<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

‘ಟಾಕ್ಸಿಕ್’ ಸ್ಟೈಲ್ ಬಳಿಕ ರುಕ್ಮಿಣಿ ವಸಂತ್ ಮೆಲಿಸಾ ಸ್ಟನ್ನಿಂಗ್ ಲುಕ್

‘ಟಾಕ್ಸಿಕ್’ ಸ್ಟೈಲ್ ಬಳಿಕ ರುಕ್ಮಿಣಿ ವಸಂತ್ ಮೆಲಿಸಾ ಸ್ಟನ್ನಿಂಗ್ ಲುಕ್
Summary: ಕಾಂತಾರ ಹಿಟ್ ಬಳಿಕ ಯಶ್ ಟಾಕ್ಸಿಕ್ ಸ್ಟೈಲ್ನಲ್ಲಿ ಗಮನ ಸೆಳೆದಿರುವ ಈ ಸಮಯದಲ್ಲಿ, ರುಕ್ಮಿಣಿ ವಸಂತ್ ಮತ್ತು ಮೆಲಿಸಾ ತಮ್ಮ ಸ್ಟನ್ನಿಂಗ್ ಲುಕ್ಗಳಿಂದ ಫ್ಯಾನ್ಸ್‌ರನ್ನು ಫಿದಾ ಮಾಡಿದ್ದಾರೆ. ಮೆಲಿಸಾ ರೋಲ್​ನಲ್ಲಿ ರುಕ್ಮಿಣಿ ವಸಂತ್ ಸಖತ್​ ಸ್ಟನ್ನಿಂಗ್​ ಲುಕ್​​​ ಕೊಟ್ಟಿದ್ದು, ಟಾಕ್ಸಿಕ್ ಇಂಟರ್​​​ನೆಟ್​ನಲ್ಲಿ ಬಿರುಗಾಳಿಯೆಬ್ಬಿಸಿದೆ.
BELAGAVI NEWS :

ಬಿಗ್​ ಬಜೆಟ್​ ಚಿತ್ರದ ನಾಯಕ ಯಶ್​ ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾ ಅಕೌಂಟ್​ಗಳಲ್ಲಿ ರುಕ್ಮಿಣಿ ವಸಂತ್ ಪೋಸ್ಟರ್ ಹಂಚಿಕೊಂಡು ಅವರ ಪಾತ್ರದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಬಹುಭಾಷಾ ನಟಿ ರುಕ್ಮಿಣಿ ವಸಂತ್​ ಅವರ ಸ್ಟನ್ನಿಂಗ್​ ಲುಕ್​​ ಶೇರ್ ಮಾಡಿ, 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಿಂದ ಮೆಲಿಸಾ (MELLISA) ಆಗಿ ರುಕ್ಮಿಣಿ ವಸಂತ್ ಅವರನ್ನು ಪರಿಚಯಿಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಮೂಲತಃ ಕನ್ನಡದ ನಟಿ ಸದ್ಯ ಬಹುಭಾಷೆಗಳಲ್ಲಿ ಬಹುಬೇಡಿಕೆ ಹೊಂದಿದ್ದು, ಇದೀಗ ಪ್ಯಾನ್​​ ವರ್ಲ್ಡ್​​ ಲೆವೆಲ್​ನಲ್ಲಿ ತೆರೆಕಾಣುತ್ತಿರುವ ಟಾಕ್ಸಿಕ್​​ನಲ್ಲಿ ಮುಖ್ಯ ಪಾತ್ರ ವಹಿಸಿರೋದು ಅಭಿಮಾನಿಗಳಲ್ಲಿ ಖುಷಿ ತರಿಸಿದೆ.

2025ರ ಅಕ್ಟೋಬರ್​​ 2ರಂದು ತೆರೆಕಂಡ 'ಕಾಂತಾರ ಚಾಪ್ಟರ್​ 1'ರಲ್ಲಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ 2025ರ ಬ್ಲಾಕ್ಸ್​​ಬಸ್ಟರ್​ ಸಿನಿಮಾ ಲಿಸ್ಟ್​​ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಅಭೂತಪೂರ್ವ ಯಶಸ್ಸು ಕಂಡ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸುವ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ರುಕ್ಮಿಣಿ ವಸಂತ್ ಅವರೀಗ ನ್​​ ವರ್ಲ್ಡ್​​ ಲೆವೆಲ್​ನ ಸಿನಿಮಾದಲ್ಲಿ ಆಕರ್ಷಕ ಪಾತ್ರ ವಹಿಸಿದ್ದಾರೆ. ಇದು ನಟಿಯ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಂತಿದೆ.

