ಏಳು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಮೇರಿಕಾ-ವೆನೆಜುವೆಲಾ ರಾಜ ತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪನೆಗೊಂಡಿವೆ. ಅಮೆರಿಕದ ಚಾರ್ಜ್ ಡಿ’ಅಫೇರ್ಸ್ ಲಾರಾ ಡೋಗು ಶನಿವಾರ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ಗೆ ಆಗಮಿಸಿ, ಅಮೇರಿಕಾದ ರಾಜ್ಯತಾಂತ್ರಿಕ ಕಾರ್ಯಾಚರಣೆಯನ್ನು ಪುನರ್ ಆರಂಭಿಸಿದ್ದಾರೆ. ಈ ನಿರ್ಧಾರವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಕೊನೆಗೊಂಡ ಸುಮಾರು ಒಂದು ತಿಂಗಳ ನಂತರ ಕ್ರಮವಾಗಿದೆ.
ಟ್ರಂಪ್ ಆಡಳಿತದಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ವಿವಿಧ ನಿಷೇಧ ಮತ್ತು ರಾಜತಾಂತ್ರಿಕ ಒತ್ತಡಗಳು ಜಾರಿಯಾಗಿದ್ದವು. ಈ ನಡುವಿನ ಎರಡು ರಾಷ್ಟ್ರಗಳ ಮಧ್ಯೆ ರಾಜ ತಾಂತ್ರಿಕ ಸಂಪರ್ಕ ಸ್ಥಗಿತಗೊಂಡಿತ್ತು. ವೆನೆಜುವೆಲಾ ಯುಎಸ್ ರಾಯಭಾರ ಕಚೇರಿಯು ಅಧಿಕೃತ ಅಧಿಕೃತ X ಖಾತೆಯಲ್ಲಿ ಡೋಗು ತಮ್ಮ ಮೊದಲ ಪೋಸ್ಟ್ ನಲ್ಲಿ "ನನ್ನ ತಂಡ ಮತ್ತು ನಾನು ಕೆಲಸ ಮಾಡಲು ಸಿದ್ದರಿದ್ದೇವೆ" ಎಂದು ತಿಳಿಸಿದ್ದಾರೆ.
ಅಮೆರಿಕ ರಾಯಭಾರ ಕಚೇರಿಯ ಡೋಗು ಕ್ಯಾರಕಾಸ್ಗೆ ಮೈಕ್ವೆಟಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣಗಳ ಚಿತ್ರಣಗಳು ಪೋಸ್ಟ್ ಮಾಡಿದ್ದು, ಈ ಸಂಬಂಧ ಮರುಸ್ಥಾಪನೆಯ ಪ್ರಗತಿಯನ್ನು ಸ್ಪಷ್ಟಪಡಿಸಿದೆ. ಪರಿಣಾಮವೆಂದು ವ್ಯಾಪಾರ ಹೂಡಿಕೆ ಮತ್ತು ದಕ್ಷಿಣ ಅಮೆರಿಕದ ರಾಜಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ನೀರಿಕ್ಷೆ ಇದೆ. ಅಮೆರಿಕ ಮತ್ತು ವೆನೆಜುವೆಲಾದ ನಡುವಿನ ಸಂವಾದದ ಪುನರಾರಂಭವು ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರಗಳ ನಡುವೆ ಸಮಗ್ರ ಸಹಕಾರಕ್ಕೆ ದಾರಿ ತೋರುವಂತಿದೆ.
