ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಒಂದು ನಿಮಿಷದ ಭಾಷಣವೇ ಭಾರಿ ವಿವಾದಕ್ಕೆ ಕಾರಣವಾಯಿತು. ಭಾಷಣದ ವೇಳೆ ಕಾಂಗ್ರೆಸ್ ಸದಸ್ಯರು ಅಗೌರವ ತೋರಿದ್ದಾರೆ ಎಂದು ಆರೋಪದೊಂದಿಗೆ ವಿಧಾನಸಭೆಯಲ್ಲಿ ಬಾರಿ ಸದ್ದು ಗದ್ದಲ ಹಾಗೂ ಕೋಲಾಹಲ ಉಂಟಾಯಿತು. ಸಭೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ತೋರಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ನಡೆ ಎಂದು ಅವರು ಹೇಳಿದರು. ಪ್ರಶ್ನೆ ಈ ಹಿಂದೆ ನಮ್ಮ 18 ಬಿಜೆಪಿ ಶಾಸಕರು ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಅಮಾನತುಗೊಂಡಿದ್ದರು. ಹಾಗಾದರೆ ಈಗ ೫ ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ? ಎಂದು ಅಶೋಕ್ ಪ್ರಶ್ನಿಸಿದರು.
ಈ ವಿಚಾರದಲ್ಲಿ ಸ್ಪೀಕರ್ ಸ್ಪಷ್ಟವಾದ ರೂಲಿಂಗ್ ನೀಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯಪಾಲರ ಸ್ಥಾನಮಾನಕ್ಕೆ ಧಕ್ಕೆ ತಂದಿರುವ ಘಟನೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂಬುದು ವಿಪಕ್ಷದ ಒತ್ತಾಯವಾಗಿದೆ. ಈ ವಿಚಾರವನ್ನು ಆಧರಿಸಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ತೀವ್ರಗೊಂಡಿತು. ಸದನ ಕೆಲಕಾಲ ಗದ್ದಲದಿಂದ ಕೂಡಿದು, ರಾಜಕೀಯ ತಣಿವು ಉಚ್ಚ ಮಟ್ಟ ತಲುಪಿತು. ರಾಜ್ಯ ರಾಜಕಾರಣದಲ್ಲಿ ಈ ಘಟನೆ ಹೊಸ ಚರ್ಚೆಗೆ ದಾರಿ ಮಾಡಿ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಹಾಗೂ ಸ್ಪೀಕರ್ ನಿರ್ಣಯದ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ರಾಜ್ಯ ವಿಧಾನ ಮಂಡಳದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಿಚಾರವಾಗಿ ರಾಜಕೀಯ ವಾಕ್ಸಮರ ತೀವ್ರಗೊಂಡಿರುವ ನಡುವೆ, ಕಾನೂನು ಸಚಿವ ಎಚ್.ಕೆ.ಪಾಟೀಲ್ ತಮ್ಮ ನಿನ್ನ ಹೇಳಿಕೆಯನ್ನು ಇಂದು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ರಾಜ್ಯಪಾಲರು ಸದನದಲ್ಲಿ ಭಾಷಣವನ್ನು ಸಂಪೂರ್ಣವಾಗಿ ಓದದೆ ತಿರಸ್ಕರಿಸಿದ್ದು, ಇದು ಸಂವಿಧಾನದ 176(1)ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಎಚ್.ಕೆ.ಪಾಟೀಲ್ ವಾದಿಸಿದರು. ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿದ ರೀತಿಯಲ್ಲಿ ರಾಜ್ಯಪಾಲರು ವರ್ತಿಸಿದ್ದಾರೆ ಎಂದು ಅವರು ಹೇಳಿದರು. ಇನ್ನು ರಾಷ್ಟ್ರಗೀತೆ ಹಾಡುವ ಮೊದಲವೇ ರಾಜ್ಯಪಾಲರು ಸದನವನ್ನು ತೊರೆದಿದ್ದು, ಇದು ರಾಷ್ಟ್ರಗೀತೆಗೆ ಅಪಮಾನ ಮಾಡಿದಂತಾಗಿದೆ ಎಂದು ಕಾನೂನು ಸಚಿವರೂ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ಹಾಗೂ ರಾಷ್ಟ್ರೀಯ ಸಂಕೇತಗಳಿಗೆ ಗೌರವ ತೋರಬೇಕಾದವರು ಈ ರೀತಿಯ ನಡೆ ತೋರಿದ್ದು ದೂರಾದೃಷ್ಟಕರ ಎಂದು ಹೇಳಿದರು.
