<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ದೀರ್ಘಕಾಲದ ಬಳಿಕ ಪೊಲೀಸ್ ಇನ್ ಪೆಕ್ಟರ್ ಮತ್ತು ಡಿವೈಎಸ್ ಪಿ ವರ್ಗಾವಣೆ

ದೀರ್ಘಕಾಲದ ಬಳಿಕ ಪೊಲೀಸ್ ಇನ್ ಪೆಕ್ಟರ್ ಮತ್ತು ಡಿವೈಎಸ್ ಪಿ ವರ್ಗಾವಣೆ
Summary: The government has initiated the process of transfer of Police Inspector and DySP rank officers which was pending for a long time. Administrative changes will take place in many districts and divisions, and activity in the police department has increased.

Belagavi News:

ಬೆಂಗಳೂರು: ಪೋಲಿಸ್ ಇಲಾಖೆಯಲ್ಲಿ ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.

ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ಆಡಳಿತಾತ್ಮಕ ಬದಲಾವಣೆ ನಡೆಸಲಾಗಿದ್ದು ಒಟ್ಟು 293 ಪೊಲೀಸ್ ಇನ್ಸ್ಪೆಕ್ಟರ್ ಗಳು (Civil) ಹಾಗೂ 74 ಡಿವೈಎಸ್ಪಿ (Civil) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಭಾನುವಾರ (ಮೇ 10) ನಡೆದ ಪೋಲಿ ಸಿಬ್ಬಂದಿ ಮಂಡಳಿ ( Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದ ಅನ್ವಯ ಈ ವರ್ಗಾವಣೆ ಆದೇಶಗಳನ್ನು ಪ್ರಕಟಿಸಲಾಗಿದೆ.

ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.

ತಕ್ಷಣದಿಂದಲೇ ವರದಿ ಮಾಡಿಕೊಳ್ಳುವಂತೆ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ವಿಶೇಷ ತನಿಕ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.

ಇನ್ನು ಕೆಲ ಅನುಭವ ಅಧಿಕಾರಿಗಳನ್ನು ಸಿಸಿಬಿ ಮತ್ತು ಗುಪ್ತಚರ ವಿಭಾಗಗಳಿಗೆ ನಿಯೋಜಿಸಲಾಗಿದೆ.

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ಹೊಸದಾಗಿ ನಿಯೋಜಿಸಲ್ಪಟ್ಟ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳಬೇಕು. ಎಂದು ಸರ್ಕಾರದ್ದ ಆದೇಶದಲ್ಲಿ ತಿಳಿಸಲಾಗಿದೆ.

Also Read:

ದಳಪತಿ ವಿಜಯ್ ಅವರ ಸಿಎಂ ಕನಸಂತೂ ನಿಜವಾಯಿತು,ಮುಂದೆ ಸಿನಿಮಾದ ಕಥೆ ಏನು?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online