<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಮೇಜಿನ ಮೇಲೆ ಹಣದ ಬಂಡಲ್

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಮೇಜಿನ ಮೇಲೆ ಹಣದ ಬಂಡಲ್
Summary: ಕೋಲ್ಕತ್ತಾದ ಪಶ್ಚಿಮಬಂಗಾಳದಲ್ಲಿ ಚುನಾವಣೆಯ ಸಿದ್ಧತೆ ಜೋರಾಗಿದ್ದು , ಕಾಂಗ್ರೆಸ್ ನ ನಾಯಕರೊಬ್ಬ ಹಣದ ಬಂಡಲ್ಲನ್ನು ತೆರೆದಿಟ್ಟಿದ್ದಾರೆ ಈ ವಿಷಯ ಫುಲ್ ವೈರಲ್ ಆಗಿದೆ.
BELAGAVI NEWS : ಉತ್ತರ 24 ಪರಗಣ ಜಿಲ್ಲೆಯಲ್ಲಿನ ಬರಸಾತ್​ 1 ಪಂಚಾಯತ್​ ಸಮಿತಿಯ ಉಪ ಅಧ್ಯಕ್ಷರಾಗಿರುವ ಮೊಂಡಲ್​ ಜೊತೆ ಸ್ಥಳೀಯ ಉದ್ಯಮಿ ರಕಿಬುಲ್​ ಇಸ್ಲಾಮ್​ ಜೊತೆಗಿರುವುದು ಕಂಡು ಬಂದಿದೆ. ಈ ವೇಳೆ ಟೇಬಲ್​ ಮೇಲೆ 500 ರೂ ನೋಟುಗಳಿರುವ ಹಣದ ಬಂಡಲ್​ ಕಂಡು ಬಂದಿದೆ. ಬರಸತ್​ 1ನೇ ಬ್ಲಾಕ್​ ಟಿಎಂಸಿ ಸಂಚಾಲಕ ಮೊಹಮ್ಮದ್​ ಇಶಾ ಸರ್ಕಾರ್​ ಮಾತನಾಡಿ, ಯಾರಾದರೂ ಅಕ್ರಮ ಎಸಗಿದ್ದಲ್ಲಿ ಅವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಲಿದೆ. ಭಾನುವಾರ ಈ ವಿಚಾರದ ಕುರಿತಾಗಿ ತಮಗೆ ತಿಳಿದು ಬಂದಿದ್ದು, ಈ ಬಗ್ಗೆ ಪಕ್ಷದ ಮುಖಂಡರ ಗಮನಕ್ಕೆ ತರಲಾಗುವುದು, ಅವರು ತಪ್ಪಿತಸ್ಥರು ಎಂದು ಕಂಡು ಬಂದರೆ, ನಾವು ಕ್ರಮ ಕೈಗೊಳ್ಳುತ್ತೇವೆ. ಇಷ್ಟು ಪ್ರಮಾಣದ ಹಣದ ಮೂಲಗಳ ಬಗ್ಗೆ ಇದೀಗ ಪ್ರಶ್ನೆ ಎದುರಾಗಿದ್ದು, ಈ ಬಗ್ಗೆ ಪರಿಶೀಲಿಸುತ್ತೇವೆ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಮೊಹಮ್ಮದ್ ಗಿಯಾಸುದ್ದೀನ್ ಮೊಂಡಲ್​ ಮೇಜಿನ ಮೇಲೆ ಹಣದ ಬಂಡಲ್​ಗಳನ್ನು​ ಇಟ್ಟಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಇದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಆಡಳಿತ ಪಕ್ಷದ ನಿಜವಾದ ಬಣ್ಣ ಬಯಲಾಗಿದೆ. ಮೊಂಡಲ್​ ವಿರುದ್ಧ ಲ್ಯಾಂಡ್​ ಮಾಫೀಯ ಆರೋಪ ಮಾಡಲಾಗಿದ್ದು, ಈ ಕುರಿತು ಕೇಂದ್ರ ಸಂಸ್ಥೆ ತನಿಖೆಗೆ ಮುಂದಾಗಬೇಕು ಎಂದು ಬಿಜೆಪಿ ನಾಯಕ ತಪಾಸ್​ ಮಿತ್ರಾ ಒತ್ತಾಯಿಸಿದ್ದಾರೆ.
ನಾವು ಅನುಬರ್ತಾ ಮೊಂಡಲ್​ ಮತ್ತು ಪರ್ತಾ ಚಟರ್ಜಿ ಅವರಂತಹ ಪ್ರಕರಣ ಕಂಡಿದ್ದೇವೆ. ಟಿಎಂಸಿ ಬಂಗಾಳವನ್ನು ಲೂಟಿ ಮಾಡುತ್ತಿದೆ. ED ಈ ಕುರಿತು ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನಷ್ಟು ಓದಿರಿ : ಇಂದೋರ್ ಕಲುಷಿತ ನೀರು ಸೇವಿಸಿ ಇದೀಗ 142 ಮಂದಿ ಆಸ್ಪತ್ರೆಗೆ ದಾಖಲು
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online