“ಗ್ರಾಮಾಯಣ” ಚಿತ್ರ: ವಿನಯ್ ರಾಜಕುಮಾರ್ ಹಾಗೂ ಮೇಘ ಶೆಟ್ಟಿ ಅಭಿನಯಿಸಿರುವ ಚಿತ್ರ ಗ್ರಾಮಾಯಣ ಈ ವರ್ಷ ಕನ್ನಡ ಚಿತ್ರ ಚಿತ್ರರಂಗದಲ್ಲಿ ಬಿಡುಗಡೆಗೆ ಎದುರು ನೋಡುತ್ತಿದೆ ಚಿತ್ರದಲ್ಲಿನ "ಬೆಂಕಿ" ಹಾಡು ಇತ್ತೀಚೆಗೆ ಅನಾವರಣಗೊಂಡಿದ್ದು, ಈಗಾಗಲೇ ಚಿತ್ರರಂಗದ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಈ ಚಿತ್ರವನ್ನು ಕನ್ನಡ ಚಲನಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಹಾಡು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಚಿತ್ರಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿಗೀತಾ ಶಿವರಾಜ್ಕುಮಾರ್ ಸಹ ಹಾಜರಿದ್ದರು. ವಿನಯ್ ಹಾಗೂ ಮೇಘ ಶೆಟ್ಟಿ ಜೊತೆಗೆ ಶಿವಣ್ಣ ಸಕಸ್ ಸ್ಟೆಪ್ ಹಾಕಿ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ ಮತ್ತು ಸಿನಿಮಾಗೆ ಶುಭವನ್ನು ಕೋರಿದ್ದಾರೆ.
“ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನು” ಹಾಡಿನ ರೀಮಿಕ್ಸ್ : ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಡಿನ ಹೊಸ ಬೆಂಕಿ ಹಾಡು ಈ ಗ್ರಾಮಾಯಣ ಚಿತ್ರದ ವೀಕ್ಷಕರ ಮನಸ್ಸನ್ನು ಮುಟ್ಟಿದೆ. ಈ ಹಾಡನ್ನು ಕಪಿಲ್ ಕಪಿಲನ ಮತ್ತು ಐರಾ ಉಡುಪಿ ಜೋಡಿ ಹಾಡಿದ್ದಾರೆ. ಈ ಸಿನಿಮಾ ವೀಕ್ಷಕರಿಗೆ ಖುಷಿಯ ಸಂಗತಿಯೇನೆಂದರೆ ಈ ಹಾಡು ಮೂಲತಃ ಶಿವರಾಜ್ ಕುಮಾರ್ ಅಭಿನಯಿಸಿರುವ ಮನಮೆಚ್ಚಿದ ಹುಡುಗಿ ಚಿತ್ರದ ಜನಪ್ರಿಯ ಹಾಡಿನ ರಿಮಿಕ್ಸ್ ಆಗಿದ್ದು ಹಳೆಯ “ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನು” ಹಾಡಿನ ಸಂಭಾವ್ಯತೆಯನ್ನು ಹೊಸ ತಾಳದಲ್ಲಿ ಜೀವಂತ ಮಾಡಲಾಗಿದೆ. ಈ ಹಾಡನ್ನು ಮೂಲ ಹಾಡಿನ ಸಂಗೀತವನ್ನು ಉಪೇಂದ್ರರವರು ರಚಿಸಿದ್ದರು ಮತ್ತು ಸಾಹಿತ್ಯವನ್ನು ಚಿ. ಉದಯಶಂಕರ್ ಬರೆದಿದ್ದರು. ಹಳೆಯ ಕ್ಲಾಸಿಕ್ ಗೀತೆಗಳು ಈಗಿನ ಪೌರಾಣಿಕ ಕಥೆ ಮತ್ತು ನೃತ್ಯ ದೋಷಗಳಿಗೆ ಹೊಸ ಆಕರ್ಷಕ ತಾಳದಲ್ಲಿ ಪ್ರಸ್ತುತವಾಗಿವೆ.
ಲಹರಿ ಫಿಲ್ಮ್ಸ್ ನ ರೀಮಿಕ್ಸ್ ಹಾಡು ಸದ್ದು ಮಾಡುತ್ತಿದೆ : ಲಹರಿ ಸಂಸ್ಥೆ ಮುಖ್ಯಸ್ಥ ಮನೋಹರ್ ನಾಯ್ಡು ಅವರ ಉಪಸ್ಥಿತಿಯಲ್ಲಿ ನಿರ್ಮಾಪಕ ಲಹರಿ ವೇಲು ಮಾತನಾಡಿ ಗ್ರಾಮಾಯಣ ನಮ್ಮ ಲಹರಿ ಸಂಸ್ಥೆಯ ನಿರ್ಮಾಣದ ೯ನೇ ಸಿನಿಮಾ ನಿರ್ದೇಶಕ ದೇವನೂರು ಚಂದ್ರು ಒಂದೊಳ್ಳೆ ಗ್ರಾಮೀಣ ಸೊಗಡಿನ ಚಿತ್ರವನ್ನು ರಚಿಸಿದ್ದಾರೆ.ವಿನಯ್ ರಾಜಕುಮಾರ್, ಮೇಘ ಶೆಟ್ಟಿ ಇತರ ಕಲಾವಿದರು ತಮ್ಮ ಅಭಿನಯದ ಮೂಲಕ ಚಿತ್ರಕ್ಕೆ ಮತ್ತಷ್ಟು ಜೀವ ನೀಡಿದ್ದಾರೆ. ಹಳೆಯ"ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನು”ಹಾಡಿನ ಮತ್ತೊಂದು ಆಧುನಿಕ ಸಂಯೋಜನೆ ಮಾಡಲಾಗಿದೆ. ಮನರಂಜನೆ ಮತ್ತು ನೃತ್ಯ ದೃಶ್ಯಗಳು ಇನ್ನಷ್ಟು ಆಕರ್ಷಕವಾಗಿದೆ ಸಿನಿಮಾ ಪ್ರೇಮಿಗಳಿಗೆ ಸಂತೋಷ, “ಮನ ಮೆಚ್ಚಿದ ಹುಡುಗಿ” ಚಿತ್ರದ ಮೂಲಕ ಹಾಡು ಈ ಲಹರಿ ಸಂಸ್ಥೆಯಿಂದ ಬಿಡುಗಡೆಯಾಗಿದೆ ಮತ್ತು ಅದರ ರಿಮಿಕ್ಸ್ ಹಾಡು ಕೂಡ ಲಹರಿ ಸಂಸ್ಥೆಯಿಂದಲೇ ಪ್ರೇಕ್ಷಕರಿಗೆ ಪರಿಚಯವಾಗುತ್ತಿದೆ ಎಂದು ಚಿತ್ರ ತಂಡವು ಹಂಚಿಕೊಂಡಿದೆ.
