<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಕ್ವೆಟ್ಟಾ ರೈಲು ದುರಂತ:ಭೀಕರ ಆತ್ಮಹತ್ಯಾ ದಾಳಿಯಲ್ಲಿ 23 ಮಂದಿ ಬಲಿ, BLAಉಗ್ರರ ಕೃತ್ಯ

ಕ್ವೆಟ್ಟಾ ರೈಲು ದುರಂತ:ಭೀಕರ ಆತ್ಮಹತ್ಯಾ ದಾಳಿಯಲ್ಲಿ 23 ಮಂದಿ ಬಲಿ, BLAಉಗ್ರರ ಕೃತ್ಯ
Summary: A deadly suicide attack has taken place in the Pakistani city of Quetta, targeting a passenger train, killing at least 23 people. There are fears that the death toll will rise further as many are seriously injured.

BELAGAVI NEWS :

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮತ್ತೊಮ್ಮೆ ಭೀಕರ ಉಗ್ರ ದಾಳಿ ನಡೆದಿದ್ದು,ಪಾಕ್ ಸೇನಾ ಸಿಬ್ಬಂದಿಯನ್ನು ಒಳಗೊಂಡಿದ್ದ ಪ್ರಯಾಣಿಕರ ರೈಲನ್ನು ಗುರಿಯಾಗಿಸಿಕೊಂಡು ಬಲೂಚ್ ಪ್ರತ್ಯೇಕತಾವಾದಿಗಳು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದಾರೆ.ಈ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು,47ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗಾಳಿ ನಡೆದ ತಕ್ಷಣ ಸ್ಥಳದಲ್ಲಿ ಬಾರಿ ಗೊಂದಲ ಉಂಟಾಗಿ,ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.ಸ್ಪೋಟದ ಪರಿಣಾಮ ರೈಲಿನ ಹಲವು ಭೋಗಿಗಳಿಗೆ ಬೆಂಕಿ ತಗುಲಿ,ದಟ್ಟ ಹೋಗೆ ಆಕಾಶಕ್ಕೇರಿದ ದೃಶ್ಯಗಳು ಭೀತಿ ಮೂಡಿಸುವೆ.ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಭೀಕರ ಧಾಳಿಯ ಹೊಣೆಯನ್ನು ಬಲೂಚ್ ಲಿಬರೇಷನ್ ಆರ್ಮಿ ಹೊತ್ತುಕೊಂಡಿದೆ.ಬಲೂಚಿಸ್ತಾನದಲ್ಲಿ ಕಳೆದ ಕೆಲ ತಿಂಗಳುಗಳಿಂದ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು,ಪಾಕಿಸ್ತಾನ ಸರ್ಕಾರಕ್ಕೆ ಭದ್ರತಾ ಸವಾಲು ಮತ್ತಷ್ಟು ಗಂಭೀರವಾಗುತ್ತಿದೆ.

ಇಸ್ಲಾಮಾಬಾದ್:ಪಾಕಿಸ್ತಾನದ ಅತ್ಯಂತ ಪ್ರಕ್ಷಿಪ್ತ ಹಾಗೂ ವಿವಾದಿತ ಪ್ರದೇಶಗಳಲ್ಲಿ ಒಂದಾದ ಕ್ವೀಟ್ಟಾ ಪ್ರದೇಶದಲ್ಲಿ ಭಾನುವಾರ (ಮೇ 25)ಭೀಕರ ಆತ್ಮಹತ್ಯಾ ದಾಳಿ ನಡೆದಿದೆ.ಪ್ರಯಾಣಿಕರ ರೈಲನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ 20ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು,40 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಪೋಟದ ತೀವ್ರತೆಗೆ ರೈಲಿನ ಹಲವು ಭೋಗಿಗಳು ಹಾನಿಗೊಳಗಾಗಿದ್ದು,ತಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು,ಕೆಲವರ ಸ್ಥಿತಿ ಗಂಭೀರವಾಗಿದೆ, ಎನ್ನಲಾಗಿದೆ.ದಾಳಿಯ ಬಳಿಕ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಚರಣೆ ಆರಂಭಿಸಿದೆ.