2026ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಕ್ಕೆ ಕೊನೆಗೂ ಕ್ಷಣಗಣನೆ ಆರಂಭವಾಗಿದೆ. ಸ್ಯಾಂಡಲ್​​ವುಡ್​​ ರಾಕಿಂಗ್​​ ಸ್ಟಾರ್ ಯಶ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರ ಮಾರ್ಚ್ 19, 2026ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿದ್ದು, ಚಿತ್ರತಂಡ ಸೋಷಿಯಲ್​ ಮೀಡಿಯಾದಲ್ಲಿ ಪ್ರಮೋಶನ್​ ಪ್ರಾರಂಭಿಸಿದೆ.
ಕಳೆದ ಒಂದು ವರ್ಷದಿಂದ ಈ ಸಿನಿಮಾ ಜೊತೆ ಹಲವು ತಾರೆಯರ ಹೆಸರು ಕೇಳಿಬಂದಿತ್ತು. ಇದೀಗ ಚಿತ್ರತಂಡ ಒಂದಾದ ಬಳಿಕ ಒಂದರಂತೆ ತನ್ನ ತಾರಾಬಳಗವನ್ನು ಪರಿಚಯಿಸುತ್ತಿದೆ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ನಯನತಾರಾ ಬೆನ್ನಲ್ಲೇ ಕನ್ನಡ ಖ್ಯಾತ ನಟಿ ರುಕ್ಮಿಣಿ ವಸಂತ್​ ಪಾತ್ರವನ್ನು ಚಿತ್ರತಂಡವಿಂದು ಅಧಿಕೃತವಾಗಿ ಘೋಷಿಸಿದೆ.

ಕೆಜಿಎಫ್: ಚಾಪ್ಟರ್ 2 ನಂತರ ಯಶ್ ಮತ್ತೆ ದೊಡ್ಡ ಪರದೆಗೆ ಮರಳುತ್ತಿರುವ ಚಿತ್ರ 'ಟಾಕ್ಸಿಕ್'. ಈ ಬಹುನಿರೀಕ್ಷಿತ ಚಿತ್ರವನ್ನು ಯಶ್ ಮತ್ತು ಗೀತು ಮೋಹನ್ ದಾಸ್ ಬರೆದಿದ್ದಾರೆ. ಗೀತು ಮೋಹನ್​ ದಾಸ್​ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ.ನಾರಾಯಣ್​​ ಮತ್ತು ಯಶ್ ನಿರ್ಮಿಸುತ್ತಿದ್ದಾರೆ. ತಾಂತ್ರಿಕ ತಂಡ ಗಮನಿಸೋದಾದ್ರೆ, ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ ಸಂಯೋಜನೆ ಮತ್ತು ಉಜ್ವಲ್ ಕುಲಕರ್ಣಿ ಸಂಕಲನ ನಿರ್ವಹಿಸಿದ್ದಾರೆ.

ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ, ಅನ್ಬರಿವ್ ಜೊತೆಗೆ ಪ್ರಮುಖ ಸಾಹಸ ಸನ್ನಿವೇಶಗಳನ್ನು ನಿರ್ವಹಿಸಿದ್ದಾರೆ. ಸಿನಿಮಾ ಹಬ್ಬಗಳ ವಾರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.

ಡಿಸೆಂಬರ್​ 21ರಂದು ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ ಅವರ ಫಸ್ಟ್ ಲುಕ್​ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿತು. ಕಳೆದ ಒಂದು ವರ್ಷದಿಂದ ಈ ಸಿನಿಮಾ ಜೊತೆ ಹಲವು ತಾರೆಯರ ಹೆಸರು ಕೇಳಿಬಂದಿತ್ತು. ಇದೀಗ ಚಿತ್ರತಂಡ ಒಂದಾದ ಬಳಿಕ ಒಂದರಂತೆ ತನ್ನ ತಾರಾಬಳಗವನ್ನು ಪರಿಚಯಿಸುತ್ತಿದೆ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ನಯನತಾರಾ ಬೆನ್ನಲ್ಲೇ ಕನ್ನಡ ಖ್ಯಾತ ನಟಿ ರುಕ್ಮಿಣಿ ವಸಂತ್​ ಪಾತ್ರವನ್ನು ಚಿತ್ರತಂಡವಿಂದು ಅಧಿಕೃತವಾಗಿ ಘೋಷಿಸಿದೆ.

ಇನ್ನಷ್ಟು ಓದಿರಿ:
ಮಹೀಂದ್ರಾ ಹೊಸ ಎಸ್ಯುವಿ: ಕ್ಯಾಮೆರಾ ಜೊತೆ ಲಾಂಚ್
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online