SSLC ಟಾಪರ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಬದಲು ನಗದು ಬಹುಮಾನ ಸರ್ಕಾರದ ಮಹತ್ವದ ತೀರ್ಮಾನ ;
SSLCಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಜಿಲ್ಲಾಮಟ್ಟದಲ್ಲಿ ಟಾಪರ್ ಗಳಾಗಿ ಹೊರಹೊಮ್ಮಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವ ಯೋಜನೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ, ಇನ್ನು ಮುಂದೆ ಲ್ಯಾಪ್ ಟಾಪ್ ಬದಲಾಗಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಈ ಹೊಸ ನಿರ್ಧಾರದಂತೆ ಪ್ರತಿ ಟಾಪರ್ ವಿದ್ಯಾರ್ಥಿಗೆ ತಲಾ ₹ 50,000 ನಗದು ಬಹುಮಾನ ನೀಡಲಾಗುತ್ತದೆ. ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗಳು ಅಥವಾ ಮುಂದಿನ ಅಧ್ಯಯನಕ್ಕಾಗಿ ಹಣವನ್ನು ಬಳಸಿಕೊಳ್ಳಲು ಈ ಕ್ರಮ ಸಹಕಾರಿಯಾಗಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಲವಚಿಕತೆ ನೀಡುವ ಉದ್ದೇಶದಿಂದ ಈ ತೀರ್ಮಾನನ ಕೈಗೊಳ್ಳಲಾಗಿದೆ ಎಂದು ಸೂಚನೆ ಇಲಾಖೆ ತಿಳಿಸಿ ದ್ದು , SSLC ಟಾಪರ್ ಬಹುಮಾನ ಯೋಜನೆಯಲ್ಲಿ ಈ ಬದಲಾವಣೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಬೆಂಗಳೂರಿನಲ್ಲಿ ಜನವರಿ 24ರಂದು ರಾಜ್ಯ ಸರ್ಕಾರ ಇನ್ನು ಮುಂದೆ ಎಸ್ಎಲ್ಸಿ ಟಾಪರ್ ಗಳಿಗೆ ಲ್ಯಾಪ್ ಟಾಪ್ ಬದಲಿಗೆ ನಗದು ಬಹುಮಾನ ನೀಡಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಪ್ರತಿ ಜಿಲ್ಲೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್ -೩ ವಿದ್ಯಾರ್ಥಿಗಳ ಆಧಾರ್ ಲಿಂಕ್ ಖಾತೆಗೆ ನೇರನಗದು ವರ್ಗಾವಣೆ ಮಾಡಲಾಗಿದೆ.
ಪ್ರತಿ ಟಾಪರ್ ವಿದ್ಯಾರ್ಥಿಗೆ ನಗದು ಬಹುಮಾನ:₹50000
ಸರ್ಕಾರದ ಈ ಹೊಸ ನಿರ್ಧಾರವು ವಿದ್ಯಾರ್ಥಿಗಳಿಗೆ ನೇರ ಆರ್ಥಿಕ ನೆರವು ನೀಡುವುದರ ಜೊತೆಗೆ ಅದರ ಮುಂದಿನ ಅಧ್ಯಯನ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಶಿಕ್ಷಣ ಅಗತ್ಯಗಳಿಗೆ ಸಹಾಯವಾಗಲಿದೆ ಶಿಕ್ಷಣ ಇಲಾಖೆ ಹೇಳಿದ್ದು ಈ ಕ್ರಮದಿಂದ ವಿದ್ಯಾರ್ಥಿಗಳ ಪ್ರೋತ್ಸಾಹ ಹೆಚ್ಚಾಗಲಿದೆ ಮತ್ತು ಶೈಕ್ಷಣಿಕ ಸಾಧನೆಗಳಿಗೆ ಪ್ರೋತ್ಸಾಹ ನೀಡಲಾಗುವುದು.
ಮುಖ್ಯ ಹೈಲೈಟ್ಸ್:
ಎಸ್ ಎಸ್ ಎಲ್ ಸಿ ಟಾಪರ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಬದಲು ನಗದು ಬಹುಮಾನ.
ಪ್ರತಿ ಜಿಲ್ಲೆ: ಟಾಪ್ - ೩ ವಿದ್ಯಾರ್ಥಿಗಳಿಗೆ ನಗದು ಬಹುಮಾನ.
ನಗದು ಮೊತ್ತ: ಪ್ರತಿ ವಿದ್ಯಾರ್ಥಿಗೆ ₹50,000
ನಗದು ವರ್ಗಾವಣೆ : ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ
2024 25ನೇ ಶೈಕ್ಷಣಿಕ ವರ್ಷದಲ್ಲಿ 758 ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ SSP ಮೂಲಕ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ ಸರ್ಕಾರ ಈ ನಗದು ಬಹುಮಾನವನ್ನು ವಿದ್ಯಾರ್ಥಿಗಳ ಆಧಾರ ಲಿಂಕ್ಡ್ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಿದ್ದು ಎಲ್ಲಾ ಪ್ರಕ್ರಿಯೆಗಳು ಸುಗಮಗೊಳಿಸಲಾಗಿದೆ.
ಗುಣಮಟ್ಟದ ಭರವಸೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಉಪಕ್ರಮ ಯೋಜನೆ ಅಡಿಯಲ್ಲಿ ಈ ಯೋಜನೆಗೆ ಸುಮಾರು 325 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ. ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ನೇರ ಆರ್ಥಿಕ ನೆರವು ದೊರೆಯುವ ಜೊತೆಗೆ ಅವರ ಶಿಕ್ಷಣದಲ್ಲಿ ಪ್ರೋತ್ಸಾಹ ಹೆಚ್ಚಾಗಲಿದೆ.
ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಆನಂತರ ಸರ್ಕಾರ ಇದೀಗ ಆದೇಶ ಹೊರಸಿದೆ ತಮಗೆ ದೊರೆತ ಬಹುಮಾನವನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಪ್ಟಾಪ್ ನೀಡುವ ಬದಲು ನಗದು ಬಹುಮಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಪ್ರಯೋಜನ ದೊರಕಲಿದೆ ಎಂದು ಶಾಲಾ ಹಾಗೂ ಶಿಕ್ಷಣಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನಷ್ಟು ಓದಿರಿ:
ಹುಬ್ಬಳ್ಳಿಯ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ದುರಂತ : ಮನೆ ಕಟೌಟ್ ಬಿದ್ದು ಅವಾಂತರ