ರಕ್ಷಿತಾ ಶೆಟ್ಟಿಗೆ ಹುಟ್ಟೂರಿನಿಂದ ಭರ್ಜರಿ ಸ್ವಾಗತ :
ತಮ್ಮ ವಿಶಿಷ್ಟ ಮಾತುಗಳಿಂದ ಮನೆ ಮಾತಾಗಿರುವ ಬಿಗ್ ಬಾಸ್ ಈ ಬಾರಿಯ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರನ್ನು ಊರಿನವರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ರಕ್ಷಿತಾ ಬಿಗ್ ಬಾಸ್ ರನ್ನರ್ ಪ್ರಶಸ್ತಿ ಗೆದ್ದ ಮೇಲೆ ಮೊದಲ ಬಾರಿಗೆ ತಮ್ಮ ಹುಟ್ಟೂರು ಉಚ್ಚಿಲಕ್ಕೆ ಆಗಮಿಸಿದ್ದಾರೆ. ರಕ್ಷಿತಾ ಶೆಟ್ಟಿ ತಮ್ಮಹುಟ್ಟೂರು ಮತ್ತುಅಭಿಮಾನಿಗಳ ಜೊತೆಗೆ ಸಂಭಾಷಣೆ ನಡೆಸಿದ ನಂತರ ಸ್ಥಳೀಯರನ್ನು ಧನ್ಯವಾದ ತಿಳಿಸಿದ್ದಾರೆ. ಅವರು ತಮ್ಮ ಭಾವನಾತ್ಮಕ ಮಾತುಗಳಲ್ಲಿ "ನನ್ನ ಜೀವನದ ಪ್ರಾರಂಭವಿದು ಇಲ್ಲಿಯೇ ಈ ಪ್ರಶಸ್ತಿ ನನ್ನ ಹತ್ತಿರವಿರುವ ಎಲ್ಲಾ ಪ್ರೀತಿ ಮತ್ತು ಬೆಂಬಲದ ಫಲವಾಗಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಜಮಾಡಿ ಕಾಲ್ ಗೇಟ್ ಬಳಿ ರಕ್ಷಿತಾಗೆ ಸ್ವಾಗತ ನೀಡಲು ಊರಿನವರು ಹಾಗೂ ಸ್ಥಳೀಯ ಜನರು ಮೆರವಣಿಗೆಯಲ್ಲಿ ಭಾಗವಹಿಸಿದರು. ಸಭಾಭವನ ಮುಂಭಾಗದಲ್ಲಿ ಸಾರ್ವಜನಿಕರು ಬೃಹತ್ ಘೋಷಣೆ ಮೂಲಕ ಬಿಗ್ ಬಾಸ್ ರಕ್ಷಿತಾ ಗೆ ಜೈ ಎಂದು ಮೊಳಗಿಸಿದರು ಮತ್ತು ಸ್ಥಳೀಯ ಸಮುದಾಯದ ಒಟ್ಟಿನ ಸಂಕೇತವಾಗಿದೆ. ಅಭಿಮಾನಿಗಳುರಕ್ಷಿತಾ ಶೆಟ್ಟಿಗೆ ಫೋಟೋ ತೆಗೆಯಲು ಹಾಗೂ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಭರ್ಜರಿ ಸಂತೋಷ ವ್ಯಕ್ತಪಡಿಸಿದರು.
ಗಿಲ್ಲಿ ನಟ ೪೬ ಕೋಟಿಗೂ ಅಧಿಕ ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಗೆದಿದ್ದಾರೆ.ಕಳೆದ ಸೆಪ್ಟಂಬರ್ 28ರಂದು ಆರಂಭಗೊಂಡ ಬಿಗ್ ಬಾಸ್ ಜನವರಿ 18ರವರೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಈ ಸೀಸನ್ ನಲ್ಲಿ ೧೨ ನಲ್ಲಿ ಕೊನೆಯ ನಿರೂಪಣೆಯ ನಟ ಕಿಚ್ಚ ಸುದೀಪ್ ಅವರೇ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಬಾರಿ ಕರ್ನಾಟಕದ ಹೊರಗು ತಮ್ಮ ಮಾತುಗಳಿಂದ ಮನ ಗೆದ್ದ ಗಿಲ್ಲಿ ನಟ 46 ಕೋಟಿಗೂ ಅಧಿಕ ವೋಟುಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿದ್ದಾರೆ. ಅಭಿನಯ ಮತ್ತು ವ್ಯಕ್ತಿತ್ವದ ಶಕ್ತಿಯಿಂದ ಅವರು ಅರ್ಧ ಕೋಟಿ ರೂಪಾಯಿಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಗಿಲ್ಲಿ ನಟರಿಗೆ ಲಭಿಸಿದ ಬಿಗ್ ಬಾಸ್ ಟ್ರೋಪಿ ಈ ಸೀಸನ್ ನ ಪ್ರಮುಖ ಘಟ್ಟವಾಗಿದೆ.