<?= $pageTitle ?>
Logo
ಮುಖಪುಟ ಓದುವುದು ಕೇಳು
Sports

70 ರ ವಯಸ್ಸಿನಲ್ಲೂ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಸಾಧನೆ

70 ರ ವಯಸ್ಸಿನಲ್ಲೂ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಸಾಧನೆ
Summary: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಇಬ್ಬರು ಕ್ರೀಡಾಪಟ್ಟು ಗಳಾದ ರಾಜೇಂದ್ರ ಸಿಂಗ್ ಠಾಕೂರ್ 70 ವರ್ಷ ವಯಸ್ಸಿನವರು 83 ಕೆಜಿ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದರು ಮತ್ತು ಸಂಜಯ್ ಚಾಟೆ 66 ವರ್ಷದ ೬೪ ವರ್ಷದ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದರು.
BELAGAVI NEWS :

ಭಾರತವನ್ನು ಪ್ರತಿನಿಧಿಸಿದ ಹಿರಿಯ ಕ್ರೀಡಾಪಟುಗಳು : ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಅನ್ನು ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ, ವರ್ಲ್ಡ್ ರಾ ಪವರ್ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ದೇಶಗಳ ಶ್ರೇಷ್ಠ ಪವರ್ ಲಿಪ್ಟರ್ ಗಳು ಭಾಗವಹಿಸಿದ್ದರು.



ಚಾಂಪಿಯನ್ಶಿಪ್ ನಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಇಬ್ಬರು ಹಿರಿಯ ಕ್ರೀಡಾಕೂಟ ಪಟುಗಳು ಭಾರತವನ್ನು ಪ್ರತಿನಿಧಿಸಿ ಗಮನಸೆಳೆದಿದ್ದಾರೆ. ರಾಜೇಂದ್ರ ಸಿಂಗರ್ ಠಾಕೂರ್ 70 ವರ್ಷದ ಅವರು 83 ಕೆಜಿ ವಿಭಾಗದಲ್ಲಿ ಭಾರತದ ಪರವಾಗಿ ಸ್ಪರ್ಧಿಸಿದರು. ಸಂಜಯ್ ಚಾಟಿ ರವರು 64 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಹಿರಿಯ ವಯಸ್ಸಿನಲ್ಲಿಯೂ ಶಾರೀರಿಕ ಸಾಮರ್ಥ್ಯ ಮತ್ತು ಶಿಸ್ತುಬದ್ಧ ಅಭ್ಯಾಸದ ಮೂಲಕ ಈ ಇಬ್ಬರು ಕ್ರೀಡಾಪಟುಗಳು ಭಾರತೀಯ ಕ್ರೀಡಾಭಿಮಾನಿಗಳಿಗೆ ಹೆಮ್ಮೆ ತಂದಿದ್ದಾರೆ, ಇವರ ಸಾಧನೆಯು ಯುವ ಪೀಳಿಗೆಗಳಿಗೆ ಪ್ರೇರಣೆಯಾಗಿದೆ ಎಂದು ಕ್ರೀಡಾಪಟು ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.



ಸಂಜಯ್ ಚಾಟಿ ಸಂತೋಷದ ಮಾತುಗಳು : ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 32 ಸ್ಪರ್ಧೆ ನಡೆಸಿದರು. ಈ ಪಟ್ಟಿಯಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಿಂದ ಆಯ್ಕೆಯಾದ ರಾಜೇಂದ್ರ ಸಿಂಗ್ ಠಾಕೂರ್ ಮತ್ತುಸಂಜಯ್ ಚಾಟಿ ಇಬ್ಬರು ತಮ್ಮ ಶ್ರೇಷ್ಠ ಸಾಧನೆಯ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.



ಈ ಕುರಿತು ಮಾತಾಡಿದ ಸಂಜಯ್ ಚಾಟಿ : ಚಿನ್ನದ ಪದಕ ಗೆದ್ದಾಗ ಮತ್ತು ಭಾರತೀಯ ರಾಷ್ಟ್ರೀಯ ಧ್ವಜದ ಮುಂದೆ ನಿಂತು ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ನನಗೆ ಅನಂತ ಹೆಮ್ಮೆ ಬಂತು, ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರೀಡಾ ಹಂಬಲಿಗಳಿಗೆಈ ಸಾಧನೆ ಹೆಮ್ಮೆ ತಂದಿದೆ ಆದರೆ ಛಿಂದ್ವಾರಾ ಜಿಲ್ಲೆಯ ಮತ್ತು ಮಧ್ಯಪ್ರದೇಶದ ರಾಜ್ಯಕ್ಕೆ ಸಹ ಕ್ರೀಡಾ ಕ್ಷೇತ್ರದಲ್ಲಿ ಮಾತ್ರದ ಸಾಧನೆ ಎಂದು ಮೆಚ್ಚಿಗೆ ಮೂಡಿಸಿದೆ.



