BELAGAVI NEWS :
ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಜಾಮೀನು ಸಹಿತ ಬಂಧನ ವಾರಂಟ್: ಪಂಜಾಬ್ ನ್ಯಾಯಾಲಯದ ಆದೇಶ
ಸಂಗ್ರೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಪಂಜಾಬ್ ನ ಸಂಗ್ರೂರು ಜಿಲ್ಲಾ ನ್ಯಾಯಾಲಯದ ಜಾಮೀನು ಸಹಿತ ಬಂಧನ ವಾರಂಟ ಜಾರಿಗೊಳಿಸಿದೆ. 2023ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದ್ದು, ಪ್ರಕರಣದ ವಿಚಾರಣೆಗೆ ಸಪ್ಟೆಂಬರ್ 19ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಈ ಪ್ರಕರಣವು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಚಾರದ ಸಂದರ್ಭದಲ್ಲಿ ಬಜರಂಗದಳದ ಕುರಿತು ಖರ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದೆ. ಆ ಹೇಳಿಕೆಯಿಂದ ಮಾನಹಾನಿಯಾಗಿದೆ ಎಂದು ಆರೋಪಿಸಿ ಸಂಗ್ರೂರಿನ ನಿವಾಸಿ ಹಿತೇಶ್ ಭಾರದ್ವಾಜ್ ನ್ಯಾಯಕ್ಕೆ ದೂರು ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲ ಲಲಿತ್ ಕುಮಾರ್ ಗಾರ್ಗ್ ವಾದ ಮಂಡಿಸಿದ್ದು, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಹಾಗೂ ಪ್ರಚಾರದ ವೇಳೆ ನೀಡಲಾದ ಹೇಳಿಕೆಗಳ ಆಧಾರದ ಮೇಲೆ ಈ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು
ಪ್ರಕರಣದ ವಿಚಾರಣೆ ಮುಂದುವರೆದಿದ್ದು, ನ್ಯಾಯದ ನಿರ್ದೇಶನದಂತೆ ಮಲ್ಲಿಕಾರ್ಜುನ್ ಖರ್ಗೆ ಅವರು ನಿಗದಿತ ದಿನಾಂಕದಂದು ಹಾಜರಾಗಬೇಕಿದೆ.
ಖರ್ಗೆ ವಿರುದ್ಧದ ಮಾನವನಷ್ಟ ಪ್ರಕ್ರಿಯೆ ಹೊಸ ತಿರುಗು: ಸೆಪ್ಟೆಂಬರ್ 19 ರಂದು ಖುದ್ದು ಹಾಜರಾಗಲು ನ್ಯಾಯಾಲಯ ಸೂಚನೆ
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದ ಹಿಂದೂ ಸಂಘಟನೆಗಳು ಮತ್ತು ಅವುಗಳ ಬೆಂಬಲಿಗರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಪ್ರಕರಣವನ್ನು ಆರಂಭದಲ್ಲಿ ಸಿವಿಲ್ ಮೊಕದ್ದಮೆಯಾಗಿ ಪರಿಗಣಿಸಲಾಗಿತ್ತು. ಆ ಹಂತದಲ್ಲಿ ಖರ್ಗೆ ಹಾಗೂ ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು.
ಆದರೆ ಇದೀಗ ನ್ಯಾಯವು ಪ್ರಕರಣವನ್ನು ಕ್ರಿಮಿನಲ್ ದೂರಿನ ರೂಪದಲ್ಲಿ ಮುಂದುವರಿಸಲು ನಿರ್ಧರಿಸಿದ್ದು, ಆರೋಪಿಯು ಖುದ್ದಾಗಿ ನ್ಯಾಯಕ್ಕೆ ಹಾಜರಾಗುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಇದರ ಅನ್ವಯ ನ್ಯಾಯವು ₹15,000 ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ್ದು, ಸೆಪ್ಟೆಂಬರ್ 19 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಿದೆ. ನಿಗದಿತ ದಿನಾಂಕದಂದು ಖರ್ಗೆ ಹಾಜರಾಗದಿದ್ದರೆ, ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳ ಬಹುದಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ನೀಡಲಾದ ಹೇಳಿಕೆಗೆ ಸಂಬಂಧಿಸಿದ ಮಾನ ನಷ್ಟ ಪ್ರಕರಣಕ್ಕೆ ಹೊಸ ತಿರುಗು ಸಿಕ್ಕಿದೆ.
ಮಲ್ಲಿಕಾರ್ಜುನ್ ಖರ್ಗೆ ವಿರುದ್ಧದ ಮಾನಸ ಪ್ರಕರಣದಲ್ಲಿ ಮೂಲ ದೂರುದಾರ ಹಿತೇಶ್ ಭಾರದ್ವಾಜ್ ನಿಧನರಾಗಿದ್ದು, ಇದೀಗ ಅವರ ಪುತ್ರ ಭವ್ಯ ಭಾರದ್ವಾಜ್ ಪ್ರಕರಣವನ್ನು ಮುಂದುವರಿಸುತ್ತಿದ್ದಾರೆ. ತಮ್ಮ ತಂದೆ ಆರಂಭಿಸಿದ ಕಾನೂನು ಹೋರಾಟವನ್ನು ಕೊನೆಯವರೆಗೂ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.