ಈ ನಿರ್ಧಾರವು ಪಕ್ಷದ ಒಳಗಿನ ನೇತೃತ್ವವನ್ನು ಬಲಪಡಿಸಲು ಹಾಗೂ ಬಿಹಾರದ ರಾಜಕೀಯ ಹಾದಿಯನ್ನು ಪ್ರಭಾವಿಸುವ ಪ್ರಮುಖ ನಿರ್ಧಾರವೆಂದಾಗಿ ತಜ್ಞರು ವಿಮರ್ಶಿಸಿದ್ದಾರೆ. ತೇಜಸ್ವಿಯಾದ ನೇಮಕದಿಂದ ಆರ್ ಜೆ ಡಿ ಪಾರ್ಟಿ ಯೋಜನೆಗಳು ನೌಕರಿ ಮತದಾರರ ಸಂಯೋಜನೆ ಮತ್ತು ರಾಜಕೀಯ ತಂತ್ರಗಳು ಹೊಸ ದಿಕ್ಕಿನಲ್ಲಿ ಸಾಗಲಿವೆ.
ರಾಷ್ಟ್ರೀಯ ಜನತಾದಳ (ಆರ್ ಜೆಡಿ)ದ ಮುಖ್ಯಸ್ಥ 'ಲಾಲು ಪ್ರಸಾದ್ ಯಾದವ್', ಅವರ ಕಿರಿಯ ಮಗ ತೇಜಸ್ವಿಯಾದವರನ್ನು ಭಾನುವಾರ ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಸೋಲು ಕಂಡ ಬಳಿಕ, ಈ ನೇಮಕಾತಿ ಪಕ್ಷದೊಳಗಿನ ನಾಯಕತ್ವವನ್ನು ಬಳಸಲು ಮತ್ತು ಪಕ್ಷದ ಭವಿಷ್ಯದ ಯೋಜನೆಗಳಿಗೆ ನೂತನ ದಿಕ್ಕು ನೀಡಲಿದೆ ಪಕ್ಷದ ಮುಖಂಡರು ತಿಳಿಸಿದ್ದಾರೆ. ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ಯಾದವ್ ಪಕ್ಷದ ಸಂಘಟನೆ ಕಾರ್ಯತಂತ್ರ ಮತ್ತು ಚುನಾವಣೆ ಸಿದ್ಧತೆಗಳ ಜವಾಬ್ದಾರಿಯನ್ನು ವಹಿಸಿಲಿದ್ದಾರೆ.
ಈ ನಿರ್ಧಾರವೂ ಆರ್ ಜೆಡಿ ಪಕ್ಷವನ್ನು ತಳಮಟ್ಟದಲ್ಲಿ ಬಳಪಡಿಸಿ ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಸ್ಥಿತಿಗೆ ತರುವಂತೆ ಮಾಡಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆರ್ ಜೆಡಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಉತ್ತರಾಧಿಕಾರದ ರೇಖೆಯನ್ನು ಸ್ಪಷ್ಟಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷವು ತಿಳಿಸಿದೆ.
ತೇಜಸ್ವಿ ಯಾದವ್ ಅವರ ಹಿರಿಯ ಸಹೋದರಿ ಮತ್ತು ಪಾಟಲಿಪುತ್ರ ಸಂಸದೇ ಮಿಸಾ ಭಾರ್ತಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸ್ತುತ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ನಿನ್ನೆ (ಶನಿವಾರ) ಆರ್ ಜೆಡಿ ವಕ್ತಾರ ಚಿತ್ತರಂಜನ ಗಗನ ಅವರು ಮಾತನಾಡಿ ಕಾರ್ಯಕಾರಿ ಸಭೆಯಲ್ಲಿ ಈ ಪ್ರಸ್ತಾವನೆ ಬಂದರೆ ತೇಜಸ್ವಿಯಾದ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಬಹುದು ಎಂದಿದ್ದರು.
ವಿಧಾನಸಭಾ ಚುನಾವಣೆಗೆ ಮುನ್ನ ಲಾಲು ಯಾದವ್ ಅವರ ತೇಜಸ್ವಿ ಯಾದವ್ ಅವರಿಗೆ ಎಲ್ಲ ಅಧಿಕಾರಿಗಳನ್ನು ವಹಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆರ್ ಜೆಡಿ ಮೈತ್ರಿಕೂಟ ಕೇವಲ 35 ಸ್ಥಾನಗಳನ್ನನಷ್ಟೇ ಗೆದ್ದು ಬಾರಿ ಮುಖಭಂಗ ಅನುಭವಿಸಿತ್ತು. ಈ ಸೋಲಿನ ಬಳಿಕ ರಾಜ್ಯದ ಬಹುಪಾಲು ಕಾಂಗ್ರೆಸ್ ನಾಯಕರು ಚುನಾವಣೆಯ ವೈಫಲ್ಯಕ್ಕೆ ಆರ್ ಜೆಡಿಯತ್ತ ಬೊಟ್ಟು ತೋರಿಸಿದರು. ಈ ಬೆಳವಣಿಗೆಗಳ ಹಿನ್ನೆಲೆದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಆರ್ ಜೆಡಿ ಮೈತ್ರಿ ಅಧಿಕೃತವಾಗಿ ಮುರಿದು ಬಿದ್ದಿದೆ.
243 ಸದಸ್ಯ ಬಳಗ ವಿಧಾನಸಭೆಯಲ್ಲಿ, ಆರ್ ಜೆಡಿ 25 ಸ್ಥಾನ, ಕಾಂಗ್ರೆಸ್ ಕೇವಲ 6 ಸ್ಥಾನ ಗಳಿಸಲು ಮಾತ್ರ ಸಾಧ್ಯವಾಗಿತ್ತು. ಈ ತರ ಮೈತ್ರಿ ಪಕ್ಷಗಳಲ್ಲಿ ಸಿಪಿಐಎಂಎಲ್ 2, ಸಿಪಿಎಂ ಮತ್ತು ಐಐಪಿ ತಲಾ ಒಂದು ಸ್ಥಾನ ಗಳಿಸಿದವು. ಈ ಫಲಿತಾಂಶಗಳು ಮೈತ್ರಿಕೂಟದ ಒಳಗಿನ ಅಸಮಾಧಾನವನ್ನು ಇನ್ನಷ್ಟು ಗಾಡಗೊಳಿಸಿದವು.
ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ (ಬಿಪಿಸಿಸಿ) ಅಧ್ಯಕ್ಷ ರಾಜೇಶ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದು, "ನಮ್ಮ ಮೈತ್ರಿ ಶಾಶ್ವತವಾಗಿರಲಿಲ್ಲ ಅದು ಚುನಾವಣೆ ಮಾತ್ರ ಈಗ ಯಾವುದೇ ಚುನಾವಣೆಗಳಿಲ್ಲ", ಐದು ವರ್ಷಗಳ ಬಳಿಕ ವಿಧಾನಸಭಾ ಚುನಾವಣೆಗಳು ನಡೆಯುತ್ತವೆ, ಆದರೆ ಮೂರು ವರ್ಷಗಳಲ್ಲಿ ಲೋಕಸಭಾ ಚುನಾವಣೆಗಳು ಬರಲಿವೆ. ಆದ್ದರಿಂದ ಈ ಹಂತದಲ್ಲಿ ಆರ್ ಜೆಡಿ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನಷ್ಟು ಓದಿರಿ: