ಸೀತಾರಾಮನ್ ಇಂದು 11:00 ಗಂಟೆಗೆ 9ನೇ ಬಜೆಟ್ ಮಂಡನೆಗೆ ಸಿದ್ದರಾಗಿದ್ದಾರೆ. ಇಂದಿನ ಲೋಕಸಭೆ ಕಲಾಪದಲ್ಲಿ ಬಜೆಟ್ ಪ್ರಮುಖ ಅಜೆಂಡಾಗಿದ್ದು ದೇಶದ ಆರ್ಥಿಕ ದಿಕ್ಕು ನಿರ್ಧಾರವಾಗಲಿದೆ ಬಜೆಟ್ ಲೈವ್ ಅಪ್ಡೇಟ್ ಮತ್ತು ಕಲಾಪದ ವಿವರಗಳನ್ನು ಇಲ್ಲಿ ಓದಿ.
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಅಂಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು (ಶನಿವಾರ) 2026- 27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಸದನವು ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿದ್ದು, ಈ ಬಜೆಟ್ ದೇಶದ ಆರ್ಥಿಕ ದಿಕ್ಕನ್ನು ನಿರ್ಧರಿಸುವ ಮಹತ್ವದ ದಾಖಲೆ ಎಂದು ಪರಿಗಣಿಸಲಾಗಿದೆ.
ಲೋಕಸಭೆಯ ವ್ಯವಹಾರಗಳು ಪಟ್ಟಿಯಂತೆ 2026- 27ರ ಭಾರತ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚದ ವಿವರಗಳನ್ನು ವಿತ್ತ ಸಚಿವೆ ಸೀತಾರಾಮನ್ ಮಂಡಿಸಲಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ಹಣಕಾಸು ನೀತಿ, ತೆರೆಗೆ ವ್ಯವಸ್ಥೆ, ಅಭಿವೃದ್ಧಿ ಯೋಜನೆಗಳು ಹಾಗೂ ವಿವಿಧ ವಲಯಗಳಿಗೆ ನೀಡುವ ಅನುದಾನಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.
ಇದಕ್ಕೆ ಜೊತೆಗೆ 2003ರ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಸೆಕ್ಷನ್ 3(1) ಅಡಿಯಲ್ಲಿ ಎರಡು ಪ್ರಮುಖ ಹೇಳಿಕೆ ಗಳನ್ನು ಹಣಕಾಸು ಸಚಿವೆ ಇಂದು ಸದನಕ್ಕೆ ಸಲ್ಲಿಸಲಿದ್ದಾರೆ. ಈ ಹೇಳಿಕೆಗಳಲ್ಲಿ ಮಧ್ಯಮ ಅವಧಿಯ ಹಣಕಾಸು ನೀತಿ ಹಾಗೂ ಹಣಕಾಸು ನೀತಿ ಕಾರ್ಯತಂತ್ರ ಹೇಳಿಕೆ ಮತ್ತು ಸ್ಥೂಲ್ ಆರ್ಥಿಕ ಚೌಕಟ್ಟಿನ ವಿವರಗಳು ಒಳಗೊಂಡಿರಲಿದೆ.
ಅದೇ ವೇಳೆ ಸೀತಾರಾಮನ್ ಅವರು 2026ರ ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಅನುಮತಿ ಕೋರಿ ನಂತರ ಔಪಚಾರಿಕವಾಗಿ ಮಸೂದೆಯನ್ನು ಸಹ ಮಂಡಿಸಲಿದ್ದಾರೆ, ವಿತ್ತ ಮಸೂದೆಯು ಸರ್ಕಾರದ ಹಣಕಾಸು ಪ್ರಸ್ತಾವನೆಗಳಿಗೆ ಕಾನೂನು ಬದ್ಧ ಮಾನ್ಯತೆಯನ್ನು ನೀಡುವ ಪ್ರಮುಖ ದಾಖಲೆಯಾಗಿದೆ.