ವೆನೆಜುವೆಲಾದ ವಿದೇಶಾಂಗ ಸಚಿವ ಯವಾನ್ ಗಿಲ್ ಅಮೆರಿಕ ಚಾರ್ಜ್ ಡಿ’ಅಫೇರ್ಸ್ ಲಾರಾ ಡೋಗು ಅವರ ಆಗಮನವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೆಲಿಗ್ರಾಂ ಮೂಲಕ ಪೋಸ್ಟ್ ಮಾಡಿದ ಸಂದೇಶದಲ್ಲಿ ಡೋಗು ಅವರ ಆಗಮನವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೆಲಿಗ್ರಾಂ ಮೂಲಕ ಪೋಸ್ಟ್ ಮಾಡಿದ ಸಂದೇಶದಲ್ಲಿ ಡೋಗು ಅವರ ಆಗಮನವು ಪರಸ್ಪರ ಗೌರವ ಮತ್ತು ಅಂತರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಮತ್ತು ಪರಿಹಾರಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಡೋಗು ಹಿಂದೆ ನಿಕರಾಗುವಾ ಮತ್ತು ಹೊಂಡುರಸ್ ದೇಶಗಳಲ್ಲಿ ರಾಯಭಾರಿಯಾಗಿದ್ದ ಅನುಭವ ಹೊಂದಿದ್ದಾರೆ. ಅವರು ವೆನೆಜುವೆಲಕ್ಕೆ ಆಗಮಿಸುತ್ತಿದ್ದು, ದೇಶದ ಮಧ್ಯಂತರ ಅಧ್ಯಕ್ಷ ಡೆಲ್ಸಿ ಡೆಲ್ಸಿ ರೊಡ್ರಿಗಸ್ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬಹುದಾಗಿ ಘೋಷಿಸಿದ ಒಂದು ದಿನದ ನಂತರ ಆಗಿದೆ. ರಾಜಕೀಯ ಕೈದಿಗಳ ಬಿಡುಗಡೆಯ ವೆನೆಜುವೆಲಾದ ಪ್ರಮುಖ ಪಕ್ಷಗಳ ಬೇಡಿಕೆಗಳಲ್ಲಿ ಒಂದಾಗಿದ್ದು, ಡೋಗು ಅವರ ಆಗಮನವು ರಾಜಕೀಯ ಸಂವಾದ ಮತ್ತು ಸೌಹಾರ್ದತೆಯನ್ನು ಬೆಂಬಲಿಸುವ ಪ್ರಯತ್ನವಾಗಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ವೆನೆಜುವೆಲಾ ಮತ್ತು ಯುನೈಟೆಡ್ ಸ್ಟೇಟ್ಸ್ ಫೆಬ್ರುವರಿ 2019 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರೆದು ಕೊಂಡಿದ್ದರೂ ಆ ಸಮಯದಲ್ಲಿ ದೇಶದ ಮಧ್ಯಂತರ ಅಧ್ಯಕ್ಷರಾಗಿ ಜುವಾನ್ ಗೈಡೋ ಘೋಷಿಸಿದರಾದ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾರ್ವಜನಿಕ ಬೆಂಬಲದಿಂದ ಉದ್ದಭವಿಸಿದ ರಾಜಕೀಯ ಬಿಕ್ಕಟ್ಟಿನಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟ ಈ ಪರಿಣಾಮವಾಗಿ, ಪರಸ್ಪರ ರಾಯಭಾರ ಕಚೇರಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದರು. ವೆನೆಜುವೆಲಾದ ಅತ್ಯಂತ ಶಕ್ತಿಶಾಲಿ ರಾಜಕೀಯ ರಾಜಕಾರಣಿಗಳಲ್ಲಿ ಒಬ್ಬರಾದ ಮತ್ತು ಮಡುರೊ ನಿಷ್ಠಾವಂತ ಹಾಗೂ ಗೃಹ ಸಚಿವ ಡಿಯೊಸ್ಡಾಡೊ ಕ್ಯಾಬೆಲ್ಲೊ,
ಜನವರಿ 26 ರ ಆರಂಭದಲ್ಲಿ ಅಮೆರಿಕಾದ ರಾಯಭಾರ ಕಚೇರಿ ಪುನಂ ಆರಂಭವಾಗಿರುವುದರಿಂದ, ಅಮೆರಿಕದಲ್ಲಿನ ಜೈಲಿನಲ್ಲಿರುವ ಪದಚ್ಯುತ ಅಧ್ಯಕ್ಷರ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ವೆನೆಜುವೆಲಾ ಸರ್ಕಾರಕ್ಕೆ ದಾರಿ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜತಾಂತ್ರಿಕ ಸಂಬಂಧಗಳಲ್ಲಿ ಮಹತ್ವದ ಕ್ರಮ ಎಂದು ವಿಶ್ಲೇಷಕರು ಕರೆದಿದ್ದಾರೆ. ಅಮೆರಿಕ-ವೆನೆಜುವೆಲಾ ನಡುವಿನ ಸಂವಾದ ವ್ಯಾಪಾರ ಹೂಡಿಕೆ ಮತ್ತು ರಾಜಕೀಯ ಸ್ಥಿರತೆಯ ಮೇಲೆ ಇದರ ಪರಿಣಾಮಗಳು ಬಹುಮಟ್ಟಿಗೆ ಎದುರಾಗಬಹುದು ಎಂಬ ನಿರೀಕ್ಷೆ ಇದೆ.
ಇನ್ನಷ್ಟು ಓದಿರಿ:
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