ ಪ್ರೇಕ್ಷಕರಲ್ಲಿ ಒತ್ತಾಯ ಮೂಡಿಸುವ ಶಕ್ತಿ ಹೊಂದಿದೆ ಎಂಬುದು ಸ್ಪಷ್ಟವಾಗಿದೆ.
ಕೋಲಾರ ಭಾಗದ ಭಾಷೆಯನ್ನು ನಿಖರವಾಗಿ ಬಳಸಿ ನೆಲದ ಕಥೆಯನ್ನು ಸೂಕ್ಷ್ಮವಾಗಿ ತೆರೆಗೆ ತಂದು ತೋರಿಸುವುದು ನಿರ್ದೇಶಕ ಜಡೇಡ್ ಕೆ ಹಂಪಿ ಅವರ ಶ್ರೇಷ್ಠ ನಿರ್ದೇಶನವೆಂದು ಶ್ಲಾಘನೀಯವಾಗಿದೆ. ಈ ಚಿತ್ರವನ್ನು ಹಳೆಯ ಹಳ್ಳಿಯ ಸಣ್ಣ-ಸಣ್ಣ ಕಥೆಗಳು ಸಾಂಸ್ಕೃತಿಕ ಅಂಶಗಳು ಸಮಾಗಮಗೊಳ್ಳುವಂತೆ ಹೆಜ್ಜೆ ಹೆಜ್ಜೆ ಕಥೆಗಳು,ಸಾಂಸ್ಕೃತಿಕ ಅಂಶಗಳೂ ಸರಳವಾಗಿ ತೆರೆ ಮೇಲೆ ಚಿತ್ರಿಸಲಾಗಿದೆ.
ಜಡೇಡ್ ಕೆ ಹಂಪಿಯವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ, ಸ್ವಾಮಿ ಜೆ ಗೌಡ ಛಾಯಾಗ್ರಹಕರು ಮತ್ತು ಸಂಗೀತ ಮತ್ತು ಹಿನ್ನೆಲೆ ಸಂಗೀತ ಅಜನಿಶ್ ಲೋಕನಾಥ್, ನಿರ್ಮಾಪಕರು ಕೆವಿ ಸತ್ಯ ಪ್ರಕಾಶ್ ಮತ್ತು ಹೇಮಂತ್ ಗೌಡ 14 ವರ್ಷಗಳ ಬಳಿಕ ಮತ್ತೆ ಕೈ ಹಿಡಿದಿದ್ದಾರೆ. ಈ ಚಿತ್ರ ಸಾಮಾಜಿಕ ಸಂದೇಶದೊಂದಿಗೆ ಹಳೆಯ ಕಾಲದ ನೆಲದ ಕಥೆ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರತಿಫಲನ ಒದಗಿಸುವ ದೃಷ್ಟಿಯಿಂದ ವಿಶೇಷ ಸ್ಥಾನ ಪಡೆದಿದೆ.
ಇನ್ನಷ್ಟು ಓದಿರಿ:
ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG