<?= $pageTitle ?>
Logo
ಮುಖಪುಟ ಓದುವುದು ಕೇಳು
Health

ಹಣ್ಣು ತರಕಾರಿ ತಿನ್ನುವ ಮೊದಲು ಯೋಚಿಸಿ!ವೈದ್ಯರ ನೀಡಿದ ರಾಸಾಯನಿಕ ಲಿಸ್ಟ್

ಹಣ್ಣು ತರಕಾರಿ ತಿನ್ನುವ ಮೊದಲು ಯೋಚಿಸಿ!ವೈದ್ಯರ ನೀಡಿದ ರಾಸಾಯನಿಕ ಲಿಸ್ಟ್
Summary: Fresh fruits and vegetables are essential for health, but there are concerns that some foods may contain high levels of pesticide residues.

belagavi news :

ಇಂದಿನ ಜೀವನದಲ್ಲಿ ಉತ್ತಮ ಆರೋಗ್ಯ ಕ್ಕಿಂತ ದೊಡ್ಡ ಸಂಪತ್ತು ಮತ್ತೊಂದು ಇಲ್ಲ.ಅದಕ್ಕಾಗಿಯೇ ಹಿರಿಯರು "ಆರೋಗ್ಯವೇ ಮಹಾಭಾಗ್ಯ" ಎಂದು ಹೇಳುತ್ತಾರೆ.ಆರೋಗ್ಯವಾಗಿದ್ದಾಗ ಮಾತ್ರ ವ್ಯಕ್ತಿ ದುಡಿಯಲು,ಸಂಪಾದಿಸಲು ಮತ್ತು ಜೀವನದ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.

ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ.ನಾವು ಸೇವಿಸುವ ಆಹಾರದಲ್ಲಿ ಜಾಗರೂಕತೆ ಇಲ್ಲದಿದ್ದರೆ ವಿವಿಧ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು.ಇದೇ ಕಾರಣಕ್ಕೆ ತಜ್ಞರು ದೈನಂದಿನ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಕಡ್ಡಾಯವಾಗಿ ಸೇವಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಸುರಕ್ಷತೆಯ ಕುರಿತು ಹಲವು ವಿಷಯಗಳು ಉದ್ಭವಿಸಿದೆ.ಮಾರುಕಟ್ಟೆಯಲ್ಲಿ ಲಭ್ಯವಾಗುವ ಕೆಲವು ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಅವಶೇಷಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಈ ರಾಸಾಯನಿಕಗಳು ದೀರ್ಘಾವಧಿಯಲ್ಲಿ ಮಾನವ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ.

ಇದರರ್ಥ ಹಣ್ಣುಗಳು ಮತ್ತು ತರಕಾರಿಗಳನ್ನು ಸಂಪೂರ್ಣವಾಗಿ ತಿನ್ನುವುದನ್ನು ನಿಲ್ಲಿಸಬೇಕು ಎಂಬುದಲ್ಲ.ಬದಲಾಗಿ,ಯಾವ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚು ರಾಸಾಯನಿಕ ಅವಶೇಷಗಳು ಇರಬಹುದು ಎಂಬ ಅರಿವು ಹೊಂದಿರುವುದು ಮುಖ್ಯ.ಸರಿಯಾದ ರೀತಿಯಲ್ಲಿ ತೊಳೆಯುವುದು,ತಿಪ್ಪೇ ತೆಗೆಯುವುದು ಮತ್ತು ವಿಶ್ವಾಸಾರ್ಹ ಮೂಲಗಳಿಂದ ಖರೀದಿಸುವ ಮೂಲಕ ಈ ಅಪಾಯವನ್ನು ಕೆಲ ಮಟ್ಟಿಗೆ ಕಡಿಮೆ ಮಾಡಬಹುದು.

ಆರೋಗ್ಯ ತಜ್ಞೆ ಡಾ. ವರ್ತಿಕಾ ವಿಶ್ವಾನಿ ಅವರು ಉಲ್ಲೇಖಿಸಿರುವ Environmental working Group (EWG) ವರದಿ ಪ್ರಕಾರ,ಕೆಲವು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕರ ರಾಸಾಯನಿಕ ಅವಶೇಷಗಳು ಪತ್ತೆಯಾಗಿವೆ.

