<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ರಾನಿ’, ‘ಅಖಂಡ 2’ ಮತ್ತು ಇನ್ನಿತರ ಹೊಸ ಸಿನಿಮಾ ಪ್ರಚಾರ

ರಾನಿ’, ‘ಅಖಂಡ 2’ ಮತ್ತು ಇನ್ನಿತರ ಹೊಸ ಸಿನಿಮಾ ಪ್ರಚಾರ
Summary: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಅಭಿನಯದಿಂದ ಕನ್ನಡಿಗರ ಮನ ಗೆದ್ದಿರುವ ನಟ‌ ಕಿರಣ್ ರಾಜ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ರಾನಿ' ಇಂದು, ಜನವರಿ 9ರಂದು ಕನ್ನಡ ಝೀ5 ಪ್ರವೇಶಿಸಿದೆ.
BELAGAVI NEWS :

ಗುರುತೇಜ್ ಶೆಟ್ಟಿ ನಿರ್ದೇಶನದ ಗ್ಯಾಂಗ್​​​ಸ್ಟರ್ ಕಥೆಯಲ್ಲಿ ಸಮೀಕ್ಷ, ಅಪೂರ್ವ, ರಾಧ್ಯಾ ನಾಯಕಿಯರ ಜೊತೆಗೆ ಪೋಷಕ ಪಾತ್ರದಲ್ಲಿ ರವಿಶಂಕರ್, ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್, ಮಂಡ್ಯ ರಮೇಶ್ ಹೀಗೆ ಹಲವರು ಕಾಣಿಸಿಕೊಂಡಿದ್ದಾರೆ. 2024ರ ಕೊನೆಗೆ ಈ ಸಿನಿಮಾ ತೆರೆಕಂಡಿತ್ತು.

ಇತ್ತೀಚಿನ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಮಿಸ್​ ಮಾಡಿಕೊಂಡವರು ತಾವಿದ್ದ ಸ್ಥಳದಲ್ಲೇ ಕುಳಿತು ಮೊಬೈಲ್​​ನಲ್ಲಿ ನೋಡಬಹುದು. ರೊಮ್ಯಾಂಟಿಕ್​, ಕಾಮಿಡಿ, ಕ್ರೈಮ್​​ ಥ್ರಿಲ್ಲರ್​​​ನಿಂದ ಹಿಡಿದು ಹಲವು ಜಾನರ್​​ಗಳ ಹಲವು ಸಿನಿಮಾಗಳೀಗ ಒಟಿಟಿಯಲ್ಲಿ ಲಭ್ಯವಿದೆ.

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಅಭಿನಯದಿಂದ ಕನ್ನಡಿಗರ ಮನ ಗೆದ್ದಿರುವ ನಟ‌ ಕಿರಣ್ ರಾಜ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ರಾನಿ' ಇಂದು, ಜನವರಿ 9ರಂದು ಕನ್ನಡ ಝೀ5 ಪ್ರವೇಶಿಸಿದೆ. ನಂದಮೂರಿ ಬಾಲಕೃಷ್ಣ, ಸಂಯುಕ್ತಾ ಮೆನನ್, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ ಅಭಿನಯದ ಅಖಂಡ 2 ಇಂದು, ಜನವರಿ 9ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಪ್ರಾರಂಭಿಸಿದೆ.

ತೆಲುಗಿನ ಫ್ಯಾಂಟಸಿ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಬೋಯಪಾಟಿ ಶ್ರೀನು ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಇದು 2021ರ ಅಖಂಡ ಸಿನಿಮಾದ ಸೀಕ್ವೆಲ್​ ಆಗಿದೆ.

ಇನ್ನಷ್ಟು ಓದಿರಿ:


ಹಿರಾಕುಡ್ ಜಲಾಶಯಕ್ಕೆ ವಿದೇಶಿ ಪಕ್ಷಿಗಳ ಮಹಾ ಪಲಾಯನ.
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online