ಗಮನಾರ್ಹವಾಗಿ, ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಒಂಬತ್ತನೇ ಕೇಂದ್ರ ಬಜೆಟ್ ಅನ್ನು ಮಂಡಳಿಸಿದ್ದು ಇಂದು ಭಾರತೀಯ ರಾಜಕೀಯ ಮತ್ತು ಆರ್ಥಿಕ ಇತಿಹಾಸದಲ್ಲಿ ಮಹತ್ವದ ಕ್ಷಣವೆಂದು ಪರಿಗಣಿಸಲಾಗಿದೆ ದೇಶದ ಜನತೆ ಉದ್ಯಮ ವಲಯ ಮತ್ತು ಹೂಡಿಕೆದಾರರು ಈ ಬಜೆಟ್ ಅನ್ನ ಮೇಲಿನ ಘೋಷಣೆಗಳಂತ ಕಣ್ಣಿಟ್ಟಿದ್ದಾರೆ.
ಗುರುವಾರ ಕೇಂದ್ರ ಸರ್ಕಾರವು 2025 - 26ರ ಹಣಕಾಸು ವರ್ಷದ ಭಾರತದ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ ಕೇಂದ್ರ ಬಜೆಟ್ಗೆ ಮುನ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದು ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕವಾಗಿ ದ್ದು ಭವಿಷ್ಯದ ಹಣಕಾಸು ಯೋಜನೆಗಳನ್ನು ರೂಪಿಸುವ ಮೊದಲು ದೇಶದ ಆರ್ಥಿಕ ಸ್ಥಿತಿಯನ್ನು ರಾಷ್ಟ್ರದ ಮುಂದೆ ಇಡುವ ಉದ್ದೇಶ ಹೊಂದಿದೆ.
ಭಾರತದ ಆರ್ಥಿಕ ಸಮೀಕ್ಷೆಯನ್ನು ದೇಶದ ಆರ್ಥಿಕತೆಯ, ಅಧಿಕೃತ ವಾರ್ಷಿಕ ವರದಿ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ. ಇಂದು ಹಿಂದಿನ ಹಣಕಾಸು ವರ್ಷದ ಆರ್ಥಿಕ ಕಾರ್ಯಕ್ಷಮತೆಯ ಸಮಗ್ರ ವಿಮರ್ಶೆಯನ್ನು ದತ್ತಾಂಶಗಳು ಅಂಕಿ ಅಂಶಗಳು ಮತ್ತು ವಿಶ್ಲೇಷಣೆಯೊಂದಿಗೆ ಒದಗಿಸುತ್ತದೆ ದೇಶದ ಬೆಳವಣಿಗೆ ದರ ಕೈಗಾರಿಕೆ ಕೃಷಿ ಸೇವಾ ವಲಯ ಹಣದುಬ್ಬರ, ಉದ್ಯೋಗ ಮತ್ತು ಜಾಗತಿಕ ಆರ್ಥಿಕ ಸ್ಥಿತಿಯ ಪರಿಣಾಮಗಳ ಕುರಿತು ಈ ಸಮೀಕ್ಷೆ ವಿವರವಾದ ಚಿತ್ರಣ ನೀಡುತ್ತದೆ.
ಬಜೆಟ್ಗೆ ಮುನ್ನ ಮಂಡಿಸಲಾದ ಈ ಆರ್ಥಿಕ ಸಮೀಕ್ಷೆ ಕೇಂದ್ರ ಸರ್ಕಾರದ ಮುಂದಿನ ಹಣಕಾಸು ನೀತಿ, ವೆಚ್ಚದ ಆದ್ಯತೆಗಳು ಹಾಗೂ ಸುಧಾರಣಾ ಕ್ರಮಗಳಿಗೆ ದಿಕ್ಕು ತೋರಿಸುವ ಮಹತ್ವದ ದಾಖಲೆ ಆಗಿದೆ ಉದ್ಯಮ ಒಳ್ಳೆಯ ಹೂಡಿಕೆದಾರರು ಮತ್ತು ನೀತಿ ರೂಪಕಾರರು ಈ ವರದಿಯನ್ನು ಆರ್ಥಿಕ ನಿರ್ಣಯಗಳ ಪ್ರಮುಖ ಆಧಾರವಾಗಿ ಪರಿಗಣಿಸುತ್ತಾರೆ.