ಲಾಭ ರಹಿತ ಸಂಸ್ಥೆಗಳಾಗಿರುವ EWG ಪ್ರತಿ ವರ್ಷ ಶಾಪರ್ಸ್ ಗೈಡ್" ಎಂಬ ವಿಶೇಷ ಮಾರ್ಗದರ್ಶಿಯನ್ನು ಬಿಡುಗಡೆ ಮಾಡುತ್ತದೆ.ಅಮೇರಿಕಾದ ಕೃಷಿ ಇಲಾಖೆ ಪರೀಕ್ಷಾ ದತ್ತಾಂಶದ ಆಧಾರದ ಮೇಲೆ ಸಿದ್ಧವಾಗುವ ಈ ವರದಿ,ಯಾವ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೆಚ್ಚು ಕೀಟನಾಶಕ ಉಳಿಕೆಗಳಿವೆ ಹಾಗೂ ಯಾವ ಆಹಾರಗಳಲ್ಲಿ ಕಡಿಮೆ ಪ್ರಮಾಣದ ರಾಸಾಯನಿಕಗಳಿವೆ ಎಂಬುದನ್ನು ವಿವರಿಸುತ್ತದೆ.

ಈ ಮಾರ್ಗದರ್ಶಿಯ ಮುಖ್ಯ ಉದ್ದೇಶ ಜನರಲ್ಲಿ ಭಯ ಹುಟ್ಟಿಸುವುದಲ್ಲ.ಬದಲಾಗಿ,ಗ್ರಾಹಕರು ಯಾವ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ತಜ್ಞರ ಪ್ರಕಾರ, ಈ ರೀತಿಯ ಮಾಹಿತಿಯನ್ನು ತಿಳಿದುಕೊಂಡರೆ ಜನರು ಹೆಚ್ಚು ತಿಳುವಳಿಕೆಯುಳ್ಳ ಆಹಾರ ಆಯ್ಕೆಗಳನ್ನ ಮಾಡಬಹುದು .ಜೊತೆಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯುವುದು,ಕೆಲವು ಸಂದರ್ಭಗಳಲ್ಲಿ ಸಿಪ್ಪೆ ತೆಗೆಯುವುದು ಹಾಗೂ ವಿಶ್ವಾಸನ ಮೂಲಗಳಿಂದ ಖರೀದಿಸುವುದು ಕೀಟನಾಶಕಗಳ ಪರಿಣಾಮವನ್ನು ಕಡಿಮೆ ಮಾಡಲು ಸಹಾಯವಾಗಬಹುದು.

ಹೆಚ್ಚಿನ ರಾಸಾಯನಿಕ ಹಣ್ಣುಗಳು ಮತ್ತು ತರಕಾರಿಗಳಿವು: ಪಾಲಕ್, ಸ್ಟ್ರಾಬೆರಿ, ಕೇಲ್, ದ್ರಾಕ್ಷಿ, ಪೀಚ್, ಚೆರ್ರಿ,ನೆಕ್ಟರಿನ್, ಸೇಬು, ಬೆರಿ ಹಣ್ಣುಗಳು, ಬ್ಲ್ಯಾಕ್ ಬೇರಿಗಳು, ಆಲೂಗಡ್ಡೆ ಮತ್ತು ಪೇರಲೆ. ಹಣ್ಣುಗಳು ಹಾಗೂ ತರಕಾರಿಗಳು 23 ವಿಭಿನ್ನ ಕೀಟನಾಶಕ ವಿಶೇಷಗಳನ್ನು ಹೊಂದಿವೆ ಎಂದು ವರದಿ ತಿಳಿಸುತ್ತದೆ.

Environmental working Group (EWG ) ವರದಿ ಪ್ರಕಾರ,ಕೆಲವು ಹಣ್ಣುಗಳನ್ನು ಅಥವಾ ತರಕಾರಿಗಳಲ್ಲಿ ಕೀಟನಾಶಕ ಅವಶೇಷಗಳ ಪ್ರಮಾಣ ತುಂಬಾ ಕಡಿಮೆ ಇರುತ್ತವೆ.ಅವುಗಳಲ್ಲಿ " clean Fifteen"ಎಂದು ಕರೆಯಲಾಗುತ್ತದೆ.ಅಂದರೆ,ಈ 15 ಹಣ್ಣುಗಳು ಮತ್ತು ತರಕಾರಿಗಳು ಇತರ ಆಹಾರಗಳಿಗಿಂತ ಕಡಿಮೆ ಮಟ್ಟದ ರಾಸಾಯನಿಕ ಆವೇಶಗಳನ್ನು ಹೊಂದಿದ್ದು,ದೇವನಿಗೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಈ ಪಟ್ಟಿಯಲ್ಲಿ ಅನಾನಸ್, ಸಿಹಿಕಾನ್, ಆವಕಾಡೊ,ಪಪ್ಪಾಯ,ಈರುಳ್ಳಿ, ಹಸಿ ಬಟಾಣಿ, ಶತಾವರಿ, ಎಲೆಕೋಸು, ಕಲ್ಲಂಗಡಿ, ಹೂಕೋಸು, ಬಾಳೆಹಣ್ಣು ಹಾಗೂ ಕಿವಿ ಹಣ್ಣುಗಳು ಸೇರಿವೆ.

