<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ

ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ
Summary: ಕೇಂದ್ರ ಬಜೆಟ್ ನಲ್ಲಿ ಸಾಂಪ್ರದಾಯಿಕ ವಿಷಯದ ಮತ್ತು ಆಯುರ್ವೇದ ಸಂಶೋಧನೆಗೆ ಮಹತ್ವದ ಉದ್ದೇಶನ ದೊರೆತಿದೆ. ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
belagavi news:
ಈ ನಿರ್ಧಾರವು ಆಯುಷ್ ಕ್ಷೇತ್ರದ ವಿಕಾಸ, ಪರಂಪರ, ವೈದಿಕೀಯ ಪದ್ಧತಿಗಳ ಸಂಶೋಧನೆ, ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಉದ್ಯೋಗವಕಾಶಗಳ ಸೃಷ್ಟಿಗೆ ನೆರವಾಗಲಿದೆ. ಆಯುರ್ವೇದ ಶಿಕ್ಷಣ ಸಂಶೋಧನೆ ಮತ್ತು ನವೀನ ಚಿಕಿತ್ಸಾ ಪದ್ಧತಿಗಳಿಗೆ ಹೊಸ ದಿಕ್ಕು ನೀಡುವ ಈ ಬಜೆಟ್ ಘೋಷಣೆಯ ಸಂಪೂರ್ಣ ವಿವರಗಳು ಇಲ್ಲಿದೆ.

ಸಾಂಪ್ರದಾಯಿಕ ಔಷಧ ಹಾಗೂ ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಇಂದಿನ ಕೇಂದ್ರ ಬಜೆಟ್ ನಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಸ್ತಾಪ ಮಾಡಿದೆ. ಈ ಮಹತ್ವದ ನಿರ್ಧಾರದಿಂದ ಆಯುಷ್ ಕ್ಷೇತ್ರದಲ್ಲಿ ಸಂಶೋಧನೆ ಶಿಕ್ಷಣ ನವೀನ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗಳು ಗುಣಮಟ್ಟ ಹೆಚ್ಚುವ ನಿರೀಕ್ಷೆಯಿದೆ ಜೊತೆಗೆ ದೇಶದಾದ್ಯಂತ ಉದ್ಯೋಗವಕಾಶಗಳ ಸೃಷ್ಟಿ ಮತ್ತು ಪರಂಪರ ವೈದ್ಯಕೀಯ ಪದ್ಧತಿಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರಕುವ ಸಾಧ್ಯತೆ ಇದೆ.

ನವದೆಹಲಿ: ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮೂರು ಹೊಸ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನ ಕೇಂದ್ರ ಬಜೆಟನಲ್ಲಿ ಘೋಷಿಸಿದರು. 2026 ರ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸುವ ವೇಳೆ COViD-19 ಗಳನ್ನು ಸಾಂಕ್ರಾಮಿಕದ ನಂತರ ಆಯುರ್ವೇದವು ದೇಶಿಯ ಹಾಗೂ ಜಾಗತಿಕ ಮಠದಲ್ಲಿ ಹೆಚ್ಚಿನ ಸ್ವೀಕಾರ ಮತ್ತು ಮನ್ನಣೆ ಪಡೆದಿದೆ ಎಂದು ಅವರು ಹೇಳಿದರು.

ಗಿಡಮೂಲಿಕೆಗಳನ್ನು ಬೆಳೆಯುವ ರೈತರು ಹಾಗೂ ಆಯುರ್ವೇದ ಉತ್ಪನ್ನಗಳನ್ನು ಸಂಸ್ಕರಿಸುವ ಯುವಕರಿಗೆ ಗುಣಮಟ್ಟದ ಆಯುರ್ವೇದ ಔಷಧಿಗಳು ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಸಚಿವೆ ಉಲ್ಲೇಖಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಆಯುರ್ವೇದ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಈ ಹಿನ್ನಲೆ, ಮೂರು ವರ್ಷ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆಯೊಂದಿಗೆ ಆಯುಷ್ ಔಷಧಾಲಯಗಳು ಹಾಗೂ ಔಷಧ ಪರೀಕ್ಷೆ ಪ್ರಯೋಗಾಲಯಗಳನ್ನು ಪ್ರಮಾಣಿಕರಣ ಪರಿಸರ ವ್ಯವಸ್ಥೆಗೆ ತಕ್ಕಂತೆ ಉನ್ನತ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವುದಾಗಿ ಮತ್ತು ಹೆಚ್ಚು ನುರಿತ ತಾಂತ್ರಿಕ ಹಾಗು ವೈದಿಕೀಯ ಸಿಬ್ಬಂದಿಯನ್ನು ಲಭ್ಯವಾಗುವಂತೆ ಮಾಡುವ ಪ್ರಸ್ತಾಪವನ್ನು ಸಚಿವ ಸೀತಾರಾಮನ್ ಮುಂದಿಟ್ಟರು. ಈ ಕ್ರಮಗಳಿಂದ ಆಯುರ್ವೇದ ಸಂಶೋಧನೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸುವ ನಿರೀಕ್ಷೆ ಇದೆ.

ಪ್ರಪಂಚದ ಹಲವಾರು ದೇಶಗಳಲ್ಲಿ ಈಗಾಗಲೇ ಗೌರವ ಪಡೆದಿರುವ ಪ್ರಾಚೀನ ಭಾರತೀಯ ಯೋಗವನ್ನು ಪ್ರಧಾನಮಂತ್ರಿಯವರ ವಿಶ್ವಸಂಸ್ಥೆ ಮಟ್ಟಕ್ಕೆ ಕೊಂಡೊಯ್ದ ಪರಿಣಾಮ ಜಾಗತಿಕ ಮಾನ್ಯತೆ ಲಭ್ಯಸಿತು. ಇದೇ ರೀತಿಯಲ್ಲಿ ಕೋವಿಡ್ - 19 ನಂತರ ಆಯುರ್ವೇದವು ವಿಶ್ವದಾದ್ಯಂತ ಹೆಚ್ಚಿನ ಸ್ವೀಕಾರ ಮತ್ತು ಮನ್ನಣೆಯನ್ನು ಗಳಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಾಂಪ್ರದಾಯಿಕ ಕ್ಷೇತ್ರದಲ್ಲಿ ಪುರಾವೆ ಆಧಾರಿತ ಸಂಶೋಧನೆ ತರಬೇತಿ ಹಾಗೂ ಸಾರ್ವಜನಿಕ ಜಾಗೃತಿಯನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ ಗುಜರಾತನ್ ಜಾಮ್ ನಗರದಲ್ಲಿ ಸ್ಥಾಪಿತವಾಗಿರುವ WHO ಜಾಗತಿಕ ಸಾಂಪ್ರದಾಯಿಕ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಸರ್ಕಾರ ಮುಂದಾಗ ಬೇಕು ಎಂದು ವಿತ್ತ ಸಚಿವೆ ಕರೆ ನೀಡಿದರು.

ಈ ಕ್ರಮದಿಂದ ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ವಿಶ್ವಾಸ ಗುಣಮಟ್ಟದ ಮಾನದಂಡಗಳು ಹಾಗೂ ಸಂಶೋಧನಾ ಅವಕಾಶಗಳು ಹೆಚ್ಚಾಗಲಿ ಇದು ಭಾರತವು ಸಾಂಪ್ರದಾಯಿಕ ಕ್ಷೇತ್ರದಲ್ಲಿ ಜಾಗತಿಕವನ್ನು ಸಾಧಿಸುವ ನಿರೀಕ್ಷೆ ಇದೆ.

ಇನ್ನಷ್ಟು ಓದಿರಿ:
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online