belagavi news :
ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಜಪಾನ್ ಓಪನ್ ಸೂಪರ್ -750 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ವಿಶ್ವದ ಮೂರನೇ ಶ್ರೇಯಾಂಕಿತೆ ಜಪಾನ್ ನ ಅಕಾನೆ ಯಮಗುಚಿ ವಿರುದ್ಧ ಸತತ ಎರಡು ಗೇಮ್ ಗಳಲ್ಲಿ 21-17, 21-17 ಅಂತರದಿಂದ ಜಯ ಸಾಧಿಸಿದ ಸಿಂಧು ಪ್ರತಿಷ್ಠಿತ ಜಪಾನ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಗೆಲುವಿನೊಂದಿಗೆ ಜಪಾನ್ ಓಪನ್ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆಗೆ ಪಿವಿ ಸಿಂಧು ಪಾತ್ರರಾಗಿದ್ದಾರೆ. ಹಲವು ವರ್ಷಗಳಿಂದ ಭಾರತದ ಬ್ಯಾಡ್ಮಿಂಟನ್ ಗೆ ಮಹತ್ವದ ಕೊಡುಗೆ ನೀಡುತ್ತಿರುವ ಸಿಂಧು, ಮತ್ತೊಮ್ಮೆ ವಿಶ್ವ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಇದಲ್ಲದೆ, ಸುಮಾರು ಎರಡು ವರ್ಷಗಳ ಬಳಿಕ ಬಿಡಬ್ಲ್ಯೂಎಫ್ ಪ್ರಮುಖ ಪ್ರಶಸ್ತಿಯನ್ನು ಗೆದ್ದ ಸಿಂಧು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು 2024ರಲ್ಲಿ ಸೈಯದ್ ಮೋದಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದಿದ್ದರು. ಜಪಾನ್ ಓಪನ್ 2025ರ ಈ ಗೆಲುವು ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಮುಂಬರುವ ವಿಶ್ವ ಚಾಂಪಿಯನ್ಶಿಪ್ ಹಾಗೂ ಒಲಂಪಿಕ್ಸ್ ಗೆ ಬಲವಾದ ಸಂದೇಶ ರವಾನಿಸಿದೆ.
ಟೋಕಿಯೋದಲ್ಲಿ ನಡೆದ ಜಪಾನ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಆರಂಭದಲ್ಲಿ ಜಪಾನ್ ನ ವಿಶ್ವ ನಂ.3 ಆಟಗಾರ್ತಿ ಅಕಾಲಿ ಯಮಗುಚಿ ವಿರುದ್ಧ ಹಿನ್ನಡೆ ಅನುಭವಿಸಿದರು. ಆದರೆ ಅದ್ಭುತ ಪುನರಾಗಮನ ಮಾಡಿದ ಸಿಂಧು, ತಮ್ಮ ಅನುಭವ ಮತ್ತು ಆಕ್ರಮಣಕಾರಿ ಆಟದ ಮೂಲಕ ಪಂದ್ಯದ ಸಂಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡರು.
ಮೊದಲ ಗೇಮ್ ನಲ್ಲಿ ಸತತ ಅಂಕಗಳನ್ನು ಗಳಿಸಿದ ಸಿಂಧು 21-17 ಅಂತರದಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಎರಡನೇ ಗೇಮ್ ನಲ್ಲೂ ಅದೇ ಲಯವನ್ನು ಮುಂದುವರಿಸಿದ ಅವರು ಯಮಗುಚಿಗೆ ಯಾವುದೇ ಅವಕಾಶ ನೀಡದೆ ಮತ್ತೆ 21-17 ಅಂತರದಿಂದ ಜಯ ಸಾಧಿಸಿ ಜಪಾನ್ ಓಪನ್ ಸೂಪರ್ -750 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಐತಿಹಾಸಿಕ ಗೆಲುವಿನೊಂದಿಗೆ 31 ವರ್ಷದ ಪಿವಿ ಸಿಂಧು ತಮ್ಮ ವೃತ್ತಿ ಜೀವನದ ಮೊದಲ ಸೂಪರ್-750 ಸರಣಿ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಅಲ್ಲದೆ, ಹಲವು