ಬೆಳಗಾವಿ ಪೊಲೀಸರು ಗೌಪ್ಯ ದಾಳಿ : ಬೆಳಗಾವಿ ಪೊಲೀಸ್ ಠಾಣೆ ಪೊಲೀಸರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂ ಉತ್ಪನ್ನಗಳಿಂದ ಬರುವ ತೆರಿಗೆ ವಂಚಿಸಿ ಕ್ರಮವಾಗಿ, ಅಕ್ರಮವಾಗಿ ಡೀಸೆಲ್ ಸಾಗಿಸುತ್ತಿದ್ದ ಕದೀಮರ ಗ್ಯಾಂಗ್ ಮೇಲೆ ಕಠಿಣ ಕ್ರಮ ಕೈಗೊಂಡು ಯಶಸ್ವಿಯಾಗಿದ್ದಾರೆ.ಈಗಾಗಲೇ ಗಲ್ಫ್ ದೇಶಗಳಿಂದ ಚಿನ್ನದ ಸಾಗಾಣಿಕೆ ಸಂಬಂಧಿತ ಪ್ರಕರಣಗಳು ವರದಿ ಬರುತ್ತಿದ್ದಂತೆ. ಈಗ ಅದೇ ಮಾದರಿಯಲ್ಲಿಯ ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ ಡಿಸೈಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳ ಸಾಗಾಣಿಕೆ ಮಾಡುವ ಜಾಲ ಬೆಳಗಾವಿಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಪೊಲೀಸರು ನಡೆಸಿದ ಗೌಪ್ಯ ದಾಳಿ ಮತ್ತು ತನಿಖೆ ಈ ಅಕ್ರಮ ಜಾಲವನ್ನು ಮುರಿದು ಸರ್ಕಾರಕ್ಕೆ ಹಾನಿ ತರುವ ಯೋಜನೆಗಳನ್ನು ತಪ್ಪಿಸಿದ್ದಾರೆ, ಪೊಲೀಸರು ಇನ್ನೂ ಸಂಬಂಧಿತ ಆರೋಪಿಗಳನ್ನು ಮುಂದಿನ ತನಿಖೆಗಾಗಿ ವಿಚಾರಿಸುತ್ತಿದ್ದಾರೆ.
ಮುಂಬೈ–ಬೆಂಗಳೂರಿಗೆ ಡೀಸೆಲ್ ಕಳ್ಳಸಾಗಣೆ ತಡೆದ ಬೆಳಗಾವಿ ಪೊಲೀಸರು : ಜನವರಿ 16ರಂದು ಖಚಿತ ಮಾಹಿತಿ ಮೇರೆಗೆ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರು ಕಡೆಗೆ ಡಿಸೈಲ್ ಆಗಿಸುತಿದ್ದ ಟ್ಯಾಂಕರ್ ಮೇಲೆ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತ್ರತ್ವದ ಬೆಳಗಾವಿ ಪೊಲೀಸ್ ತಂಡ ಮಿಂಚಿನ ಕಾರ್ಯಚರಣೆ ನಡೆಸಿ ಪರೀಕ್ಷೆ ಮಾಡಿದಾಗ ಯಾವುದೇ ದಾಖಲೆ ಇಲ್ಲದೆ ಸಾಗುತ್ತಿದ್ದ ಡಿಸೈಲ್ ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ಅಕ್ರಮ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ಮತ್ತು ತೆರಿಗೆ ವಂಚನೆ ವಿರುದ್ಧದ ಕ್ರಮದ ಒಂದು ಪ್ರಮುಖ ಸಾಧನೆ ಎಂದು ಪೊಲೀಸರು ಹೇಳಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ: ಡೀಸೆಲ್ ಕಳ್ಳಗಣಿಕೆಯಲ್ಲಿ ಆರೋಪಿಗಳ ಬಂಧನ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾಧ್ಯಮದವರಿಗೆ ಮಾಹಿತಿ ನೀಡಿ ತಿಳಿಸಿದ್ದಾರೆ, ಮೋಟಾರ್ ಸ್ಪಿರಿಟ್ ಆ್ಯಂಡ್ ಹೈ ಸ್ಪೀಡ್ ಡೀಸೆಲ್ ರೆಗುಲೇಶನ್ ಸಪ್ಲೈ ಆ್ಯಂಡ್ ಡಿಸ್ಟ್ರಿಬ್ಯೂಷನ್ ಆ್ಯಂಡ್ ಪ್ರಿವೆನ್ಷನ್ ಆಫ್ ಮಾಲ್ ಪ್ರಾಕ್ಟಿಸಸ್ ಆರ್ಡರ್ 2025 ಕಾಯ್ದೆ ಅಡಿ ಪ್ರಕರಣ ದಾಖಲೆ.