<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಕುಕ್ಕೆಯಲ್ಲಿ ಆಶ್ಲೇಷ ನಕ್ಷತ್ರ ವಿಶೇಷ : ಸೆಲೆಬ್ರಿಟಿ ಭೇಟಿ

ಕುಕ್ಕೆಯಲ್ಲಿ ಆಶ್ಲೇಷ ನಕ್ಷತ್ರ ವಿಶೇಷ : ಸೆಲೆಬ್ರಿಟಿ ಭೇಟಿ
Summary: ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚುಗಳಲ್ಲಿ 11 ಗಂಟೆ ತನಕ ಆಶ್ಲೇಷ ಬಲಿ ಸೇವೆ ನೆರವೇರಿದವು. ಕುಕ್ಕೆ ಕ್ಷೇತ್ರದ ಒಳಾಂಗಣ, ಹೊರಾಂಗಣ, ರಥಬೀದಿ ಹಾಗೂ ಎಲ್ಲೆಡೆಗಳಲ್ಲಿ ಭಕ್ತರು ಜಮಾಯಿಸಿದ್ದರು.
BELAGAVI NEWS :

ಸುಬ್ರಹ್ಮಣ್ಯನಿಗೆ ಮಂಗಳವಾರ ವಿಶೇಷ ದಿನವೂ ಆಗಿದ್ದರಿಂದ ಆಶ್ಲೇಷ ನಕ್ಷತ್ರವು ಈ ದಿನವೇ ಬಂದಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಭಕ್ತರು ಸೇವೆಗಾಗಿ ಶ್ರೀ ಕ್ಷೇತ್ರಕ್ಕೆ ನಿನ್ನೆಯಿಂದಲೇ ಆಗಮಿಸಿದ್ದರು. ಬೆಳಗ್ಗೆ 6:30 ಗಂಟೆಗೆ ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚುಗಳಲ್ಲಿ 11 ಗಂಟೆ ತನಕ ಆಶ್ಲೇಷ ಬಲಿ ಸೇವೆ ನೆರವೇರಿದವು.

ಕನ್ನಡ, ತೆಲುಗು, ತುಳು ಭಾಷೆಗಳಲ್ಲಿ ನಟಿಸಿರುವ ಖ್ಯಾತ ಹಿರಿಯ ಚಲನಚಿತ್ರ ನಟ ಸುಮನ್ ತಲ್ವಾರ್ ಪತ್ನಿ ಸಿರಿಶ ಹಾಗೂ ಮಗಳು ಅತೀಶ್ವರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.

ಚಲನಚಿತ್ರ ನಟ ಸುಮನ್ ತಲ್ವಾರ್ ಕುಟುಂಬ ದೇವಸ್ಥಾನದಲ್ಲಿಂದು ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಮತ್ತು ಪಂಚಾಮೃತ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಆಶೀರ್ವಾದ ಪಡೆದರು.

ಶ್ರೀ ದೇವಳದ ಆಡಳಿತ ಕಚೇರಿಗೆ ಆಗಮಿಸಿದ ಸುಮಂತ್ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ ಇಂಜಾಡಿ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ ಕೂಜುಗೋಡು, ದೇವಳದ ಸಹಾಯಕ ಕಾರ್ಯ ನಿರ್ವಹಣಾ ಅಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿಗಳಾದ ಜಯರಾಮ್ ರಾವ್ ಹಾಗೂ ಮಾಧವ ಪದೇಲ ಅವರು ಹಾಜರಿದ್ದರು.

ಭಾರತದ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಇಂದು ಮಂಗಳವಾರ ದಾಖಲೆಯ 1400 ಆಶ್ಲೇಷ ಬಲಿ ಸೇವೆಗಳು ನಡೆದವು.

ಇನ್ನಷ್ಟು ಓದಿರಿ:
ಬಿಡಿಎ ಸುಧಾರಣೆಗೆ ಡಿಕೆಶಿ ದಿಟ್ಟ ಸಂದೇಶ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online