<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಶಿವಣ್ಣನ ಪೆದ್ದಿ ಫಿಲಂ ಶೂಟಿಂಗ್ ಕಂಪ್ಲೀಟ್

ಶಿವಣ್ಣನ ಪೆದ್ದಿ ಫಿಲಂ ಶೂಟಿಂಗ್ ಕಂಪ್ಲೀಟ್
Summary: The shooting of the much-awaited film Peddi starring Ram Charan and Shivarajkumar has officially been completed.

Belagavi news:

ಬುಚಿ ಬಾಬು ಸನಾ ನಿರ್ದೇಶನದ, ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಚಿತ್ರ ತನ್ನ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಸ್ಕರ್ ವೇದಿಕೆ ಹತ್ತಿದ ಆರ್ ಆರ್ ಆರ್ ಚಿತ್ರದ ಬಳಿಕ ರಾಮ್ ಚರಣ್ ಅವರ ಮುಂದಿನ ಬೃಹತ್ ಪ್ರಾಜೆಕ್ಟ್ ಆಗಿ ಗಮನ ಸೆಳೆದಿರುವ ಈ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ.

ಈ ಚಿತ್ರವನ್ನು ಏಪ್ರಿಲ್ 30ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದರು, ಕೆಲ ದಿನಗಳ ಹಿಂದೆ ಚಿತ್ರತಂಡ ಬಿಡುಗಡೆ ಮುಂದೂಡಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡಿತು. ಇದೀಗ ಶೂಟಿಂಗ್ ಕಂಪ್ಲೀಟ್ ಆಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

ಛಾಯಾಗ್ರಹಕ ರತ್ನವೇಲು ತಮ್ಮ ಅಧಿಕೃತ ಎಕ್ಸ ಕಾಟೆಯಲ್ಲಿ ಈ ಮಹತ್ವದ ಅಪ್ಡೇಟ್ ಹಂಚಿಕೊಂಡಿದ್ದು, ಚಿತ್ರೀಕರಣ ಪೂರ್ಣಗೊಂಡಿರುವುದನ್ನು ದೃಢಪಡಿಸಿದ್ದಾರೆ. ಅವರು ಈ ಪ್ರಯಾಣವನ್ನು ಸ್ಮರಣೆ ಎಂದು ವರ್ಣಿಸಿ ರಾಮ್ ಚರಣ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

'ಪೆದ್ದಿ ' 2026ರ ಬಹು ನಿರೀಕ್ಷಿತ ಬೃಹತ್ ಸಿನಿಮಾಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದು, ಅದ್ದೂರಿ ನಿರ್ಮಾಣ ಮತ್ತು ಭರ್ಜರಿ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡದಿಂದ ಅಧಿಕೃತ ಅಪ್ಡೇಟ್ ಹೊರಬಿದ್ದಿದೆ. ಚಿತ್ರದ ಕ್ಯಾಮೆರಾ ಮ್ಯಾನ್ ರತ್ನವೇಲು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವನಾತ್ಮಕ ಪೋಸ್ಟ್ ಈಗ ವೈರಲಾಗಿದೆ.

ಅವರು ತಮ್ಮ ಪೋಸ್ಟ್ ನಲ್ಲಿ "ಮೆಗಾ ಪವರ್ ಸ್ಟಾರ್ ರಾಮಚರಣ್ ಸಿನಿಮಾ ಶೂಟಿಂಗ್ ಕಂಪ್ಲೀಟ್. ಪೆದ್ದಿ ಒಂದು ಸ್ಮರಣೆಯ ಪ್ರಯಾಣ. ರಾಮ್ ಚರಣ್ ಜೊತೆ ಕೆಲಸ ಮಾಡುವುದು ನಿಜಕ್ಕೂ ವಿಶೇಷ. ಸ್ಕ್ರೀನ್ ಮೇಲೆ ಪವರ್ ಮತ್ತು ಆಫ್ ಸ್ಕ್ರೀನ್ ನಲ್ಲಿ ಅದ್ಭುತ ಸ್ನೇಹಿತ. ನನ್ನ ಚಿತ್ರ ತಂಡದ ನೆನಪುಗಳಿಗೆ ನಾನು ಕೃತಜ್ಞ" ಎಂದು ತಿಳಿಸಿದ್ದಾರೆ.

ಈ ಪೋಸ್ಟ್ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಉತ್ಸಾಹವನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಒಬ್ಬ ಅಭಿಮಾನಿ ಸಿನಿಮಾ ನೋಡಲು ಕಾಯಲು ಸಾಧ್ಯವಿಲ್ಲ, ಎಂದು ಹೇಳಿದರೆ, ಮತ್ತೊಬ್ಬರು ತುಂಬಾ ಎಕ್ಸೈಟೆಡ್ ಆಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದಲ್ಲದೆ, ಕೆಲ ದಿನಗಳ ಹಿಂದೆ ಚಿತ್ರತಂಡ ಪೆದ್ದಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ ಘೋಷಿಸಿತ್ತು. ಮತ್ತೊಂದು ಏಪ್ರಿಲ್ 30 20 2026ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ ಈಗ ಜೂನ್ ತಿಂಗಳಲ್ಲಿ ಮುಂದೂಡಲಾಗಿದೆ. ನಿಖರ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಮಾರ್ಸಲ್ಲಿ ಬಿಡುಗಡೆಯಾದ ಟೀಸರ್ ಈಗಾಗಲೇ ಬಾರಿ ಗಮನ ಸೆಳೆದಿದ್ದು, ಕುಸ್ತಿ ಹಿನ್ನೆಲೆಯ ಪವರ್ ಫುಲ್ ಕಥೆಯ ಸುಳಿವು ನೀಡಿದೆ. ರಾಮ್ ಚರಣ್ ಗದೆ ಹಿಡಿದು ತರಬೇತಿ ಪಡೆಯುವ ದೃಶ್ಯಗಳು ಪಾತ್ರದ ತೀವ್ರತೆಯನ್ನು ತೋರಿಸಿವೆ.

