<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ರಾಜಕೀಯದಲ್ಲಿ ಪೀಠಿಕೆ ಬದಲಾವಣೆ ಅಗತ್ಯ : ನಿತಿನ್ ಗಡ್ಕರಿ ಸಂದೇಶ

ರಾಜಕೀಯದಲ್ಲಿ ಪೀಠಿಕೆ ಬದಲಾವಣೆ ಅಗತ್ಯ : ನಿತಿನ್ ಗಡ್ಕರಿ ಸಂದೇಶ
Summary: ನಿತಿನ್ ಗಡ್ಕರಿ ಅವರು ಹಿರಿಯ ನಾಯಕರು ನಿವೃತ್ತಿಯಾಗಿ ಕಿರಿಯರಿಗೆ ಅವಕಾಶ ನೀಡಬೇಕು ಎಂಬ ಸಂದೇಶವನ್ನು ಕಷ್ಟಪಡಿಸಿದ್ದಾರೆ. ಅವರ ನಿಗೂಢ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಾಯಕತ್ವದಲ್ಲಿ ಪೀಳಿಗೆ ಬದಲಾವಣೆ ಅಗತ್ಯ ಎಂಬ ಸಂದೇಶ ಇದರಲ್ಲಿ ಅಡಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿವೆ. ಈ ಹೇಳಿಕೆ ಅರ್ಥ ಏನು? ತಿಳಿಯೋಣ ಬನ್ನಿ..
Belagavi news :
ಹಿರಿಯ ನಾಯಕರು ನಿವೃತ್ತಿಯಾಗಿ ಕಿರಿಯರಿಗೆ ಅಧಿಕಾರ ಹಸ್ತಾಂತರಿಸಬೇಕು ಎಂದು ಕೇಂದ್ರದಂತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನಾಯಕತ್ವದಲ್ಲಿ ಪೀಳಿಗೆ ಬದಲಾವಣೆ ಅಗತ್ಯ ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಹೇಳಿಕೆ ಬಿಜೆಪಿ ಸೇರಿದಂತೆ ರಾಷ್ಟ್ರಮಟ್ಟದ ರಾಜಕೀಯದಲ್ಲಿ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಿದೆ.


ಬಿಜೆಪಿ ವಲಯದಲ್ಲಿ ಹಿರಿಯ ನಾಯಕರು ನಿವೃತ್ತರಾಗಬೇಕು ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು '75 ರ ನಿವೃತ್ತಿ' ಅಲಿಖಿತ ನಿಯಮವನ್ನು ಪಕ್ಷದ ಹಿರಿಯ ನಾಯಕರು ಪಾಲಿಸಬೇಕು ಎಂದು ಹೇಳಿದ್ದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದೀಗ ಅದೇ ದಾಟಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ ನೀಡಿದ್ದಾರೆ.


ಭಾನುವಾರ ನಡೆದ ಅಡ್ವಾಂಟೇಜ್ ವಿದರ್ಭ- ಖಾಸ್ದರ್ ಔದ್ಯೋಗಿಕ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗಡ್ಕರಿ, ಹೊಸ ಪೀಳಿಗೆಯವರು ಸಮಾಜ ಮತ್ತು ಆಡಳಿತ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ವಿಷಯಗಳು ಸುಗಮವಾಗಿ ನಡೆಯುತ್ತಿರುವಾಗ ಹಿರಿಯರು ಗೌರವಪೂರ್ಣವಾಗಿ ನಿವೃತ್ತಿ ಹೊಂದಬೇಕು ಎಂಬುದು ಸಹಜ ಪ್ರಕ್ರಿಯೆ ಎಂದು ಹೇಳಿದರು. ಆದರೆ ಪಕ್ಷದ ಹಿರಿಯ ನಾಯಕರನ್ನು ನೇರವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ಈ ಸಂದೇಶ ನೀಡಿದ್ದು, ಬಿಜೆಪಿಯೊಳಗಿನ ನಾಯಕತ್ವ ಬದಲಾವಣೆ ಕುರಿತು ಹೊಸ ಊಹಾಪೋಹಗಳಿಗೆ ಕಾರಣವಾಗಿದೆ.


'ಎಲ್ಲವೂ ಸರಿ ಇದ್ದಾಗ ಗುಡ್ ಬೈ ಹೇಳಿ' - ನಿತಿನ್ ಗಡ್ಕರಿ ಸಂದೇಶ :
"ಹಂತ ಹಂತವಾಗಿ ತಲೆಮಾರುಗಳು ಬದಲಾಗಬೇಕು. ಹಿರಿಯರಾದ ನಾವು ನಿವೃತ್ತಿ ಪಡೆದು ಹೊಸ ತಲೆಮಾರಿಗೆ ನಮ್ಮ ಜಾಗವನ್ನು ಬಿಟ್ಟು ಕೊಡಬೇಕು. ಎಲ್ಲವೂ ಸುಗಮವಾಗಿ ಸಾಗುತ್ತಿರುವಾಗಲೇ ನಾವು ಗುಡ್ ಬೈ ಹೇಳಿ,ಹೊಸದಾಗಿ ಏನಾದರೂ ಮಾಡಲು ಮುಂದಾಗಬೇಕು" ನಿಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರತಿಪಾದಿಸಿದ್ದಾರೆ.