ತಜ್ಞರ ಪ್ರಕಾರ,ಈ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತ ಆಹಾರದಲ್ಲಿ ಸೇವಿಸಿಕೊಳ್ಳುವುದರಿಂದ ಪೌಷ್ಟಿಕಾಂಶಗಳ ಲಾಭ ಪಡೆಯುವುದರ ಜೊತೆಗೆ ಕೀಟನಾಶಕಗಳ ಅಪಾಯವನ್ನು ಕೂಡ ಕಡಿಮೆ ಮಾಡಬಹುದು. ಅದಾಗ್ಯೂ,ಯಾವುದೇ ಆಹಾರವನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯುವುದನ್ನು ಆರೋಗ್ಯದ ದೃಷ್ಟಿಯಿಂದ ಸದಾ ಉತ್ತಮ ಅಭ್ಯಾಸವಾಗಿದೆ.

ಈ ವಿಧಾನದಿಂದ ನಂತರ,ಹರಿಯುವ ಟ್ಯಾಪ್ ನೀರಿನ ಅಡಿಯಲ್ಲಿ ಇವುಗಳನ್ನು ಚೆನ್ನಾಗಿ ತೊಳೆಯಿರಿ.ಈ ಹಂತಗಳನ್ನು ಪೂರ್ಣಗೊಳಿಸಿದ ನಂತರವೇ ಅವುಗಳನ್ನು ಸೇವಿಸಬೇಕು.ಮತ್ತೊಂದು ವಿಧಾನವೆಂದರೆ,ಕಾಲು ಕಪ್ ಬಿಳಿ ವೆನಿಗರ್ ಅನ್ನು ನಾವು ಕಪ್ ನೀರಿನಲ್ಲಿ ಬೆರೆಸಿ ಹಣ್ಣುಗಳು ಮತ್ತು ತರಕಾರಿಗಳನ್ನು ನೆನೆಸಿ ಬಳಿಕ ಸ್ವಚ್ಛಗೊಳಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಈ ವರದಿಯಲ್ಲಿ ನೀಡಿರುವ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ.ಇಲ್ಲಿ ಉಲ್ಲೇಖಿಸಿರುವ ವಿವರಗಳನ್ನು ವೈಜ್ಞಾನಿಕ ಅಧ್ಯಯನಗಳು,ಸಂಶೋಧನೆಗಳು ಹಾಗೂ ಆಹಾರ ತಜ್ಞರ ಲಭ್ಯ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ.

ಆದರೆ ಪ್ರತಿಯೊಬ್ಬರ ವೈದ್ಯಕೀಯ ಸ್ಥಿತಿ,ಆರೋಗ್ಯ ಸ್ಥಿತಿಗಳು ಮತ್ತು ಆಹಾರ ಅವಶ್ಯಕತೆಗಳು ವಿಭಿನ್ನವಾಗಿರುತ್ತವೆ.ಆದ್ದರಿಂದ ಯಾವುದೇ ಹೊಸ ಆರೋಗ್ಯ ವಿಧಾನ,ಆಹಾರ ಕ್ರಮ ಅಥವಾ ಚಿಕಿತ್ಸೆ ಅನುಭವಿಸುವ ಮೊದಲು ಪರಿಣಿತ ವೈದ್ಯರು ಅಥವಾ ಅರ್ಹ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಸ್ವಯಂ ನಿರ್ಧಾರಕ್ಕಿಂತ ತಜ್ಞರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳುವುದು ಸದಾ ಸುರಕ್ಷಿತವಾಗಿದೆ.

Also Read:

ಮಂಗಳ ಗ್ರಹದಲ್ಲಿ ಹೊಸ ಅಚ್ಚರಿ: ಒಂದರ ಮೇಲೊಂದು ಇಟ್ಟಂತೆ ಕಾಣುವ ವಿಚಿತ್ರ ಬಂಡೆಗಳು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online