<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

‘ಸೀತಾ ಪಯಣ’ : ಅರ್ಜುನ್ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರವರಿ 14ಕ್ಕೆ ಬಿಡುಗಡೆ

‘ಸೀತಾ ಪಯಣ’ : ಅರ್ಜುನ್ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರವರಿ 14ಕ್ಕೆ ಬಿಡುಗಡೆ
Summary: 'ಸೀತಾ ಪಯಣ' ಸಿನಿಮಾ ನಿರಂಜನ , ಐಶ್ವರ್ಯ ಅರ್ಜುನ್ ಅಭಿನಯದ, ಅರ್ಜುನ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರುವರಿ ೧೪ ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.
belagavi news :
ಅರ್ಜುನ ಸರ್ಜಾ ನಿರ್ದೇಶನದ 'ಸೀತಾ ಪಯಣ' ಸಿನಿಮಾ: ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಅರ್ಜುನ್ ಸರ್ಜಾ ಅವರ ನಿರ್ದೇಶನದ ಮುಂದಿನ ಬಹು ನಿರೀಕ್ಷಿತ 'ಸೀತಾ ಪಯಣ' ಫೆಬ್ರುವರಿ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಮತ್ತು ನಿರಂಜನ್ ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಶ್ರೀರಾಮ್ ಫಿಲಂಸ್ ಇಂಟರ್ನ್ಯಾಷನಲ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

ಚಿತ್ರತಂಡದ ಸದಸ್ಯರು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪ್ರೋತ್ಸಾಹವನ್ನು ಹಂಚಿಕೊಂಡು ಚಿತ್ರದ ಕಥಾ ರೇಖೆ, ದೃಶ್ಯಾವಳಿ ಮತ್ತು ವಿಶೇಷ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕರು ಈ ಚಿತ್ರವು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಲಿದೆ ಎಂದು ಹೇಳಿದರು.



ನನ್ನ ಮಗಳು ಐಶ್ವರ್ಯ ನಾಯಕಿಯಾಗಿ ಮತ್ತು ನಿರಂಜನ್ ನಾಯಕನಾಗಿ ನಟಿಸಿರುವ ಈ ಹೊಸ ಕನ್ನಡ ಚಿತ್ರವು ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಪ್ರಕಾಶ್ ರೈ, ಸತ್ಯ ರಾಜ್ ಸರಳ ಅವರಂಥ ಅನುಭವಿ ಮತ್ತು ಬಹುಮಾನಿತ ಕಲಾವಿದರು ಅಭಿನಯ ಚಿತ್ರಕ್ಕೆ ಇನ್ನಷ್ಟು ತೂಕ ನೀಡಿದೆ. ನಾನು ಕೂಡ ಅಭಿನಯಿಸಿರುವುದು ನನಗೆ ಹೆಮ್ಮೆಯ ಸಂಗತಿ, ಇನ್ನೊಂದು ದೊಡ್ಡ ಆಕರ್ಷಣೆ ಎಂದರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಈ ಪಾತ್ರ ಖಂಡಿತವಾಗಿಯೂ ವಿಭಿನ್ನ ಅನುಭವ ನೀಡಲಿದ್ದು, ಅವರ ಎನರ್ಜಿ ಮತ್ತು ಸ್ಟೈಲ್ ಮನ ಸೋರೆಗೊಳ್ಳಲಿದೆ. ಚಿತ್ರಕ್ಕೆ ಅನೂಪ್ ರುಬೆನ್ಸ್ ಅವರ ಸಂಗೀತ ಯೋಜನೆ, ಬಾಲಮುರುಗನ್ ಅವರ ಅದ್ಭುತ ಛಾಯಾಗ್ರಹಣ. ಹಾಗೂ ಆಯುಬ್ ಅವರ ಕುಶಲ ಸಂಕಲನ ಚಿತ್ರವನ್ನು ತಾಂತ್ರಿಕವಾಗಿ ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕಥೆ, ಅಭಿನಯ, ಸಂಗೀತ ಮತ್ತು ತಾಂತ್ರಿಕ ಗುಣಮಟ್ಟ ಈ ಚಿತ್ರವು ಪ್ರೇಕ್ಷಕರಿಗೆ ಸಂಪೂರ್ಣ ಸಿರಿ ಅನುಭವವನ್ನು ನೀಡಲಿದೆ.