ವಿದರ್ಭ ಪ್ರಾಂತ್ಯದಲ್ಲಿ ವಿವಿಧ ವಲಯಗಳಲ್ಲಿ ಬಹಳಷ್ಟು ಉತ್ತಮ ಉದ್ಯಮಿಗಳು ಇದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮದ ಮೂಲಕ ವಿದರ್ಭವನ್ನು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖ ಪಾಲುದಾರರನ್ನಾಗಿ ರೂಪಿಸುವ ಉದ್ದೇಶವಿದೆ ಎಂದು ಗದಕರಿ ತಿಳಿಸಿದರು. ಯಾವುದೇ ಪ್ರದೇಶ ಅಭಿವೃದ್ಧಿಯಾಗಲು ಕೈಗಾರಿಕಾ ವಲಯ,ಕೃಷಿ,ಅದರ ಸಹಾಯಕ ವಲಯಗಳು ಹಾಗೂ ಸೇವಾ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.


ಫೆಬ್ರವರಿ ಆರಾರಿಂದ 8ರವರೆಗೆ ನಾಪೂರ್ದಲ್ಲಿ ಮೂರನೇ ಕಂತಿನ ಅಡ್ವಾಂಟೇಜ್ ವಿದರ್ಭ ಎಕ್ಸ್ ಪೋ ನಡೆಯಲಿದೆ. ಈ ಎಕ್ಸ್ಪೋವನ್ನು ಆಯೋಜಿಸುತ್ತಿರುವ ಕೈಗಾರಿಕಾ ಅಭಿವೃದ್ಧಿ ಒಕ್ಕೂಟದ ಮುಖ್ಯಮಂತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಈ ಎಕ್ಸ್ಪೋದಲ್ಲಿ ಜವಳಿ, ಪ್ಲಾಸ್ಟಿಕ್,ಖನಿಜ,ಕಲ್ಲಿದ್ದಲು, ವಾಯುಯಾನ,ಲಾಜಿಸ್ಟಿಕ್ಸ್, ಐಟಿ, ಆರೋಗ್ಯ, ಔಷಧ, ರಕ್ಷಣಾ ವಲಯ, ರಿಯಲ್ ಎಸ್ಟೇಟ್, ನವೀಕರಿಸಬಹುದಾದ ಇಂಧನ ಹಾಗೂ ಸ್ಟಾರ್ಟ್ಅಪ್ ಕ್ಷೇತ್ರಗಳಲ್ಲಿ ಸೇರಿದ ಕೈಗಾರಿಕೆಗಳು ಭಾಗವಹಿಸಲಿವೆ. ಈ ಹೇಳಿಕೆ ಬಿಜೆಪಿ ವಲಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗೆ ಮತ್ತೊಮ್ಮೆ ಹೊಸ ಬಲ ನೀಡಿದೆ.


ಮೋಹನ್ ಭಾಗವತ್ ನಿವೃತ್ತಿ ಹೇಳಿಕೆ ಮತ್ತೆ ಚರ್ಚೆ :
2025 ಜುಲೈನಲ್ಲಿ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಗವತ್ ಅವರು ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಸಂದರ್ಭದಲ್ಲಿ ನೀಡಿದ್ದ ನಿವೃತ್ತಿ ಕುರಿತು ಹೇಳಿಕೆ ದೇಶ ವ್ಯಾಪ್ತಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. "75 ವರ್ಷವಾದಾಗ ನಿವೃತ್ತಿ ಪಡೆದು, ಹೊಸವರಿಗೆ ಅವಕಾಶ ಮಾಡಿಕೊಡಬೇಕು" ಎಂಬ ಭಾಗವತ್ ಅವರ ಮಾತು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿಯೇ ನೀಡಲಾಗಿದೆ ಎಂಬ ಅನುಮಾನಗಳು ರಾಜಕೀಯವಲಯದಲ್ಲಿ ಹರಡಿದ್ದವು.


ಈ ಹೇಳಿಕೆಯ ಬಳಿಕ ಬಿಜೆಪಿ ಮತ್ತು RSS ವಲಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ತೀವ್ರಗೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಿಶ್ಲೇಷಕರ ನಡುವೆ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು.


ಆದರೆ ವಿವಾದ ಹೆಚ್ಚಾದ ಬಳಿಕ ಮೋಹನ್ ಭಾಗವತ್ ಅವರು ಸ್ಪಷ್ಟನೆ ನೀಡುತ್ತಾ "ನನ್ನ ಮಾತು ಯಾರನ್ನು ಉದ್ದೇಶಿಸಿ ಹೇಳಿದ್ದದ್ದಲ್ಲ, ಇದು ಸಾಮಾನ್ಯ ತತ್ವ ಮಾತ್ರ " ಎಂದು ಹೇಳಿದ್ದಾರೆ. ಇದರಿಂದ ವಿವಾದ ತಾತ್ಕಾಲಿಕವಾಗಿ ಶ್ರಮನಗೊಂಡರೂ,'75 ರ ನಿವೃತ್ತಿ ನಿಯಮ' ಕುರಿತು ಚರ್ಚೆ ಬಿಜೆಪಿ ವಲಯದಲ್ಲಿ ಮತ್ತೆ ಮುನ್ನೆಲೆಗೆ ಬರುತ್ತಲೇ ಇದೆ.
ಇನ್ನಷ್ಟು ಓದಿರಿ:


ಸಚಿನ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online