ಕಿಚ್ಚ ಸುದೀಪ್ ಅವರ ಈ ಸ್ಟ್ರಾಂಗ್ ಮೆಸೇಜ್ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಕ್ರೇಜ್ ಮಿತಿ ಮೀರುತ್ತಿದೆಯಾ ಎಂಬ ಪ್ರಶ್ನೆಯು ಮೂಡಿದೆ. ಸುದೀಪ್ ಹೇಳಿದ ಆ ಮಾತುಗಳು ಅರ್ಥ ಏನು? ಅದರ ಹಿಂದೆ ಇರುವ ಉದ್ದೇಶ ಏನು? ಸಂಪೂರ್ಣ ವಿವರಕ್ಕಾಗಿ ಈ ಸುದ್ದಿಯನ್ನು ಇಲ್ಲಿದೆ ನೋಡಿ.
ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಗಿಲ್ಲಿ ನಟ ಅವರು ಜನಪ್ರಿಯರಾಗಿದ್ದರು. ಆದರೆ ಬಿಗ್ ಬಾಸ್ ನಂತರ ಅವರ ಫೇಮ್ 100 ಪಟ್ಟು ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಗಿಲ್ಲಿ ನಟ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರೆ ಅವರನ್ನು ಹೊತ್ತು ಮೆರೆಸಲು ಅ ಭಿಮಾನಿಗಳಲ್ಲಿ ಸಿದ್ದರಾಗಿದ್ದಾರೆ ಎನ್ನುವ ಮಟ್ಟಿಗೆ ಫ್ಯಾನ್ಸ್ ಕ್ರೇಜ್ ಜೋರಾಗಿದೆ.
ಈ ಅತಿಯಾದ ಫ್ಯಾನ್ಸ್ ಕ್ರೇಜ್ ಬಗ್ಗೆ ಬಿಗ್ ಬಾಸ್ ಫ್ರೀ - ಫಿನಾಲೆ ಹಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿಗೆ ಮಹತ್ವದ ಸೂಚನೆ ನೀಡಿದ್ದಾರೆ. "ಹೊರಗಡೆ ಪ್ರಪಂಚ ಏನಾಗಿದೆ ಅಂತ ನೋಡಿ" ಎಂದು ಸುದೀಪ್ ಹೇಳಿದ್ದ ಮಾತುಗಳು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೇಮ್ ಹಾಗೂ ಜನಪ್ರಿಯತೆಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದರ ಬಗ್ಗೆ ಸುದೀಪ್ ಕೊಟ್ಟ ಸಲಹೆ ಗಿಲ್ಲಿಗೆ ಗಷ್ಟೇ ಅಲ್ಲ, ಎಲ್ಲಾ ಯುವ ಕಲಾವಿದರಿಗೆ ಪಾಠವಾಗಿದೆ.
ಕಿಚ್ಚ ಸುದೀಪ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಗಿಲ್ಲಿ ನಂತರ ಫ್ಯಾನ್ಸ್ ಕ್ರೇಜ್ ಮತ್ತೆ ಸುದ್ದಿಯಲ್ಲಿದೆ . ಬಿಗ್ ಬಾಸ್ ನಂತರ ಗಿಲ್ಲಿಯ ಮುಂದಿನ ಹೆಜ್ಜೆ ಏನು? ಸುದೀಪ್ ಕೊಟ್ಟ ಸೂಚನೆಯ ಅರ್ಥ ಏನು? ಅನ್ನುವ ಪ್ರಶ್ನೆಗಳು ಈಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.
