<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಭಾರತದ ವಿರುದ್ಧ ಪಾಕ್ ಪ್ರವಾಹ ಆರೋಪ : ವಿದೇಶಾಂಗ ಇಲಾಖೆ ಸ್ಪಷ್ಟನೆ

ಭಾರತದ ವಿರುದ್ಧ ಪಾಕ್ ಪ್ರವಾಹ ಆರೋಪ : ವಿದೇಶಾಂಗ ಇಲಾಖೆ ಸ್ಪಷ್ಟನೆ
Summary: The External Affairs Ministry has rejected the allegation that India is responsible for the floods in Pakistan. India has clarified that Pakistan's claim that water was deliberately dumped is baseless.

Belagavi News :

ಪಾಕಿಸ್ತಾನದಲ್ಲಿ ಪ್ರವಾಹಕ್ಕೆ ಭಾರತ ಕಾರಣವಾಗುತ್ತಿದೆ ಎಂಬ ಆರೋಪಗಳನ್ನು ಭಾರತ ತಳ್ಳಿ ಹಾಕಿದೆ. ನದಿ ನೀರನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಲಾಗಿದೆ ಎಂಬ ವರದಿಗಳು ಆಧಾರರಹಿತ ಹಾಗೂ ಸತ್ಯಕ್ಕೆ ವಿರುದ್ಧವಾಗಿವೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತದ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ವಾಸ್ತವ ಅಂಶವಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಜಮ್ಮು ಮತ್ತು ಸುತ್ತಮುತ್ತಲಿನ ಜಲಾನಯನ ಪ್ರದೇಶಗಳಲ್ಲಿ ಜುಲೈ 20 ರಿಂದ 23ರ ವರೆಗೆ ಸುರಿದ ಭಾರಿ ಮಳೆಯ ಪರಿಣಾಮವಾಗಿ ಚೆನಾಬ್ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಭಾರಿ ಮಳೆಯ ಕಾರಣದಿಂದ ನದಿಗಳ ಮಟ್ಟ ಏರಿಕೆಯಾಗಿದೆ ಎಂಬ ಪಾಕಿಸ್ತಾನದ ಅಧಿಕಾರಿಗಳ ಹೇಳಿಕೆಗಳನ್ನು ಭಾರತೀಯ ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ. ಪ್ರವಾಹ ಪರಿಸ್ಥಿತಿಗೆ ಪ್ರಕೃತಿ ವಿಕೋಪ ಮತ್ತು ಮಳೆಯ ಪರಿಣಾಮವೇ ಪ್ರಮುಖ ಕಾರಣವಾಗಿದ್ದು, ಭಾರತದ ವಿರುದ್ಧದ ಆರೋಪಗಳು ರಾಜಕೀಯ ಉದ್ದೇಶ ಹೊಂದಿವೆ ಎಂಬ MEA ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ನದಿ ನೀರಿನ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಈ ಬೆಳವಣಿಗೆಗಳ ಮೇಲೆ ಎರಡು ದೇಶಗಳ ಗಮನ ಕೇಂದ್ರೀಕೃತವಾಗಿದೆ.

ಚೆನಾಬ್ ಪ್ರವಾಹಕ್ಕೆ ಭಾರಿ ಮಳೆಯೇ ಕಾರಣ - ಪಾಕ್ ವರದಿಯನ್ನೇ ಉಲ್ಲೇಖಿಸಿ ಭಾರತದ ಸ್ಪಷ್ಟನೆ :

ಚೆನಾಬ್ ನದಿಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಭಾರತ ಕಾರಣ ಎಂಬ ಆರೋಪಗಳನ್ನು ವಿದೇಶಾಂಗ ಸಚಿವಾಲಯ ಮತ್ತೊಮ್ಮೆ ತಳ್ಳಿ ಹಾಕಿದೆ. ನದಿ ಹರಿವಿನ ಹೆಚ್ಚಳವು ಭಾರಿ ಮಳೆಯಿಂದ ಉಂಟಾದ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಭಾರತದ ಯಾವುದೇ ಉದ್ದೇಶಪೂರ್ವಕ ಕ್ರಮವಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಾಹೋರ್ ನಲ್ಲಿರುವ ಪಾಕಿಸ್ತಾನದ ಪ್ರವಾಹ ಮುನ್ಸೂಚನ ವಿಭಾಗ 22ರಂದು ಬಿಡುಗಡೆಯ ಮಾಡಿದ ವರದಿಯಲ್ಲಿ ಚೆನಾಬ್ ನದಿಯ ಪ್ರವಾಹಕ್ಕೆ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆ ಕಾರಣ ಎಂದು ಉಲ್ಲೇಖಿಸಿರುವುದನ್ನು ವಿದೇಶಾಂಗ ಸಚಿವಾಲಯ ಪ್ರಸ್ತಾಪಿಸಿದೆ.