ನಾನು ಅಡ್ಡಿ ಮಾಡಿಲ್ಲ ಎಚ್.ಕೆ.ಪಾಟೀಲ್ ಸ್ಪಷ್ಟನೆ : ವಿಪಕ್ಷ ನಾಯಕ ಆರ್. ಅಶೋಕ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ ಹೆಚ್.ಕೆ.ಪಾಟೀಲ್, ನಾನು ರಾಜ್ಯಪಾಲರನ್ನು ನಿನ್ನೆ ತಡೆಯಲಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಕರೆದ ಕಾರಣಕ್ಕೆ ಮಾತ್ರ ಹಿಂದಕ್ಕೆ ಹೋದೆ ಹೊರತು, ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ್ದೇನೆ ಎನ್ನುವ ಆರೋಪ ಸಂಪೂರ್ಣ ಸುಳ್ಳು ಎಂದು ಅವರು ಹೇಳಿದರು. ಈ ಹೇಳಿಕೆಯಿಂದಾಗಿ ರಾಜ್ಯಪಾಲರ ಪಾತ್ರ, ಸಂವಿಧಾನಿಕ ಜವಾಬ್ದಾರಿ ಹಾಗೂ ವಿಧಾನ ಮಂಡಲದ ಗೌರವದ ಕುರಿತು ರಾಜ್ಯ ರಾಜಕೀಯದಲ್ಲಿ ಚರ್ಚೆ ಇನ್ನಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತವೆ.
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನದ ವಿಚಾರವಾಗಿ ವಿಧಾನಸಭೆಯಲ್ಲಿ ರಾಜಕೀಯ ಕಾವೇರಿದ ವಾತಾವರಣ ಮುಂದುವರೆದಿದೆ. ರಾಜ್ಯಪಾಲರು ಸಂಪೂರ್ಣ ವಿವೇಚನೆಯಿಂದಲೇ ಭಾಷಣ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟವಾಗಿ ಸಮರ್ಥಿಸಿಕೊಂಡರು. ಎಚ್.ಕೆ.ಪಾಟೀಲರು ರಾಜ್ಯಪಾಲರಿಗೆ ಓಡಿ ಹೋದರು ಎಂದು ಹೇಳಿರುವುದು ಸರಿಯಲ್ಲ ಎಂದು ಆರ್.ಅಶೋಕ್ ತಿರುಗೇಟು ನೀಡಿದರು.
ರಾಜ್ಯಪಾಲರು ರಾಷ್ಟ್ರಗೀತೆ ಆರಂಭವಾಗಿದ್ದರೆ ಖಂಡಿತವಾಗಿಯೂ ಸದನದಲ್ಲಿಯೇ ಉಳಿಯುತ್ತಿದ್ದರು ಎಂದು ಅವರು ಹೇಳಿದರು. ಈ ವೇಳೆ ಶಾಸಕರಾದ ಅಶ್ವಥ್ ನಾರಾಯಣ್ ಹಾಗೂ ಸುನಿಲ್ ಕುಮಾರ್ ಕೂಡ, ರಾಜ್ಯಪಾಲರಿಗೆ ಅಗೌರವ ತೋರಿದ ಕಾಂಗ್ರೆಸ್ ಸದಸ್ಯರ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯಪಾಲರಂತಹ ಸಂವಿಧಾನಾತ್ಮಕ ಹುದ್ದೆಗೆ ಗೌರವ ನೀಡಬೇಕು ಎಂಬುದು ವಿಪಕ್ಷದ ಒತ್ತಾಯವಾಗಿದೆ.
ಚರ್ಚೆಯ ಬರದಲ್ಲಿ ಸುನಿಲ್ ಕುಮಾರ್ ಅವರು ಸರ್ಕಾರವನ್ನು ಗುಂಡ ಸರಕಾರ ಎಂದು ಹೇಳಿದ್ದು ಕಾಂಗ್ರೆಸ್ ಶಾಸಕರನ್ನು ಕೆರಳಿಸಿತು. ಇದರಿಂದ ಸದನದಲ್ಲಿ ತೀವ್ರ ಆಕ್ರೋಶ, ಜಟಾಪಟಿ ಮತ್ತು ಗದ್ದಲ ಮತ್ತಷ್ಟು ಹೆಚ್ಚಾಯಿತು. ಸತತ ವಾಗ್ವಾದ ದಿಂದಾಗಿ ವಿಧಾನಸಭೆಯ ಕಲಾಪ ವಾತಾವರಣ ಸಂಪೂರ್ಣ ಅಶಾಂತಗೊಂಡಿದ್ದು ರಾಜ್ಯ ರಾಜಕೀಯದಲ್ಲಿ ಈ ವಿಚಾರ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತವೆ.
