<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಸ್ಪಷ್ಟನೆ : ಬಲಪ್ರಯೋಗ ಇಲ್ಲ ಎಂದ ಟ್ರಂಪ್

ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಸ್ಪಷ್ಟನೆ : ಬಲಪ್ರಯೋಗ ಇಲ್ಲ ಎಂದ ಟ್ರಂಪ್
Summary: ಗ್ರೀನ್ ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕ ಯಾವುದೇ ರೀತಿಯ ಬಲಪ್ರಯೋಗ ಮಾಡುವುದಿಲ್ಲ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಗ್ರೀನ್ ಲ್ಯಾಂಡ್ ತಂತ್ರಜ್ಞಾನದ ಮಹತ್ವ ಮತ್ತು ಭೌಗೋಳಿಕ ಸ್ಥಾನ ಕುರಿತು ಚರ್ಚೆಗಳು ಜೋರಾಗಿರುವ ನಡುವೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
Belagavi news :

ಅಮೆರಿಕ ಗ್ರೀನ್ ಲ್ಯಾಂಡ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಅದೇ ವೇಳೆ ಮಾತುಕತೆ ಮತ್ತು ರಾಜ ತಾಂತ್ರಿಕ ಮಾರ್ಗಗಳ ಮೂಲಕ ಗ್ರೀನ್ ಲ್ಯಾಂಡ್ ಸ್ವಾಧೀನಕ್ಕೆ ಒಲವು ತೋರಿದ್ದಾರೆ. ಈ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



ಇತ್ತೀಚೆಗೆ ನಡೆದ ಮಾತುಕತೆಯಲ್ಲಿ, ಯುರೋಪಿಯನ್ ರಾಷ್ಟ್ರಗಳು ಗ್ರೀನ್ ಲ್ಯಾಂಡ್ ಅನ್ನು ಅಮೆರಿಕದ ನಿಯಂತ್ರಣಕ್ಕೆ ಒಪ್ಪಿಸುವುದು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ.ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ತನ್ನ ತಂತ್ರಜ್ಞಾನ ಮತ್ತು ಭದ್ರತಾ ಹಿತ ಶಕ್ತಿಗಳನ್ನು ಕಾಯ್ದುಕೊಳ್ಳಲು ಈ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.



ಇದುವರೆಗೆ ಗ್ರೀನ್ ಲ್ಯಾಂಡ್ ವಿಷಯದಲ್ಲಿ ಸುಂಕ ಮತ್ತು ವ್ಯಾಪಾರ ಬೆದರಿಕೆಗಳ ಮೂಲಕ ಒತ್ತಡ ಸೃಷ್ಟಿಸಿದ ಟ್ರಂಪ್, ಈಗ ಆ ನಿಲುವಿನಿಂದ ಹಿಂದೆ ಸರಿದು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಲು ಬಯಸುತ್ತಿದ್ದಾರೆ. ಇದರಿಂದ ಮಾತುಕತೆಗಳಿಗೆ ಹೊಸ ವೇಗ ಸಿಗುವ ನಿರೀಕ್ಷೆ ಇದೆ.



ವಿಶ್ಲೇಷಕರ ಪ್ರಕಾರ, ಗ್ರೀನ್ ಲ್ಯಾಂಡ್ ನ ಭೌಗೋಳಿಕ ಸ್ಥಾನಮಾನ, ಖನಿಜ ಸಂಪತ್ತು ಮತ್ತು ಸೇನಾ ತಂತ್ರಜ್ಞಾನ ದೃಷ್ಟಿಯಿಂದ ಬಹಳ ಪ್ರಮುಖವಾಗಿದೆ. ಆದ್ದರಿಂದ ರಷ್ಯಾ, ಚೀನಾ ನಿಯಂತ್ರಣ ತಪ್ಪಿಸಲು ಶಾಶ್ವತ ಒಪ್ಪಂದದ ಬಗ್ಗೆ ಅಮೆರಿಕ, ಯುರೋಪ್ ಮತ್ತು ಗ್ರೀನ್ ಲ್ಯಾಂಡ್ ನಡುವಿನ ಮಾತುಕತೆಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.



ಈ ಬೆಳವಣಿಗೆಗಳು ಅಂತರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ತಿರುವು ತರುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಗ್ರೀನ್ ಲ್ಯಾಂಡ್ ವಿಚಾರ ಜಾಗತಿಕ ಅಜೆಂಡಾದ ಪ್ರಮುಖ ವಿಷಯವಾಗಲಿದೆ.



