<?= $pageTitle ?>
Logo
ಮುಖಪುಟ ಓದುವುದು ಕೇಳು
Education

ಎಸ್ ಎಸ್ ಎಲ್ ಸಿ ಫಲಿತಾಂಶ ಎಡವಟ್ಟು: 12 ಅಂಕ ದಾಖಲೇ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

ಎಸ್ ಎಸ್ ಎಲ್ ಸಿ ಫಲಿತಾಂಶ ಎಡವಟ್ಟು: 12 ಅಂಕ ದಾಖಲೇ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ
Summary: Serious glitch in SSLC results Another incident of error in SSLC exam results has caused concern. It has been reported that a student attempted suicide under severe mental stress because only 12 marks were recorded.

belagavi news:

ಕೊಪ್ಪಳ ಜಿಲ್ಲೆಯಲ್ಲಿ ಇಲಾಖೆಯ ನಿರ್ಲಕ್ಷ್ಯ ದಿಂದ ಗಂಭೀರ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿಗೆ ಉತ್ತಮ ಅಂಕ ಪಡೆದಿದ್ದರು ಅಂಕ ಪಟ್ಟಿಯಲ್ಲಿ ತಪ್ಪಾಗಿ ಕಡಿಮೆ ಅಂಕಗಳು ದಾಖಲಾಗಿರುವುದರಿಂದ ವಿದ್ಯಾರ್ಥಿನಿಗೆ ದೊಡ್ಡ ಗೊಂದಲ ಉಂಟಾಗಿದೆ. ಈ ತಪ್ಪು ನಮೂದು ವಿದ್ಯಾರ್ಥಿನಿಯ ಮೇಲೆ ತೀವ್ರ ಮಾನಸಿಕ ಒತ್ತಡ ಉಂಟು ಮಾಡಿದ್ದು ಆಕೆ ಆತ್ಮಹತ್ಯೆಗೆ ಯತಿಸಿದ ಘಟನೆ ವರದಿಯಾಗಿದೆ. ತಕ್ಷಣ ಪೋಷಕರು ಗಮನಿಸಿ ಸಮಯಪ್ರಜ್ಞೆಯಿಂದ ಆಕೆಯನ್ನು ರಕ್ಷಿಸಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊಪ್ಪಳ: ಎಪ್ರಿಲ್ 27 ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆಯ ಫಲಿತಾಂಶ ಇತ್ತೀಚಿಗೆ ಪ್ರಕಟವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್ ಬಂದಿದೆ. ಆದರೆ ಮೌಲ್ಯಮಾಪಕರಿಂದ ಉಂಟಾಗಿರುವಂತಹ ಕೆಳಗಡೆ ದಿನೇ ದಿನೇ ಬೆಳಕಿಗೆ ಬರುತ್ತಿವೆ. ಇದೀಗ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಎಡವಟ್ಟು ಒಂದು ಬೆಳಕಿಗೆ ಬಂದಿದ್ದು ಅದರಿಂದ ಆಘಾತಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿ ರುವಂತಹ ಘಟನೆ ನಡೆದಿದೆ.

ಕೊಪ್ಪಳದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಎಡವಟ್ಟು- ಸಂಜನಾ ಮಡಿವಾಳರಿಗೆ ಶಾಕ್, ಬಳಿಕ ನಿಟ್ಟುಸಿರು

ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ನಿವಾಸಿ ಸಂಜನಾ ಮಡಿವಾಳರ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದರು. ಫಲಿತಾಂಶದ ದಿನ ಅವರಿಗೆ ದೊಡ್ಡ ಆಘಾತ ಎದುರಾಯಿತು.

ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರು ಕನ್ನಡ ವಿಷಯದಲ್ಲಿ ಅಂಕಪಟ್ಟಿಯಲ್ಲಿ ಕೇವಲ 12 ಅಂಕಗಳು ಮಾತ್ರ ನಮೂದಾಗಿದ್ದವು. ಈ ತಪ್ಪು ದಾಖಲೆ ಸಂಜನಾ ಅವರಲ್ಲಿ ಆತಂಕ ಉಂಟು ಮಾಡಿತ್ತು. ಬಳಿಕ ಉತ್ತರ ಪತ್ರಿಕೆಯ ಫೋಟೋ ಪ್ರತಿಯನ್ನು ಪಡೆದು ಪರಿಶೀಲಿಸಿದಾಗ ಅವರು ವಾಸ್ತವವಾಗಿ 71 ಅಂಕಗಳನ್ನು ಪಡೆದಿರುವುದು ಸ್ಪಷ್ಟವಾಯಿತು.