ಈ ಸೀಸನ್ ತನ್ನ ಉತ್ಸಾಹಭರಿತ ಪಂದ್ಯ, ಮನರಂಜನೆಯ ರೋಚಕ ಘಟನೆಗಳು ಮತ್ತು ಭರ್ಜರಿ ಸಿದ್ಧತೆಗಳಿಂದ ವೀಕ್ಷಕರನ್ನು ಆಕರ್ಷಿಸಿದೆ. ನಟ ಗಿಲ್ಲಿ ಅಭಿಮಾನಿಗಳು ಮತ್ತು ಶೋ ಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ತಮ್ಮ ಪ್ರಿಯಪಾತ್ರವೆಂದು ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 11 ಟಾಪ್ 6 ಮತ್ತು ಫೈನಲ್ ಫಲಿತಾಂಶ : 11೧ ದಿನಗಳ ಉತ್ಸಾಹ ಭರಿತ ಬಿಗ್ ಬಾಸ್ ಶೋ ನಲ್ಲಿ ಪ್ರಾರಂಭದಲ್ಲಿ 24 ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದು ಅದರ ಕೊನೆಯ ಆರು ಮಂದಿ ಫೈನಲ್ ಗೆ ತಲುಪಿದರು ಅವರು ಗಿಲ್ಲಿ ನಟ, ಕಾವ್ಯ, ರಕ್ಷಿತಾ, ರಘು ಮತ್ತು ಅಶ್ವಿನಿ, ಧನುಷ್ ಗೌಡ ಇವರೆಲ್ಲರೂ ಫೈನಲಿಸ್ಟ್ ಗಳಾಗಿ ಆಯ್ಕೆಯಾಗಿದ್ದರು. ಇದರಲ್ಲಿ ಧನುಷ್ ಐದನೇ ರನ್ನರ್ ಅಪ್ ಆದರು, ರಘು ನಾಲ್ಕನೇ ರನ್ನರ್ ಅಪ್, ಕಾವ್ಯ ಮೂರನೇ ರನ್ನರ್ ಅಪ್ ಮತ್ತು ಟಾಪ್ ಮೂರರಲ್ಲಿ ಗಿಲ್ಲಿ, ರಕ್ಷಿತಾ, ಅಶ್ವಿನಿ ಅವರು ಆಯ್ಕೆಯಾದರು, ಅದರಲ್ಲಿ ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಕೊನೆಯದಾಗಿ ನಟ ಕಿಚ್ಚ ಸುದೀಪ್ ಗಿಲ್ಲಿ ನಟರನ್ನು ಕೈ ಮೇಲೆತ್ತಿ ಬಿಗ್ ಬಾಸ್ ಸೀಸನ್ 12ರ ವಿಜೇತ ಎಂದು ಘೋಷಿಸಿದರು. ಪ್ರಾರಂಭದ ಕೆಲವೇ ದಿನಗಳಲ್ಲಿ ಪರಿಸರ ಸಮಸ್ಯೆಗಳಿಂದ ಒಂದು ದಿನದ ಪ್ರದರ್ಶನ ಸ್ಥಗಿತಗೊಂಡಿತು, ಆದರೆ ಸ್ಪರ್ಧಿಗಳು ತೀವ್ರ ರೋಮಾಂಚಕ ಚಾಲೆಂಜುಗಳು, ಮನರಂಜನೆಯ ಘಟನೆಗಳು ಮತ್ತು ಭರ್ಜರಿ ಆಟದಿಂದ ವೀಕ್ಷಕರನ್ನು ಮನ ಸೆಳೆಯುವಲ್ಲಿ ಯಶಸ್ವಿಯಾದರು.
ತೆರೆದ ವಾಹನದಲ್ಲಿಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ರಕ್ಷಿತಾ ಶೆಟ್ಟಿ : ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರನ್ನು ಊರಿನಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ರಕ್ಷಿತಾ ತೆರೆದ ವಾಹನದಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸಿದರು. ಪ್ರೇಕ್ಷಕರು ತಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿದಿದ್ದರು, ಈ ಸಂದರ್ಭದಲ್ಲಿ ರಕ್ಷಿತಾ ಅವರ ಇಷ್ಟದ ಮೀನು ಬಂಗುಡೆ ಉಡುಗೊರೆಯಾಗಿ ನೀಡಲಾಯಿತು. ರಕ್ಷಿತಾ ಮೀನು ಹಿಡಿದು ಕುಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಅಭಿಮಾನಿಗಳೊಡನೆ ಹಂಚಿಕೊಂಡರು. ಬಿಗ್ ಬಾಸ್ 12ರನ್ನರ್ ಅಪ್ ಆಗಿದ್ದು ಈ ಸೀಸನ್ ನಲ್ಲಿ ಮೊದಲ ದಿನವೇ ಶೋನಿಂದ ಹೊರ ಹಾಕಲ್ಪಟ್ಟಿದ್ದರು, ನಂತರ ಕೊನೆಯ ದಿನಗಳವರೆಗೆ ಮನೆಯಲ್ಲಿ ತಮ್ಮ ಆಟದ ಮೂಲಕ ಪ್ರೇಕ್ಷಕರನ್ನು ಮನಗೆದ್ದರು. ಚಿತ್ರರಂಗದ ಹಿನ್ನೆಲೆ ಇಲ್ಲದ, ಕನ್ನಡ ಭಾಷೆ ಅಲ್ಪ ತಿಳಿಯುವ ಮತ್ತು ಅನುಭವದ ಕೊರತೆ ಇದ್ದರೂ ಸಹ ರಕ್ಷಿತಾ ಶೆಟ್ಟಿ ತಮ್ಮ ಸಹಜತೆ ಮತ್ತು ಮುಗ್ಧತೆಯಿಂದ ಬಿಗ್ ಬಾಸ್ ಪ್ರೇಕ್ಷಕರ ಮನೆಗೆದ್ದು ಅವರು ನಿಸ್ಸಹಾಯತೆ ಮತ್ತು ಖುಷಿಯ ವ್ಯಕ್ತಿತ್ವ ಶೋದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ವೀಕ್ಷಕರ ಗಮನ ಸೆಳೆದಿದೆ.
ಇನ್ನಷ್ಟು ಓದಿರಿ:
ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ : ಕಾಂಗ್ರೆಸ್ ಸಚಿವ ಹೇಳಿಕೆ