ಜೋಶ್ ಟಂಗ್ಗೆ ಅವಕಾಶ: ಅಚ್ಚರಿ ಎಂಬಂತೆ ಇಂಗ್ಲೆಂಡ್ ಪರ ಒಮ್ಮೆಯೂ ವೈಟ್ಬಾಲ್ ಕ್ರಿಕೆಟ್ ಆಡದ ಜೋಶ್ ಟಂಗ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆಶಸ್ ಸರಣಿಯನ್ನು ಪರಿಗಣಿಸಿ ಟಂಗ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಏಷ್ಯಾಖಂಡದಲ್ಲಿ ಕಂಡುಬರುವ ಫ್ಲಾಟ್ ಪಿಚ್ಗಳ ಲಾಭವನ್ನು ಪಡೆಯಲು ಟಂಗ್ ಅವರನ್ನು ಪರಿಗಣಿಸಲಾಗಿದೆ.
ವಿಶ್ವಕಪ್ ಮತ್ತು ಶ್ರೀಲಂಕಾ ಪ್ರವಾಸಕ್ಕೆ ಹ್ಯಾರಿ ಬ್ರೂಕ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಜೋಫ್ರಾ ಆರ್ಚರ್ ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ, ಆದರೆ ಶ್ರೀಲಂಕಾ ಸರಣಿಗೆ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಆದಾಗ್ಯೂ, ಕೆಲಸದ ಹೊರೆಯಿಂದಾಗಿ ಅವರನ್ನು ಶ್ರೀಲಂಕಾ ಸರಣಿಗೆ ಪರಿಗಣಿಸಲಾಗಿಲ್ಲ ಎಂದು ತೋರುತ್ತದೆ. ಏಕೆಂದರೆ ಮಂಡಳಿಯು ಐಸಿಸಿ ಈವೆಂಟ್ಗಾಗಿ ಆರ್ಚರ್ ಅವರನ್ನು ಫಿಟ್ ಆಗಿಡಲು ಬಯಸುತ್ತಿದೆ.
ಐಪಿಎಲ್ ಹರಾಜಿನಲ್ಲಿ 13 ಕೋಟಿ ಪಡೆದ ಆಟಗಾರನಿಗಿಲ್ಲ ಸ್ಥಾನ
ಇಂಗ್ಲೆಂಡ್ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳಿಗೆ ಪ್ರಕಟಿಸಿದ ಮೂರು ತಂಡಗಳಲ್ಲಿ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಅವರಿಗೆ ಅವಕಾಶ ನೀಡಲಾಗಿಲ್ಲ. ಲಿವಿಂಗ್ಸ್ಟೋನ್ T20 ಕ್ರಿಕೆಟ್ನಲ್ಲಿ ಪ್ರಮುಖ ಪ್ಲೇಯರ್ ಆಗಿದ್ದು ಸನ್ರೈಸರ್ಸ್ ಹೈದರಾಬಾದ್ ಇತ್ತೀಚೆಗೆ IPL 2026ರ ಹರಾಜಿನಲ್ಲಿ ಅವರನ್ನು ₹13 ಕೋಟಿಗೆ ಖರೀದಿ ಮಾಡಿದೆ. ಅನುಭವಿ ಆಟಗಾರನನ್ನು ತಂಡದಿಂದ ಹೊರಗಿಟ್ಟಿದ್ದು ಅಚ್ಚರಿಯನ್ನುಂಟು ಮಾಡಿದೆ.
ಈ ವರ್ಷ ಜೇಮೀ ಸ್ಮಿತ್ ಇಂಗ್ಲೆಂಡ್ ನ ಅತ್ಯಂತ ಯಶಸ್ವಿ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿದ್ದಾರೆ. ಸ್ಮಿತ್ ತಮ್ಮ ಚೊಚ್ಚಲ ಪಂದ್ಯದಿಂದಲೂ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 60 ರನ್ ಗಳಿಸಿದರು. ಆದರೆ 2026ರ ಟಿ20 ವಿಶ್ವಕಪ್ ಗಾಗಿ ಇಂಗ್ಲೆಂಡ್ ತಂಡದಲ್ಲಿ ಸ್ಮಿತ್ ಸ್ಥಾನ ಖಚಿತ ಎಂದೇ ಅಂದಾಜಿಸಲಾಗಿತ್ತು. ಜೋಸ್ ಬಟ್ಲರ್ಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಅವರು ಉತ್ತಮ ಆಯ್ಕೆಯಾಗುತ್ತಾರೆ ಎಂದು ಕ್ರಿಕೆಟ್ ತಜ್ಞರು ನಂಬಿದ್ದರು, ಆದರೆ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್ ಮತ್ತು ಲ್ಯೂಕ್ ವುಡ್.