ನಾಯಕಿ ಐಶ್ವರ್ಯ ಮಾತನಾಡಿ ಬಹಳ ದಿನಗಳ ನಂತರ ಸೀತಾ ಪಯಣ ಚಿತ್ರದ ಮೂಲಕ ಮತ್ತೆ ನಟಿಸಿರುವುದು ನನಗೆ ತುಂಬಾ ಸಂತೋಷ ನೀಡಿದೆ. ನನ್ನ ಮೊದಲ ಚಿತ್ರ ಪ್ರೇಮ ಬರಹಕ್ಕೆ ನೀವು ನೀಡಿದ ಪ್ರೋತ್ಸಾಹ ಮತ್ತು ಪ್ರೀತಿ ಈ ಚಿತ್ರಕ್ಕೂ ಮುಂದುವರೆಯಬೇಕು ಎಂದು ನಾನು ಮನಪೂರ್ವಕವಾಗಿ ಆಶಿಸುತ್ತೇನೆ. ನಾಯಕ ನಿರಂಜನ್ ಕೂಡ ಒಳ್ಳೆಯ ನಟ ಅವರ ಜೊತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಜೊತೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ. ಅವರ ಪಾತ್ರ ಖಂಡಿತವಾಗಿಯೂ ಎಲ್ಲರ ಗಮನ ಸೆಳೆಯಲಿದೆ. ಸೀತಾ ಪಯಣ ಚಿತ್ರವನ್ನು ನನ್ನ ಅಪ್ಪಾ ಅರ್ಜುನ್ ಜನ್ಯ ನಿರ್ದೇಶಿಸುತ್ತಿದ್ದಾರೆ. ಅವರು ಒಳ್ಳೆಯ ಕಥೆಯೊಂದಿಗೆ ಎಲ್ಲರೂ ಕುಟುಂಬ ಸಮೇತ ಬಂದು ನೋಡಬಹುದು. ಸುಂದರ ಚಿತ್ರವನ್ನು ನೀಡಿದ್ದಾರೆ.

ಈ ಚಿತ್ರದಲ್ಲಿ ಪ್ರಕಾಶ್ ರೈ, ಸತ್ಯಜಿತ್ ಹಾಗೂ ನನ್ನ ಅಪ್ಪಾ ಸೇರಿದಂತೆ ಹಿರಿಯ ಹಾಗೂ ಅನುಭವಿ ಕಲಾವಿದರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು, ನನಗೆ ಬಹಳ ಖುಷಿಯ ವಿಷಯ. ಚಿತ್ರಕ್ಕೆ ಅನೂಪ್ ರುಬೆನ್ಸ್ ಅವರ ಸಂಗೀತ ಸಂಯೋಜನೆ ಇದ್ದು, ಈಗಾಗಲೇ ಬಿಡುಗಡೆಯಾದ ಹಾಡುಗಳ ಪ್ರೇಕ್ಷಕರಿಂದ ಭರ್ಜರಿ ಮೆಚ್ಚಿಗೆ ಪಡೆದಿದೆ. ಇನ್ನೂ ಎರಡು ಹೊಸ ಹಾಡುಗಳು ಸದ್ಯದಲ್ಲೇ ಅನಾವರಣವಾಗಲಿವೆ ಎಂಬುದು ತಿಳಿಸಲು ಖುಷಿಯಾಗುತ್ತಿದೆ. ಎಲ್ಲರೂ ಚಿತ್ರರಂಗಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಆಚರಿಸಬೇಕು ಎಂದು ನಾಯಕ್ ಐಶ್ವರ್ಯ ತಿಳಿಸಿದ್ದಾರೆ.



ಸೀತಾ ಪಯಣ ಇದು ಕೇವಲ ಒಬ್ಬ ವ್ಯಕ್ತಿಯ ಪಯಣವಲ್ಲ, ಇದು ಮನಸ್ಸಿನ ಪಯಣ. ನಾನು ಜೀವನದಲ್ಲಿ ತೆಗೆದುಕೊಳ್ಳಬೇಕಿರುವ ಮೌಲ್ಯಗಳ ಪಯಣ. ಹಾಗೆಯೇ ಭಾವನೆಗಳ ಜೊತೆಗೆ ಸುಂದರ ಪಯಣ ಪ್ರತಿ ಪ್ರೇಕ್ಷಕನಿಗೂ ತನ್ನದೇ ಆದ ಅನುಭವವನ್ನು ನೀಡುವ ಕಥೆಯಿದು.