ದಾವೋಸ್ ನಲ್ಲಿ ಟ್ರಂಪ್ ಘೋಷಣೆ :
ಗ್ರೀನ್ ಲ್ಯಾಂಡ್ ಅನ್ನು ಅಮೆರಿಕವು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಅದೇ ಭಾಷಣದಲ್ಲಿ ಅವರು, ಡ್ಯಾನಿಶ್ ಪ್ರದೇಶವಾದ ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಬೇಕೆಂಬ ತಮ್ಮ ಬೇಡಿಕೆಗೆ ದೃಢವಾಗಿ ಅಂಟಿಕೊಂಡಿದ್ದಾರೆ.



ಭಾಷಣದ ವೇಳೆ ಟ್ರಂಪ್ ಆಡಿದ ಮಾತು:
"ನಾನು ಬಲಪ್ರಯೋಗ ಮಾಡುತ್ತೇನೆಂದು ಜನರು ಭಾವಿಸಿದ್ದರು, ಆದರೆ ನನಗೆ ಬಲಪ್ರಯೋಗ ಮಾಡಬೇಕಾಗಿಲ್ಲ"ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ವಿವರಿಸಿದ್ದರು.



ಟ್ರಂಪ್ ಪ್ರಕಾರ, ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರ ಗ್ರೀನ್ ಲ್ಯಾಂಡ್ ಅನ್ನು ಸುರಕ್ಷಿತವಾಗಿಡಲು ಸಾಧ್ಯವಿಲ್ಲ.ಆರ್ಕ್ಟಿಕ್ ಪ್ರದೇಶದ ರಷ್ಯಾ ಮತ್ತು ಚೀನಾದ ಪ್ರಭಾವ ಹೆಚ್ಚು ತಿರುವ ಹಿನ್ನೆಲೆ, ಗ್ರೀನ್ ಲ್ಯಾಂಡ್ ನ ಭದ್ರತೆ ಜಾಗತಿಕವಾಗಿ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಪ್ರತಿಪಾದಿಸಿದರು. ಇದೇ ಕಾರಣಕ್ಕಾಗಿ, ಯುರೋಪಿಯನ್ ನಾಯಕರು ಗ್ರೀನ್ ಲ್ಯಾಂಡ್ ಎಂಬ ಸ್ವ ಆಡಳಿತ ದ್ವೀಪವನ್ನು ಅಮೆರಿಕಾದ ನಿಯಂತ್ರಣಕ್ಕೆ ವರ್ಗಾಯಿಸುವುದು ಅತ್ಯಗತ್ಯ ಎಂದು ಹೇಳಿದರು.



ಇದೇ ವೇಳೆ, ಗ್ರೀನ್ ಲ್ಯಾಂಡ್ ಸ್ವಾಧೀನದ ಕುರಿತು ತಕ್ಷಣದ ಮಾತುಕತೆಗಳನ್ನು ಪುನರಾರಂಭಿಸಲು ನಾನು ಸಿದ್ಧನಿದ್ದೇನೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇದರಿಂದ ಅಮೆರಿಕ–ಡ್ಯಾನ್ಮಾರ್ಕ್–ಯುರೋಪ್ ನಡುವಿನ ರಾಜತಾಂತ್ರಿಕ ಚರ್ಚೆಗಳು ಮತ್ತಷ್ಟು ವೇಗ ಪಡೆಯುವ ಸಾಧ್ಯತೆ ಇದೆ.



ಆದರೆ, ತಮ್ಮ ಮಹತ್ವಾಕಾಂಕ್ಷೆಗಳು ವಿಫಲವಾದರೆ ಪರಿಣಾಮಗಳ ಬಗ್ಗೆಯೂ ಟ್ರಂಪ್ ತುಳಿವು ನೀಡಿದ್ದಾರೆ, ಇದು ಜಾಗತಿಕ ರಾಜಕಾರಣದಲ್ಲಿ ಹೊಸ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ದಾವೋಸ್ ನಲ್ಲಿ ಮಾಡಿದ ಈ ಹೇಳಿಕೆಗಳು ಗ್ರೀನ್ ಲ್ಯಾಂಡ್ ವಿಷಯವನ್ನು ಮತ್ತೆ ಜಾಗತಿಕ ಅಜೆಂಡಾದ ಮುಂಚೂಣಿಗೆ ತಂದು ನಿಲ್ಲಿಸಿದೆ.



ಟ್ರಂಪ್ ನಿಲುವಿನಲ್ಲಿ ದೊಡ್ಡ ಬದಲಾವಣೆ:
ಇತ್ತೀಚಿನ ವಾರಗಳಲ್ಲಿ ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ನೀಡಿದ ಬಲವಾದ ಹೇಳಿಕೆಗಳು NATO ಮಿತ್ರ ರಾಷ್ಟ್ರಗಳಲ್ಲಿ ತೀವ್ರ ಸಮಾಧಾನಕ್ಕೆ ಕಾರಣವಾಗಿದ್ದವು. ಆದರೆ ಈಗ ಟ್ರಂಪ್ ತಮ್ಮ ನಿಲ್ಲುವನ್ನು ಬದಲಾಯಿಸಿ, ಮಿಲಿಟರಿ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಒತ್ತಡ ಹೇರಲು ಯಾವುದೇ ಸುಂಕಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೊಸ ನಿಲುವನ್ನು ಟ್ರಂಪ್ "ಎಲ್ಲರೂ ಸಂತೋಷಪಡುವ, ದೀರ್ಘಾವಧಿಯ ಶಾಶ್ವತ ಒಪ್ಪಂದ"ಎಂದು ಬಣ್ಣಿಸಿದ್ದಾರೆ.