ಲಹರಿ ಸಂಸ್ಥೆಯ 50ನೇ ವರ್ಷದ ಸಂಭ್ರಮ : ನಾಯಕ ನಟ ವಿನಯ್ ರಾಜಕುಮಾರ್ ಮಾತನಾಡಿ ಲಹರಿ ಸಂಸ್ಥೆಯ 50ನೇ ವರ್ಷದ ಸಂರ್ದಭದಲ್ಲಿ ಗ್ರಾಮಾಯಣ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಈಗಾಗಲೇ ಎಲ್ಲರೂ ನನ್ನ ನಟನೆ ಚೆನ್ನಾಗಿ ಇದೆ ಎನ್ನುತ್ತಿದ್ದಾರೆ ಅದಕ್ಕೆ ಮುಖ್ಯ ಕಾರಣ ನಮ್ಮ ನಿರ್ದೇಶಕರು ಎಂದು ತಮ್ಮ ಪಾತ್ರದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಪಾತ್ರದ ಹೆಸರು ಸಿಕ್ಸ್ತ್ ಸೆನ್ಸ್ ಸೀನ. ಬೆಂಕಿ ಹಾಡನ್ನು ಬಿಡುಗಡೆಯಾಗಿಸಲು ಅವಕಾಶ ನೀಡಿದ ನಾನು ಚೆನ್ನಾಗಿ ಪ್ರೀತಿಸುವ ಹಾಗೂ ಗೌರವಿಸುವ ದೊಡ್ಡಪ್ಪ- ದೊಡ್ಡಮ್ಮ ಅವರಿಗೆ ತುಂಬು ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ವಿನಯರಾಜಕುಮಾರ್ ಅವರು ಈ ಸಿನಿಮಾದ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡರು.
ಮೇಘಾ ಶೆಟ್ಟಿ ಹಠಮಾರಿ ಹೆಣ್ಣು ಪಾತ್ರದಲ್ಲಿ ಅಭಿನಯ : ನಾಯಕ ನಟಿ ಮೇಘ ಶೆಟ್ಟಿ ಮಾತನಾಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ತುಂಬು ಹೃತ್ಪೂರ್ವಕ ಧನ್ಯವಾದಗಳು, ನನ್ನ ಪಾತ್ರದ ಹೆಸರು ಕುಸುಮ ಯಾವುದಕ್ಕೂ ಹೆದರದ ಗಂಡು ಹುಡುಗನಂತೆ ವರ್ತಿಸುವ ಹಠ ಮಾರಿ ಹೆಣ್ಣಿನ ಪಾತ್ರ ನನ್ನದು ಎಂದರು ಮೇಘ ಶೆಟ್ಟಿ ನಟನೆಯ ಮೂಲಕ ತಮ್ಮ ಪಾತ್ರಕ್ಕೆ ಹೊಸ ಜೀವವನ್ನು ತುಂಬುವ ಮೂಲಕ ಚಿತ್ರಕ್ಕೆ ಗಮನ ಸೆಳೆಯುವ ಪ್ರೇಕ್ಷಕ ಅನುಭವ ನೀಡುತ್ತಿದ್ದಾರೆ. ಗ್ರಾಮಾಯಣ ಚಿತ್ರವು ಪಕ್ಕಾ ಗ್ರಾಮೀಣ ಕಥೆಯ ಸಂಗೀತ ಮತ್ತು ಕಲಾವಿದರು ಎಲ್ಲರಿಗೂ ಧನ್ಯವಾದಗಳು ಈ ಸಿನಿಮಾವು ಶೀಘ್ರದಲ್ಲಿಯೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ಸಿನಿಮಾ ತಂಡವು ತಿಳಿಸಿತು.
ಇನ್ನಷ್ಟು ಓದಿರಿ:
ಪಿಯುಸಿ ಪಾಸ್? ಈಗಲೇ ಅರ್ಜಿ ಹಾಕಿ - ಕರ್ನಾಟಕ ಸಹಕಾರಿ ಒಕ್ಕೂಟದಲ್ಲಿ ಉದ್ಯೋಗ