ಯುವ ಪ್ರತಿಭೆ ಹೇಮಂತ ಕುಮಾರ ಸಿನಿಮಾರಂಗಕ್ಕೆ ಪ್ರವೇಶ : ಕನ್ನಡ ಚಿತ್ರರಂಗದಲ್ಲಿ ಹೊಸ ಯುವ ಪ್ರತಿಭೆಗಳ ಆಗಮನ ಮುಂದೆಬರೆಯುತ್ತಿದೆ. ಇತ್ತೀಚೆಗೆ ಹೇಮಂತ್ ಕುಮಾರ್ 'ಆಲ್ಫಾ' ಶೀರ್ಷಿಕೆಯ ಚಿತ್ರದ ಮೂಲಕ ಕನ್ನಡ ಸಿನಿಮಾಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ. ತನ್ನ ಟೈಟಲ್ ಟ್ರ್ಯಾಕ್ ಅನ್ನು ಅನಾವರಣಗೊಳಿಸಿದೆ. ಈ ಟೈಟಲ್ ಟ್ರ್ಯಾಕ್ ಇತ್ತೀಚಿಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಕರ ಪಡೆದಿದ್ದು ಹಾಡು ಮತ್ತು ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಉತ್ತಮವಾಗಿದೆ. 'ಆಲ್ಫಾ' ಚಿತ್ರ MenLoveVengeance ಎಂಬ ಅಡಿಬರಹ ಹೊಂದಿದ್ದು ನಾಗಾರ್ಜುನ್ ಶರ್ಮ ಸಾಹಿತ್ಯವನ್ನು ಬರೆದಿದ್ದಾರೆ. ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ ಮತ್ತು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ಆಲ್ಫಾ ಚಿತ್ರದಲ್ಲಿಬ ಕಾರ್ತಿಕ ಮಹೇಶ್ ನೆಗಟಿವ್ ಪಾತ್ರ : ಹೇಮಂತ್ ಕುಮಾರ್ ನಟನೆಯ'ಆಲ್ಫಾ' ಚಿತ್ರದ ಟ್ರೈಲರ್ ಟ್ರ್ಯಾಕ್ ವಿಕ್ಷಕರನ್ನು ಸೇರಿಸಲು ಸಂಗೀತ ನಿರ್ದೇಶಕ ಹೇಳಿದರು. ನಾಗಾರ್ಜುನ ಶರ್ಮ ಅವರು ಬರೆದಿರುವ ಈ ಹಾಡನ್ನು ವ್ಯಾಸರಾಜ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ ಎಂದು ತಾವು ವ್ಯಕ್ತಪಡಿಸಿದ್ದಾರೆ. ಅಲ್ಫಾ ಚಿತ್ರದಲ್ಲಿ ವಿಶೇಷವಾಗಿರುವ ನೆಗೆಟಿವ್ ಶೇಡ್ನಲ್ಲಿ ಅಭಿನಯ ಮಾಡಿದ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಹೇಳಿದ್ದಾರೆ ಈವರೆಗೂ ನಾನು ಕಾಣಿಸದ ರೀತಿಯ ಪಾತ್ರದಲ್ಲಿ ನಡೆಸಿದ್ದೇನೆ ಎಂದು ಅವರು ತಮ್ಮ ಪಾತ್ರದ ಬಗ್ಗೆ ಹೇಳಿದರು.
ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ಯುವ ನಟ ಹೇಮಂತ್ ಕುಮಾರ್ ಹೇಳಿದರು: ನಾನು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಂದಿದ್ದೇನೆ ಆದರೆ ಮೊದಲಿನಿಂದಲೂ ನಟನಾಗಬೇಕು ಎಂಬ ಕನಸನ್ನು ಹೊಂದಿದ್ದೇನೆ.ನಟನೆಗೆ ಬೇಕಾದ ಎಲ್ಲಾ ತರಬೇತಿ ಪಡೆದು ಬಂದಿದ್ದೇನೆ. ಜನರು ನಮ್ಮ ಚಿತ್ರವನ್ನು ಮೆಚ್ಚಿಕೊಳ್ಳುವ ಭರವಸೆ ಇದೆ, ನಿರ್ದೇಶಕರು ಮಾಡಿಕೊಂಡಿರುವ ಕಥೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ, ನಾಗಾರ್ಜುನ್ ಶರ್ಮಾ ಅವರ ಸಾಹಿತ್ಯ ಎಲ್ಲವೂ ಚೆನ್ನಾಗಿದೆ ಬಿಡುಗಡೆಯಾಗಿರುವ ಟೈಟಲ್ ಟ್ರ್ಯಾಕ್ ಕೂಡ ಸೊಗಸಾಗಿದೆ, ಚಿತ್ರತಂಡ ಸಹಕಾರದಿಂದ ಆಲ್ಫಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಅವರು ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.