ಟ್ರಂಪ್ ಹೇಳಿಕೆಯಂತೆ ಡೆನ್ಮಾರ್ಕ್ , ಗ್ರೀನ್ ಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮಾತುಕತೆಗಳು ಮುಂದುವರೆಯಲಿದ್ದು, ಇದರ ಮುಖ್ಯ ಉದ್ದೇಶ ರಷ್ಯಾ ಮತ್ತು ಚೀನಾ ಗ್ರೀನ್ ಲ್ಯಾಂಡ್ ಮೇಲೆ ಆರ್ಥಿಕ ಅಥವಾ ಸೈನಿಕ ನಿಯಂತ್ರಣ ಪಡೆಯುವುದನ್ನು ಸಂಪೂರ್ಣ ತಡೆಯುವುದು. ಈ ಹಿನ್ನೆಲೆ, ಈಗಾಗಲೇ ಘೋಷಿಸಿದ್ದ ಶೇ. 10 ಸುಂಕಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಪ್ರಕಟಿಸಿದ್ದಾರೆ.



ಇದು ಟ್ರಂಪ್ ಅವರು ಮುಖಾಮುಖಿ ರಾಜಕಾರಣ ಕ್ಕಿಂತ ರಾಜಿ ಮತ್ತು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಲು ಬಯಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಿದ್ದರೂ, ಗ್ರೀನ್ ಲ್ಯಾಂಡ್ ಅಮೆರಿಕ ಸ್ವಾಧೀನಕ್ಕೆ ಸಂಬಂಧಿಸಿದ ಒಪ್ಪಂದ ನಡೆಯುವವರಿಗೆ ಡೆನ್ಮಾರ್ಕ್ ಹಾಗೂ ಇತರ ಏಳು ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ. 10 ಸುಂಕ ವಿಧಿಸುವ ಬೆದರಿಕೆ ಅವರು ಹಿಂದೆಯೇ ನೀಡಿದ್ದನ್ನು ವಿಶ್ಲೇಷಕರು ನೆನಪಿಸುತ್ತಿದ್ದಾರೆ.



ಈ ನಡುವೆ, ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ನಾರ್ವೆ ಪ್ರಧಾನ ಮಂತ್ರಿ ಜೋನಾಸ್ ಗಹರ್ ಸ್ಟೋರೆ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ್ದ ಪತ್ರದ ವಿಷಯಗಳು ಸೂರಿಕೆಯಾಗಿವೆ. ಆ ಪತ್ರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿರುವುದರಿಂದ ತಮಗೆ ತೀವ್ರ ನಿರಾಶೆಯಾಗಿದೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ.



ಪತ್ರದಲ್ಲಿ ಟ್ರಂಪ್:
"ಎಂಟಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ್ದರು ನನಗೆ ನೊಬೆಲ್ ಶಾಂತಿಪ್ರಶಸ್ತಿ ನೀಡಲಿಲ್ಲ. ಆದ್ದರಿಂದ ಶಾಂತಿಯ ಬಗ್ಗೆ ಮಾತ್ರ ಯೋಚಿಸಲು ಸಾಧ್ಯವಿಲ್ಲ"ಎಂದು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದರಿಂದ, ನೊಬೆಲ್ ಪ್ರಶಸ್ತಿ ನಿರಾಕರಣೀಯ ನಂತರ ಜಾಗತಿಕ ವ್ಯವಹಾರಗಳ ಕುರಿತು ಟ್ರಂಪ್ ದೃಷ್ಟಿಕೋನದಲ್ಲಿ ಬದಲಾವಣೆ ಉಂಟಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.



ಟ್ರಂಪ್ ಅವರ ಈ ಹೇಳಿಕೆಗಳು ಮತ್ತು ನಿಲುವು ಬದಲಾವಣೆಗಳು, ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಮುಂದಿನ ರಾಜಕೀಯ ಹಾಗೂ ರಾಜತಾಂತ್ರಿಕ ಬೆಳವಣಿಗೆಗಳಿಗೆ ಹೊಸ ದಿಕ್ಕು ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಇನ್ನಷ್ಟು ಓದಿರಿ:


ಜಿಲ್ಲಾ ಅರೋಗ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ : ಅರ್ಜಿ ಆಹ್ವಾನ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online