ಕಾಮಿಡಿ ಕಲಾವಿದ ಗಿಲ್ಲಿ ನಟ ಅವರು ,'ಬಿಗ್ ಬಾಸ್ ಕನ್ನಡ ಸೀಸನ್ 12' (Bigg Boss Kannada 12) ಮೂಲಕ ಮನೆಮಾತಾಗಿದ್ದಾರೆ. ತಮ್ಮ ವಿಬಿನ್ನ ಕಾಮಿಡಿ ಸ್ಟೈಲ್ ಹಾಗೂ ನೈಸರ್ಗಿಕ ನಟನೆಯಿಂದ ಎಲ್ಲರನ್ನು ನಗಿಸಿ 'ಪಳರ್ ಗಿಲ್ಲಿ' ಎಂಬ ಟೈಟಲ್ ಪಡೆದಿದ್ದಾರೆ. ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದ ಅಭಿಮಾನಿಗಳು ಪ್ರೀತಿಯಿಂದ ಗಿಲ್ಲಿ ನಟರನ್ನು ಕರೆಯುತ್ತಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಹೇಳಿದ ಪ್ರತಿಯೊಂದು ಡೈಲಾಗ್ ಕೂಡ ಟ್ರೆಂಡ್ ಆಗಿದ್ದು , ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿವೆ. ಅಷ್ಟೇ ಅಲ್ಲದೆ ಗಿಲ್ಲಿ ನಟರ ಮೇಲಿನ ಅಭಿಮಾನ ಎಷ್ಟರಮೆಟ್ಟಿಗೆ ಇದೆ ಅಂದರೆ, ಅವರ ಭಾವಚಿತ್ರವನ್ನು ಟ್ಯಾಟೋ ರೂಪದಲ್ಲಿ ಹಾಕಿಸಿಕೊಂಡಿರುವ ಫ್ಯಾನ್ಸ್ ಗಳು ಕೂಡ ಇದ್ದಾರೆ . ಇದು ಗಿಲ್ಲಿ ನಟರ ಫ್ಯಾನ್ಸ್ ಕ್ರೇಜ್ ಯಾವ ಮಟ್ಟಿಗೆ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಗಿಲ್ಲಿ ನಟ ಸೇರಿದಂತೆ ಎಲ್ಲಾ ಆರು ಫಿನಾಲೆ ('BBK 12 Finale) ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರೆ ಜನಪ್ರಿಯತೆ ಹೇಗಿರುತ್ತದೆ. ಎಂಬುದನ್ನು ಕಿಚ್ಚ ಸುದೀಪ್ ಅವರು ಪ್ರೀ -ಫಿನಾಲೆ ಹಂಚಿಕೆಯಲ್ಲಿ ವಿವರಿಸಿದರು . ಹೊರಗಡೆ ಪ್ರಪಂಚದಲ್ಲಿ ಫ್ಯಾನ್ಸ್ ಕ್ರೇಜ್ ಯಾವ ಮಟ್ಟಿಗೆ ಇದೆ ಎಂಬುದನ್ನು ಅರಿತು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಸುದೀಪ್ ಅವರು ಕೊಟ್ಟ ಸೂಚನೆ ಈಗ ಬಾರಿ ಚರ್ಚೆಗೆ ಕಾರಣವಾಗಿದೆ.
ನೀವು ಹೊರಗಡೆ ಬಂದಾಗ ಎಲ್ಲಿಲ್ಲದ ಪ್ರೀತಿ, ಎಲ್ಲಿಲ್ಲದ ಪ್ರಶಂತೆ, ಆ ಜನಬೀಡು ನಿಮಗೋಸ್ಕರ ಬಂದಾಗ ನಿಮ್ಮ ತಲೆಯಲ್ಲಿ ಏನು ಓಡಬೇಕು? ನಿಮ್ಮ ಜೀವನದಲ್ಲಿ ಏನೂ ಬದಲಾವಣೆ ಆಯಿತು ಅಂತ ನಿಮಗೆ ಅನಿಸುತ್ತದೆ? ಎಂಬ ಕಿಚ್ಚ ಸುದೀಪ್ ಅವರು ಪ್ರೀ -ಫಿನಾಲೆ ಸಂಚಿಕೆಯಲ್ಲಿ ನಟರನ್ನು ಪ್ರಶ್ನಿಸಿದರು. ಈ ಪ್ರಶ್ನೆ ಕೇವಲ ಆಟಗಾರನಿಗಷ್ಟೇ ಅಲ್ಲ ಫೆಮ್ ಎದುರಿಸುವ ಪ್ರತಿಯೊಬ್ಬ ಕಲಾವಿದನಿಗೂ ಚಿಂತನೆಗೆ ದಾರಿ ಮಾಡಿ ಕೊಡುವಂತಿತ್ತು.
ಇದಕ್ಕೆ ಉತ್ತರಿಸಿದ ಗಿಲ್ಲಿ ನಟ ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳು ನನಗೆ ಒಂದು ಮಾತು ಹೇಳಿದರು. ನೀವು ಸಕ್ಕತ್ತಾಗಿಯ ಆಡುತ್ತಿದ್ದೀರಿ, ಹೊರಗೆ ಬಂದ ನೋಡಿ ಅಂತ ಹೇಳಿದ್ರು. ಆ ಕ್ಷಣದಲ್ಲಿ ನನಗೆ ರಿಯಲ್ ಅನಿಸಿತು ' ಎಂದು ಮನದಾಳದ ಮಾತು ಹಂಚಿಕೊಂಡರು ಗಿಲ್ಲಿಯ ಈ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದ್ದು, ಅವರ ಸರಳತೆ ಮತ್ತು ನೆಲೆಗೆ ನಿಂತಿರುವ ಸ್ವಭಾವಕ್ಕೆ ಸಾಕ್ಷಿಯಾಗಿದೆ.
