ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟರಾಜ್ ಅವರು ವಿಜಯದ ನಂತರ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸುವ ಭಾವನಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮನೆಗೆ ಮರಳಿದ ಬಳಿಕವು ವಾಸ್ತವ ಜೀವನಕ್ಕೆ ಹೊಂದಿಕೊಳ್ಳಲು ತಮಗೆ ಇನ್ನೂ ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಗಿಲ್ಲಿ ನಟರಾಜ್,"ನನ್ನನ್ನು ನಂಬಿ, ಬೆಂಬಲಿಸಿ, ಈ ಹಂತಕ್ಕೆ ತಲುಪಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು"ಎಂದು ಅಭಿಮಾನಿಗಳು, ಕುಟುಂಬದವರು ಮತ್ತು ಸ್ನೇಹಿತರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಯ ಅನುಭವ ತನ್ನ ಜೀವನದ ಅತಿ ದೊಡ್ಡ ಪಾಠ ಎಂದು ಅವರು ಹೇಳಿದ್ದಾರೆ. ಇದೇ ವಿಡಿಯೋ ದಲ್ಲಿ ಗಿಲ್ಲಿ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಕೆರಳಿಸುವ ಘೋಷಣೆಯನ್ನು ಮಾಡಿದ್ದಾರೆ. "ಇದು ನನ್ನ ಜೀವನದ ಹೊಸ ಅಧ್ಯಾಯ. ಹೊಸ ದಾರಿ ಕಡೆ ಮುಖ ಮಾಡುವ ಸಮಯ ಬಂದಿದೆ"ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಹೊಸ ಶೋ ಅಥವಾ ದೊಡ್ಡ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಅಭಿಮಾನಿಗಳು, ಗಿಲ್ಲಿ 'ಗಿಚ್ಚಿ ಗಿಲಿ ಗಿಲಿ' ಶೋನಲ್ಲಿ ಕಾಣಿಸಿಕೊಳ್ಳಬಹುದೇ? ಎಂಬ ಚರ್ಚೆ ಆರಂಭಿಸಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯ ನಿರೀಕ್ಷೆ ಹೆಚ್ಚಾಗಿದೆ. ಗಿಲ್ಲಿ ನಟರಾಜ್ ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು "ಇದು ಹೊಸ ಆರಂಭ", "ನಾವು ಯಾವತ್ತು ನಿನ್ನ ಜೊತೆ"ಎಂಬ ಕಾಮೆಂಟ್ಗಳ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಎಲ್ಲರ ಕಣ್ಣುಗಳು ಗಿಲ್ಲಿಯ ಮುಂದಿನ ದೊಡ್ಡ ಹೆಜ್ಜೆಯ ಮೇಲೆ ನೆಟ್ಟಿವೆ.
ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟರಿಂದ ದೊಡ್ಡ ಘೋಷಣೆ:
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಲ್ಲೋರಾಗಿ ಗಿಲ್ಲಿ ನಟ ಇದೀಗ ತಮ್ಮ ಇಂಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಿಲ್ಲಿ ನಟ ಇನ್ನೂ ಬಿಗ್ ಬಾಸ್ ಗೆಲುವಿನ ಸಂಭ್ರಮದಿಂದ ವಾಸ್ತವಕ್ಕೆ ಬರಲು ಒದ್ದಾಡುತ್ತಿರುವ ಭಾವನೆ ಸ್ಪಷ್ಟವಾಗಿ ಕಾಣಿಸುತ್ತದೆ. ತಮ್ಮ ಜೀವನದಲ್ಲಿ ನಡೆದ ದೊಡ್ಡ ಬದಲಾವಣೆ, ಜನರಿಂದ ಸಿಕ್ಕ ಪ್ರೀತಿ ಹಾಗೂ ಬೆಂಬಲವನ್ನು ಅವರು ಭಾವೋದ್ರೇಕದಿಂದ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಗಿಲ್ಲಿ ನಟ,"ಇದು ನಿಜವೇ ಅನ್ನೋದೇ ಇನ್ನೂ ಅರ್ಥವಾಗುತ್ತಿಲ್ಲ. ನಿಮ್ಮ ಪ್ರೀತಿ ನನ್ನ ಜೀವನವನ್ನೇ ಬದಲಿಸಿದೆ"ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ದೊಡ್ಡ ಘೋಷಣೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ ಶೀಘ್ರದಲ್ಲಿ ಅಧಿಕೃತವಾಗಿ ಘೋಷಿಸುವುದಾಗಿ ಸೂಚನೆ ನೀಡಿದ್ದು, ಅಭಿಮಾನಿಗಳು ಹುಚ್ಚು ಕತೆಯಿಂದ ಕಾಯುವಂತೆ ಮಾಡಿದ್ದಾರೆ.