ಈ ಕ್ರೀಡಾ ಪಟ್ಟುಗಳು ಭಾರತಕ್ಕೆ ಹೆಮ್ಮೆ ತಂದರು : ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆ ಹಿರಿಯ ಕ್ರೀಡಾಪಟು ರಾಜೇಂದ್ರ ಸಿಂಗ್ ಠಾಕೂರ್ ಮತ್ತು ಸಂಜಯ್ ಚಾಟೆ ಬೆಂಚ್ ಪ್ರೆಸ್ ಮತ್ತು ಡೆಡ್ಲಿಫ್ಟ್ ಸ್ಪರ್ಧೆಗಳಲ್ಲಿ ತಲಾ ೨ ಚಿನ್ನದ ಪದಾಕ್ಕವನ್ನು ಪಡೆದಿದ್ದಾರೆ.



ಈ ಸಾಧನೆಯ ಮೂಲಕ ಅವರು ಭಾರತೀಯ ಕೀರ್ತಿಪತಾಕೆಯನ್ನು ಎತ್ತಿ ಹಿಡಿದ್ದಿದ್ದಾರೆ.ಹಿರಿಯ ನಾಗರೀಕ ವಿಭಾಗದಲ್ಲಿ ತಮ ಶ್ರೇಷ್ಠ ಸಾಮರ್ಥ್ಯವನ್ನು ಪ್ರದರ್ಶಿಸಿ ರಾಜೇಂದ್ರ ಮತ್ತು ಸಂಜಯ್ ವಿದೇಶಿ ನೆಲದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಮೆಟ್ಟಿಲು ಏರಿಸುವಂತೆ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರುವಂತೆ ಮಾಡಿದೆ.



ಕೆಲಸದ ನಿವೃತ್ತಿಯ ನಂತರ ಕ್ರೀಡೆಗೆ ಒಲವು : ರಾಜೇಂದ್ರ ಸಿಂಗ್ ಠಾಕೂರ್ ಕ್ರೀಡೆಗಳನ್ನು ತಮ್ಮ ವೃತ್ತಿ ಜೀವನವನ್ನಾಗಿ ಮಾಡಿಕೊಂಡಿದ್ದು ತಮ್ಮ ಶ್ರಮ ಮತ್ತು ಶಿಸ್ತು ಬದ್ಧ ಅಭ್ಯಾಸದಿಂದ ಭಾರತೀಯ ಕ್ರೀಡ ಕ್ಷೇತ್ರದಲ್ಲಿ ಹೆಮ್ಮೆ ತಂದಿದ್ದಾರೆ. ಸಂಜಯ್ ಚಾಟೆ 6 ವರ್ಷಗಳ ಹಿಂದೆ ಬ್ಯಾಂಕಿಂಗ್ ವೃತ್ತಿಯಿಂದ ನಿವೃತ್ತಿ ಹೊಂದಿದ್ದು.



ನಿರಂತರ ಅಭ್ಯಾಸ ಮಾಡುತ್ತಿದ್ದರು ಅವರು ತಮ್ಮ ಸಾಧನೆ ಬಗ್ಗೆ ಮಾತನಾಡಿ "ನಿವೃತ್ತಿ ನಂತರವೂ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದು ಯಾವುದೇ ಅನಾರೋಗ್ಯ ಉಂಟಾಗಿಲ್ಲ ದುರ್ಬಲನಾಗಿಲ್ಲ"ಎಂದು ಹೆಮ್ಮೆಯಿಂದ ಹೇಳಿಕೊಂಡರು. ಈ ಪ್ರತಿಷ್ಠಿತ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಬೆಂಚ್ ಪ್ರೆಸ್ ಮತ್ತು ಲಿಫ್ಟ್ ನಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದು ಅವರು ಹಿರಿಯ ನಾಗರಿಕರ ವಿಭಾಗದಲ್ಲಿ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ಹೆಮ್ಮೆ ತಂದಿದ್ದಾರೆ.



ರಾಜೇಂದ್ರ ಸಿಂಗ್ ಠಾಕೂರ್ ರವರ ಮಾತುಗಳು : ಭಾರತೀಯ ಹಿರಿಯ ಕ್ರೀಡಾಪಟು ರಾಜೇಂದ್ರ ಸಿಂಗ್ ಠಾಕೂರ್ ಅವರು ತಮ್ಮ ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾ ಹೇಳುತ್ತಾರೆ: ಯಾವುದೇ ಕೆಲಸವನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಅದರಲ್ಲಿ ಯಶಸ್ಸು ಸುಲಭವಾಗಿ ಲಭಿಸುತ್ತದೆ. ಅನೇಕ ಜನರು ತಮ್ಮ ವಯಸ್ಸಿಗೆ ಅನುಗುಣವಾಗಿ ತಮ್ಮ ಜೀವನವನ್ನು ನಡೆಸುತ್ತಾರೆ. ಆದರೆ ಆರೋಗ್ಯವಾಗಿದ್ದು ನಿಯಮಿತ ಅಭ್ಯಾಸ ಮಾಡುತ್ತಾ ಇದ್ದರೆ ವಯಸ್ಸಿನ ಸವಾಲುಗಳನ್ನು ಸುಲಭವಾಗಿ ಸೋಲಿಸಬಲ್ಲವೂ ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹೇಳಿದರು.



ಇನ್ನಷ್ಟು ಓದಿರಿ:
ಬಡವರ ಸಂತೋಷವೇ ಬಿಜೆಪಿಗೆ ತೊಂದರೆ : ಮಧು ಬಂಗಾರಪ್ಪ ವಾಗ್ದಾಳಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online