ರಾಜ್ಯಪಾಲರ ಭಾಷಣದ ವಿಚಾರವಾಗಿ ವಿಧಾನಸಭೆಯಲ್ಲಿ ಉಂಟಾದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಸಂವಿಧಾನದ 176 (1) ನೇ ವಿಧಿಯ ಪ್ರಕಾರ ರಾಜ್ಯಪಾಲರು ಭಾಷಣ ಓದದೆ ಇರುವುದು, ಉಲ್ಲಂಘನೆ ಆಗಿದ್ದು, ಅದನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನಾನು ರಾಜ್ಯ ಸರ್ಕಾರ ನಮ್ಮ ನೀತಿಗಳು ಏನು, ನಾವು ಏನು ಮಾಡುತ್ತೇವೆ ಎಂಬುದನ್ನು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿಸುವುದು ಜಂಟಿ ಅಧಿವೇಶನದ ಉದ್ದೇಶ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಲಾಯಿತು. ರಾಜ್ಯಪಾಲರನ್ನು ಪ್ಲೀಸ್ ಮಾಡಲು ಭಾಷಣ ಸಿದ್ಧಪಡಿಸುವುದಿಲ್ಲ ಎಂದು ಸ್ಪಷ್ಟ ನೀಡಲಾಯಿತು. ನಾನು ರಾಜ್ಯಪಾಲರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ, ವೈಯಕ್ತಿಕ ನಿಂದನೆಯನ್ನು ಮಾಡಿಲ್ಲ. ಆದರೆ ಸಂವಿಧಾನದ ಪ್ರಕಾರ ಅವರು ಭಾಷಣ ಓದದೇ ಇರುವುದು ತಪ್ಪು. ಅದರ ನೋವು ನಮ್ಮ ಸರ್ಕಾರಕ್ಕೆ ಇದೆ ಎಂದು ಸಚಿವರು ಹೇಳಿದರು. ನಾನು ರಾಜ್ಯಪಾಲರನ್ನು ತಡೆಯಲು ಹೋಗಿಲ್ಲ.
ನಾವು ಕಾರಿನ ತನಕ ಹೋಗಿ ಅವರಿಗೆಬೀಳ್ಕೊಟ್ಟಿದ್ದೇವೆ .ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಹೋಗಿ ರಾಜ್ಯಪಾಲರನ್ನು ಬೀಳ್ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ಸಚಿವ ಭೈರತಿ ಸುರೇಶ್ ಗೆ 'ಏಳು ತಿಂಗಳಿಗೆ ಹುಟ್ಟಿದವರು' ಎಂದು ಹೇಳಿದ್ದು ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಭಾರೀ ಕಿಚ್ಚು ಹಚ್ಚಿತು. ಈ ಹೇಳಿಕೆಯಿಂದ ಗದ್ದಲ ತೀವ್ರಗೊಂಡಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶ ಮಾಡಬೇಕಾಯಿತು. ಆಕ್ಷೇಪಾರ್ಹ ಪದವನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕಲು ಸೂಚಿಸಲಾಯಿತು. ಕೊನೆಯ ಮಾತು ಕೊನೆಗೆ ಮಾತನಾಡಿದ ಸ್ಪೀಕರ್ ಖಾದರ್ ರಾಜ್ಯಪಾಲರ ನಡೆ ಹಾಗೂ ನಂತರ ನಡೆದ ಎಲ್ಲಾ ಘಟನೆಗಳ ಕುರಿತು ಮುಂದಿನ ವಾರ ಸ್ಪಷ್ಟ ರೂಲಿಂಗ್ ನೀಡಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಇನ್ನಷ್ಟು ಓದಿರಿ:
ವೈದ್ಯರ ಸಲಹೆ: ಡೈಟ್ ಇಲ್ಲದೆ ಸರಳ ನೈಸರ್ಗಿಕ ಕ್ರಮಗಳಿಂದ ತೂಕ ಇಳಿಸುವುದು ಹೇಗೆ?