ಟಿ20 ವಿಶ್ವಕಪ್ ತಂಡಕ್ಕೆ ಲಿಟನ್ ದಾಸ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಮೊಹಮ್ಮದ್ ಸೈಫ್ ಹಸನ್ ಉಪನಾಯಕ ಆಗಿರಲಿದ್ದಾರೆ. 2026ರ ಐಪಿಎಲ್ ನಿಂದ ರಿಲೀಸ್ ಮಾಡಲಾದ ಮುಸ್ತಾಫಿಜುರ್ ರೆಹಮಾನ್ ಸಹ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಮುಸ್ತಾಫಿಜುರ್ ಜೊತೆಗೆ ತಸ್ಕಿನ್ ಅಹ್ಮದ್ ವೇಗದ ಬೌಲಿಂಗ್ ವಿಭಾಗದಲ್ಲಿರಲಿದ್ದಾರೆ. ಮೆಹಿದಿ ಹಸನ್ ಮತ್ತು ರಿಷದ್ ಹೊಸೈನ್ ಅವರನ್ನು ಸ್ಪಿನ್ನರ್‌ಗಳಾಗಿ ತೆಗೆದುಕೊಳ್ಳಲಾಗಿದೆ. ಬಾಂಗ್ಲಾದೇಶ ಬ್ಯಾಟಿಂಗ್‌ನಲ್ಲಿ ಲಿಟನ್ ದಾಸ್, ತಂಜಿದ್ ಹಸನ್ ಮತ್ತು ಪರ್ವೇಜ್ ಹೊಸೈನ್ ಎಮನ್ ಇರಲಿದ್ದಾರೆ. ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಪಂದ್ಯ ಆಡಿದರೇ, ಫೆಬ್ರವರಿ 14 ರಂದು ಇಂಗ್ಲೆಂಡ್ ಮತ್ತು ಫೆಬ್ರವರಿ 17 ರಂದು
ನೇಪಾಳ ವಿರುದ್ಧ ಪಂದ್ಯಗಳು ನಡೆಯಲಿವೆ.
ಲಿಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ, ಶಮೀಮ್ ಹೊಸೈನ್, ಕ್ವಾಜಿ ನೂರುಲ್ ಹಸನ್ ಸೋಹನ್, ಶಕ್ ಮೆಹದಿ ಹಸನ್, ರಿಷಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಜಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶೋರಿಫುಲ್ ಇಸ್ಲಾಂ.
ಐಪಿಎಲ್ ಮಿನಿ ಹರಾಜಿನಲ್ಲಿ ₹9.2 ಕೋಟಿಗೆ ಹರಾಜಾಗಿದ್ದ ಬಾಂಗ್ಲಾ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ನಿರ್ದೇಶನದ ಮೇರೆಗೆ ಕೆಕೆಆರ್, ತಂಡದಿಂದ ರಿಲೀಸ್ ಮಾಡಿದೆ. ಇದು ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಬಾಂಗ್ಲಾದೇಶ ಕ್ರೀಡಾ ಸಚಿವ (ಸಲಹೆಗಾರ) ಆಸಿಫ್ ನಜ್ರುಲ್, ಐಸಿಸಿ ಬಾಂಗ್ಲಾದೇಶ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ವಿನಂತಿಸುವಂತೆ ಬಿಸಿಬಿಗೆ ಸೂಚನೆ ನೀಡಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಕಗಳ ಮೇಲಿನ ನಿರಂತರ ದಾಳಿಯಿಂದಾಗಿ ಬಾಂಗ್ಲಾ ಬೌಲರ್ ಮುಸ್ತಾಫಿಜುರ್ ರೆಹಮಾನ್ರನ್ನು ಐಪಿಎಲ್ನಲ್ಲಿ ಆಡಿಸದಂತೆ ಟೀಕೆಗಳು ವ್ಯಕ್ತವಾದವು. ಇದರ ಬೆನ್ನಲ್ಲೆ ಬಿಸಿಸಿಐ ಕೆಕೆಆರ್ ತಂಡದಿಂದ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಈ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು ಗುಂಪು ಹಂತದಲ್ಲಿ ಬಾಂಗ್ಲಾದೇಶ ಆಡಬೇಕಾದ ನಾಲ್ಕು ಪಂದ್ಯಗಳನ್ನು ಭಾರತದಲ್ಲಿ ನಿಗದಿಪಡಿಸಲಾಗಿದೆ.
ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಸರಣಿ ಪ್ರಾರಂಭಗೊಳ್ಳುತ್ತಿದೆ. ಈಬಾರಿಯ ಪಂದ್ಯಾವಳಿಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿಕೊಳ್ಳುತ್ತಿವೆ. ಬಾಂಗ್ಲಾದೇಶ ಬ್ಯಾಟಿಂಗ್‌ನಲ್ಲಿ ಲಿಟನ್ ದಾಸ್, ತಂಜಿದ್ ಹಸನ್ ಮತ್ತು ಪರ್ವೇಜ್ ಹೊಸೈನ್ ಎಮನ್ ಇರಲಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳು ತಮ್ಮ ತಂಡಗಳನ್ನು ಘೋಷಿಸಿವೆ. ಇದೀಗ, ಬಾಂಗ್ಲಾದೇಶ ತನ್ನ 15 ಸದಸ್ಯರ ತಂಡವನ್ನು ಪ್ರಕಟಗೊಳಿಸಿದೆ.
ಇನ್ನಷ್ಟು ಓದಿರಿ :
ಟಿ20 ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ಇಲ್ಲ : ಬಾಂಗ್ಲಾ ಕ್ರಿಕೆಟ್ ಮಂಡಳಿಯ ಘೋಷಣೆ