ಟ್ಯಾಂಕರ ಚಾಲಕ ರಾಜಸ್ಥಾನ ಮೂಲದ ದಿನೇಶ್ ಕುಮಾರ್ ಭಾಗಿರತ್ ರಾಮ ಜಿ ಅವರನ್ನು ಬಂಧಿಸಲಾಗಿದೆ ಮತ್ತು ಈ ಪ್ರಕರಣದಲ್ಲಿ ಅವರ ಜೊತೆಗೆ ರಾಜಸ್ಥಾನ ಮೂಲದ ಸುಖದೇವ್ ಬಿಯಾರಾಮ್, ಮಹಾರಾಷ್ಟ್ರ ಮೂಲದ ಇಸ್ತಿಯಾಕ್ ಶೇಖ್, ಕುಂದನ್ ಮಾತ್ರೆ, ಸಮೀರ ಪರಾಂಗೆ, ಪ್ರವೀಣ ಔತಿ ಹಾಗೂ ತುಮಕೂರು ಮೂಲದ ಅರಿಹಂತ ಎಂಬಾತ ಈ ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲಾಗುವುದು ಮತ್ತು ತನಿಖೆ ಮುಂದುವರೆಯುತ್ತಿದ್ದು, ಅಕ್ರಮ ಡಿಸೈನ್ ಸಾಗಣೆ ಹಾಗೂ ಪೆಟ್ರೋಲಿಯಂ ಉತ್ಪನ್ನ ಕಳ್ಳಸಾಗಣೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ಗಲ್ಫ್ ದೇಶಗಳಿಂದ ಅಕ್ರಮ ಪೆಟ್ರೋಲಿಯಂ ಉತ್ಪನ್ನ ಕರ್ನಾಟಕಕ್ಕೆ : ಗಲ್ಫ್ ರಾಷ್ಟ್ರಗಳಿಂದ ಪೆಟ್ರೋಲಿಯಂ ಉತ್ಪನ್ನ ಆಮದು ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಲಾಗುತ್ತಿವೆ. ಈ ಅಕ್ರಮವಾಗಿ ತರಲಾಗುತ್ತಿರುವ ಡಿಸೈಲ್ ಕಾಳಸಂತೆಯಲ್ಲಿ ಅರ್ಧ ದರದಲ್ಲಿ ಮಾರಾಟವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.ಡಿಸೇಲ್ ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದರು ಎಂಬುದು ತನಿಕೆಯಿಂದ ಮಾತ್ರ ತಿಳಿಯಲಿದೆ. ಇದೇ ರೀತಿಯ ಪ್ರಕರಣ ಮಹಾರಾಷ್ಟ್ರದಲ್ಲೂ ದಾಖಲೆಯಾಗಿದೆ. ಈ ಹೇಳಿಕೆ ಅಕ್ರಮ ಡೀಸೆಲ್ ಸಾಗಣೆ ಮತ್ತು ಪೆಟ್ರೋಲಿಯಂ ಉತ್ಪನ್ನ ಕಳ್ಳ ಸಾಧನೆ ಕುರಿತಾಗಿ ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಂತಿದೆ. ಬೆಳಗಾವಿ ಪೊಲೀಸ್ ತಂಡವು ಜಾಗೃತಿ ಗೌಪ್ಯ ತನಿಖೆ ಮತ್ತು ಕಾರ್ಯಾಚರಣೆಗಳ ಮೂಲಕ ಈ ಜಾಲವನ್ನು ಮುರಿದು ಹಾಕಲು ಮುಂದಾಗಿದೆ.
ಬೆಳಗಾವಿ: 17 ಲಕ್ಷ ರೂ. ಮೌಲ್ಯದ ಡೀಸೆಲ್ ಸ್ಮಗ್ಲಿಂಗ್ ಜಾಲ : ಬೆಳಗಾವಿ ಪೊಲೀಸರು ನಡೆಸಿದ ಗೌಪ್ಯ ದಾಳಿಯ ಮೇಲೆ ಸುಮಾರು 17 ಲಕ್ಷಕ್ಕೂ ಮೌಲ್ಯದ 17೦೦೦ ಲೀಟರ್ ಡಿಸೈಲ್ ಮತ್ತು ಟ್ಯಾಂಕರ್ ಜಪ್ತಿ ಮಾಡಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಟ್ಯಾಂಕರ್ ಚಾಲಕನನ್ನು ಕೂಡ ಬಂಧಿಸಿ ಮತ್ತು ತನಿಖೆಯಲ್ಲಿ ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ಅವರ ಪಾತ್ರ ಬೆಳಕಿಗೆ ಬಂದಿದೆ. ಇದು ಪೊಲೀಸರು ತಿಳಿಸಿದಂತೆ ಇದು ದೊಡ್ಡ ಮಟ್ಟದ ಡಿಸೈಲ್ ಸ್ಮಗ್ಲಿಂಗ್ ಜಾಲ ಮತ್ತು ಅಕ್ರಮ ಪೆಟ್ರೋಲಿಯಂ ಉತ್ಪನ್ನ ಸಾಗಣೆ ಹಾಗೂ ಕೇಂದ್ರ ರಾಜ್ಯ ತೆರಿಗೆ ವಂಚನೆ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಮಾರಾಟ ಸ್ಥಳಗಳು ಮತ್ತು ಇನ್ನಷ್ಟು ಅಕ್ರಮ ಪ್ರಕರಣಗಳ ಕುರಿತು ತನಿಖೆ ಮುಂದುವರೆದಿದೆ.
ಇನ್ನಷ್ಟು ಓದಿರಿ:
9ನೇ ಬಾರಿಗೆ ಭಾರತ–ಪಾಕ್ ಯುದ್ಧದ ಮಾತು ತಂದ ಟ್ರಂಪ್