ಬಜೆಟ್ vs ಆರ್ಥಿಕ ಸಮೀಕ್ಷೆ: ಕೇಂದ್ರ ಭಗಡಿಕೆ ಮುನ್ನ ಆರ್ಥಿಕ ಸಮೀಕ್ಷೆ ನಿರ್ಣಾಯಕ ಪಾತ್ರ ವಹಿಸುತ್ತದೆ ಭವಿಷ್ಯದ ಸರ್ಕಾರಿ ವೆಚ್ಚ ತೆರಿಗೆ ವ್ಯವಸ್ಥೆ ಮತ್ತು ನೀತಿ ಕ್ರಮಗಳ ಮೇಲೆ ಕೇಂದ್ರ ಬಜೆಟ್ ಕೇಂದ್ರೀಕರಿಸಿದರೆ ಹಿಂದಿನ ಆರ್ಥಿಕ ಕಾರ್ಯಕ್ಷಮತೆ ಮತ್ತು ಪ್ರವೃತ್ತಿಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಆರ್ಥಿಕ ಸಮೀಕ್ಷೆ ಈ ನಿರ್ಧಾರಗಳು ಏಕೆ ಅಗತ್ಯ ಎಂಬುದನ್ನು ವಿವರಿಸುತ್ತದೆ.
ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸುತ್ತದೆ. ಈ ವರದಿಯನ್ನು ಎರಡು ಭಾಗಗಳಲ್ಲಿ ಸಂಸತ್ತಿನ ಪ್ರಸ್ತುತ ಪಡಿಸಲಾಗುತ್ತದೆ ಪ್ರತಿ ಒಂದು ಭಾರ್ಗವೂ ದೇಶದ ಆರ್ಥಿಕತೆಯ ವಿಭಿನ್ನ ಅಂಶಗಳು ಬೆಳವಣಿಗೆ, ಹಣದುಬ್ಬರ ,ಉದ್ಯೋಗ, ವಲಯವಾರು, ಪ್ರದರ್ಶನ ಹಾಗೂ ಜಾಗತಿಕ ಆರ್ಥಿಕ ಪರಿಣಾಮಗಳ ಮೇಲೆ ಕೇಂದ್ರೀಕರಿಸುತ್ತದೆ.
ಆರ್ಥಿಕ ಸಮೀಕ್ಷೆ ಸರ್ಕಾರದ ಹಣಕಾಸು ನೀತಿಗಳಿಗೆ ಪೂರಕ ದಾಖಲೆ ಆಗಿದ್ದು ಬಜೆಟ್ ನಲ್ಲಿ ಘೋಷಿಸಲದ ಯೋಜನೆಗಳು ಮತ್ತು ವೆಚ್ಚದ ಆದ್ಯತೆಗಳಿಗೆ ಆಧಾರವನ್ನು ಒದಗಿಸುತ್ತದೆ. ಈ ಮೂಲಕ ಬಜೆಟ್ ಕೇಳ ಘೋಷಣೆಯ ದಾಖಲೆ ಆಗದೆ ದತ್ತಾಂಶ ಆಧಾರಿತ ನಿರ್ಧಾರಗಳ ಪ್ರತಿಬಿಂಬವಾಗುತ್ತದೆ.
ಇದಕ್ಕೂ ಜೊತೆಗೆ ಸಂಸತ್ತಿನ ಬಜೆಟ್ ಅಧಿವೇಶನವು ಏಪ್ರಿಲ್ 2ರಂದು ಅಂತ್ಯಗೊಳ್ಳಲಿದೆ . ಫೆಬ್ರವರಿ 13ರಂದು ಉಭಯ ಸದನಗಳನ್ನು ಮುಂದೂಡಲಾಗುತ್ತಿದ್ದು ಮಾರ್ಚ್ 9 ರಂದು ಮತ್ತೆ ಸಭೆ ಸೇರುವುದಾಗಿದೆ ಈ ಅವಧಿಯಲ್ಲಿ ಸ್ಥಾಯಿ ಸಮಿತಿ ಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಶೀಲಿಸುವ ಅವಕಾಶವನ್ನು ಪಡೆಯಲಿವೆ.
ಇನ್ನಷ್ಟು ಓದಿರಿ:
ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.