<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಮಾರ್ಕೊ ರೂಬಿಯೊ–ಜೈಶಂಕರ್ ಭೇಟಿ

ಮಾರ್ಕೊ ರೂಬಿಯೊ–ಜೈಶಂಕರ್ ಭೇಟಿ
Summary: ಅಮೇರಿಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ . ಜಯಶಂಕರ್ ಅವರು ಅಮೆರಿಕ ಆಡಳಿತದ ಹಿರಿಯ ಸದಸ್ಯರೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದಾರೆ.
belagavi news :
ಜೈ ಜಯಶಂಕರ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಭೇಟಿ :
ವಾಷಿಂಗ್ಟನ್ ನಲ್ಲಿ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರನ್ನು ಭಾರತ ವಿದೇಶಾಂಗ ಸಚಿವ ಜೈ ಶಂಕರವರು ಭೇಟಿಯಾಗಿದ್ದಾರೆ. ವ್ಯಾಪಾರ ಸಂಬಂಧ ಮತ್ತು ಬಹು ಖನಿಜಗಳ ಕುರಿತಂತೆ ಮಹತ್ವದ ಸಭೆಗಳ ಮುನ್ನ ಈ ಭೇಟಿ ನಡೆದಿದೆ.

ಬುದುವಾರ ರೂಬಿಯೊ ಆಯೋಜಿಸಿರುವ ಕ್ರಿಟಿಕಲ್ ಮಿನರಲ್ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಜೈ ಜಯಶಂಕರವರು ಭಾಗಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ರುಬಿಯೋ ಅವರನ್ನು ಭೇಟಿ ಮಾಡಿದರು. ಈ ಭೇಟಿಯಲ್ಲಿ ಎರಡು ದೇಶಗಳ ಬಗ್ಗೆ ಚರ್ಚೆ ನಡೆಸಿದರು.

ಭಾರತದ ಮೇಲಿನ ಸುಂಕ ಇಳಿಕೆ : ಫೆಬ್ರುವರಿ ೨-೪ರವರೆಗೆ ಜೈ ಶಂಕರ್ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರ ಪ್ರವಾಸದಲ್ಲಿ ಅಮೆರಿಕ ಆಡಳಿತದ ಹಿರಿಯ ಸದಸ್ಯರೊಂದಿಗೆ ಸಭೆಯನ್ನು ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ. ಪ್ರಧಾನಿ ಮೋದಿ ಸುಂಕವನ್ನು 18ಕ್ಕೆ ಇಳಿಕೆ ಮಾಡಿರುವುದಕ್ಕೆ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು. ಇದರಿಂದ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತಿದೆ.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಘೋಷಿಸಿದೆ ಮತ್ತು ಒಂದು ದಿನದ ನಂತರ ಜಯಶಂಕರವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿಯಾಗಿ ಸಭೆ ನಡೆಸಿದರು. ಟ್ರಂಪ್ ಅವರು ಮೋದಿಯವರ ಜೊತೆ ದೂರವಾಣಿ ಮಾತುಕತೆಯನ್ನು ಮಾಡಿದರು. ದೂರವಾಣಿಯಲ್ಲಿ ಭಾರತ ಮೇಲೆ ವಿಧಿಸಿದ ಶೇಕಡಾ 50ರಷ್ಟು ತೆರಿಗೆಯನ್ನು ಶೇಕಡಾ 18ಕ್ಕೆ ಇಳಿಕೆ ಮಾಡಲಾಗಿದೆ ಎಂದು ಟ್ರಂಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಅದಕ್ಕೆ ಮೋದಿಯವರು ಸಹ ಧನ್ಯವಾದಗಳು ತಿಳಿಸಿದ್ದಾರೆ.

ಜೈ ಜಯಶಂಕರ ತಮ್ಮ x ನಲ್ಲಿ ಪೋಸ್ಟ್ : ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆ ಬಳಿಕ ದ್ವಿಪಕ್ಷೀಯ ವ್ಯಾಪಾರದ ಕುರಿತಾದ ಪ್ರಕಟಣೆಗಳು ವಿದೇಶಾಂಗ ಸಚಿವರು ಸ್ವಾಗತಿಸಿದರು. ವಿದೇಶಾಂಗ ಸಚಿವ ಜೈ ಜಯಶಂಕರ್ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಅಮೆರಿಕಾದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇಂದು ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾರ್ಟ್ ಬೆಸೆಂಟ್ ಅವರನ್ನು ಭೇಟಿ ಮಾಡಿದ್ದರಿಂದ ನನಗೆ ತುಂಬಾ ಸಂತೋಷ ಉಂಟಾಗಿದೆ.

ಅವರ ಜೊತೆ ಭಾರತ ಮತ್ತು ಅಮೆರಿಕಾದ ಕಾರ ತಂತ್ರದ ಸಹಾಯದ ಕುರಿತು ಮತ್ತು ಆರ್ಥಿಕ ಪಾಲುದಾರಿಕೆಯ ಕುರಿತು ಉಪಯುಕ್ತ ಚರ್ಚೆಗಳು ನಡೆದವು ಎಂದು ಅವರು ತಮ್ಮ x ನಲ್ಲಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಅವರ ನಡುವಿನ ದೂರವಾಣಿ ಮಾತುಕತೆಯಿಂದ ದ್ವಿಪಕ್ಷೀಯ ವ್ಯಾಪಾರದ ಕುರಿತಂತೆ ಪ್ರಕಟಣೆಗಳು ಬಂದಿದ್ದು,

ಅವುಗಳನ್ನು ವಿದೇಶಾಂಗ ಸಚಿವರು ಸ್ವಾಗತಿಸಿಕೊಂಡರು. ಈ ಬೆಳವಣಿಗೆಯಿಂದ ದೇಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಎರಡು ಆರ್ಥಿಕತೆಗಳಲ್ಲಿ ನಾವಿನ್ಯತೆಗೆ ದಾರಿ ಮಾಡಿಕೊಡುತ್ತದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುತ್ತದೆ ಇನ್ನಷ್ಟು ದೃಢವಾಗುತ್ತದೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಉತ್ತೇಜನ ನೀಡುತ್ತದೆ ಎಂದು ಅಮೆರಿಕ - ಭಾರತದ ನಡುವಿನ ಒಪ್ಪಂದದ ಕುರಿತು ವಿದೇಶಾಂಗ ಸಚಿವ ಜಯಶಂಕರವರು ತುಂಬಾ ಸಂತೋಷದಿಂದ ವ್ಯಕ್ತಪಡಿಸಿದ್ದಾರೆ.


ಇನ್ನಷ್ಟು ಓದಿರಿ:
ರೈಲ್ವೆ ನೇಮಕಾತಿ 2026: 10ನೇ ಪಾಸಾದವರಿಗೆ 21 ಸಾವಿರಕ್ಕೂ ಅಧಿಕ ಉದ್ಯೋಗವಕಾಶ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online