ಕಿಚ್ಚ ಸುದೀಪ್ ಮತ್ತು ಗಿಲ್ಲಿ ನಟರ ನಡುವಿನ ಈ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರೀ -ಫಿನಾಲೆ ಸಂಚಿಕೆಯ ಪ್ರಮುಖ ಹೈಲೈಟ್ ಆಗಿದೆ. ಫ್ಯಾನ್ಸ್ ಕ್ರೇಜ್ ಫೇಮ್ ಮತ್ತು ಜವಾಬ್ದಾರಿ ಬಗ್ಗೆ ಈ ಮಾತುಕತೆ ನೀಡಿದ ಸಂದೇಶಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
"ತಕ್ಷಣಕ್ಕೆ ಅಷ್ಟೊಂದು ಪ್ರೀತಿ ಬಂದರೆ ನಿಜವೂ ಸುಳ್ಳೋ ಅಂತ ನಂಬೋಕೆ ಆಗಲ್ಲ. ಈ ಬದಲಾವಣೆ ಆಗಿದು ಬಿಗ್ ಬಾಸ್ ಶೋನಿಂದ' ಎಂದು ಗಿಲ್ಲಿ ನಟ ಅವರು ಮನದಾಳದ ಮಾತು ಹಂಚಿಕೊಂಡಿದ್ದಾರೆ. ತಮ್ಮ ಜನಪ್ರಿಯತೆ ಒಂದೇ ಕ್ಷಣದಲ್ಲಿ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ಅವರು ತುಂಬಾ ಸರಳವಾಗಿ ವಿವರಿಸಿದ್ದಾರೆ.
ಸಾಮಾನ್ಯವಾಗಿ ಸಿನಿಮಾದಲ್ಲಿ ಹೇಗಿದ್ದ ಡೈಲಾಗಗಳನ್ನು ಕೇಳಲು ಅಭಿಮಾನಿಗಳು ವೇದಿಕೆಯಲ್ಲಿ ಕೇಳುತ್ತಾರೆ. ಆದರೆ ಬಿಗ್ ಬಾಸ್ ಮನೆಗೆ ಬಂದ ನಂತರ ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ನೀವು ಹೇಳಿದ ಡೈಲಾಗ್ ಹೇಳಿ ಎಂದು ಡಿಮ್ಯಾಂಡ್ ಮಾಡುತ್ತಿರುವುದು ತಮ್ಮಿಗೆ ವಿಭಿನ್ನ ಅನುಭವ ನೀಡಿದೆಯಂತೆ ಅದು ನನಗೆ ತುಂಬಾ ಖುಷಿಯಾಯಿತು ಎಂದು ಗಿಲ್ಲಿ ನಟ ಹೇಳಿದ್ದಾರೆ.
ಈ ಹೇಳಿಕೆಗಳಿಂದಲೇ ಬಿಗ್ ಬಾಸ್ ಕನ್ನಡ ಸೀಸನ್ 12 ಗಿಲ್ಲಿ ನಟ ಜೀವನದಲ್ಲಿ ತಂದಿರುವ ಬದಲಾವಣೆ ಸ್ಪಷ್ಟವಾಗುತ್ತದೆ. ಅವರ ಸರಳತೆ ನಿಜವಾದ ಭಾವನೆಗಳು ಮತ್ತು ಅಭಿಮಾನಿಗಳ ಪ್ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದ್ದು ಗಿಲ್ಲಿ ನಟರ ಫ್ಯಾನ್ಸ್ ಕ್ರೇಜ್ ಇನ್ನಷ್ಟು ಹೆಚ್ಚಾಗುತ್ತಿದೆ.
ನೀವು ಜನರನ್ನು ಸಂಪಾದಿಸುವುದು ಜನರು ನಿಮ್ಮನ್ನು ಇಷ್ಟ ಪಡುತ್ತಿರುವುದು ಬಿಗ್ ಬಾಸ್ ವೇದಿಕೆ ಕಾರಣಕ್ಕೆ ವೇದಿಕೆ ಇಲ್ಲ ಎಂದರೆ ಏನು ಇಲ್ಲ ಎಂದು ಕಿಚ್ಚ ಸುದೀಪ್ ಅವರು ಸ್ಪಷ್ಟವಾಗಿ ಸಂದೇಶ ನೀಡಿದರು. ಬಿಗ್ ಬಾಸ್ ಇಲ್ಲದೆ ನಮ್ಮ ಜೀವನವನ್ನು ಊಹಿಸಿಕೊಂಡರೆ ಒಂದು ಖಾಲಿ ತನ್ ಕಾಣಿಸುತ್ತದೆ. ಎಂಬ ಸುದೀಪ ಅವರ ಮಾತುಗಳು ಫೇಮ್ ಮತ್ತು ವೇದಿಕೆಯ ಮಹತ್ವವನ್ನು ನೆನಪಿಸುವಂತಿದ್ದವು.