ಈ ಘಟನೆ ಪಾಕಿಸ್ತಾನದಲ್ಲಿ ಮತ್ತೆ ಭದ್ರತಾ ಆತಂಕ ಹೆಚ್ಚಿಸಿದ್ದು,ಬಲೂಚಿಸ್ತಾನ ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳು ಮತ್ತಷ್ಟು ತೀವ್ರವಾಗುತ್ತಿರುವುದಕ್ಕೆ ಉದಾಹರಣೆಯಾಗಿದೆ.

ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿ ಮತ್ತೊಮ್ಮೆ ಭೀಕರ ಉಗ್ರ ದಾಳಿ ನಡೆದಿದ್ದು, ಕ್ವೆಟ್ಟಾದ ಚಮನ್ ಫಾಟಕ್ ಸಮೀಪ ಕ್ಯಾಂಟ್ ಪ್ರದೇಶದತ್ತ ತೆರಳುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಗುರಿಯಾಗಿಸಿಕೊಂಡು ಬಲೂಚ್ ಲಿಬರೇಷನ್ ಆರ್ಮಿ ಆತ್ಮಹತ್ಯ ಬಾಂಬ್ ದಾಳಿ ನಡೆಸಿದೆ.ಮಿಲಿಟರಿ ಸಿಬ್ಬಂದಿಯನ್ನು ಒಳಗೊಂಡ ಈ ಪ್ರಯಾಣಿಕರ ರೈಲಿನ ಮೇಲೆ ನಡೆದ ಸ್ಫೋಟಕದಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು,47ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟದ ತೀವ್ರತೆಗೆ ರೈಲಿನ ಹಲವು ಭೋಗಿಗಳು ಹಾನಿಗೊಳಗಾಗಿದ್ದು, ತಳದಲ್ಲಿ ಬಾರಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಾರಿಯ ಬಳಿಕ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿರುವ ಮಾಹಿತಿಯೂ ಲಭ್ಯವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಕುರಿತು ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ವರದಿಯಲ್ಲಿ,"ಬಲೂಚಿಸ್ತಾನ ದ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ BLA ಉಗ್ರರು ಬಾರಿ ನಷ್ಟ ಅನುಭವಿಸಿದ ಬಳಿಕ ಪ್ರತೀಕಾರದ ಭಾಗವಾಗಿ ಈ ದಾರಿ ನಡೆಸಲಾಗಿದೆ"ಎಂದು ಉಲ್ಲೇಖಿಸಲಾಗಿದೆ.

ಬಲೂಚಿಸ್ತಾನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು,ಪಾಕಿಸ್ತಾನ ಸರ್ಕಾರಕ್ಕೆ ಭದ್ರತಾ ಸವಾಲು ಮತ್ತಷ್ಟು ಗಂಭೀರವಾಗುತ್ತಿದೆ.ಪ್ರಾಥಮಿಕ ವರದಿಗಳ ಪ್ರಕಾರ,ಘಟನಾ ಸ್ಥಳದಲ್ಲಿ ಬಾಂಬ್ ಸ್ಫೋಟದ ಬಳಿಕ ಗುಂಡಿನ ಚಕಮಕಿಯ ಸದ್ದುಗಳು ಸಹ ಕೇಳಿಬಂದಿದ್ದು,ರಕ್ಷಣಾ ಕಾರ್ಯಗಳು ಮುಂದುವರೆದಿವೆ ಎಂದು CNNನ್ಯೂಸ್ 18 ವರದಿ ಮಾಡಿದೆ.

ಈ ಭೀಕರ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಷನ್ ಆರ್ಮಿ ಹೊತ್ತುಕೊಂಡಿದೆ.ಪಾಕಿಸ್ತಾನದ ಸೇನಾ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ರೈಲಿನ ಮೇಲೆ ಫಿದಾ ಈ ದಾಳಿ ನಡೆಸಲಾಗಿದೆ ಎಂದು ಘಟನೆ ಹೇಳಿಕೆ ಬಿಡುಗಡೆ ಮಾಡಿದೆ.ಈ ದಾಳಿಯನ್ನು ಬಿ ಯಲೇ ಯ ಸ್ವಯಂ ತ್ಯಾಗ ಘಟಕ ಎಂದು ಗುರುತಿಸಲಾಗುವ'ಮಜೀದ್ ಬ್ರಿಗೇಡ್'ಅಸಂಘಟಿತ ಕಾರ್ಯಾಚರಣೆಯಾಗಿ ನಡೆಸಿದೆ ಎಂದು ಉಗ್ರ ಸಂಘಟನೆ ತಿಳಿಸಿದೆ.