ಈ ಚಿತ್ರವನ್ನು ನಿರೀಕ್ಷಿಸಿದವರು ಚಿತ್ರಮಂದಿರದಿಂದ ಹೊರ ಹೋಗುವಾಗ ಒಂದು ನಗು ಮತ್ತು ತೃಪ್ತಿಯ ಭಾವನೆ ಜೊತೆ ಹೊರ ಹೋಗುವುದು ಖಂಡಿತ. ಮನಸ್ಸಿಗೆ ಹತ್ತು ಕಥೆ ಸಂಬಂಧಗಳ ತಾಪ ಹಾಗೂ ಜೀವನದ ಸಣ್ಣ ಸಣ್ಣ ಅರ್ಥಗಳನ್ನು ಹೇಳುವ ಪ್ರಯತ್ನವೇ ಸೀತಾ ಪಯಣ ಚಿತ್ರ.ಸೀತಾ ಪಯಣ ಚಿತ್ರವು ಫೆಬ್ರವರಿ 14ರಂದು ಕನ್ನಡ ಸೇರಿರಂತೆ 5 ಭಾಷೆಗಳಲ್ಲಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಪ್ರೀತಿಸಿ ಪ್ರೋತ್ಸಾಹ ನೀಡಬೇಕು ಎಂಬ ಚಿತ್ರ ತಂಡ ಮನವಿ ಮಾಡಿಕೊಂಡಿದೆ.


ಸೀತಾ ಪಯಣ ಚಿತ್ರದಲ್ಲಿ ನಟಿಸಿರುವ ನನಗೆ ಅತಿವ ಸಂತೋಷ ನೀಡಿದೆ. ಇದು ಬೇರೆ ಚಿತ್ರದಂತೆ ಅನಿಸೋದಿಲ್ಲ, ನಮ್ಮದೇ ಕುಟುಂಬದವರ ಜೊತೆ ಇದ್ದಂತೆ ಅನುಭವ ಆಯ್ತು ಎಂದು ನಾಯಕ ನಿರಂಜನ್ ಹೇಳಿದರು. ಈ ಚಿತ್ರದಲ್ಲಿನ ನನ್ನ ಪಾತ್ರವೂ ನನಗೆ ತುಂಬಾ ಇಷ್ಟವಾಗಿದೆ. ಪ್ರೇಕ್ಷಕರಿಗೂ ಅದು ಮೆಚ್ಚುಗೆ ಪಡೆಯಲಿದೆ ಎಂದು ವಿಶ್ವಾಸವಿದೆ ಎಂದರು. ಚಿತ್ರದ ಹಾಡುಗಳು ಹಾಗೂ ಸಂಗೀತದ ಬಗ್ಗೆ ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ ಅವರು ಮಾಹಿತಿ ನೀಡಿದರು.

ಈಗಾಗಲೇ ಬಿಡುಗಡೆಯಾದ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಮುಂದಿನ ಹಾಡುಗಳಿಗೆ ಅದೇ ರೀತಿಯ ಪ್ರೀತಿ ಸಿಗಲಿದೆ ಎಂದು ತಿಳಿಸಿದರು. ಈ ಸಂದರ್ಭದ ಚಿತ್ರದ ತಜ್ಞರಾದ ಅಂಜನ್ ಅರ್ಜುನ್ ಹಾಗೂ ಸೂರಜ್ ಸರ್ಜಾ ಅವರು ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ನಿರ್ಮಾಣ ಹಾಗೂ ತಾಂತ್ರಿಕ ಗುಣಮಟ್ಟದ ಬಗ್ಗೆ ಮಾತನಾಡಿದರು. ಸೀತಾ ಪಯಣ ಚಿತ್ರವು ಕಥೆ ಅಭಿನಯ ಮತ್ತು ತಾಂತ್ರಿಕವಾಗಿ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿತು.


ಇನ್ನಷ್ಟು ಓದಿರಿ:


ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online