ಆಲ್ಫಾ ಚಿತ್ರ ಫೆಬ್ರವರಿ 20 ರಂದು ಬಿಡುಗಡೆ: ಕನ್ನಡ ಚಿತ್ರರಂಗಿ ಗೀತಾ ಹಾಗೂ ಹೊಯ್ಸಳ ಚಿತ್ರಗಳ ಬಳಿಕ ವಿಜಯ ನಾಗೇಂದ್ರ ಅವರ ಹೊಸ ಚಿತ್ರ ಆಲ್ಫಾ ಗೆ ಆಕ್ಷನ್ ಕಟ್ ನೀಡಿದ್ದಾರೆ. ಈ ಚಿತ್ರದಲ್ಲಿ ಅಯಾನಾ, ಗೋಪಿಕಾ ಸುರೇಶ್, ಬಾಲು ನಾಗೇಂದ್ರ ಸೇರಿದಂತೆ ಹಲವರು ಪ್ರಮುಖ ತಾರಾಬಳಗದಲ್ಲಿ ಭಾಗಿಯಾಗಿದ್ದಾರೆ.ಎಲ್ ಎ ಪ್ರೊಡಕ್ಷನ್ ಲಾಂಚ್ ನಲ್ಲಿ ಆನಂದ್ ಕುಮಾರ್ ನಿರ್ಮಾಣ ಮತ್ತು ವಿಜಯ ನಾಗೇಂದ್ರ ನಿರ್ದೇಶನದಲ್ಲಿ ಮೂಡಿರುವ ಈ ಚಿತ್ರ ಈಗಾಗಲೇ ಹಾಡುಗಳ ಮತ್ತು ಟೀಸರ್ ಮೂಲಕ ವೀಕ್ಷಕರೇ ಗಮನ ಸೆಳೆದಿದೆ,ಚಿತ್ರವನ್ನು ಮುಂದಿನ ತಿಂಗಳು ಫೆಬ್ರುವರಿ 20ರಂದು ರಿಲೀಸ್ ಮಾಡುವ ನಿರ್ಧಾರವಾಗಿದೆ.
ನಿರ್ದೇಶಕ ವಿಜಯ ನಾಗೇಂದ್ರ ಆಲ್ಫಾ ಚಿತ್ರದ ಬಗ್ಗೆ ಮಾತು: ಈ ಚಿತ್ರವು ಕೇವಲ ಆಕ್ಷನ್ ಥ್ರಿಲ್ಲರ್ ಮಾತ್ರವಲ್ಲ ಸೆಂಟಿಮೆಂಟ್ ಸೇರಿದಂತೆ ವೀಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳಿವೆ ಮೂವರು ಅಪ್ಪಂದಿರು ಮತ್ತು ಮೂವರು ಮಕ್ಕಳ ಸುತ್ತ ಕತೆ ಹರಿಯುತ್ತದೆ ತಂದೆಗೆ ಯಾರಾದರೂ ಬಂದರೆ ಮಕ್ಕಳ ಪ್ರತೀಕಾರ ಹೇಗಿರುತ್ತದೆ ಎಂಬುದನ್ನು ಚಿತ್ರ ವಿವರಿಸುತ್ತದೆ ಹೇಮಂತ್ ಕುಮಾರ್ ಸಾಕಷ್ಟು ಪೂರ್ವ ಸಿದ್ದತೆಯನ್ನು ಮಾಡಿಕೊಂಡು ಬಂದಿದ್ದರಿಂದ ಅವರ ನಟನೆ ಸುಗಮವಾಗಿದೆ. ಎಲ್ಲ ಕಲಾವಿದರ ಅಭಿನಯ ಮತ್ತು ತಂತ್ರಜ್ಞಾನ ಅತ್ಯುತ್ತಮವಾಗಿದೆ ಎಂದು ನಿರ್ದೇಶಕ ವಿಜಯ ನಾಗೇಂದ್ರ ಅವರು ಕಾರ್ಯಕ್ರಮದಲ್ಲಿ ಹೇಳಿದರು.
ಇನ್ನಷ್ಟು ಓದಿರಿ: