<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಬೆಂಗಳೂರು ಹಬ್ಬ - ೨೦೨೫

ಬೆಂಗಳೂರು ಹಬ್ಬ - ೨೦೨೫
Summary: ಬೆಂಗಳೂರು ಹಬ್ಬ - ೨೦೨೬ ಕಾರ್ಯಕ್ರಮವನ್ನು ವಿಧಾನಸಭೆಯಲ್ಲಿ ಆಯೋಜಿಸಲಾಗಿತ್ತು ಮತ್ತು ಸಿದ್ದರಾಮಯ್ಯನವರು ಉದ್ಘಾಟಿಸಿದರು. ಯಾವುದೇ ರಾಜ್ಯದಿಂದ ಬಂದರು ಕನ್ನಡ ಕಲಿತು ಕನ್ನಡಿಗರಾಗಿ ಬದುಕಬೇಕು ಎಂದು ಸಿಎಂ ಹೇಳಿದರು.
BELAGAVI NEWS :

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾದ ಬೆಂಗಳೂರು ಹಬ್ಬ - 2026 . ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಅವರು ಯಾವುದೇ ರಾಜ್ಯದಿಂದ ಬಂದರು ಕನ್ನಡ ಕಲಿತು ಕನ್ನಡಿಗರಾಗಿ ಬದುಕಬೇಕು ಎಂದು ಸಂದೇಶವನ್ನು ನೀಡಿದ್ದರು. 'ಕನ್ನಡ ಕಲಿಯೋಣ, ಕನ್ನಡ ಬೆಳೆಸೋಣ ಒಟ್ಟಿನಲ್ಲಿ ಬೆಂಗಳೂರನ್ನು ಕಟ್ಟೋಣ' ವೈವಿಧ್ಯತೆಯಲ್ಲಿ ಏಕತೆ ನಮ್ಮ ರಾಜ್ಯದ ಶಕ್ತಿಯಾಗಿದೆ. ಕನ್ನಡ ಭಾಷೆಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ .ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಖಾಸಗಿ ಸಂಸ್ಥೆ ಮತ್ತು ಕೈಗಾರಿಕೆ ವಲಯಗಳು ಈ ಹಬ್ಬದಲ್ಲಿ ಪಾಲ್ಗೊಂಡಿದ್ದವು. ಜಾನಪದ ಕಲಾವಿದರು ಮೆರವಣಿಗೆಯ ಮೂಲಕ ಸಾಂಸ್ಕೃತಿಕ ಮೆರವು ನೀಡಿದರು. ಮೊದಲು ಪದ್ಮಿನಿ ರವಿ ಮತ್ತು ನಂದಿನಿ ಆಳ್ವ ಅವರು ಬೆಂಗಳೂರು ಹಬ್ಬವನ್ನು ಆರಂಭಿಸಿದರು. ಕನ್ನಡ ವಾತಾವರಣವನ್ನು ನಿರ್ಮಿಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯ ಆಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು. ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡವನ್ನು ವ್ಯವಹಾರಿಕವಾಗಿ ಭಾಷೆಯನ್ನಾಗಿಸಬೇಕು.ಕನ್ನಡತನವನ್ನು ಬೆಳೆಸಬೇಕು, ಕನ್ನಡವನ್ನು ಉಳಿಸಬೇಕು ಕನ್ನಡಿಗರು ಕನ್ನಡವನ್ನು ಹೆಚ್ಚು ಮಾತನಾಡುವುದನ್ನು ರೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ . ಬೇರೆ ಭಾಷೆಯನ್ನು ಹೆಚ್ಚಾಗಿ ಬೆಳೆಸುತ್ತಿದ್ದಾರೆ ನಾವು ಕನ್ನಡಿಗರಾಗಿ ನಮ್ಮ ಭಾಷೆಯನ್ನು ಬಳಸಬೇಕು ಆವಾಗ ಮಾತ್ರ ಬೇರೆಯವರು ಕೂಡ ಅದನ್ನು ಪಾಲಿಸಿಕೊಳ್ಳುತ್ತಾರೆ. ಬೇರೆಯವರು ಕೂಡ ಅದನ್ನು ಪಾಲಿಸುತ್ತಾರೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಬೆಂಗಳೂರು ಹಬ್ಬದ ಮುಖ್ಯ ಉದ್ದೇಶವೆಂದರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಹಾಗೂ ಯುವ ಜನಾಂಗಕ್ಕೆ ಸಾಹಿತ್ಯ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಯಾವುದೇ ಧರ್ಮವು ದ್ವೇಷಕ್ಕೆ ಪ್ರೇರಿಸುವುದಿಲ್ಲ ಎಂಬುದರ ಮಹತ್ವ ಇಲ್ಲಿ ತಿಳಿಸಿದೆ .