ವರ್ಷಗಳ ಬಳಿಕ ಪ್ರಮುಖ ಬಿಡಬ್ಲ್ಯೂ ಎಫ್ ವರ್ಡ್ ಟೂರ್ ಪ್ರಶಸ್ತಿಯನ್ನು ಗೆದ್ದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಈ ಗೆಲುವು ವಿಶ್ವ ಬ್ಯಾಡ್ಮಿಂಟನ್ ನಲ್ಲಿ ಸಿಂಧು ಅವರ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದು, ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲೂ ಹೊಸ ಮೈಲಿಗಲ್ಲು ನಿರ್ಮಿಸಿದೆ
ಸೆಮಿ ಫೈನಲ್ ನಲ್ಲಿ ಚೆನ್ ಯುಫೀ ಗಾಯದಿಂದ ಹಿಂದೆ ಸರಿತ್ತರು - ಫೈನಲ್ ಗೆ ಭರ್ಜರಿಯಾಗಿ ಲಗ್ಗೆ ಇಟ್ಟ ಪಿವಿ ಸಿಂಧು
ಜಪಾನ್ ಓಪನ್ ಸೂಪರ್ -750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅದ್ಭುತ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದರು. ಸೆಮಿ ಫೈನಲ್ ನಲ್ಲಿ ಅವರು ಚೀನಾದ ಒಲಂಪಿಕ್ ಚಾಂಪಿಯನ್ ಚೆನ್ ಯುಫೀ ವಿರುದ್ಧ ಕಣ್ಣಕಿಳಿದು ಆರಂಭದಿಂದಲೇ ಅಕ್ರಮಣಕಾರಿ ಆಟ ಪ್ರದರ್ಶಿಸಿದರು.
ಮೊದಲ ಗೇಮ್ ನಲ್ಲಿ 21-19 ಅಂತರದ ರೋಚಕ ಜಯ ದಾಖಲಿಸಿದ ಸಿಂಧು, ಎರಡನೇ ಗೇಮ್ನಲ್ಲೂ 15-10 ಅಂತರದಿಂದ ಸ್ಪಷ್ಟ ಮುನ್ನಡೆ ಸಾಧಿಸಿದ್ದರು. ಇದೇ ವೇಳೆ ಮಂಡಿರಜ್ಜು ಗಾಯಕ್ಕೊಳಗಾದ ಚೆನ್ ಯುಫೀ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಮಧ್ಯದಲ್ಲಿ ಹಿಂದೆ ಸರಿದರು. ಇದರ ಪರಿಣಾಮವಾಗಿ ಸಿಂಧು ಫೈನಲ್ ಗೆ ಅರ್ಹತೆ ಪಡೆದು ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಇಟ್ಟರು.
ಇದಕ್ಕೂ ಮೊದಲು ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಚೀನಾದ ಹಾನ್ ಯು ವಿರುದ್ಧ ಪ್ರಬಲ್ಯ ಮೆರೆದು ಗೆಲುವು ಸಾಧಿಸಿದ್ದರು. ಕೇವಲ 35 ನಿಮಿಷಗಳಲ್ಲಿ 21-16, 21-14 ಅಂತರದಿಂದ ಪಂದ್ಯವನ್ನು ಮುಗಿಸಿ ತನ್ನ ಅತ್ಯುತ್ತಮ ಲಯವನ್ನು ಪ್ರದರ್ಶಿಸಿದರು. ಈ ಸತತ ಗೆಲುವುಗಳು ಸಿಂಧೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಜಪಾನ್ ಓಪನ್ ಪ್ರಶಸ್ತಿ ಗೆಲ್ಲುವ ಬಲಿಷ್ಠ ಸ್ಪರ್ಧೆಯಾಗಿ ರೂಪಿಸಿತು.
ಜಪಾನ್ ಓಪನ್ 2025ರಲ್ಲಿ ತೋರಿಸಿದ ಈ ಪ್ರದರ್ಶನವು ಸಿಂಧೂ ಅವರ ವಿಶ್ವಮಟ್ಟದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿಶ್ವ ಶ್ರೇಯಾಂಕದಲ್ಲಿ ತಕ್ಷಣದ ಬದಲಾವಣೆ ಆಗದಿದ್ದರೂ, ಮುಂಬರುವ ಪ್ರಮುಖ ಅಂತರಾಷ್ಟ್ರೀಯ ಟೂರ್ನಿಗಳು ಹಾಗೂ 2026ರ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಈ ಸಾಧನೆ ಮತ್ತಷ್ಟು ಬಲಪಡಿಸಿದೆ.