ಹವಾಮಾನದಿಂದ ಉಂಟಾದ ಪ್ರವಾಹವನ್ನು ಭಾರತದ ಹತ್ತಕ್ಷೇಪ ಎಂದು ಬಿಂಬಿಸುವ ಪ್ರಯತ್ನಗಳು ವಾಸ್ತವಿಕವಾಗಿ ತಪ್ಪಾಗಿದೆ ಹಾಗೂ ತಾಂತ್ರಿಕವಾಗಿ ಸಾಮರ್ಥನೀಯವಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಪಾಕಿಸ್ತಾನದ ಅಧಿಕೃತ ಪ್ರವಾಹ ಸಲಹಾ ಸಂಸ್ಥೆಯ ಮಾಹಿತಿಯೇ ಭಾರತ ವಿರುದ್ಧದ ಆರೋಪಗಳಿಗೆ ವಿರುದ್ಧವಾಗಿದೆ ಎಂದು ಹೇಳಿರುವ MEA, ನದಿ ನೀರಿನ ಹರಿವಿನ ಹೆಚ್ಚಳವು ನೈಸರ್ಗಿಕ ಕಾರಣಗಳಿಂದ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದೆ.

ಚೆನಾಬ್ ನದಿ ಪ್ರವಾಹ ವಿಚಾರದಲ್ಲಿ ಭಾರತ - ಪಾಕಿಸ್ತಾನ ನಡುವೆ ಉಂಟಾಗಿರುವ ವಾಕ್ ಸಮರ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರವಾಹ ಎಚ್ಚರಿಕೆ ತಡೆ ಆರೋಪಕ್ಕೆ ಭಾರತದ ತಿರುಗೇಟು - 'ಆಧಾರ ರಹಿತ ಆರೋಪ ' ಎಂದ MEA :

ಭಾರತವು ಪಾಕಿಸ್ತಾನಕ್ಕೆ ಪ್ರವಾಹ ಎಚ್ಚರಿಕೆ ಮಾಹಿತಿಯನ್ನು ನೀಡುವುದನ್ನು ತಡೆಹಿಡಿದಿದೆ ಎಂಬ ಆರೋಪಗಳನ್ನು ವಿದೇಶಾಂಗ ಸಚಿವಾಲಯ ತಳ್ಳಿ ಹಾಕಿದೆ. ಈ ಆರೋಪಗಳು ವಾಸ್ತವಿಕವಾಗಿ ಆಧಾರರಹಿತವಾಗಿವೆ ಎಂದು MEA ಸ್ಪಷ್ಟಪಡಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ಟಾಲ್ ಮಾತನಾಡಿ, ನದಿ ಹರಿವು ವಿಶೇಷ ಪ್ರವಾಹ ಎಚ್ಚರಿಕೆ ನೀಡುವ ಮಟ್ಟಕ್ಕೆ ತಲುಪಿರಲಿಲ್ಲ. ಹೀಗಾಗಿ ಅಂತಹ ಮುನ್ಸೂಚನೆ ನೀಡುವ ಅಗತ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ಭಾರತವು ಉದ್ದೇಶಪೂರ್ವಕವಾಗಿ ಪ್ರವಾಹ ಸಂಬಂಧಿತ ಮಾಹಿತಿಯನ್ನು ತಡೆ ಹಿಡಿದಿದೆ ಎಂಬ ಪಾಕಿಸ್ತಾನಿ ಮಾಧ್ಯಮಗಳ ವರದಿಗಳನ್ನು ಜೈಸ್ವಾಲ್ ನಿರಾಕರಿಸಿದ್ದಾರೆ. ಪರಿಸ್ಥಿತಿ ಅಗತ್ಯವಿದ್ದ ಸಂದರ್ಭಗಳಲ್ಲಿ, ಕಳೆದ ವರ್ಷದಂತೆ ರಾಜ ತಾಂತ್ರಿಕ ಮಾರ್ಗಗಳ ಮೂಲಕ ಮಾನವೀಯ ಆಧಾರದ ಮೇಲೆ ಪಾಕಿಸ್ತಾನದೊಂದಿಗೆ ಹೆಚ್ಚಿನ ಪ್ರವಾಹದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಹ ಮಾಹಿತಿ ಹಂಚಿಕೆ ವಿಚಾರದಲ್ಲಿ ಭಾರತ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ ಎಂದು MEA ಸ್ಪಷ್ಟಪಡಿಸಿದ್ದು, ಪಾಕಿಸ್ತಾನ ಆರೋಪಿಗಳಿಗೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online