ಮನುಷ್ಯರು ಪರಸ್ಪರ ಪ್ರೀತಿಸಬೇಕು ಜಾತಿ ಧರ್ಮಗಳನ್ನು ಬಿಟ್ಟು ಮನುಷ್ಯರಾಗಿ ಒಂದಾಗಿ ಎಲ್ಲರಿಗೂ ಮಾದರಿಯಾಗಿ ಬದುಕೋಣ. ಬೆಂಗಳೂರಿನ ನಾಗರಿಕರಿಗೆ ಅಪರೂಪದ ಸಾಂಸ್ಕೃತಿಕ ಅವಕಾಶವಾಗಿದೆ ಈ ಹಬ್ಬ ನಗರದ 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ.ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಈ ಬದುಕಿನಲ್ಲಿ ಹುಟ್ಟಿನಿಂದ ಸಾವಿನವರೆಗೆ ಏನನ್ನು ಸಾಧಿಸಿದ್ದೇವೆ ಮತ್ತು ಸಮಾಜಕ್ಕೆ ಏನನ್ನು ನಾವು ನೀಡುತ್ತೇವೆ ಎಂಬುದು ಇಲ್ಲಿ ಮುಖ್ಯವಾದದ್ದು. ಬಸವಣ್ಣ, ಕನಕದಾಸರು, ನಾರಾಯಣ ಗುರುಗಳು ಸೇರಿದಂತೆ ಅನೇಕ ಮಾನ್ಯರು ನಾವೆಲ್ಲರೂ ಮೊದಲು ಮನುಷ್ಯರು ಎಂದು ಇಡೀ ವಿಶ್ವಕ್ಕೆ ಹೋಗಿ ಕೂಗಿ ಹೇಳಿದ್ದಾರೆ. ಯಾವುದೇ ಜಾತಿ ,ಧರ್ಮ, ವರ್ಗ, ಮೌಡ್ಯ ಎಲ್ಲವೂ ತೊಲಗಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ಬೇರೆಯವರು ನಮ್ಮನ್ನು ನೋಡಿ ಅನುಸರಿಸುವ ರೀತಿಯಲ್ಲಿ ನಮ್ಮ ನಡೆಯನ್ನು ಗುರುತಿಸುವ ರೀತಿಯಲ್ಲಿ ಇರಬೇಕು, ಅದನ್ನು ಟೀಕಿಸುವಂತಿರಬಾರದು. ನಮ್ಮ ಕನ್ನಡ ನಾಡಿನಲ್ಲಿ ಹಲವು ಪೂಜ್ಯರು ನಮಗೆ ಇವುಗಳನ್ನು ತಿಳಿಸಿಕೊಡಲು ಪ್ರಯತ್ನ ಮಾಡಿದ್ದಾರೆ, ಅವರ ಹಾದಿಯಲ್ಲಿ ನಾವು ನಡೆದುಕೊಂಡು ಹೋಗಬೇಕಾಗಿದೆ ಬೆಂಗಳೂರಿನಲ್ಲಿ 1.50 ಕೋಟಿ ಕೋಟಿ ಜನ ವಾಸಿಸುತ್ತಿದ್ದೇವೆ. ನಾವೆಲ್ಲರೂ ಒಂದಾಗಿ, ಮನುಷ್ಯರಾಗಿ ಬಾಳಬೇಕು ಸಿಎಂ ಸಿದ್ದರಾಮಯ್ಯ ಅವರು ಈ ಹಬ್ಬದಲ್ಲಿ ಹೇಳಿದ್ದಾರೆ. ಜಗತ್ತಿನಲ್ಲಿ ಕನ್ನಡವು ಬಹಳ ಪ್ರಾಚೀನ ಕಾಲದ ಭಾಷೆಯಾಗಿದ್ದು ಇದನ್ನು ಉಳಿಸುವುದು ಬೆಳೆಸುವುದು ಈಗ ಕನ್ನಡಿಗರ ಕೈಯಲ್ಲಿದೆ. ಎಲ್ಲರೂ ಒಂದಾಗಿ ಹೊರಗಿನಿಂದ ಬಂದವರಿಗೂ ಕನ್ನಡವನ್ನು ಕಲಿಸಿ ಎಲ್ಲರೂ ಕನ್ನಡವನ್ನು ಮಾತಾಡೋಣ. ನಮ್ಮ ಕನ್ನಡದ ಸಂಸ್ಕೃತಿ,ಕಲೆ, ಸಾಹಿತ್ಯ ಎಲ್ಲವನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವುದು ನಮ್ಮ ಕನ್ನಡಿಗರ ಜವಾಬ್ದಾರಿಯಾಗಿದೆ. ಕನ್ನಡವನ್ನು ಹೆಚ್ಚಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಕನ್ನಡಕ್ಕೆ ತನ್ನದೇ ಆದ ಆದ್ಯತೆ ಇದೆ ಅದನ್ನು ಎಲ್ಲರೂ ಕಾಪಾಡಿಕೊಂಡು ಬೆಳೆಸಿಕೊಂಡು ಅದನ್ನು ಮಾತನಾಡಬೇಕು. ಜನಪದ ಕಲಾತಂಡಗಳು ಈ ಹಬ್ಬದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು, ಇಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಸೇರಿದ್ದರುಮತ್ತು ಸಿಎಂ ಸಿದ್ದರಾಮಯ್ಯನವರು ಇಲ್ಲಿ ಉಪಸಿತರಿದ್ದಾರೆ. ನಾವು ಕನ್ನಡಿಗರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ.

ಇನ್ನಷ್ಟು ಓದಿರಿ:

22000 ಕೋಟಿ ರೂ.. ರಾಜಸ್ವ ಕೊರತೆ ಭೀತಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online