ಪೆದ್ದಿ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, 2026ರ ಬಹುನಿರೀಕ್ಷಿತ ದೊಡ್ಡ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ಪೆದ್ದಿ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ಗೌರ್ ನಾಯ್ಡು ಎಂಬ ಶಕ್ತಿಶಾಲಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಈಗ ದೃಢವಾಗಿದೆ.

ಇತ್ತೀಚಿಗೆ ಹೆಸರು ಬಹಿರಂಗಪಡಿಸದ ಶಿವಣ್ಣನ ಆಪ್ತರೊಬ್ಬರು ಖಾಸಗಿ ಮಿಡಿಯಾ ಒಂದರಲ್ಲಿ ಮಾತನಾಡಿ ಚಿತ್ರದ ಬಗ್ಗೆ ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಪೆದ್ದಿ ಚಿತ್ರದಲ್ಲಿ ರಾಮ್ ಚರಣ್ ಅವರ ಗುರುವಿನ ಪಾತ್ರಕ್ಕೆ ಶಿವರಾಜ್ ಕುಮಾರ್ ಅವರ ಬೇಕೆಂದು ನಿರ್ದೇಶಕ ಬುಚಿ ಬಾಬು ಸನಾ ಹಠ ಹಿಡಿದಿದ್ದರು. ಶಿವಣ್ಣನ ಆರೋಗ್ಯ ಸಮಸ್ಯೆಗಳ ಕಾರಣದಿಂದ ಅವರ ಭಾಗದ ಚಿತ್ರೀಕರಣವನ್ನು ಮುಂದೂಡಲಾಗಿತ್ತು. ಆಪರೇಷನ್ ನಂತರ ಅವರು ತೂಕ ಕಳೆದುಕೊಂಡಿದ್ದರು, ಪತ್ರಕ್ಕೆ ನಾನು ಸೂಕ್ತನಾ ಎಂದು ಶಿವಣ್ಣನೇ ಪ್ರಶ್ನಿಸಿದರು. ಬಳಿಕ ಬೆಂಗಳೂರಿಗೆ ಬಂದು ಲುಕ್ ಟೆಸ್ಟ್ ನಡೆಸಿದಾಗ ನಿರ್ದೇಶಕರು ಅವರು ಮಾತ್ರವೇ ಈ ಪಾತ್ರಕ್ಕೆ ಸೂಕ್ತ ಎಂದು ದೃಢಪಡಿಸಿದರು ಎಂದು ಹೇಳಿದರು.

ನಿರ್ದೇಶಕರ ಹಠ ಮತ್ತು ರಾಮ್ ಚರಣ್ ಮೇಲಿನ ಗೌರವದಿಂದಲೇ ಶಿವರಾಜ್ ಕುಮಾರ್ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

ಪೆದ್ದಿ ಚಿತ್ರವನ್ನು ಬುಜ್ಜಿ ಬಾಬು ಸನ ಬರೆದು ನಿರ್ದೇಶಸುತ್ತಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಶಿವರಾಜ್ ಕುಮಾರ್ ಜೊತೆಗೆ ಜಾನ್ವಿ ಕಪೂರ್ ದಿವ್ಯೆಂದು ಶರ್ಮಾ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ದೊಡ್ಡ ತಾರಾ ಬಳಗ ಮತ್ತು ಶಕ್ತಿಶಾಲಿ ಕಥಾ ಹಂದರದಿಂದಾಗಿ, ಪೆದ್ದಿ ಚಿತ್ರದ ಮೇಲೆ ಕರುನಾಡಿನಲ್ಲೂ ಭಾರಿ ನಿರೀಕ್ಷೆ ನಿರ್ಮಾಣವಾಗಿದೆ. ಶಿವರಾಜ್ ಕುಮಾರ್ ಪಾತ್ರದ ಎಂಟ್ರಿ ಸಿನಿಮಾದ ಹೈಲೈಟ್ ಆಗುವ ಸಾಧ್ಯತೆ ಇದೆ ಎಂದು ತಿಳಿವಲಯದಲ್ಲಿ ಚರ್ಚೆ ನಡೆಯುತ್ತಿದೆ.

Also Read:

SSLC ನಲ್ಲಿ ಕನ್ನಡದಲ್ಲೇ ಹೆಚ್ಚು ಫೇಲ್? ಅಚ್ಚರಿಯ ಅಂಕಿ- ಅಂಶ ಬಹಿರಂಗ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online