ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಒಟ್ಟು 49 ವಿಜ್ಞಾನಿ /ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಪಿಎಚ್ ಡಿ, ಎಂಇ, ಎಂಟೆಕ್, ಎಂಎಸ್ಸಿ , ಬಿಇ, ಬಿಟೆಕ್ ಅಥವಾ ಬಿಎಸ್ಸಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
18 ರಿಂದ 35 ವರ್ಷ ವಯೋಮಿತಿಯೊಳಗಿನ ಅರ್ಹ ಅಭ್ಯರ್ಥಿಗಳು ಫೆಬ್ರುವರಿ 12 ಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ₹750 ಎಂದು ನಿಗದಿ ಪಡೆಯಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನಡೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ₹56,100 ರಿಂದ ₹ 2,08,700 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಗೌರವಯುತ ಹಾಗೂ ಭದ್ರ ವೃತ್ತಿ ಆರಂಭಿಸಲು ಅಭ್ಯರ್ಥಿಗಳಿಗೆ ದೊರಕಿರುವ ಸುವರ್ಣ ಅವಕಾಶ ಆಗಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಹಮದಾಬಾದ್ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (SAC)ನಲ್ಲಿ ಖಾಲಿ ಇರುವ ವಿಜ್ಞಾನಿ/ಇಂಜಿನಿಯರ್ SD/SC ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ವಿವಿಧ ವಿಭಾಗಗಳಲ್ಲಿ ಒಟ್ಟು 49 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.
ISRO ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆ ವಯೋಮಿತಿ ಅರ್ಜಿಶುಲ್ಕ ಆಯ್ಕೆ ಪ್ರಕ್ರಿಯೆ ಸಂಬಳ ಮತ್ತು ಪ್ರಮುಖ ದಿನಾಂಕಗಳು ಸೇರಿದಂತೆ ಎಲ್ಲಮ್ಮ ಪ್ರಮುಖ ವಿವರಗಳು ಕೆಳಗಿನ ನೀಡಲಾಗಿದೆ.
ಶೈಕ್ಷಣಿಕ ಅರ್ಹತೆ:
ವಿಜ್ಞಾನಿ/ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಯ ಸ್ವಭಾವಕ್ಕೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಪಿಎಚ್ ಡಿ/ ಎಂಇ/ ಎಂಟೆಕ್/ ಎಂ ಎಸ್ ಸಿ/ ಬಿಇ / ಬಿಟೆಕ್/ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸುತ್ತಿರಬೇಕು ಜೊತೆಗೆ ಅಧಿಸೂಚಿನಲ್ಲಿ ನಿರ್ದಿಷ್ಟ ಪಡಿಸಿರುವಂತೆ ಸಂಬಂಧಿತ ಕ್ಷೇತ್ರದ ಕೆಲಸದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.
ವಯೋಮಿತಿ:
ಫೆಬ್ರವರಿ 12 , 2026 ರ ಸ್ಥಿತಿಗೆ ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷಗಳ ನಡುವೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ
ಎಸ್ ಸಿ /ಎಸ್ ಟಿ ಅಭ್ಯರ್ಥಿಗಳಿಗೆ : 5 ವರ್ಷ
ದಿವ್ಯಾಂಗ (PwD) ಅಭ್ಯರ್ಥಿಗಳಿಗೆ ಗರಿಷ್ಟ 10 ವರ್ಷ
ಅರ್ಜಿಗೆ ಕೊನೆಯ ದಿನಾಂಕ ಮತ್ತು ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 12 2026. ಆರ್ಯ ಅಭ್ಯರ್ಥಿಗಳ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿ ಶುಲ್ಕ ₹750ನಂತೆ ನಿರ್ಧರಿಸಲಾಗಿದೆ.
ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಅಂತಿಮ ಆಯ್ಕೆಯು ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಆಧಾರವಾಗಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ISRO ಅಹಮದಾಬಾದ್ ನ ಬಾಹ್ಯಾಕಾಶ ಅನ್ವಯಿಕ ಕೇಂದ್ರ SAC ನಲ್ಲಿ ನೇಮಕ ಮಾಡಲಾಗುತ್ತದೆ.
ವೇತನ ಮತ್ತು ಸೌಲಭ್ಯಗಳು: ಆಯ್ಕೆಯಾದ ವಿಜ್ಞಾನಿ/ ಇಂಜಿನಿಯರ್ ಗಳಿಗೆ ತಿಂಗಳಿಗೆ ₹ 56,100 ರಿಂದ ₹ 2,08,700 ವರೆಗೆ ವೇತನ ನೀಡಲಾಗುತ್ತದೆ. ಇದಲ್ಲದೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಭತ್ಯೆಗಳು ಮತ್ತು ಇತರ ಸೌಲಭ್ಯಗಳು ಸಹ ಲಭ್ಯವಿರುತ್ತವೆ.
ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ISRO SAC ನೇಮಕಾತಿ 2026 ಅತ್ಯುತ್ತಮ ಅವಕಾಶವಾಗಿದೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಮನನವಾಗಿ ಓದಿಕೊಳ್ಳಬೇಕು.
ಇನ್ನಷ್ಟು ಓದಿರಿ:
ಬುಧವಾರದ ಪಂಚಾಂಗ ಮತ್ತು ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಪ್ರಯತ್ನವೇ ಯಶಸ್ವಿನ ಗುಟ್ಟು