<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ರಾಜ್ಯ ಬಿಜೆಪಿ !

ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ರಾಜ್ಯ ಬಿಜೆಪಿ !
Summary: ರಾಜ್ಯ ಹಾಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮನೆ ತೆರವು ಕಾರ್ಯಾಚರಣೆ ಏನಿದು ನೀವೇ ಓದಿ!
ರಾಜ್ಯ ಹಾಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮನೆ ತೆರವು ಕಾರ್ಯಾಚರಣೆ ಏನಿದು ನೀವೇ ಓದಿ!
ಪ್ರಪ್ರಥಮವಾಗಿ ಮನೆಗಳು ತಿರುಗುಗೊಳಿಸಲು ಮುಖ್ಯ ಕಾರಣಗಳು ಏನು ಓದಿ!
ಭಾರತದಲ್ಲಿ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ, ಅಕ್ರಮ ಮನೆಗಳು (Illegal Houses / Encroachments) ತೆರವುಗೊಳಿಸುವ ಕ್ರಮವನ್ನು ಕೆಲವೊಮ್ಮೆ ಕೈಗೊಳ್ಳುತ್ತವೆ. ಈ ಕ್ರಮ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗುತ್ತದೆ. ಆದರೆ ಸರ್ಕಾರಗಳು ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾನೂನುಬದ್ಧ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾರಣಗಳು ಇರುತ್ತವೆ.
ಅಕ್ರಮ ಮನೆ ಎಂದರೇನು?

ಯಾವುದೇ ಕಟ್ಟಡ ಅಥವಾ ಮನೆ:

ಸರ್ಕಾರದ ಭೂಮಿಯಲ್ಲಿ ಅನುಮತಿ ಇಲ್ಲದೆ ನಿರ್ಮಿಸಿದರೆ

ನಗರಸಭೆ / ಪುರಸಭೆ / ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಕಟ್ಟಿದರೆ

ಲ್ಯಾಂಡ್ ಯೂಸ್ ನಿಯಮ ಉಲ್ಲಂಘಿಸಿ ನಿರ್ಮಿಸಿದರೆ
ಅದನ್ನು ಅಕ್ರಮ ಮನೆ ಎಂದು ಕರೆಯಲಾಗುತ್ತದೆ.
ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳು

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು:

ರಸ್ತೆ ವಿಸ್ತರಣೆ

ಫ್ಲೈಓವರ್

ಮೆಟ್ರೋ ಯೋಜನೆ

ಸ್ಮಾರ್ಟ್ ಸಿಟಿ ಯೋಜನೆ

ಹೈವೇ ನಿರ್ಮಾಣ
ನಗರ ಯೋಜನಾ ಕಾನೂನು ಉಲ್ಲಂಘನೆ

ಕೆಲವರು:

ಅನುಮತಿ ಪಡೆದ ಗಾತ್ರಕ್ಕಿಂತ ದೊಡ್ಡ ಮನೆ ಕಟ್ಟುವುದು

ವಾಣಿಜ್ಯ ಪ್ರದೇಶದಲ್ಲಿ ವಸತಿ ಮನೆ ನಿರ್ಮಾಣ

ಪಾರ್ಕಿಂಗ್ ಜಾಗ ಮುಚ್ಚುವುದು
ನಿಜಕೂ ಆಗಿದಾದರೂ ಏನು?
ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮಾಡಿದಂತೆ, ಸದ್ಯ ವಿರೋಧ ಪಕ್ಷದಲ್ಲಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ನಿರಂತರ ಒತ್ತಡಕ್ಕೆ ಒಳಪಡಿಸಬೇಕಿತ್ತು. ಆದರೆ ಕೋಗಿಲು ಲೇಔಟ್ ಪ್ರಕರಣದಲ್ಲಿ ಬಿಜೆಪಿ ಸ್ಪಷ್ಟವಾದ ಸಮಗ್ರ ದೃಷ್ಟಿಕೋನ ಪ್ರದರ್ಶಿಸಲು ವಿಫಲವಾಗಿದೆಯಾ? ಎನ್ನುವ ಗಾಢ ಪ್ರಶ್ನೆ ಮೂಡುತ್ತಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಅವರ ವಿರುದ್ಧ “ನೀವು ಎಷ್ಟು ಜನಕ್ಕೆ ಮನೆ ಮಂಜೂರು ಮಾಡಿದ್ದೀರಿ?” ಎಂದು ಪ್ರಶ್ನೆ ಎತ್ತಿದ್ದಾರೆ. ಬ್ಯಾಟರಾಯನಪುರ ಸಮೀಪದ ಕೋಗಿಲು ಬಡಾವಣೆಯ (Kogilu Layout) ಫಕೀರ್ ಕಾಲೋನಿಯಲ್ಲಿ (Fakir Colony) ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವು ಕಾರ್ಯಾಚರಣೆ ಸುದ್ದಿ ರಾಜ್ಯ ಮಾತ್ರವಲ್ಲ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ನ್ಯಾಯಯುತವಾಗಿ ನೋಡಿದರೆ, ಈ ವಿಷಯದ ವಿರುದ್ಧ ಜನಾಂದೋಲನ ರೂಪಿಸುವ ಅವಕಾಶವೂ ಬಿಜೆಪಿಗಿತ್ತು. ಆದರೆ ಆ ಅವಕಾಶ ಕೈ ತಪ್ಪಿದಂತಾಗಿದೆ. ಇದು ಸಂಘಟನಾ ವೈಫಲ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದು ಆಡಳಿತ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇದನ್ನೆ ಬಳಸಿಕೊಂಡ ಕಾಂಗ್ರೆಸ್, ಬಿಜೆಪಿಯನ್ನು ಸಮರ್ಥವಾಗಿ ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಂತಿದೆ. ಹೊಸ ಸಮಸ್ಯೆ ಮುನ್ನಲೆಗೆ ಬಂದಾಗ, ಹಿಂದಿನ ಸಮಸ್ಯೆಗಳನ್ನು ಮರೆತು ಮತ್ತೊಂದು ವಿಚಾರಕ್ಕೆ ತಾರ್ಕಿಕ ಅಂತ್ಯ ಹುಡುಕುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದರ ವಿರುದ್ಧವಾಗಿ ಕಾಂಗ್ರೆಸ್ ತಂತ್ರ ಸ್ಪಷ್ಟವಾಗಿದೆ. 2019ರಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್, ಪೇ ಸಿಎಂ ಅಭಿಯಾನ, 40% ಕಮಿಷನ್ ಆರೋಪ, ಪಿಎಸ್ಐ ನೇಮಕಾತಿ ಹಗರಣ, ಕೋವಿಡ್ ಅವ್ಯವಸ್ಥೆ, ಮೇಕೆದಾಟು ಪಾದಯಾತ್ರೆ ಮೂಲಕ ಬಿಜೆಪಿ ಸರ್ಕಾರದ ನಿದ್ದೆ ಗೆಡಿಸಿತ್ತು.
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online