ಬಿಗ್ ಬಾಸ್ ವಿನ್ನದ ಬಳಿಕ ಗಿಲ್ಲಿ ನಟ ತಮ್ಮ ಹುಟ್ಟೂರಲ್ಲಿ ಭರ್ಜರಿ ಸ್ವಾಗತವನ್ನು ಅನುಭವಿಸಿದ್ದು, ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ನಂತರ ಮಾಧ್ಯಮಗಳಿಗೆ ಸಂದರ್ಶನ ನೀಡಿ, ಈ ಗೆಲುವು ಜನರ ಆಶೀರ್ವಾದದಿಂದಲೇ ಸಾಧ್ಯವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು. ಈಗ ಬಿಡುಗಡೆ ಮಾಡಿದ ಈ ವಿಡಿಯೋ ಮತ್ತೊಮ್ಮೆ ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು,"ಗಿಲ್ಲಿ ಮುಂದೇನು ಮಾಡ್ತಾರೆ?"ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿಸಿದೆ. ಸದ್ಯ ಈ ವಿಡಿಯೋಗೆ ಸಾವಿರಾರು ಲೈಕ್ಸ್ ಕಮೆಂಟ್ಸ್ ಮತ್ತು ಶೇರ್ ಗಳು ಬರುತ್ತಿದ್ದು, ಗಿಲ್ಲಿ ನಟರ ಮುಂದಿನ ಪ್ರಾಜೆಕ್ಟ್ ಘೋಷಣೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ವಿಡಿಯೋದಲ್ಲಿ ಗಿಲ್ಲಿ ಮಾತನಾಡಿದ ಮಾತುಗಳು:
"ನನ್ನ ಬೆಂಬಲಿಸಿದೆ ಎಲ್ಲರಿಗೂ ಧನ್ಯವಾದ. ಬಿಗ್ ಬಾಸ್ ಮನೆಯಲ್ಲಿರುವಾಗ ಜನರಿಂದ ಇಷ್ಟೊಂದು ಬೆಂಬಲ ಸಿಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಈಗಲೂ ಇದನ್ನು ನಂಬೋಕೆ ಆಗುತ್ತಿಲ್ಲ. ಟ್ಯಾಟೋ ಹಾಕಿಸಿಕೊಂಡ, ಹರತಿ ಹೊತ್ತವರಿಗೆ, ಮಾಧ್ಯಮದವರಿಗೆ, ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸಿದವರಿಗೆ ಧನ್ಯವಾದ"ಎಂದು ಹೇಳಿದರು.ಅದರ ಜೊತೆಗೆ ಅವರು ಹೊಸ ಘೋಷಣೆಯನ್ನು ಸ್ಪೂರ್ತಿದಾಯಕವಾಗಿ ಹಂಚಿಕೊಂಡಿದ್ದಾರೆ.