ಸರಿಯಾದ ಅಂಕ ತಿಳಿದ ಬಳಿಕ ಸಂಜನಾ ನಿಟ್ಟುಸಿರು ಬಿಟ್ಟಿದ್ದು. ಕುಟುಂಬಕ್ಕೂ ನಿರಾಳತೆ ದೊರಕಿದೆ.

ಆತ್ಮಹತ್ಯೆಗೆ ಯತ್ನ: ಹೆಚ್ಚು ಅಂಕ ನಿರೀಕ್ಷಿಸಿದ್ದ ಸಂಜನಾ, ಅಂಕಪಟ್ಟಿಯಲ್ಲಿ ಫೇಲ್ ಆಗಿರುವುದನ್ನು ಕಂಡು ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದಳು . ಇದೇ ಕಾರಣಕ್ಕೆ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದಳು. ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿ ದ್ದಳು. ಆದರೆ ಪೋಷಕರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ಒಂದು ತಪ್ಪಿದ್ದು ವಿದ್ಯಾರ್ಥಿನಿ ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ಸಂಜನಾ ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದರು ಇಲಾಖೆಯವರ ನಿರ್ಲಕ್ಷ್ಯ ದಿಂದಾಗಿ ಸ್ನೇಹಿತರ ಮುಂದೆ ಮತ್ತು ಹೆತ್ತವರಿಗೆ ಅವಮಾನ ಅನುಭವಿಸಬೇಕಾಯಿತು ಎಂದು ಅವಳು ತೋಡಿಕೊಂಡಿದ್ದಾಳೆ.

ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ ಸಂಜನಾ ತಂದೆ ಮಂಜುನಾಥ್ ಮಡಿವಾಳರ

ಕೊಪ್ಪಳದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ನಡೆದ ಎಡವಟ್ಟಿನ ಹಿನ್ನೆಲೆಯಲ್ಲಿ ಸಂಜನಾ ಮಡಿವಾಳರ್ ಅವರ ತಂದೆ ಮಂಜುನಾಥ್ ಮಡಿವಾಳರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ಮಾತನಾಡಿ "ನನ್ನ ಮಗಳೊಂದಿಗೆ ನಡೆದ ಈ ಘಟನೆ ಮತ್ತೊಬ್ಬ ವಿದ್ಯಾರ್ಥಿಯ ಜೀವನದಲ್ಲೂ ಆಗಬಾರದು. ಶಿಕ್ಷಣ ಇಲಾಖೆಯ ಈ ಎಡವಟ್ಟಿನಿಂದ ನಾವು ದೊಡ್ಡ ಆಘಾತ ಅನುಭವಿಸಿದ್ದೇವೆ" ಎಂದು ಹೇಳಿದ್ದಾರೆ.

ತಪ್ಪು ದಾಖಲೆ ಕಾರಣದಿಂದ ಮಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸ್ಥಿತಿಯನ್ನು ನೆನಪಿಸಿಕೊಂಡ ಅವರು," ಸ್ವಲ್ಪ ತಡವಾಗಿದ್ದಾರೆ ನಾವು ನಮ್ಮ ಮಗಳನ್ನು ಕಳೆದುಕೊಳ್ಳುತ್ತಿದ್ದೆವು," ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ತಪ್ಪಿಗೆ ಕಾರಣರಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Also Read:

ಪ್ರೇಮ ವಿರುದ್ಧ ಟೀಕೆಗಳ ಮಧ್ಯೆ 'ಕೆಡಿ' ವಿಳಂಬ - ಬೆಂಬಲಕ್ಕೆ ಬಂದ ಕಿಚ್ಚಾ ಸುದೀಪ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online