ಪ್ರೀ -ಫಿನಾಲೆ ಹಂಚಿಕೆಯಲ್ಲಿ ಮಾತನಾಡಿದ ಸುದೀಪ್ ಹೊರಗಡೆ ಬಂದಾಗ ಪ್ರಪಂಚ ಏನಿಲ್ಲ ಆಗಿದೆ ಅನ್ನೋದನ್ನು ನೋಡಿ ಆದರೆ ಇದು ನೀವು ಮಾತನಾಡಿದನ್ನು ಮರೆಯಬೇಡಿ. ಎಂದು ಗಿಲ್ಲಿ ನಟರಿಗೆ ಸಹಿ ನೀಡಿದರು. ಈ ಮಾತುಗಳು ಕೇವಲ ಗಿಲ್ಲಿಗಷ್ಟೇ ಅಲ್ಲ ಬಿಗ್ ಬಾಸ್ ವೇದಿಕೆಯಿಂದ ಹೊರ ಬರುವ ಪ್ರತಿಯೊಬ್ಬ ಸ್ಪರ್ದಿಗು ಎಚ್ಚರಿಕೆಯ ಸಂದೇಶವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರೀ -ಫಿನಾಲೆ ಎಪಿಸೋಡ್ ಈ ಕ್ಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಗಿದ್ದು, ಕಿಚ್ಚ ಸುದೀಪ್ ಅವರ ಅನುಭವ ಮತ್ತು ಮಾರ್ಗದರ್ಶನಕ್ಕೆ ಅಭಿಮಾನಿಗಳು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಫೇಮ್ ಗಿಂತ ನೆಲೆಗೆ ನಿಂತಿರುವುದನ್ನು ಮುಖ್ಯ ಎಂಬ ಸಂದೇಶ ಮತ್ತೊಮ್ಮೆ ಸ್ಪಷ್ಟವಾಗಿದೆ.
ಕಾವ್ಯಶೈವ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಮ್ಯುಟೆಂಟ್ ರಘು, ಧನುಷ್ ಗೌಡ ಹಾಗೂ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಪಿನಾಲಿಗೆ ಅರ್ಹರಾಗಿದ್ದಾರೆ. ಹಲವು ಏರಿಳಿತಗಳು ಟಾಸ್ಕ್ ಗಳು ಮತ್ತು ಭಾವನಾತ್ಮಕ ಕ್ಷಣಗಳು ನಡುವೆ ಈ ಆರು ಮಂದಿ ಫೈನಲಿಸ್ಟ್ ಗಳು ಫಿನಾಲೆ ಹಂತ ತಲುಪಿದ್ದಾರೆ.
ಜನವರಿ 18ರಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷವಾಗಿ ಗಿಲ್ಲಿ ನಟ ಹರ್ಷ ಆರಂಭದಿಂದಲೇ ತಮ್ಮ ಆಟ ಡೈಲಾಗಗಳು ಮತ್ತು ಸರಳ ವ್ಯಕ್ತಿತ್ವದಿಂದ ಜನಮನ ಗೆದ್ದಿದ್ದು ಈಗ ಫ್ಯಾನ್ಸ್ ಫೇವರೆಟ್ ಕಂಟೆಸ್ಟೆಂಟ್ ಆಗಿದ್ದಾರೆ.
ಸಾಮಾಜಿಕ ಜಾಲತಾಣಗಳು ಈಗಾಗಲೇ ಗಿಲ್ಲಿ ನಟರೇ ಬಿಗ್ ಬಾಸ್ ವಿನ್ನರ್ ಎಂಬ ಕಾಮೆಂಟ್ ಗಳ್ ಟ್ರೆಂಡ್ ಆಗುತ್ತಿದ್ದು .ಅವರ ಫ್ಯಾನ್ಸ್ ಕ್ರೇಜ್ ದಿನ ದಿನ ಹೆಚ್ಚುತ್ತಿದೆ. ಜನರ ಬೆಂಬಲ ಪಾಪ್ಯುಲಾರಿಟಿ ಮತ್ತು ಆಟದ ಶೈಲಿ ನೋಡಿದರೆ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದೇ ಎಂಬ ಕುತೂಹಲ ಎಲ್ಲಡೆ ಮನೆ ಮಾಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಯಲ್ಲಿ ಯಾರು ಗೆಲುವಿನ ಕಿರೀಟ ದರಿಸಲಿದ್ದಾರೆ ಎಂಬುದನ್ನು ತಿಳಿದಿಲ್ಲ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.
ಇನ್ನಷ್ಟು ಓದಿರಿ:
5G ತಂತ್ರಜ್ಞಾನದಲ್ಲಿ ಭಾರತದ ಸಾಧನೆ