ಪ್ರತ್ಯೇಕ ಬಲೂಚ್ ಲಿಬರೇಷನ್ ಆರ್ಮಿ ನಡೆಸುತ್ತಿರುವ BLAಚಟುವಟಿಕೆಗಳಿಂದ ಕ್ವಿಟ್ಟಾ ಹಾಗೂ ಬಲೂಚಿಸ್ತಾನದ ಹಲವು ಭಾಗಗಳು ನಿರಂತರವಾಗಿ ಉಗ್ರ ದಾಳಿಗಳಿಗೆ ಸಾಕ್ಷಿಯಾಗುತ್ತಿವೆ.ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ರೈಲ್ವೆ ಮೂಲಸೌಕರ್ಯ,ಪೊಲೀಸ್ ಚೆಕ್ಪೋಸ್ಟ್ಗಳು ಹಾಗೂ ಅರೆ ಸೈನಿಕ್ ಪಡೆಗಳ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗಳು ಹೆಚ್ಚಾಗುತ್ತಿರುವುದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಭದ್ರತಾ ಸವಾಲಾಗಿ ಪರಿಣಮಿಸಿದೆ.

ಈ ಹಿಂದೆಯೂ ಇದೇ ರೀತಿಯ ದಾಳಿ ನಡೆದಿದ್ದು,2025ರ ಮಾರ್ಚ್ ತಿಂಗಳಲ್ಲಿ ಜಫರ್ ಎಕ್ಸ್ಪ್ರೆಸ್ ರೈಲಿನ ಹಳ್ಳಿಯನ್ನು ಸ್ಫೋಟಿಸಿ ಅಪಹರಿಸಿದ್ದ BLAಉಗ್ರರು,ರೈಲಿನಲ್ಲಿದ್ದ ಸುಮಾರು 450ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 182 ಭದ್ರತಾ ಸಿಬ್ಬಂದಿಯನ್ನು ಒ ತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಮಾಹಿತಿ ಹೊರ ಬಿದ್ದಿತ್ತು.

ಪಾಕಿಸ್ತಾನದ ಬಲುಚಿಸ್ತಾನ್ ದಲ್ಲಿ ನಡೆದ ಭೀಕರ ರೈಲು ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.ಬಲುಚಿಸ್ತಾನದ ಗ್ರಹ ವ್ಯವಹಾರಗಳ ವಿಶೇಷ ಸಹಾಯಕ ಬಾಬರ್ ಜೈ ಅವರು ಮಾಹಿತಿ ನೀಡುತ್ತಾ,ಘಟನೆಯ ಕುರಿತು ಅಧಿಕಾರಿಗಳು ಈಗಲೂ ಮಾಹಿತಿ ಸಂಗ್ರಹ ಮತ್ತು ಪರಿಚಲನ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದ್ದಾರೆ.ಪರಿಶೀಲನೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.ಘಟನಾ ಸ್ಥಳದಲ್ಲಿ ಹೆಚ್ಚಿನ ಭದ್ರತೆಗಾಗಿ ಸಂಬಂಧಿತ ಎಲ್ಲಾ ಪಡೆಗಳನ್ನು ನಿಯೋಜಿಸಲಾಗಿದ್ದು,ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ.ಹಾನಿ ಹೆಚ್ಚಾಗದಂತೆ ಮತ್ತು ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಯಾರು ಸ್ಥಳದತ್ತ ತೆರಳಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Also Read:

Shreyas Iyer ಸೂಪರ್ ಸೆಂಚುರಿ: ಲಕ್ನೋ ವಿರುದ್ಧ ಪಂಜಾಬ್ ಗೆ ಭರ್ಜರಿ ಜಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online