ವೀಡಿಯೋಗೆ ನೀಡಿರುವ ಕ್ಯಾಪ್ಶನ್ ನಲ್ಲಿ ಗಿಲ್ಲಿ ನಟ ಉಲ್ಲೇಖಿಸಿದ್ದು ಏನು ? :
"ಇಷ್ಟು ದೂರ ಕರ್ಕೊಂಡು ಬಂದಿದ್ದೀರಿ, ಮನಸಲ್ಲಿ ಜಾಗ ಕೊಟ್ಟಿದ್ದೀರಿ. ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೀರಿ. ನಿರಂತರವಾಗಿ ಬೆಂಬಲಿಸಿದ್ದೀರಿ. ಇದುವರೆಗೂ ಬರೀ ರನ್ನರ್ ಅಪ್ ಆಗೇ ಉಳ್ಕೊತಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಸಿದ್ದೀರಿ, ಮೆರೆಸಿದ್ದೀರಿ. ಈ ಪ್ರೀತಿಗೆ ಏನು ಹೇಳಿದ್ರು, ಎಷ್ಟು ಹೇಳಿದ್ರು ಕಡಿಮೆನೇ. ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ ಮಾಡುವ ಹೊತ್ತು"ಎಂದು ಅಭಿಮಾನಿಗಳಿಗೆ ಹೃದಯ ಸ್ಪರ್ಶಿ ಸಂದೇಶ ನೀಡಿದ್ದಾರೆ.
ಈ ವಿಡಿಯೋ ಮತ್ತು ಕ್ಯಾಪ್ಶನ್ ಶುರುವಾದ ಕ್ಷಣದಿಂದಲೇ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಎಲ್ಲರ ಕಣ್ಣು ಮುಂದಿನ ಗಿಲ್ಲಿ ನಟರ ಹೊಸ ಪ್ರಾಜೆಕ್ಟ್ ಮೇಲೆ ಇದೆ, ಮತ್ತು ಶೀಘ್ರದಲ್ಲೇ ಅವರು ಹೊಸ ಪ್ರಯಾಣವನ್ನು ಆರಂಭಿಸಲಿದ್ದಾರೆ ಎಂಬ ನಿರೀಕ್ಷೆ ಉಂಟಾಗಿದೆ.
ಗಿಲ್ಲಿ "ಗಿಚ್ ಗಿಲಿ ಗಿಲಿ" ಶೋಗೆ ನಟರು ನಿರುಪಕರಾಗಿ ಕಾಣಿಸಿಕೊಳ್ಳುವ ನಿರೀಕ್ಷೆ :
ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟರಾಜ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಚಾರ ಮತ್ತು ಅಭಿಮಾನಿಗಳೊಂದಿಗೆ ಸಂವಾದದಲ್ಲಿದ್ದಾರೆ. ಇದೀಗ "ಗಿಚ್ ಗಿಲಿಗಿಲಿ"ಎಂಬ ಹೊಸ ಶೋ ಬಿಡುಗಡೆಗೊಳ್ಳುತ್ತಿದ್ದು, ಈ ಶೋಗೆ ಗಿಲ್ಲಿ ನಟ ನಿರೂಪಕರಾಗಿ ಕಾಣಿಸಿಕೊಳ್ಳುವಿರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿದೆ.
ಅಭಿಮಾನಿಗಳಿಂದ ಈಶೋಗೆ ಗಿಲ್ಲಿ ನಟ ನಿರೂಪಣೆ ಮಾಡಬೇಕು ಎಂಬ ಬೇಡಿಕೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶೋ ಮೇಲಿನ ಈ ಕುತೂಹಲದಿಂದಾಗಿ, ಎಲ್ಲಾ ನೇತ್ರಗಳು ಗಿಲ್ಲಿ ನಟರ ಮುಂದಿನ ಹೆಜ್ಜೆ ಮೇಲೆ ಸಿಗಲಿವೆ. ಈಶೋನಲ್ಲಿ ಅವರು ಭಾಗವಹಿಸಿದರೆ, ಅವರ ವಿಭಿನ್ನ ಶೈಲಿ ಮತ್ತು ವ್ಯಯಕ್ತಿತ್ವಕ್ಕೆ ಮತ್ತಷ್ಟು ಅಭಿಮಾನಿಗಳು ಪ್ರೀತಿ ತೋರಲಿದ್ದಾರೆ ಎಂಬ ನಿರೀಕ್ಷೆ ಇದೆ.
ಇನ್ನಷ್ಟು ಓದಿರಿ: